"ಮರಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
/ಚಿತ್ರಗಳು/
(/ಬಹೂಪಯೋಗಿ ಮರಳು/)
 
ಚು (/ಚಿತ್ರಗಳು/)
[[Image:Third beach sand.jpg|thumb|right|300px|ಮರಳಿನ ಕಣಗಳ ಹತ್ತಿರದ ನೋಟ.]]
ಮರಳು ನಿಸರ್ಗದಲ್ಲಿ ಸಣ್ಣಸಣ್ಣ ಚೂರುಗಳಾಗಿ ಒಡೆದ [[ಕಲ್ಲು]] ಮತ್ತು [[ಖನಿಜ]]ಗಳ ಹರಳು.
ಸಾಮಾನ್ಯವಾಗಿ ಮರಳು ೦.೦೬೨೫ ರಿಂದ ೨ ಮಿಲಿಮೀಟರ್ ಗಳ ವ್ಯಾಸದಲ್ಲಿರುತ್ತದೆ. ಇದಕ್ಕಿಂತ ಸಣ್ಣಗಾತ್ರದವುಗಳನ್ನು ಕೆಸರುಕಣಗಳು ಮತ್ತು ದೊಡ್ಡವನ್ನು ಸಣ್ಣ ಕಲ್ಲುಗಳೆಂದು [[ಭೂವಿಜ್ಞಾನ]]ವು ವಿಂಗಡಿಸುತ್ತದೆ. ತನ್ನ ಗಾತ್ರಕ್ಕೆ ಅನುಗುಣವಾಗಿ ಮರಳು ೫ ಉಪವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ೧/೧೬ ರಿಂದ ೧/೮ ಮಿ.ಮಿ. ಗಾತ್ರದವು ಅತಿ ಸಣ್ಣ ಮರಳಾದರೆ, ೧/೮ ರಿಂದ ೧/೪ ಮಿ.ಮೀ. ಗಾತ್ರದವು ಸಣ್ಣ ಮರಳು ಎಂದು ಕರೆಸಿಕೊಳ್ಳುತ್ತವೆ. ಮಧ್ಯಮ ಗಾತ್ರದ ಮರಳು ೧/೪ ರಿಂದ ೧/೨ ಮಿ.ಮೀ. ಗಾತ್ರದ್ದು. ದಪ್ಪ ಮರಳು ೧/೨ ರಿಂದ ೧ ಮಿ.ಮೀ. ಗಾತ್ರದಲ್ಲಿಯೂ ಮತ್ತು ಅತಿ ದಪ್ಪ ಮರಳು ೧ ರಿಂದ ೨ ಮಿ.ಮೀ. ಗಾತ್ರದಲ್ಲಿ ಇರುತ್ತವೆ.
==ಮರಳಿನ ರಚನೆ==
 
[[Image:Sand under electron microscope.jpg|thumb|210px|left|ಮರಳಿನ ಕಣಗಳ ಎಲೆಕ್ಟ್ರಾನ್ ಮೈಕ್ರೋಗ್ರಾಫ್]]
[[Image:Volcanic sand (Perissa, Santorini, Greece).jpg|thumb|210px|right|ಗ್ರೀಸ್ ನ ಸಾಂಟೋರಿನಿ ಬಳಿ ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಪ್ಪು ಮರಳು.]]
ಮರಳು ಸಾಮಾನ್ಯವಾಗಿ [[ಸಿಲಿಕಾ]] ( ಸಿಲಿಕಾನ್ ಡೈ ಆಕ್ಸೈಡ್ ) ದಿಂದ ಮಾಡಲ್ಪಟ್ಟಿರುತ್ತದೆ. ಈ ಸಿಲಿಕಾದ ಹರಳುಗಳು [[ಕ್ವಾರ್ಟ್ಜ್]] ರೂಪದಲ್ಲಿದ್ದು ಗಡುಸಾಗಿಯೂ ಮತ್ತು ರಾಸಾಯನಿಕವಾಗಿ ನಿರ್ಲಿಪ್ತವಾಗಿಯೂ ಇರುವುದು. ಇದರಿಂದಾಗಿ ಮರಳಿನ ಮೇಲೆ ವಾತಾವರಣದ ಪರಿಣಾಮ ಬಲು ಕಡಿಮೆ.
 
 
==ಮರಳಿನ ಉಪಯೋಗಗಳು==
[[Image:Sanden ICE3.jpg|thumb|210px|ಗಂಟೆಗೆ ೩೦೦ ಕಿ.ಮೀ.ವೇಗದಲ್ಲಿ ಚಲಿಸುವ ICE ರೈಲು (DB class 403)ಸುಗಮಸಂಚಾರಕ್ಕಾಗಿ ಹಲವು ಬೋಗಿಗಳಿಂದ ಹಳಿಗಳ ಮೇಲೆ ಮರಳನ್ನು ಉದುರಿಸುತ್ತಾ ಸಾಗುವುದು.]]
 
* ಮರಳು [[ಕಾಂಕ್ರೀಟ್|ಕಾಂಕ್ರೀಟಿನ]] ಮುಖ್ಯ ಅಂಗ.
* ಸಣ್ಣ ಹರಳಿನ ಅಚ್ಚಿನ ಮರಳನ್ನು ನೀರಿನಿಂದ ಅಥವಾ ಎಣ್ಣೆಯಿಂದ ತೇವಗೊಳಿಸಿ ಅಚ್ಚುಗಳನ್ನು ತಯಾರಿಸಲು ಉಪಯೋಗಿಸುವರು.
 
==ಅವಗುಣಗಳು==
[[Image:Suesswasserstachelroche.jpg|thumb|210px|ಮರಳಿನಲ್ಲಿ ಹುದುಗಿಕೊಳ್ಳುತ್ತಿರುವ ಒಂದು [[ಸ್ಟಿಂಗ್ ರೇ]].]]
[[Image:Sandstorm.jpg|thumb|left|200px|ಇರಾಖಿನಲ್ಲಿ ಮರುಭೂಮಿಯಲ್ಲೆದ್ದಿರುವ ಬಿರುಗಾಳಿ.]]
ಸಾಮಾನ್ಯವಾಗಿ ಮರಳು ಮಾನವನಿಗೆ ನಿರಪಾಯಕಾರಿಯಾಗಿದ್ದರೂ ಕಲ್ಲು ಗಣಿ ಮತ್ತು ಮರಳು ಉದ್ಯಮವಿರುವಲ್ಲಿ ಸಿಲಿಕಾದ ಸೂಕ್ಷ್ಮಕಣಗಳು ಮಾನವರಲ್ಲಿ ಉಸಿರಾಟದ ತೊಂದರೆಯನ್ನುಂಟುಮಾಡುತ್ತವೆ. ಇಂತಹ ಧೂಳನ್ನು ದೀರ್ಘಕಾಲ ಉಸಿರಾಟದ ಮೂಲಕ ಒಳತೆಗೆದುಕೊಂಡಲ್ಲಿ [[ಸಿಲಿಕಾಸಿಸ್]] ಎಂಬ ಹೆಸರಿನ ಶ್ವಾಸಕೋಶದ ಖಾಯಿಲೆ ಉಂಟಾಗುತ್ತದೆ.
 
{{commonscat|Sand}}
==ಬಾಹ್ಯ ಸಂಪರ್ಕಗಳು==
* [http://www.bcgov.net/bftlib/beachsan.htm ''ಕಡಲತೀರದ ಮರಳು - ಅದೇನು? , ಎಲ್ಲಿಂದ ಬರುವುದು?, ಇಲ್ಲಿಗೆ ಹೇಗೆ ಬಂದಿತು?'']-- Beaufort County Library
 
[[ವರ್ಗ:ಭೂಶಾಸ್ತ್ರ]]
೧,೨೯೩

edits

"https://kn.wikipedia.org/wiki/ವಿಶೇಷ:MobileDiff/53836" ಇಂದ ಪಡೆಯಲ್ಪಟ್ಟಿದೆ