ಮಿರ್ಜಾನ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಸೇರ್ಪಡೆ
೧ ನೇ ಸಾಲು:
[[File:Mirjan Fort -01.JPG|350px|right| ಮಿರ್ಜಾನ್ ಕೋಟೆಯ ನಕಾಶೆ ಫಲಕ]]
[[File:Mirjan Fort -02.JPG|350px|right| ಮಿರ್ಜಾನ್ ಕೋಟೆಯ ಒಂದು ಬದಿನೋಟ]]
 
''ಮಿರ್ಜಾನ ಕೋಟೆ''ಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ.೧೭ ರಲ್ಲಿ ೯ ಕಿ.ಮೀ ದೂರದಲ್ಲಿ ಹೆದ್ದಾರಿಯಿಂದ ಸುಮಾರು ೦.೫ ಕಿ.ಮೀ ದೂರದಲ್ಲಿದೆ. ಮಿರ್ಜಾನ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಮಿರ್ಜಾನ ಕೋಟೆಯು ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಕೆಂಪು ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೊಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ ಮತ್ತು ಕೊಟೆಯ ಸುತ್ತ ೧೨ ಬುರುಜುಗಳಿವೆ.
 
"https://kn.wikipedia.org/wiki/ಮಿರ್ಜಾನ್_ಕೋಟೆ" ಇಂದ ಪಡೆಯಲ್ಪಟ್ಟಿದೆ