ಅಮರಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಮರಕೋಶ
ಅಮರ ಕೋಶ
೨೪ ನೇ ಸಾಲು:
ತ್ರೀಪುಂನಪುಂಸಕಂ ಜ್ಞೇಯಂ ತದ್ವಿಶೇಷವಿಧೇಃ ಕ್ವಚಿತ್ || 3 ||
:*ಅನ್ವಯಃ - ಪ್ರಾಯಶಃ, ರೂಪಭೇದೇನ, ಕುತ್ರಚಿತ್, ಸಾಹಚರ್ಯೇಣ, ಕ್ವಚಿತ್, ವಿಶೇಷವಿಧೇಃ, ತತ್, ಸ್ರೀಪುಂನಪುಂಸಕಂ ಜ್ಞೇಯಮ್,
*ಶ್ಲೋಕಾರ್ಥ-ಈ ಗ್ರಂಥದಲ್ಲಿ ವಿಶೇಷವಾಗಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗಗಳನ್ನು ಶಬ್ದಗಳ ರೂಪಭೇದದಿಂದಲೇ ತಿಳಿಯಬಹುದಾಗಿದೆ. (ಉದಾ: ಸಂವತ್ಸರೋವತ್ಸರೋಬ್ದ= ಇಲ್ಲಿ ಸಂವತ್ಸರಾದಿ ಶಬ್ದಗಳು ಪುಲ್ಲಿಂಗಗಳೆಂದು ಪ್ರಥಮಾವಿಭಕ್ತಿಯ ರೂಪಗಳಿಂದ ತಿಳಿಯುತ್ತದೆ. ಕಾದಂಬಿನೀ, ಮೇಘಮಾಲಾ = ಇವು ಸ್ತ್ರೀಲಿಂಗಗಳೆಂದು ಊಹಿಸಬಹುದು. ಗಗನಮನಂತಂ ಸುರವರ್ತ್ಮಖಮ್ = ಇವು ನಪುಂಸಕಲಿಂಗಗಳೆಂದು ತಿಳಿಯಬಹುದಾಗಿದೆ). ಕೆಲವೆಡೆ ಶಬ್ದಾಂತರಗಳ ಸಾಹಚರ್ಯದಿಂದ ಲಿಂಗಗಳನ್ನು ಗೊತ್ತುಮಾಡಬಹುದು.(ಉದಾ: ಭಾನುಃಕರಃ = ಕರಶಬ್ದವು ಪುಲ್ಲಿಂಗವಾದ್ದರಿಂದ ಅದರೊಡನಿರುವ ಭಾನುಶಬ್ದವೂ ಪುಲ್ಲಿಂಗ. ಅಶ್ವಯುಗಶ್ವಿನೀ= ಅಶ್ವಯುಕ್, ಸ್ತ್ರೀಲಿಂಗ, ವಿಯದ್ವಿಷ್ಣುಪದಂ = ವಿಯತ್ ನಪುಂಸಕಲಿಂಗ), ಕೆಲವೆಡೆ ಸ್ಪಷ್ಟವಾಗಿ ಲಿಂಗನಿರ್ದೇಶವನ್ನು ಮಾಡಿದ್ದರಿಂದ ಲಿಂಗವನ್ನು ತಿಳಿಯಬೇಕು(ಉದಾ: ದುಂದುಭಿಃ ಪುಮಾನ್; ದಿಧೀತಿಃ ಸ್ತ್ರಿಯಾಮ್; ರೋಚಿಃ ಶೋಚಿರುಭೇ ಕ್ಲೀಬೇ).
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ |
ಕೃತೋsತ್ರಕೃತೋತ್ರ ಭಿನ್ನಲಿಂಗಾನಾಮನುಕ್ತಾನಾಂ ಕ್ರಮಾದೃತೇ || 4 ||
:*ಅನ್ವಯಃ -
*ಶ್ಲೋಕಾರ್ಥಃ - ವಿಭಿನ್ನ ಲಿಂಗದ ಶಬ್ದಗಳಿಗೆ ಲಿಂಗಭೇದವು ಸರಿಯಾಗಿ ಗೊತ್ತಾಗಲೆಂಬ ಉದ್ದೇಶದಿಂದ ಅವುಗಳಿಗೆ ದ್ವಂದ್ವ ಸಮಾಸವನ್ನಾಗಲಿ, ಏಕಶೇಷವನ್ನಾಗಲಿ, ಸಂಕರವನ್ನಾಗಲಿ ಮಾಡಿಲ್ಲ.
:(ಉದಾ: ದೇವತಾ, ದೈವತ, ಅವರ = ಇವು ವಿಭಿನ್ನ ಲಿಂಗಗಳು. ಇಲ್ಲಿ ದೇವತಾ ದೈವತಾಮರಾಃ ಎಂದು ದ್ವಂದ್ವ ಸಮಾಸವನ್ನು ಮಾಡಿಲ್ಲ. ಮಾಡಿದ್ದರೆ ಎಲ್ಲವೂ ಒಂದೇ ಲಿಂಗದವುಗಳೆಂದು ಭ್ರಮೆಯಾಗುತ್ತಿತ್ತು. ಖಂ, ನಭಃ, ಶ್ರಾವಣೋ ನಭಾಃ = ಇಲ್ಲಿ ಖಶ್ರಾವಣೌ ತು ನಭಸೀ ಎಂದು ಏಕಶೇಷ ಮಾಡಿಲ್ಲ. ಮಾಡಿದ್ದರೆ, ನಭಃ ಶಬ್ದವು ಪುಲ್ಲಿಂಗದಲ್ಲಿ ಇದೆಯೆಂದು ತಿಳಿಯುತ್ತಿರಲಿಲ್ಲ. ಸ್ತವಃ ಸ್ತೋತ್ರಂ ಸ್ತುತಿರ್ನುತಿಃ = ಇಲ್ಲಿ 'ಸ್ತುತಿಃ ಸ್ತೋತ್ರಂ ಸ್ತವೋ ನುತಿ' ಎಂದು ಸಾಂಕರ್ಯವನ್ನು ಮಾಡಿಲ್ಲ. ಮಾಡಿದ್ದರೆ ಸ್ತುತಿ ಶಬ್ದದ ಲಿಂಗವು ತಿಳಿಯುತ್ತಿರಲಿಲ್ಲ. ಮತ್ತು ನುತಿ ಶಬ್ದವು ಪುಲ್ಲಿಂಗವೆಂದು ಭ್ರಮೆಯಾಗುತ್ತಿತ್ತು. ಆದರೆ ಕ್ರಮ ಎಂದರೆ ವ್ಯವಸ್ಥೆಯಿಲ್ಲದೆ ಸಾಂಕರ್ಯವನ್ನು ಮಾಡಿಲ್ಲ. ಒಂದು ವ್ಯವಸ್ಥೆ ಇದ್ದಾಗ ಸಾಂಕರ್ಯವಿರಬಹುದು. ಹೇಗೆಂದರೆ ಸ್ತವಃ, ಸ್ತೋತ್ರಂ ಸ್ತುತಿರ್ನುತಿಃ = ಇಲ್ಲಿ ಸಾಂಕರ್ಯ ಉಂಟು, ಲಿಂಗಜ್ಞಾನಕ್ಕೆ ಇಲ್ಲಿ ಒಂದು ವ್ಯವಸ್ಥೆ ಇದೆ, ಸ್ವವ, ಸ್ತೋತ್ರಗಳ ಲಿಂಗವು ರೂಪಭೇದದಿಂದ ತಿಳಿಯುತ್ತದೆ. ಸ್ತುತಿನುತಿಗಳು ನಪುಂಸಕವಲ್ಲವೆಂದು ರೂಪದಿಂದಲೇ ತಿಳಿಯುತ್ತದೆ. ಪುಲ್ಲಿಂಗವಾಗಿದ್ದರೆ ಸ್ತವ ಶಬ್ದದೊಡನೆ ಸೇರಿಸಬೇಕಾಗಿತ್ತು. ಆದ್ದರಿಂದ ಅವು ಸ್ತ್ರೀಲಿಂಗಗಳೆಂದು ಊಹಿಸಬಹುದು)
ತ್ರಿಲಿಂಗ್ಯಾಂ ತ್ರಿಷ್ವಿತಿ ಪದಂ ವಿಥುನೇ ತು ದ್ವಯೋರಿತಿ |
ನಿಷಿದ್ಧ ಲಿಂಗಂ ಶೇಷಾರ್ಥಂ ತ್ವಂತಾಥಾದಿ ನ ಪೂರ್ವಭಾಕ್ || 5 ||
:*ಅನ್ವಯಃ-
*ಶ್ಲೋಕಾರ್ಥ- ಮೂರು ಲಿಂಗಗಳೂ ಇವೆಯೆಂದೂ ಸೂಚಿಸಲು 'ತ್ರಿಷು' ಎಂಬ ಪದವನ್ನೂ ಸ್ತ್ರೀಲಿಂಗ ಪುಲ್ಲಿಂಗಗಳೆರಡೂ ಇವೆಯೆನ್ನಲು ದ್ವಯೋಃ ಎಂಬ ಪದವನ್ನು ಬಳಸಲಾಗಿದೆ.(ಉದಾ: ತ್ರಿಷು ಸ್ಪುಲಿಂಗೋಗ್ನಿಕಣಃ = ಇಲ್ಲಿ ಸ್ಪುಲಿಂಗ ಶಬ್ದವು ಮೂರು ಲಿಂಗಗಳಲ್ಲಿಯೂ ಇದೆಯೆಂದು ತಿಳಿಯಬೇಕು. ವಹ್ನೇರ್ದ್ವರ್ಚ್ವಾಲಕೀಲೌ = ಇಲ್ಲಿ ಜ್ವಾಲ, ಕೀಲ ಶಬ್ದಗಳು ಸ್ತ್ರೀಲಿಂಗ ಮತ್ತು ಪುಲ್ಲಿಂಗಗಳಲ್ಲಿವೆಯೆಂದು ಅರ್ಥ) ಹಾಗೆಯೇ ಒಂದು ಲಿಂಗವನ್ನು ನಿಷೇಧಿಸಿದರೆ ಉಳಿದ ಲಿಂಗಗಳಿವೆಯೆಂದು ತಿಳಿಯಬೇಕು, (ಉದಾ: ವ್ಯೋಮಯಾನಂ ವಿಮಾನೋಸ್ತ್ರೀ = ಸ್ತ್ರೀಲಿಂಗವಿಲ್ಲ ಎಂದು ನಿಷೇಧಿಸಿದ್ದರಿಂದ ವಿಮಾನ ಶಬ್ದಕ್ಕೆ ಪುಲ್ಲಿಂಗ ನಪುಂಸಕಲಿಂಗಗಳಿವೆಯೆಂದು ತಿಳಿಯಬೇಕು).ಯಾವ ಶಬ್ದದ ಮುಂದೆ 'ತು' ಎಂಬ ಪದವಿದೆಯೋ ಆ ಶಬ್ದವು ಹಿಂದಿನ ಪದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ಪುಲೋಮಜಾ ಶಚೀಂದ್ರಾಣೀ ನಗರೀತ್ವಮರಾವತೀ = ಇಲ್ಲಿ ನಗರೀ ಶಬ್ದವು ಹಿಂದಿನ ಇಂದ್ರಾಣಿಯೊಡನೆ ಅನ್ವಿತವಲ್ಲ. ಅದು ಅಮರಾವತಿಯೊಡನೆ ಅನ್ವಿತ). ಯಾವ ಶಬ್ದದ ಹಿಂದೆ 'ಅಥ' ಎಂಬ ಪದವಿದೆಯೋ ಆ ಶಬ್ದವೂ ಹಿಂದಿನ ಶಬ್ದಗಳೊಡನೆ ಅನ್ವಿತವಾಗುವುದಿಲ್ಲ. (ಉದಾ: ವಿಸ್ಮಯೋದ್ಭುತಮಾಶ್ಚರ್ಯಂ ಚಿತ್ರಮಪ್ಯಥ ಭೈರವಮ್ = ಇಲ್ಲಿ ಭೈರವ ಶಬ್ದವು ಹಿಂದಿನ ಚಿತ್ರ ಶಬ್ದದೊಡನೆ ಅನ್ವಿತವಲ್ಲ. "ದಾರುಣಂ ಭೀಷಣಂ ಭೀಷ್ಮಂ" ಎಂಬುದರೊಡನೆ ಅನ್ವಿತ).
*ಶ್ಲೋಕಾರ್ಥ-
:*ಟಿಪ್ಪಣಿ : ದ್ವಿಹೀನ, ದ್ವಯಹೀನ ಎಂದರೆ ಸ್ತ್ರೀ ಪುಂಸಕಗಳೆರಡೂ ಇಲ್ಲ - ನಪುಂಸಕಲಿಂಗ ಎಂದು ತಿಳಿಯತಕ್ಕದ್ದು. ನಾ ಎಂದರೆ ಪುಲ್ಲಿಂಗ, ಕ್ಲೀಬ ಎಂದರೆ ನಪುಂಸಕ. "ಅಥ" ಶಬ್ದದಂತೆಯೇ "ಅಥೋ" ಶಬ್ದವನ್ನು ಉಪಯೋಗಿಸಿದರೂ ಪೂರ್ವಾನ್ವಯವಿಲ್ಲ. ಶಬ್ದದ ಕಡೆಯಲ್ಲಿ 'ತಿ' ಎಂಬ ಪ್ರತ್ಯಯವಿದ್ದು ಭಾವನಾಮವಾಗಿದ್ದರೆ, ಅದು ಸ್ತ್ರೀಲಿಂಗ.(ಉದಾ : ಮತಿ, ರತಿ, ನತಿ, ಇತ್ತಾದಿ).
===ಪ್ರಥಮ ಕಾಂಡಮ್===
:*1 - ಸ್ವರ್ಗವರ್ಗಃ
"https://kn.wikipedia.org/wiki/ಅಮರಕೋಶ" ಇಂದ ಪಡೆಯಲ್ಪಟ್ಟಿದೆ