೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
2014ರ [[ನೊಬೆಲ್ ಪ್ರಶಸ್ತಿ]]ಗಳನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 10,2014ರಂದು ಪ್ರಶಸ್ತಿ ಪ್ರಧಾನ ಮಾಡಲಾಗಿದೆ.ವಿವಿಧ ಕ್ಷೇತ್ರಗಳ ಪ್ರಶಸ್ತಿ ವಿಜೇತರ ವಿವರ ಹೀಗಿದೆ.
=='''ವೈದ್ಯಕೀಯ ಕ್ಷೇತ್ರ'''==
2014ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ [[ಬ್ರಿಟನ್]] ಮೂಲದ ಅಮೇರಿಕ ವಿಜ್ಞಾನಿ ಜಾನ್ ಒ ಕೀಫ್ ಮತ್ತು ನಾರ್ವೆ ದಂಪತಿ ಎಡ್ವರ್ಡ್ ಮೊಸೆರ್ ಹಾಗೂ ಮೇ ಬ್ರಿಟ್ ಮೊಸೆರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಿದುಳಿನ ಕರಾರುವಕ್ಕಾದ ಆಂತರಿಕ ಸಂಚಾರ ಮಾರ್ಗದರ್ಶನ ವ್ಯವಸ್ಥೆ (ಜಿಪಿಎಸ್)ನಿಗೂಡ ಕಾರ್ಯವೈಕರಿ ಕುರಿತ ಸಂಶೋಧನೆಗಾಗಿ ಪ್ರಶಸ್ತಿ ನೀಡಲಾಗಿದೆ.[[File:Edvard Moser.jpg|thumb|ಎಡ್ವರ್ಡ್ ಮೊಸೆರ್]]
===ಸಾಧನೆ===
ನಮ್ಮ ಸುತ್ತಮುತ್ತಲಿನ ಸಂಕೀರ್ಣ ಪರಿಸದಲ್ಲಿ ಮಿದುಳು ಹೇಗೆ ಕರಾರುವಕ್ಕಾಗಿ ಪಥವನ್ನು ಗುರುತಿಸುತ್ತದೆ ಎಂಬ ಸಮಸ್ಯೆಯನ್ನು ಮೂವರು ಬಿಡಿಸಿಟ್ಟಿದ್ದಾರೆ. ಶತಮಾನಗಳಿಂದ ಮಿದುಳಿನ ಮಾರ್ಗಸೂಚಿ ವ್ಯವಸ್ಥೆಯ ವಿಚಾರ ವಿಜಾನಿಗಳಿಗೆ ಮತ್ತು ತತ್ವಜಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು.ಅದಕ್ಕೀಗ ಈ ಸಂಶೋಧನೆಯಿಂದ ಸಮರ್ಪಕ ಉತ್ತರ ದೊರೆತಿದೆ. ಇಲಿಗಳ ಮಿದುಳಿನ [[ನರಮಂಡಲ]]ದ ಮೇಲೆ ಸಂಶೋಧನೆ ಕೈಗೊಂಡಿದ್ದ ಕೀಫ್ ಮೆದುಳಿನ ಸ್ಥಾನಿಕ ವ್ಯವಸ್ಥೆ ಭಾಗವಾದ ಅಂಗವನ್ನು 1971ರಲ್ಲಿಯೇ ಪತ್ತೆ ಹಚ್ಚಿದ್ದರು. ಅದಾದ ಮೂರು ದಶಕಗಳ ನಂತರ ಮೊಸೆರ್ ದಂಪತಿ 2005ರಲ್ಲಿ ಮಿದುಳಿನ ಜಿಪಿಎಸ್ ವ್ಯವಸ್ಥೆಯ ನಿರ್ವಹಿಸುವ ಮತ್ತೊಂದು ಪ್ರದೇಶವನ್ನು ಪತ್ತೆ ಹಚ್ಚಿದ್ದರು. ಮಿದುಳಿನಲ್ಲಿ ಎರಡು ವಿಭಿನ್ನ ನರಕೋಶಗಳಿಂದ ಒಂದು ಸ್ಥಾನಿಕ ವ್ಯವಸ್ಥೆ ನಿರ್ಮಾಣವಾಗುವುದನ್ನು ಕಂಡು ಹಿಡಿದಿದ್ದರು. ಮರೆಗುಳಿ ಕಾಯಿಲೆ ಸೇರಿದಂತೆ ಅನೇಕ ನರ ಸಂಬಧ ಕಾಯಿಲೆಗಳ ಚಿಕಿತ್ಸೆ ಮತ್ತು ಔ‌‍‍‍‍ಷಧ ಸಂಶೋಧನೆಗೆ ಇದು ನೆರವಾಗಲಿದೆ.
೭ ನೇ ಸಾಲು:
===ಯಾರಿವರು?===
ಕೀಫ್ ಅವರು ಈಗ ಯೂನಿವರ್ಸಿಟಿ ಕಾಲೇಜ್ [[ಲಂಡನ್]] ನಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.ಮತ್ತು ಮೊಸೆರ್ ದಂಪತಿ ನಾರ್ವೆಯ ತಂತ್ರಜ್ಞಾನ ವಿವಿಯಲ್ಲಿ ನರವಿಜಾನಕ್ಕೆ ಸಂಬಂಧಿಸಿದ ಕೇಂದ್ರವೊಂದನ್ನು ಸ್ಥಾಪಿಸಿ ಅಧಯನದಲ್ಲಿ ತೊಡಗಿಕೊಂಡಿದ್ದಾರೆ.
 
=='''ಭೌತಶಾಸ್ತ್ರ'''==
ಪರಿಸರ ಸ್ನೇಹಿ ಬ್ಲ್ಯೂ ಎಲ್ ಇಡಿ ಬಲ್ಬ್ ಗಳನ್ನು ಶೋಧಿಸಿದ ಜಪಾನಿನ ಇಸಾಮು ಅಕಾಸಾಕಿ ಮತ್ತು ಹಿರೋಶಿ ಅಮಾನೊ ಮತ್ತು ಅಮೇರಿಕದ ವಿಜ್ಞಾನಿ ಶುಜಿ ನಕಾಮುರಾ ಭೌತಶಾಸ್ತ್ರದ ನೊಬೆಲ್ ಗೌರವಕ್ಕೆ ಪಾತ್ರರಾಗಿದ್ದಾರೆ.