ಅಶೋಕ ವೃಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೯ ನೇ ಸಾಲು:
}}
 
 
''''ಅಶೋಕ''''
[[File:Gardenology-IMG 4861 hunt10mar.jpg|top|thumb|'''ಅಶೋಕಹೂಗಳು''']]
''''ಅಶೋಕ'''', <ref>[http://giftingtrees.blogspot.in/2011/02/ashoka-great.html (Saraca Asoca/सीता अशोक) ]</ref> ಒಂದು ಮಧ್ಯಮ ಗಾತ್ರದ ನಿತ್ಯ ಹಸುರಿನ ಸುಂದರವಾದ ಮರ. ಅಶೋಕ ನಿಧಾನವಾಗಿ ಬೆಳೆಯುವ ನಿತ್ಯ ಹಸುರಿನ ಸಣ್ಣಮರ. ೬-೮ ಮೀಟರ್ ಎತ್ತರ ಬೆಳೆಯುತ್ತದೆ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲ ಗೊಂಚಲ ಹೂಗಳ ಗೊಂಚಲುಗಳು, ಮನಸ್ಸಿಗೆ ಮುದನೀಡುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವು. ಹತ್ತು ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಸಮುದ್ರಮಟ್ಟದಿಂದ ೨-೩ ಸಾವಿರ ಅಡಿ ಎತ್ತರದ ಪೂರ್ವ, ಈಶಾನ್ಯ ಭಾರತದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಕರ್ಣಾಟಕದಲ್ಲೂ ಇದು ವಿಶೇಷವಾಗಿ ಕಾಣಬರುವ ಸಸ್ಯರಾಶಿ.
==ಅಶೋಕ ಔಷಧೀಯಗುಣಗಳಿಗೆ ಹೆಸರುವಾಸಿ ==
[[Saraca Indica]] ಎಂಬ ಸಸ್ಯಶಾಸ್ತ್ರದ ಹೆಸರನ್ನು ಗಳಿಸಿರುವ ಅಶೋಕ, [[abaceae]], ಕುಟುಂಬವರ್ಗಕ್ಕೆ ಸೇರಿದೆ. ಹೆಸರೇ ಹೇಳುವಂತೆ, ಅಶೋಕಎಂದರೆ ಶೋಕವಿಲ್ಲದ್ದು ಎಂದರ್ಥ. ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಏಕೆಂದರೆ, ಅಶೋಕ ಮರದ ಜೊತೆಗೆ ಅನೇಕ ದಂತಕಥೆಗಳೂ, ಪುರಾಣಕಥೆಗಳೂ, ಸೇರಿಕೊಂಡಿವೆ. ನಮ್ಮ ರಾಮಾಯಣದ, ಸೀತಾಮಾತೆಯನ್ನು ರಾವಣನು ಅಶೋಕವಾಟಿಕೆಯಲ್ಲಿ ಇರಿಸಿದ್ದನಂತೆ. ಅಶೋಕದ ಹೂಗಳು ಅರಳುವ ಪರಿ ಅತಿ ಮೋಹಕ. ಮರದತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ೪ ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯದಿನ ಹಳದಂತೆ ಕಡುಕೆಂಪುಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ, ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಮೂಗಿನಮೇಲೆ ಬೆರಳಿದುವಂತೆ ಮಾಡುವುದು ಸಹಜ. ಹೂಗಳಲ್ಲಿ ಸುಗಂಧದ ನಸುಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯವೇಳೆ ಬಂದಂತೆ, ಆ ಪರಿಮಳಗಾಢವಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು.
೭೨ ನೇ ಸಾಲು:
 
ಮರದ ತೊಗಟೆಯಲ್ಲಿ ದೊರೆಯುವ ಗ್ಯಾಲಿಕ್ ಆಮ್ಲ ಔಷಧಿಗಳಿಗೆ ಉಪಯೋಗ ವಾಗುತ್ತದೆ. ಹೂವನ್ನು ಇದೇ ರೀತಿ ಬಳಸುವುದುಂಟು. ಶ್ರೀಲಂಕದಲ್ಲಿ ಈ ಮರವನ್ನು ಮನೆ ಕಟ್ಟುವ ಮರಮುಟ್ಟುಗಳಿಗಾಗಿ ಉಪಯೋಗಿಸುತ್ತಾರೆ. ಹಿಂದೂಗಳೂ ಬೌದ್ಧರೂ ಈ ಮರವನ್ನು ದೇವಾಲಯಗಳ ಸುತ್ತಲೂ ಬೆಳೆಸುವುದುಂಟು. ಇದರ ಹೂಗಳು ಪುಜೆಗೆ ಒದಗುತ್ತವೆ. ಈ ವೃಕ್ಷವನ್ನು ಇತ್ತೀಚೆಗೆ ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಅಶೋಕವೃಕ್ಷಕ್ಕೆ ಕೊಟ್ಟಿರುವ ಸ್ಥಾನ ಬಹಳ ಮುಖ್ಯವಾದುದು. ರಾಮಾಯಣ, ಮಹಾಭಾರತ ಕಾಲದಿಂದಲೂ ಜನಪ್ರಿಯ ವೃಕ್ಷ. ಈ ವೃಕ್ಷಗಳಿಂದ ಕೂಡಿದ ವನದಲ್ಲಿ ರಾವಣ ಸೀತೆಯನ್ನು ಅವಿತಿ(ಅಡಗಿಸಿ)ಟ್ಟಿದ್ದನೆಂದು ಹೇಳುತ್ತಾರೆ. ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ದೊರೆತ ಗೌರವ ಅಪಾರ. ವಸಂತಕಾಲದಲ್ಲಿ ಒಂದು ನಿಶ್ಚಿತದಿನ ಸುಂದರಿಯೊಬ್ಬಳು ತನ್ನ ಎಡೆಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನೀಮಿತ್ರ, ಹರ್ಷನ ರತ್ನಾವಳೀ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ದೋಹದ ಕ್ರಿಯೆಯೆಂದು ಬಣ್ಣಿಸಲಾಗಿದೆ. ಚೈತ್ರ ಶುಕ್ಲ ಅಷ್ಟಮಿಯಂದು ವ್ರತಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದಲ್ಲಿ ಸ್ತ್ರೀಯರ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ.
==ಉಲ್ಲೇಖಗಳು==
 
<References />
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅಶೋಕ_ವೃಕ್ಷ" ಇಂದ ಪಡೆಯಲ್ಪಟ್ಟಿದೆ