ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
#'''''ಉದ್ಯೋಗಾವಕಾಶಗಳ ಸೃಷ್ಟಿ''''' : ಕೈಗಾರಿಕೆಗಳ ಬೆಳವಣಿಗೆಯು ನಿರುದ್ಯೋಗ ನಿರ್ಮೂಲನಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. ಭಾರತದಂತಹ ದೇಶದಲ್ಲಿ ಇದು ಬಹು ಮುಖ್ಯ ಸಂಗತಿ. ಹೊಸದೊಂದು ಕೈಗಾರಿಕೆ ಸ್ಥಾಪನೆಯಾದರೆ, ಅದು ಅದರ ಉತ್ಪಾದನ ಸಾಮರ್ಥ್ಯಕ್ಕೆ ತಕ್ಕಂತೆ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಶಕ್ತಿ ಹೊಂದಿರುತ್ತದೆ. ಈ ನಿರುದ್ಯೋಗಿಗಳನ್ನು ಹೀರಿಕೊಳ್ಳಲು ಕೈಗಾರಿಕೆಗಳು ಬೆಳೆಯುತ್ತಿರಬೇಕು. ಇಲ್ಲದಿದ್ದರೆ ಅವರು ಮತ್ತೂ ಕೃಷಿಯನ್ನೇ ಅವಲಂಬಿಸುವುದರಿಂದ ಅವರ ನಿರುದ್ಯೋಗದ ದಾರುಣತೆ ಹೆಚ್ಚುವುದಷ್ಟೇ ಅಲ್ಲದೇ ಕೃಷಿಯ ಪ್ರಗತಿಯೂ ಹಿಂಜರಿಯುತ್ತದೆ.
#'''''ಜೀವನಮಟ್ಟ ಸುಧಾರಣೆ''''' : ಕೈಗಾರಿಕಾ ವಲಯವು ಉದ್ಯೋಗಿಗಳಿಗೆ ಸಾಪೇಕ್ಷವಾಗಿ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಉದಾಹರಣೆಗೆ- ಕೈಗಾರಿಕಾ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟು ಕೃಷಿ ಕಾರ್ಮಿಕರ ಗಳಿಕೆ ಮತ್ತು ಜೀವನಮಟ್ಟಕ್ಕಿಂತಲೂ ಹೆಚ್ಚಿರುತ್ತವೆ. ಕೈಗಾರಿಕಾ ಕೇಂದ್ರಗಳು ಪಟ್ಟಣಗಳಾಗಿ ಬೆಳೆಯುವುದರಿಂದ ಅವನ್ನು ಅವಲಂಬಿಸಿರುವ ಜನರಿಗೆ ಬಾಹ್ಯ ಪ್ರಪಂಚದೊಡಣೆ ವ್ಯಾಪಕ ಸಂಪರ್ಕ ಹೊಂದಲು ಮತ್ತು ನಾಗರೀಕತೆಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.
#'''''ಆಂತರಿಕ ಮತ್ತು ಬಾಹ್ಯ ಆರ್ಥಿಕತೆಗಳ ಪ್ರಯೋಜನ''''' : ಕೈಗಾರಿಕೆಗಳು ಆಂತರಿಕ ಆರ್ಥಿಕತೆಗಳ ಹಾಗೂ ಬಾಹ್ಯ ಆರ್ಥಿಕತೆಗಳ ಅವಕಾಶವನ್ನು ಒದಗಿಸಿ ಕೊಡುತ್ತವೆ. ಉದಾಹರಣೆ: ಒಂದು ಪ್ರದೇಶದಲ್ಲಿ ಹೊಸದಾಗಿ ಒಂದು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದರೆ ಆದರೆ, ಅದರ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ , ಸಾರಿಗೆ ವ್ಯವಸ್ತೆ, ಮುಂತಾದವು ಬೆಳೆದು ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳು ಲಭಿಸುತ್ತದೆ. ಇದನ್ನು ಆಂತರಿಕ ಆರ್ಥಿಕತೆಗಳೆನ್ನುತ್ತರೆ. ಅಂತೆಯೆ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಉಕ್ಕು ಇತರ ಅನೆಕ ದೂರದ ಪ್ರದೆಶದಲ್ಲಿ ಅನೇಕ ಕಟ್ಟಡ, ಕಾರ್ಖಾನೆ ಮುಂತಾದ ಕಾರ್ಯಗಳಿಗೆ ಬಳಸಲ್ಪಡುವುದರಿಂದ ಆರ್ಥಿಕ ಮುನ್ನಡೆ ಆಗುತ್ತದೆ.
# '''''ರಾಷ್ಟ್ರೀಯ ರಕ್ಷಣೆ''''': ಕೈಗಾರಿಕೆಗಳು ರಾಷ್ಟ್ರಕ್ಕೆ ಸುರಕ್ಷತೆಯನ್ನು ಒದಗಿಸುತ್ತವೆ. ಯಾವುದೆ ರಾಷ್ಟ್ರವೂ ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು. ಸುತ್ತ ಮುತ್ತಲು ಶತ್ರುಗಳನ್ನೆ ಹೊಂದಿರುವ ಭಾರತವು ರಕ್ಷಣಾ ಸಂಭಂದವಾಗಿ ನೆಮ್ಮದಿ ಇಂದಿರಲು ಮತ್ತು ದೇಶದ ಸುರಕ್ಷತೆಯ ಬಗೆಗೆ ಜಾಗರುಕರವಾಗಿರಲು ಕೈಗಾರಿಕೀಕರಣ ಅನಿವಾರ್ಯ.
#
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ