ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
 
==ಪೀಠಿಕೆ==
'''ಕೈಗಾರಿಕೆಗಳು'''
[[ಚಿತ್ರ:Industry1.JPG|thumbnail]]
 
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ. ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಡಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅನಿವಾರ್ಯ.
[[ಚಿತ್ರ:Indus2.jpg|thumbnail]]
=='''ಕೈಗಾರಿಕೀಕರಣ ಪ್ರಾಮುಖ್ಯತೆ'''== :
ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಆರ್ಥಿಕಾಭಿವೃದ್ಢಿಯಲ್ಲಿ ಕೈಗಾರಿಕೀಕರಣದ ಮಹತ್ವ ತಿಳಿಯುತ್ತದೆ.
 
# '''''ಕೃಷಿಯ ಪ್ರಗತಿಗೆ ಕೊಡುಗೆ''''' :ಆರ್ಥಿಕತೆಯ ಇತರ ವಲಯಗಳ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಅತ್ಯಂತ ಆವಶ್ಯಕ. ಕೈಗಾರಿಕೆಗಳು ಕೃಷಿಗೆ ಅಗತ್ಯವಿರುವ ಹೂಡುವಳಿಗಳನ್ನು(Inputs) ಒದಗಿಸುತ್ತವೆ. ಆಧುನಿಕ ಬೇಸಾಯ ಪದ್ಢತಿಗೆ ಬೇಕಿರುವ ಯಂತ್ರಗಳು, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮೊದಲಾದವು ಕೈಗಾರಿಕೋತ್ಪನ್ನಗಳೇ. ಅಂತೆಯೇ ಕೃಷಿಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಕೈಗಾರಿಕೆಗಳು ಅನಿವಾರ್ಯ. ಆದ್ದರಿಂದ ಕೃಶಿ ವಲಯದ ಬೆಳವಣಿಗೆಗೆ ಕೈಫ಼ಾರಿಕೆಗಳ ಪಾತ್ರವನ್ನು ಎಷ್ಟು ಹೇಳಿದರೂ ತೀರದು.
Line ೧೮ ⟶ ೧೯:
ಕೃಷಿ ಪ್ರಧಾನವಾಗಿದ್ದ ದೇಶಗಳು ಕೈಗಾರಿಕೀಕೃತ ದೇಶಗಳಾಗಿ ರೂಪಾಂತರ ಗೊಳ್ಳುವುದು ಆರ್ಥಿಕ ವಿಕಾಸದ ಒಂದು ಚಾರಿತ್ರಿಕ ಬೆಳವಣಿಗೆ. ಅಭಿವೃದ್ದಿ ಹೊಂದಿದ ಎಲ್ಲ ದೇಶಗಳು ಇಂದು ಕೈಗಾರಿಕೀಕರಣ ಸಾದಿಸಿದ ದೇಶಗಳಾಗಿವೆ. ಭಾರತವೂ ಸಹ ಮೂಲಾಧಾರವಾದ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಲು ನಿರಂತರವಾಗಿ ಕಾರ್ಯ ಮಗ್ನವಾಗಿದೆ.ಪಂಚವಾರ್ಷಿಕ ಯೋಜನೆಗಳಲ್ಲಿ, ಅದರಲ್ಲೂ ಎರಡನೇ ಯೋಜನೆಮತ್ತು ನಂತರದ ಯೋಜನೆಗಳ ಅವಧಿಯಲ್ಲಿ ಕೈಗಾರಿಕೀಕರಣಕ್ಕೆ ಭಧ್ರ ಬುನಾದಿ ಹಾಕಲು ಎಲ್ಲ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.
ಸಾರ್ವಜನಿಕ ವಲಯವು ರಭಸವಾಗಿ ವಿಸ್ಥರಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ. ೧೯೫೧ ರಲ್ಲಿ ಕೇವಲ ೫ ವಿಭಾಗೇತರ ಸಾರ್ವಜನಿಕ ಉದ್ಯಮಗಳಿದ್ದವು. ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೨೯ ಕೋಟಿಯಾಗಿತ್ತು. ೧೯೯೪ ರ ಮಾರ್ಚ್ ೩೧ ರಲ್ಲಿ ಅವುಗಳ ಸಂಖ್ಯೆ ೨೪೬ಗೆ ಬೆಳೆಯಿತು. ಮತ್ತು ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೧೬೪೩೩೨ ಕೋಟಿಗೆ ಏರಿತು. ಈ ಉದ್ಯಮಗಳು ಉಕ್ಕು, ಕಲ್ಲಿದ್ದಲು, ರಾಸಾಯನಿಕಗಳು, ರೈಲಿನ ಎಂಜಿನ್ ,ರೈಲು ಬೋಗಿ , ಹಡಗುಗಳು,ವೈಮಾನಿಕ ಸಾಮಗ್ರಿಗಳು, ರಾಸಾಯನಿಕ ಗೊಬ್ಬರ, ತಾಂತ್ರಿಕ ವಸ್ತುಗಳೂ ಸೇರಿದಂತೆ ವೈವಿದ್ಯಮಯ ಸರಕುಗಳನ್ನು ಉತ್ಪಾದನೆ ಮಾಡುತ್ತಿವೆ.
'''==ಪ್ರಮುಖ ಕೈಗಾರಿಕೆಗಳು'''==
 
===ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ===
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದೊಂದು ಮೂಲ ಹಾಗು ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಕೆಗೆ ಏಕೆ ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನ ವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ