ಗೀಟ್ರೀ, ಸಾಚಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 1885-1957. ಫ್ರೆಂಚ್ ನಟ, ನಾಟಕಕಾರ, ಚಲನಚಿತ್ರ ನಿರ್ಮಾಪಕ ಹಾಗು ನಿರ್ದೇಶಕ. ಹುಟ್ಟಿದ...
 
ಚು ಆಂಗ್ಲ ಅಂಕಿಗಳನ್ನು ಕನ್ನಡಕ್ಕೆ ಬದಲಾಯಿಸಲಾಯಿತು.
೧ ನೇ ಸಾಲು:
1885೧೮೮೫-1957೧೯೫೭. ಫ್ರೆಂಚ್ ನಟ, ನಾಟಕಕಾರ, ಚಲನಚಿತ್ರ ನಿರ್ಮಾಪಕ ಹಾಗು ನಿರ್ದೇಶಕ. ಹುಟ್ಟಿದುದು ರಷ್ಯದ ಸೇಂಟ್ ಪೀಟರ್ಸಬರ್ಗಿನಲ್ಲಿ. ತಂದೆ ಲೂಸಿಯನ್ ಗೀಟ್ರೀ ರಂಗಭೂಮಿಯ ನಟ. ವಂಶಾನುಗುಣವಾಗಿ ಬಂದ ಅಭಿನಯಕಲೆಯ ಜೊತೆಗೆ ಸ್ವಪ್ರತಿಭೆಯೂ ಸೇರಿ 21ರ೨೧ರ ಕಿರಿಯ ಪ್ರಾಯದಲ್ಲೇ ನೋನೊ ಎಂಬ ನಾಟಕವನ್ನು ಬರೆದು ಪ್ರಯೋಗ ಮಾಡಿ ಯಶಸ್ಸನ್ನು ಸಂಪಾದಿಸಿದ. ಪ್ರೋತ್ಸಾಹಿತ ನಾಗಿ ಚೆಜ಼್ ಲೆ ಜ಼ೋವಾಕ್ವೆಸ್ (1906೧೯೦೬) ಎಂಬ ಮತ್ತೊಂದು ನಾಟಕವನ್ನು ಬರೆದು ಪ್ರದರ್ಶಿಸಿದ. ಹೀಗೆಯೇ 1908ರಲ್ಲಿ೧೯೦೮ರಲ್ಲಿ ಪೆಟೀಟ್ ಹಾಲ್ಲಂಡ್ ಮತ್ತು ಲೆ ಸ್ಕ್ಯಾಂಡಲ್ ಡಿ ಮಾಂಟ್ ಕಾರ್ಲೋ ಎಂಬ ಮತ್ತೆರಡು ನಾಟಕಗಳನ್ನು ರಂಗಭೂಮಿಯ ಮೇಲೆ ತಂದ. 1911ರಲ್ಲಿ೧೯೧೧ರಲ್ಲಿ ಇವನ ಅತ್ಯುತ್ಕೃಷ್ಟ ನಾಟಕಗಳಲ್ಲಿ ಒಂದಾದ ಲೆ ವೀಲ್ಯೂರ್ ಡಿ ನ್ಯೂಟ್ ಮತ್ತು ಉನ್ ಬೊ ಮ್ಯಾರಿಯೇಜ್ ಎಂಬ ನಾಟಕಗಳೂ ಪ್ರಕಾಶಗೊಂಡವು.
 
 
೫ ನೇ ಸಾಲು:
 
 
ಈತ ಸುಮಾರು 90೯೦ ನಾಟಕಗಳನ್ನು ಬರೆದು ಆಡಿಸಿದ. ತನ್ನ ತಂದೆಯ ಅಭಿನಯಕ್ಕೆಂದು ವಿಶೇಷವಾಗಿ ಬರೆದ ನಾಟಕಗಳಾದ ಡಿ ಬ್ಯೂರೊ (1918೧೯೧೮), ಬಿರೇಂಜರ್ (1920೧೯೨೦), ಪ್ಯಾಶ್ಚರ್ (1919೧೯೧೯) ನಿಜವಾಗಿಯೂ ಪ್ರತಿಭಾಪುರ್ಣವಾಗಿವೆ
ಗೀಟ್ರೀ ಚಲನಚಿತ್ರ ಪ್ರಪಂಚವನ್ನೂ ಪ್ರವೇಶಿಸಿ ಹಲವಾರು ಚಿತ್ರಗಳ ನಿರ್ಮಾಪಕನೂ ನಿರ್ದೇಶಕನೂ ಆಗಿ ಹೆಸರುಗಳಿಸಿದ. 1935ರ೧೯೩೫ರ ಅನಂತರ ಈತನ ದಿಗ್ದರ್ಶನದಲ್ಲಿ ನಿರ್ಮಿತವಾದ ಚಿತ್ರಗಳಲ್ಲಿ ರೋಮನ್ ಡಿ’ ಉನ್ ಟ್ರಿಚ್ಯೂರ್ ಮತ್ತು ನೆಪೋಲಿಯನ್ ಎಂಬ ಚಿತ್ರಗಳು ಬಹು ಪ್ರಸಿದ್ಧವಾದವು. 1935ರಲ್ಲಿ೧೯೩೫ರಲ್ಲಿ ಈತನ ಆತ್ಮಕಥೆ ಮೆಮಾಯಿರ್ಸ ಡಿ ಉನ್ ಟ್ರಿಚ್ಯೂರ್ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇಫ್ ಐ ರಿಮೆಂಬರ್ ರೈಟ್ ಎಂದು ಈ ಪುಸ್ತಕ ಇಂಗ್ಲಿಷಿಗೂ ಭಾಷಾಂತರವಾಗಿದೆ. ಗೀಟ್ರೀಯ ಜೀವನ ಅವನ ನಾಟಕಗಳ ವಸ್ತುವಿನಂತೆಯೇ ಚತುರ, ಅದ್ಭುತ ಹಾಗೂ ಅಸಂಭಾವ್ಯ; ಅವನ ವ್ಯಕ್ತಿತ್ವ ಸದಾ ಆಕರ್ಷಕ, ಸಂಕೀರ್ಣ-ಎಂದು ವಿಮರ್ಶಕರ ಅಭಿಪ್ರಾಯ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಗೀಟ್ರೀ,_ಸಾಚಾ" ಇಂದ ಪಡೆಯಲ್ಪಟ್ಟಿದೆ