ಅಮರಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಮರ ಕೋಶ
ಅಮರ ಕೋಶ
೧೩ ನೇ ಸಾಲು:
'''ಅಮರಕೋಶಃ-ಕನ್ನಡಾನುವಾದಃ-ವಿದ್ವಾನ್ ಎನ್. ರಂಗನಾಥ ಶರ್ಮ'''
 
*'''ಪೀಠಿಕಾ ಶ್ಲೋಕಾಃ'''
 
ಯಸ್ಯ ಜ್ಞಾನದಯಾಸಿಂಧೋರಗಾಧಸ್ಯನಘಾ ಗುಣಾಃ |
ಸೇವ್ಯತಾಮಕ್ಷಯೋ ಧೀರಾ ಸ್ಸಶ್ರಿಯೈ ಚಾಮೃತಾಯ ಚ || 1 ||
Line ೧೯ ⟶ ೨೦:
*ಅನ್ವಯಃ - ಹೇ ಧೀರಾಃ ಜ್ಞಾನದಯಾಸಿಂಧೋಃ, ಯಸ್ಯ ಅಗಾಧಸ್ಯ ಗುಣಾಃ ಅನಘಾಃ, ಸಃ ಅಕ್ಷಯಃ ಶ್ರಿಯೈ, ಚ, ಅಮೃತಾಯ, (ಭವದ್ಭಿಃ), ಸೇವ್ಯತಾಮ್,
*ಶ್ಲೋಕಾರ್ಥ-ಎಲೈ ಧೀರರೇ, ಜ್ಞಾನ ಮತ್ತು ದಯೆಗಳಿಗೆ ಸಮುದ್ರದಂತೆ ಆಕರನಾದ ಯಾರ ಸರ್ವಶಕ್ತತ್ವಾದಿ ಗುಣಗಳು ಪಾಪನಿವರ್ತಕವಾಗಿ ಮಂಗಳಕರವಾಗಿವೆಯೋ, ಅಂತಹ ಶಾಶ್ವತನಾದ ಭಗವಂತನು ಧರ್ಮಾರ್ಥಕಾಮಗಳ ಸಮೃದ್ಧಿಗಾಗಿಯೂ ಮೋಕ್ಷಕ್ಕಾಗಿಯೂ ಸೇವಿಸಲ್ಪಡಲಿ.
 
ಸಮಾಹೃತ್ಯಾನ್ಯತಂತ್ರಾಣಿ ಸಂಕ್ಷಿಪ್ತೈಃ ಪ್ರತಿಸಂಸ್ಕೃತೈಃ |
ಸಂಪೂರ್ಣಮುಚ್ಯತೇ ವರ್ಗೈರ್ನಾಮಲಿಂಗಾನುಶಾಸನಮ್ || 2 ||
*ಅನ್ವಯಃ - ಅನ್ಯತಂತ್ರಾಣಿ, ಸಮಾಹೃತ್ಯ, ಪ್ರತಿಸಂಸ್ಕೃತೈಃ, ಸಂಕ್ಷಿಪ್ತೈಃ, ವರ್ಗೈಃ, ಸಂಪೂರ್ಣಂ ಉಚ್ಯತೇ ನಾಮಲಿಂಗಾನುಶಾಸನಮ್,
*ಶ್ಲೋಕಾರ್ಥ-ನಾಮಲಿಂಗಾನುಶಾಸನವೆಂಬ ಶಬ್ದಕೋಶವನ್ನು ನಾನು ರಚಿಸುತ್ತಿದ್ದೇನೆ. ಇದರಲ್ಲಿ ಶಾಸ್ತ್ರಾಂತರಗಳನ್ನು ಪರ್ಯಾಲೋಚಿಸಿ, ಸಂಗ್ರಹಿಸಿರುವ ಶಬ್ದರಾಶಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಇವು ವ್ಯಾಕರಣ ಸಂಸ್ಕಾರವನ್ನು ಪಡೆದಿರುವ ಪರಿಶುದ್ಧ ಶಬ್ದಗಳು.
 
ಪ್ರಾಯಶೋ ರೂಪಭೇದೇನ ಸಾಹಚರ್ಯಾಚ್ಚ ಕುತ್ರಚಿತ್ |
ತ್ರೀಪುಂನಪುಂಸಕಂ ಜ್ಞೇಯಂ ತದ್ವಿಶೇಷವಿಧೇಃ ಕ್ವಚಿತ್ || 3 ||
*ಅನ್ವಯಃ - ಪ್ರಾಯಶಃ, ರೂಪಭೇದೇನ, ಕುತ್ರಚಿತ್, ಸಾಹಚರ್ಯೇಣ, ಕ್ವಚಿತ್, ವಿಶೇಷವಿಧೇಃ, ತತ್, ಸ್ರೀಪುಂನಪುಂಸಕಂ ಜ್ಞೇಯಮ್,
*ಶ್ಲೋಕಾರ್ಥ-ಈ ಗ್ರಂಥದಲ್ಲಿ ವಿಶೇಷವಾಗಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗಗಳನ್ನು ಶಬ್ದಗಳ ರೂಪಭೇದದಿಂದಲೇ ತಿಳಿಯಬಹುದಾಗಿದೆ. (ಉದಾ: ಸಂವತ್ಸರೋವತ್ಸರೋಬ್ದ= ಇಲ್ಲಿ ಸಂವತ್ಸರಾದಿ ಶಬ್ದಗಳು ಪುಲ್ಲಿಂಗಗಳೆಂದು ಪ್ರಥಮಾವಿಭಕ್ತಿಯ ರೂಪಗಳಿಂದ ತಿಳಿಯುತ್ತದೆ. ಕಾದಂಬಿನೀ, ಮೇಘಮಾಲಾ = ಇವು ಸ್ತ್ರೀಲಿಂಗಗಳೆಂದು ಊಹಿಸಬಹುದು. ಗಗನಮನಂತಂ ಸುರವರ್ತ್ಮಖಮ್ = ಇವು ನಪುಂಸಕಲಿಂಗಗಳೆಂದು ತಿಳಿಯಬಹುದಾಗಿದೆ). ಕೆಲವೆಡೆ ಶಬ್ದಾಂತರಗಳ ಸಾಹಚರ್ಯದಿಂದ ಲಿಂಗಗಳನ್ನು ಗೊತ್ತುಮಾಡಬಹುದು.(ಉದಾ: ಭಾನುಃಕರಃ = ಕರಶಬ್ದವು ಪುಲ್ಲಿಂಗವಾದ್ದರಿಂದ ಅದರೊಡನಿರುವ ಭಾನುಶಬ್ದವೂ ಪುಲ್ಲಿಂಗ. ಅಶ್ವಯುಗಶ್ವಿನೀ= ಅಶ್ವಯುಕ್, ಸ್ತ್ರೀಲಿಂಗ, ವಿಯದ್ವಿಷ್ಣುಪದಂ = ವಿಯತ್ ನಪುಂಸಕಲಿಂಗ), ಕೆಲವೆಡೆ ಸ್ಪಷ್ಟವಾಗಿ ಲಿಂಗನಿರ್ದೇಶವನ್ನು ಮಾಡಿದ್ದರಿಂದ ಲಿಂಗವನ್ನು ತಿಳಿಯಬೇಕು(ಉದಾ: ದುಂದುಭಿಃ ಪುಮಾನ್; ದಿಧೀತಿಃ ಸ್ತ್ರಿಯಾಮ್; ರೋಚಿಃ ಶೋಚಿರುಭೇ ಕ್ಲೀಬೇ).
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ |
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ |
ಕೃತೋsತ್ರ ಭಿನ್ನಲಿಂಗಾನಾಮನುಕ್ತಾನಾಂ ಕ್ರಮಾದೃತೇ || 4 ||
ತ್ರಿಲಿಂಗ್ಯಾಂ ತ್ರಿಷ್ವಿತಿ ಪದಂ ವಿಥುನೇ ತು ದ್ವಯೋರಿತಿ |
Line ೩೬ ⟶ ೩೪:
*ಅನ್ವಯಃ-
*ಶ್ಲೋಕಾರ್ಥ-
*'''ಪ್ರಥಮ ಕಾಂಡಮ್'''
 
*'''1 - ಸ್ವರ್ಗವರ್ಗಃ'''
Line ೪೩ ⟶ ೪೧:
ಸುರಲೋಕೋ ದ್ಯೋದಿವೌ ದ್ವೇ ಸ್ತ್ರಿಯಾಂ ಕ್ಲೀಬೇ ತ್ರಿವಿಷ್ಟಪಮ್ || 6 ||
*ಸ್ವರ್(ಅವ್ಯಯ), ಸ್ವರ್ಗ, ನಾಕ, ತ್ರಿದಿವ, ತ್ರಿದಶಾಲಯ, ಸುರಲೋಕ(ಇವುಗಳು ಪುಲ್ಲಿಂಗಳು), ದ್ಯೋ, ದಿವ್(ಸ್ತ್ರೀಲಿಂಗ), ತ್ರಿವಿಷ್ಟಪ(ನಪುಂಸಕಲಿಂಗ) = ಸ್ವರ್ಗ
 
ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ |
ಸುಪರ್ವಾಣಸ್ಸುಮನಸಸ್ತ್ರಿದವೇಶಾ ದಿವೌಕಸಃ || 7 ||
"https://kn.wikipedia.org/wiki/ಅಮರಕೋಶ" ಇಂದ ಪಡೆಯಲ್ಪಟ್ಟಿದೆ