ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಆದರೆ, ಎಲ್ಲಿ ಬೆಚ್ಚಗಿನ ಬಿಸಿಲು ಇಲ್ಲವೋ ಅಲ್ಲಿ ಕೊರೆಯುವ ಚಳಿಯಿಂದ ಮೈ ನಡುಗುತ್ತಾ ಜಡ್ದುಗಟ್ಟುತ್ತದೆ. ಆದ್ದರಿಂದಲ್ಲೇ ಸದಾಕಾಲವೂ ಹಿಮ , ಮಂಜಿನಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಜನವಸತಿ ಇರುವುದಿಲ್ಲ . ಅಷ್ಟೇ ಏಕೆ . ಆ ಭೀಕರ ವಾತಾವರಣದಲ್ಲಿ ಗಿಡಮರಗಳೂ ಬೆಳೆಯಲಾರವು.
 
ನಮ್ಮ ಬದುಕಿಗೆ ಉಷ್ಣ ಎಷ್ಟು ಮುಖ್ಯ ಎಂಬುದು ಇದರಿಂದ ಅರಿವಾಗುತ್ತವೆ . ಅಡುಗೆ ಮಾಡಲೂ[[ ಶಾಖ]] ಬೇಕು . ಬೆಚ್ಚಗಿದ್ದಾಗ ಬಹಳ ಹಿತ ಹಾಗೂ ನೆಮ್ಮದಿಯಾಗಿರುತ್ತದೆ. ಚಳಿಗಾಲದಲ್ಲಿ ಒಲೆಯ ಮುಂದೆ ಕುಳಿತು ಅಥವಾ ದಪ್ಪ ಕಂಬಳಿ ಹೊದ್ದು ಬೆಚ್ಚಗಿರುವುದು ಅತ್ಯಂತ ಮುದ ನೀಡುತ್ತದಲ್ಲವೆ?
 
ಬೆಂಕಿ ಸುಡಬಲ್ಲದು ಹಾಗೂ ಕೊಲ್ಲಬಲ್ಲದು . ಅದೇ ಬೆಂಕಿ ಅನ್ನವನ್ನೂ ಬೇಯಿಸುತ್ತದೆ . ಶೀತದಿಂದ ಮೈ ಬಿರಿಯುತ್ತದೆ . ಶವದ ಮೈ ಶೀತ . ಆದರೆ ,ಆದೇ ಐಸ್-ಕ್ರಿಮ್ ತಂಪು ಪಾನೀಯ ಮುಂತಾದ ರೂಪಗಳಲ್ಲಿ ಶೀತ ಹಿತಕರವಾಗಿರಬಹುದು . ಹವಾನಿಯಂತ್ರಣ ಕೊಠಡಿಯಲ್ಲಿನ ತಂಪು ಆಹ್ಲಾದಕರ .
೧೭ ನೇ ಸಾಲು:
 
 
[[ಹರ್ಷೆಲ್]] ನ ಆ ಪ್ರಯೋಗಗಳು ಬಹಳ ಸ್ವಾರಸ್ಯಕರವಾಗಿತ್ತು . ಸೂರ್ಯನ ಬೆಳಕು ಕಾಮನಬಿಲ್ಲಿನ ಏಳು ಬಣ್ಣದ ಬೆಳಕುಗಳಿಂದ ಸಂಯೋಜಿತವಾಗಿದೆ ಯಷ್ಟೆ. ಆ ಪ್ರತಿಯೊದು ಬಣ್ಣದ ಬೆಳಕಿನಲ್ಲಿಯೂ ಎಷ್ಟು ಶಾಖವಿರುತ್ತದೆ ಎಂದು ಆತ ತಿಳಿಯಬಯಸಿದ. ಅದಕ್ಕಾಗಿ ಸೂರ್ಯನ ಬೆಳಕನ್ನು ಒಂದು ಪ್ರಿಸ್ಮ್ ಮೂಲಕ ಹಾಯಿಸಿ ಹೊರಬರುವ ಒಂದೊಂದು ನೀಲಿಯಿಂದ ಕೆಂಪು ಬಣ್ಣದ ವರೆಗೆ ಶಾಖ ಹೆಚ್ಚುತ್ತದೆಂದು ತೋರಿತು.
 
ಆದರೆ , ಹರ್ಷೆಲ್ ಅಷ್ಟಕ್ಕೇ ಪ್ರಯೋಗ ನಿಲ್ಲಿಸಲಿಲ್ಲ . ಕೆಂಪು ಬೆಳಕನ್ನು ದಾಟಿ ಪಕ್ಕದಲ್ಲಿ ಥರ್ಮಾಮೀಟರ್ ಇಟ್ಟ. ಆಶ್ಚರ್ಯ. ಯಾವ ಬಣ್ಣದ ಬೆಳಕೂ ಇಲ್ಲದ . ಆ ಭಾಗದಲ್ಲಿ ಇತರ ಬಣ್ಣಗಳಿಗಿಂತಲೂ ಹೆಚ್ಚಿನ ಶಾಖವಿದ್ದುದು ತೋರಿಬಂತು . ಅಗೋಚರವಾದ ಆಕಿರಣಗಳಿಗೆ ಕ್ಯಾಲೊರಿಫಿಕ್ ಎಂದರೆ ಶಾಖ ಎಂದು ಅರ್ಥ . ಅದೇ ಜಾಡನ್ನು ಹಿಡಿದು ಎನ್ನೂ ಅನೇಕ ಪ್ರಯೋಗಗಳನ್ನು ಮಾಡಿ ಕ್ಯಾಲೊರಿಫಿಕ್ ಕಿರಣಗಳೂ ಗೋಚರ ಬೆಳಕಿನ ಕಿರಣಗಳಂತೆ ಪ್ರತಿಫಲನ . ವಕ್ರೀಭವನ ಮುಂತಾದ ಎಲ್ಲ ಗುಣಗಳನ್ನೂ ಪ್ರದರ್ಶಿಸುತ್ತವೆಂದು ದೃಡಪಡಿಸಿಕೊಂಡನು . ಹಾಗಾಗಿ, ಅಗೋಚರ ಬೆಳಕೂ ಇದೆ ಎಂಬುದು ಮೊದಲ ಬಾರಿಗೆ ಆತನ ಪ್ರಯೋಗಗಳಿಂದ ತಿಳಿದುಬಂದಿತು. ಮುಂದೆ ಅವಕ್ಕೆ ''ಅವಕೆಂಪು'' (Infrared) ಅಥವಾ "ಉಷ್ಣಕಿರಣ"ಗಳೆಂದು ಹೆಸರಾಯಿತು.
೨೩ ನೇ ಸಾಲು:
ಹತ್ತೊಂಬತ್ತನೇ ಶತಮಾನದ ಮೊದಲ ದಶಕದ ವೇಳೆಗೆ ಕ್ಯಾಲೋರಿಫಿಕ್ ಕಿರಣಗಳೂ ಮತ್ತು[[ ಬೆಳಕು]] ಮೂಲತಃ ಒಂದೇ ಬಗೆ (ವಿದ್ಯು ತ್ಕಾಂತ್ತಿಯ ಅಲೆಗಳು ) ಎಂದು ಭೌತವಿಜ್ಞಾನಿಗಳು ಅರ್ಥಮಾಡಿಕೊಂಡು ವಿಶ್ವದಲ್ಲಿ ಸರ್ವವ್ಯಾಪಿಯಾದ ಈಥರ್ ಎಂಬ ಮಾಧ್ಯಮದ ಮೂಲಕ ಕಂಪನ ರೂಪದಲ್ಲಿ ಅವು ಪ್ರಸರಿಸುತವೆ ಎಂದು ಚಿತ್ರಿಸಿಕೊಂಡಿದ್ದರು. ಉಷ್ಣ ಕಿರಣ ಮತ್ತು ಬೆಳಕಿನ ಕಿರಣ ಇವುಗಳ ನಡುವಿನ ವ್ಯತ್ಯಾಸ ಕೇವಲ ಅವುಗಳ ತರಂಗಾಂತರದಲ್ಲಿ (Wave length) ಎಂಬುದು ಹತ್ತೋಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಮಾತ್ರವೇ ಸ್ಪಷ್ಟವಾಯಿತು. ಉಷ್ಣಕಿರಣಗಳ ತರಂಗಾಂತರ ಬೆಳಕಿನ ತರಂಗಾಂತರಗಳಿಗಿಂತ ದೀರ್ಘ. ಇದರಿಂದ ನಮಗೆ ತಿಳಿದುಬರುವುದೇನೆಂದರೆ ನಮ್ಮ ಇಂದ್ರಿಯಗಳು ವಿದ್ಯುತ್ ಕಾಂತೀಯ ತರಂಗಗಳಿಗೆ ಅವುಗಳ ತರಂಗಾಂತರಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ ಎಂಬುದು.
 
'''[[ಸೂರ್ಯನಸೂರ್ಯ]] ತಾಪ :''' ಸೂರ್ಯ ಮತ್ತು ಇತರ ಖಗೋಳ ಕಾಯಗಳ ತಾಪವನ್ನು ಭೂಮಿಯಿಂದಲೇ ಅಳೆಯಬಹುದು .
[[ಚಿತ್ರ:SunFromClouds.jpg|thumbnail|right|ಸೂರ್ಯನ ತಾಪ]]
 
೫೦ ನೇ ಸಾಲು:
'''
ಉಷ್ಣ ಚಲನ ಸಿದ್ಧಾಂತ (kinetic theory of heat); ಉಷ್ಣಶಕ್ತಿಯು ಅಣು , ಪರಮಾಣುಗಳ ಯಾದೃಚ್ಛಿಕ (random)ಚಲನಶಕ್ತಿಯನ್ನು ಪ್ರತಿಬಿಂಬಿಸುತ್ತದೆ .'''
ಉಷ್ಣ ಎಂದರೆ ಒಂದು ಕಾಯದಿಂದ ಮತ್ತೊಂದು . ಕಾಯಕ್ಕೆ ಹರಿಯುವ ಒಂದು ರೀತಿಯ ಸೂಕ್ಷ್ಮ ದ್ರವ ಎಂದು ಭಾವನೆ ಒಂದು ಕಾಲದಲ್ಲಿ ಇತ್ತು. ಕೆಲವರು ಅಂತಹ ದ್ರವದ ತೂಕ ನಿರ್ಧರಿಸಲು ಪ್ರಯೋಗಗಳನ್ನು ಮಾಡಿದರು . ಆದ್ರವಕ್ಕೆ ಸ್ಥಳಾವಕಾಶ ಬೇಕಾದ್ದರಿಂದ ಬಿಸಿಯದ ಕಾಯ ಉಬ್ಬುತ್ತದೆ ಎಂದು ಅಂದಿನ ನಂಬಿಕೆಯಾಗಿತ್ತು ! ಅಣು , ಪರಮಾಣುಗಳ ಚಲನಶಕ್ತಿ ಹಾಗೂ ಅವುಗಳನ್ನು ಒಳಗೊಂಡ ಕಾಯದ ಉಷ್ಣ ಗುಣಗಳ ನಡುವಿನ ಸಂಬಂಧವನ್ನು ವಿವರಿಸುವ [[ಭೌತವಿಜ್ಞಾನ]]ದ ಒಂದು ಪ್ರಮುಖ ಶಾಖೆಯೇ ಉಷ್ಣ ಚಲನ ಸಿದ್ಧಾಂತ . ಈ ಸಿದ್ಧಾಂತದ ಮೂಲ ತತ್ವಗಳು ಬಹಳ ಸರಳ . ತಮ್ಮ ನಿರಂತರ ಅಲುಗಾಟದಿಂದ ಅಣು , ಪರಮಾಣುಗಳು ಚಲನಶಕ್ತಿಯನ್ನು ಹೊಂದಿರುತ್ತವೆ . ಇದೇ ಕಾಯದ ಆಂತರಿಕ ಶಕ್ತಿ ಹಾಗಾಗಿ ಕಾಯದ ತಾಪ ಏರಿದಷ್ಟೂ ಅದರಲ್ಲಿ[[ ಅಣು]],[[ ಪರಮಾಣುಗಳ]] ಸರಾಸರಿ ಚಲನಶಕ್ತಿಯೂ ಅಧಿಕವಗುತ್ತದೆ. ಘನ ವಸ್ತು ಗಳಲ್ಲಿ ಅಣು , ಪರಮಾಣುಗಳು ಕಂಪಿಸುತ್ತಿರುತ್ತವೆ; ದ್ರವ ವಸ್ತುವಿನಲ್ಲಿ ಅವು ಚಕ್ರಾಕಾರದಲ್ಲಿ ಸುತ್ತುತ್ತಿರುತ್ತವೆ; ಅನಿಲದಲ್ಲಿ ಅವು ಒಂದು ಸ್ಥಳದಿಂದ ಮತೋಂದು ಸ್ಥಳಕ್ಕೆ ತೊಯ್ದಾಡುತ್ತಿರುತ್ತವೆ.
 
ಈ ರೀತಿಯ ಯಾದೃಚ್ಛಿಕ ಚಲನಶಕ್ತಿಯ ವರ್ಗಾವಣೆಯನ್ನೇ ಉಷ್ಣ ಎಂದು ಹೇಳುವುದು.ಅಣು, ಪರಮಾಣುಗಳ ರಾಶಿ , ಚಲನವೇಗ ಹಾಗೂ ಅವುಗಳಿಗೆ ಸಂಬಂಧಿಸಿದ ಒತ್ತಡ, ಗಾತ್ರ , ಮುಂತಾದ ವಿಷಯಗಳ ಬಗ್ಗೆ ಆಧುನಿಕ ಜ್ಞಾನವಿಲ್ಲದಿದ್ದಲ್ಲಿ ಈ ರೀತಿಯ ಅರಿವು ಅಸಾಧ್ಯವಗುತ್ತಿತ್ತು ಎಂದು ಇಲ್ಲಿ ಒತ್ತಿ ಹೇಳ್ಬೇಕಾಗಿದೆ. ಸೋಜಿಗದ ಸಂಗತಿ ಎಂದರೆ ಅಣು , ಪರಮಾಣುಗಳನ್ನು ಗ್ರಹಿಸುವುದಕ್ಕೆ ಮೊದಲೇ ಇಂತಹ ಒಂದು ಚಿತ್ರ ಮೂಡಿತ್ತು. ಭೌತಜಗತ್ತಿನ ಈ ಸತ್ಯವನ್ನು ಬಹಿರಂಗ ಪಡಿಸಲು ಸಾಧ್ಯವಾದದ್ದು ಗಣಿತದ ಸಂಶೋಧನೆಗಳಿಂದ.
೬೦ ನೇ ಸಾಲು:
ಉಷ್ಣಯಂತ್ರದಲ್ಲಿ ಉಷ್ಣವನ್ನು ಒದಗಿಸುವ ಒಂದು ಆಕರ (source) ಮತ್ತು ವಿಸರ್ಜಿಸಲ್ಪಟ್ಟ ತ್ಯಾಜ್ಯ ಉಷ್ಣವನ್ನು ಹೀರಿಕೊಳುವ ಗ್ರಾಹಕ (Sink)ಎಂದು ಎರಡು ಭಾಗಗಳನ್ನು ಕಲ್ಪಿಸಿಕೊಳ್ಳಬಹುದು. ವಿಸರ್ಜಿಸಲ್ಪಟ್ಟ , ಕಾರ್ಯಕ್ಕೆ ಒದಗದ ಶಕ್ತಿ ಕಡಿಮೆಯಾದಷ್ಟೂ ಯಂತ್ರದ ಸಾಮರ್ಥ್ಯ ಅಧಿಕ .
 
'''[[ಥರ್ಮೋಡೈನಮಿಕ್ಸ್]]-ನ ಎರಡನೇ ನಿಯಮ; ಯಾವ ಯಂತ್ರದಲ್ಲಿಯೂ ಶೇಕಡ ನೂರು ಸಾಮರ್ಥ್ಯವಿಲ್ಲ ;'''
ಕೆಲವರು ಶೇಕಡ ನೂರು ಸಾಮರ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದರ ಅರ್ಥ ಏನೆಂದು ಹೇಳುವುದು ಕಷ್ಟ. ಆದರೆ, ಉಷ್ಣಯಂತ್ರಗಳ ವಿಷಯದಲ್ಲಿ ನಿಖರವಾಗಿ ಹೇಳಬಹುದು . ಶೇಕಡ ನೂರು ಸಾಮರ್ಥ್ಯದ ಯಂತ್ರ ಎಂದರೆ ತೊಡಗಿಸಿದ ಶಕ್ತಿಯನ್ನು ಸಂಪೂರ್ಣವಾಗಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವುದು . ನಮಗೆಲ್ಲಾ ಅಂತಹ ಯಂತ್ರ ಬೇಕು ಯಾರುತ್ತಾನೆ ಶಕ್ತಿಯನ್ನು ವ್ಯಯಮಾಡಲು ಬಯಸುತ್ತಾರೆ ? ಆದರೆ ಇದೊಂದು ಮರೀಚಿಕ ಒಂದು ಕಾರು ಕೊಳ್ಳುವಾಗ ಅದರ ಉತ್ಪಾದನೆಗೆ ಎಷ್ಟು ಹಣ ಖರ್ಚಾಯಿತೋ ಅಷ್ಟೇ ಬೆಲೆ ಕೊಡುತ್ತೇನೆಂದರೆ ಆಗುತ್ತದೆಯೆ? ಮಾರಾಟಗಾರ ಅದಕ್ಕೆ ಒಪ್ಪಲಾರ ಕಾರಣ , ಕಾರನ್ನು ಫ್ಯಾಕ್ಟರಿಯಿಂದ ಮಳಿಗೆಗೆ ವರ್ಗಾಯಿಸುವುದು , ಅದಕ್ಕೆ ಕೊಡಬೇಕಾದ ಸುಂಕಗಳು , ಮಾರಾಟಗಾರನ ಕಮೀಶನ್ , ಹೀಗೆ ಇನ್ನೂ ಎಷ್ಟೋ ಖರ್ಚುಗಳಿರುತ್ತವೆ . ಹಾಗಾಗಿ ನಾವು ಕೊಡುವ ಹಣದ ಒಂದು ಭಾಗ ಮಾತ್ರ ಕಾರಿನ ಉತ್ಪಾದನೆಯ ಖರ್ಚು .
೭೨ ನೇ ಸಾಲು:
ಈ ಪ್ರಸಂಗದಲ್ಲಿ ಅವ್ಯವಸ್ಥೆ ಎಂದರೆ ಏನು ಎಂಬುದನ್ನು ಪರಿಶೀಲಿಸೋಣ. (Chaos theory ಯಲ್ಲಿ ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ) ಪ್ರಸ್ತುತದಲ್ಲಿ, ಅನೇಕ ಉಪಭಾಗಗಳಿರುವ ಯಾವುದೇ ವ್ಯವಸ್ಥೆಯಲ್ಲಿ, ಆ ಉಪಭಾಗಗಳ ನಡುವಿನ ಅಸಮರೂಪಕತೆಯನ್ನು (Inhomogeneity). ಅದು ಸೂಚಿಸುತ್ತದೆ ವ್ಯವಸ್ಥಿತವಾಗಿ ಜೋಡಿಸಿರುವ ಇಸ್ಪೀಟು ಕಾರ್ಡಿನ ಗುಂಪನ್ನು ಕಲಸಿದಾಗ ನಾವು ಅಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಕಾಫಿಗೆ ಸಕ್ಕರೆ ಬೆರಸಿದಾಗ ಅದರಲ್ಲಿ ಅವ್ಯವಸ್ಥೆಯನ್ನು ಹೆಚ್ಚಿಸುತ್ತೇವೆ.
 
ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಅಳೆಯಲು ಭೌತವಿಜ್ಞಾನದಲ್ಲಿ ಒಂದು ವಿಧಾನವಿದೆ. ಆದಕ್ಕೆ ಎಂಟ್ರೊಪಿ (Entropy) ಎನ್ನುತ್ತಾರೆ. ಎಂಟ್ರೊಪಿಯ ಅಂಶವನ್ನು ಅಳೆಯಲು ಎರಡು ವಿಧಾನಗಳಿವೆ. ಯಾವುದೇ ಒಂದು ವ್ಯವಸ್ಥೆಯ [[ಎಂಟ್ರೊಪಿ ]]ಅಧಿಕವಾಗಿದೆ ಎಂದು ಭೌತವಿಜ್ಞಾನಿಯು ಹೇಳಿದರೆ, ಅದರಲ್ಲಿನ ಉಪಭಾಗಗಳನಡುವೆ ಅವ್ಯವಸ್ಥೆಯ ಅಂಶ ಜಾಸ್ತಿಯಾಗಿದೆ ಎಂದು ಅರ್ಥ. ಭೌತಜಗತ್ತಿನ ಒಂದು ಮೂಲಭೂತ ನಿಯಮವೇನೆಂದರೆ ಯಾವುದೇ ವ್ಯವಸ್ಥೆಯಲ್ಲಿ, ಉಷ್ಣಕ್ಕೆ ಸಂಬಂದಪಟ್ಟಂತೆ ಏನೇ ಸಂಭವಿಸಿದರೂ ಅದರ ಅಂತಿಮ ಪರಿಣಾಮ ಆ ವ್ಯವಸ್ಥೆಯ ಎಂಟ್ರೊಪಿಯನ್ನು ಹೆಚ್ಚಿಸುವುದು,
 
ಉಷ್ಣಶಕ್ತಿ ಮತ್ತು ಯಾಂತ್ರಿಕ ಶಕ್ತಿ ಇದು ಒಂದಕ್ಕೊಂದು ಸಮಾನವಾದರೂ ಅವುಗಳ ನಡುವೆ ವ್ಯತ್ಯಾಸವಿದೆ ಕ್ರಮಬದ್ದವಾದ ಚಲನೆಯಿಂದ ಯಾಂತ್ರಿಕ ಶಕ್ತಿ ಮೂಡುತ್ತದೆ; ಅಣು ಪರಮಾಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಉಷ್ಣಶಕ್ತಿ ಉತ್ಪಾದನೆಯಾಗುತ್ತದೆ. ಒಂದು ಸಾವಿರ ಸೈನಿಕರು ಕ್ರಮಬದ್ದವಾಗಿ ಚಲಿಸುತ್ತಿದ್ದರೆ ಅದು ಯಾಂತ್ರಿಕ ಶಕ್ತಿಯ ಸಾದೃಶ್ಯ. ಸ್ಟೋಟ ಸಂಭವಿಸಿ ಸೈನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರೆ ಅದು ಆವ್ಯವಸ್ಥಿತ ಚಲನೆ. ವ್ಯವಸ್ಥಿತ ಚಲನೆಯನ್ನು ಆವ್ಯವಸ್ಥಿತಚಲನೆಯಾಗಿ ಪರಿವರ್ತಿಸುವುದು ಸುಲಭ. ಅದರೆ, ಅ ಆವ್ಯವಸ್ಥಿತ ಚಲನೆಯನ್ನು ವ್ಯವಸ್ಥಿತ ಚಲನೆಯಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ -ಅದೂ ಕೋಟ್ಯಂತರ ಪರಮಾಣುಗಳು ಅಂತರಕ್ರಿಯಿಸುತ್ತಿರುವಾಗ. ಈ ಕಾರಣದಿಂದಲೇ ಉಷ್ಣಶಕ್ತಿಯನ್ನು ಶೇಕಡ ನೂರು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ.
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ