ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
===ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ===
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದೊಂದು ಮೂಲ ಹಾಗು ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಕೆಗೆ ಏಕೆ ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನ ವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ.
ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೇಯಿತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್ ನಲ್ಲಿ ಮತ್ತು ೧೮೭೪ ರಲ್ಲಿ ಬಿಹಾರದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ,.
 
===ಹತ್ತಿ ಬಟ್ಟೆಯ ಕೈಗಾರಿಕೆ===
ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆ ಯಾದ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ ಮುಂಬಯಿಯಲ್ಲಿಯೆ ಕೇಂದ್ರಿಕೃತವಾಯಿತ್ತು. ನಂತರ ಉತ್ತರಪ್ರದೇಶದ, ಗುಜರಾತ್, ಬಂಗಾಲ ಮತ್ತು ಮಹರಾಷ್ಟ್ರ, ತಮಿಳುನಾಡು, ಹರ್ಯಾಣಾ, ಕರ್ನಾಟಕ ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರಕೃತವಾಗಿದೆ.
 
===ಸಕ್ಕರೆ ಕೈಗಾರಿಕೆಗಳು===
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆದಾರಿತ ಕೈಗಾರಿಕೆಯಾಗಿದೆ. ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ.ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಟೆಯನ್ನು ಪಡೆದಿದೆ.ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ ಕಬ್ಬು ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ