ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
ಆದರೆ , ಹರ್ಷೆಲ್ ಅಷ್ಟಕ್ಕೇ ಪ್ರಯೋಗ ನಿಲ್ಲಿಸಲಿಲ್ಲ . ಕೆಂಪು ಬೆಳಕನ್ನು ದಾಟಿ ಪಕ್ಕದಲ್ಲಿ ಥರ್ಮಾಮೀಟರ್ ಇಟ್ಟ. ಆಶ್ಚರ್ಯ. ಯಾವ ಬಣ್ಣದ ಬೆಳಕೂ ಇಲ್ಲದ . ಆ ಭಾಗದಲ್ಲಿ ಇತರ ಬಣ್ಣಗಳಿಗಿಂತಲೂ ಹೆಚ್ಚಿನ ಶಾಖವಿದ್ದುದು ತೋರಿಬಂತು . ಅಗೋಚರವಾದ ಆಕಿರಣಗಳಿಗೆ ಕ್ಯಾಲೊರಿಫಿಕ್ ಎಂದರೆ ಶಾಖ ಎಂದು ಅರ್ಥ . ಅದೇ ಜಾಡನ್ನು ಹಿಡಿದು ಎನ್ನೂ ಅನೇಕ ಪ್ರಯೋಗಗಳನ್ನು ಮಾಡಿ ಕ್ಯಾಲೊರಿಫಿಕ್ ಕಿರಣಗಳೂ ಗೋಚರ ಬೆಳಕಿನ ಕಿರಣಗಳಂತೆ ಪ್ರತಿಫಲನ . ವಕ್ರೀಭವನ ಮುಂತಾದ ಎಲ್ಲ ಗುಣಗಳನ್ನೂ ಪ್ರದರ್ಶಿಸುತ್ತವೆಂದು ದೃಡಪಡಿಸಿಕೊಂಡನು . ಹಾಗಾಗಿ, ಅಗೋಚರ ಬೆಳಕೂ ಇದೆ ಎಂಬುದು ಮೊದಲ ಬಾರಿಗೆ ಆತನ ಪ್ರಯೋಗಗಳಿಂದ ತಿಳಿದುಬಂದಿತು. ಮುಂದೆ ಅವಕ್ಕೆ ''ಅವಕೆಂಪು'' (Infrared) ಅಥವಾ "ಉಷ್ಣಕಿರಣ"ಗಳೆಂದು ಹೆಸರಾಯಿತು.
 
ಹತ್ತೊಂಬತ್ತನೇ ಶತಮಾನದ ಮೊದಲ ದಶಕದ ವೇಳೆಗೆ ಕ್ಯಾಲೋರಿಫಿಕ್ ಕಿರಣಗಳೂ ಮತ್ತು ಬೆಳಕು ಮೂಲತಃ ಒಂದೇ ಬಗೆ (ವಿದ್ಯು ತ್ಕಾಂತ್ತಿಯ ಅಲೆಗಳು ) ಎಂದು ಭೌತವಿಜ್ಞಾನಿಗಳು ಅರ್ಥಮಾಡಿಕೊಂಡು ವಿಶ್ವದಲ್ಲಿ ಸರ್ವವ್ಯಾಪಿಯಾದ ಈಥರ್ ಎಂಬ ಮಾಧ್ಯಮದ ಮೂಲಕ ಕಂಪನ ರೂಪದಲ್ಲಿ ಅವು ಪ್ರಸರಿಸುತವೆ ಎಂದು ಚಿತ್ರಿಸಿಕೊಂಡಿದ್ದರು . ಉಷ್ಣ ಕಿರಣ ಮತ್ತು ಬೆಳಕಿನ ಕಿರಣ ಇವುಗಳ ನಡುವಿನ ವ್ಯತ್ಯಾಸ ಕೇವಲ ಅವುಗಳ ತರಂಗಾಂತರದಲ್ಲಿ (Wave length) ಎಂಬುದು ಹತ್ತೋಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಮಾತ್ರವೇ ಸ್ಪಷ್ಟವಾಯಿತು. ಉಷ್ಣಕಿರಣಗಳ ತರಂಗಾಂತರ ಬೆಳಕಿನ ತರಂಗಾಂತರಗಳಿಗಿಂತ ದೀರ್ಘ. ಇದರಿಂದ ನಮಗೆ ತಿಳಿದುಬರುವುದೇನೆಂದರೆ ನಮ್ಮ ಇಂದ್ರಿಯಗಳು ವಿದ್ಯುತ್ ಕಾಂತೀಯ ತರಂಗಗಳಿಗೆ ಅವುಗಳ ತರಂಗಾಂತರಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ ಎಂಬುದು.
 
'''ಸೂರ್ಯನ ತಾಪ :''' ಸೂರ್ಯ ಮತ್ತು ಇತರ ಖಗೋಳ ಕಾಯಗಳ ತಾಪವನ್ನು ಭೂಮಿಯಿಂದಲೇ ಅಳೆಯಬಹುದು .
೯೪ ನೇ ಸಾಲು:
 
Rudolf clausius ಮತ್ತು Hermann Helmholts ಅವರುಗಳು ಥರ್ಮೋಡೈನಮಿಕ್ಸ್ ನ ಎರಡನೇ ನಿಯಮದ ಗಂಭಿರ ಅಧ್ಯಯನ ಮಾಡಿ ಒಂದು ಭಯಾನಕ ನಿರ್ಧಾರಕ್ಕೆ ಬಂದರು ಅಂತಿಮವಾಗಿ ಸಮಗ್ರ ವಿಶ್ವವು ಅತ್ಯಂತ ಗೊಂದಲ ಸ್ಥಿತಿಯನ್ನು ತಲಪುತ್ತದೆ . ಆಗ ಎಲ್ಲ ಕಾಯಗಳೂ ಒಂದೇ ನಮನಾದ ತಾಪ ಹೊಂದಿದ್ದು ಅವುಗಳಲ್ಲಿ ಯಾವ ರೀತಿಯ ಕ್ರಿಯಾಶೀಲತೆಯೂ ಉಳಿದಿರುವುದಿಲ್ಲ . ಅದೇ ವಿಶ್ವದ "ತಾಪಮರಣ" Heat death ಎಂಬ ಸ್ಥಿತಿ ಎಂತಹ ಭಯಂಕರ ಭವಿಷ್ಯವಾಣಿ ಅದು ಯಾವ ಭೂಕಂಪ , ಜ್ವಾಲಾಮುಖಿಯ ಸ್ಪೋಟ, ಪ್ಲೇಗ್ ಅಥವಾ ಪ್ರಳಯಕ್ಕಿಂತಲೂ ಭೀಕರ ಸೂರ್ಯ , ಚಂದ್ರ , ಭೂಮಿ , ನಕ್ಷತ್ರಗಳು ಎಲ್ಲವೂ ಸೇರಿದಂತೆ ಸರ್ವನಾಶ . ಅದೊಂದು ವೈಚಾರಿಕ , ವೈಜ್ಞಾನಿಕ ನಿರಾಶಾವಾದ .
 
 
ಭೌತವಿಜ್ಞಾನದ ಎರಡು ಶತಮಾನಗಳ ಗಂಭೀರ ಅಧ್ಯಯನದ ನಂತರದ ತೀರ್ಮಾನವೇ ಇದು ? ಗ್ರಹ , ನಕ್ಷತ್ರಗಳ ರಹಸ್ಯವನ್ನು ಬಹಿರಂಗಪಡಿಸಿದ ಬಡಾಯಿ ಸಾಲದೆಂಬಂತೆ ಕಾಮನಬಿಲ್ಲು ಸೂರ್ಯನ ಬೆಳಕು ಮೋಡದ ಮೂಲಕ ಹಾದುಬರುವಾಗ ಅದರ ದಿಶೆಯಲ್ಲಾಗುವ ಪಲ್ಲಟದ ಪರಿಣಾಮವಷ್ಟೆ ಎಂಬ ನೀರಸ ವ್ಯಾಖ್ಯಾನ ಬೇರೆ . ಧೂಮಕೇತುಗಳು ಆಕಾಶದಲ್ಲಿ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುವ ದ್ರವ್ಯದ ತುಂಡುಗಳು ಮಾತ್ರ ಎಂದು ಹೇಳಿದುದೇನೋ ಒಳ್ಳೆಯದೇ ಆಯಿತು . ಅದರಿಂದ ಅವು ಅಪಶಕುನದ ಸೂಚಕವೆಂಬ ಭಯ ದೂರವಾಯಿತು . ಆದರೆ , ಕಡೆಗೊಂದುದಿನ ಸೂರ್ಯ ಮಾಸಿಹೋಗುತ್ತದೆ, ನಕ್ಷತ್ರಗಳೆಲ್ಲಾ ಕಳೆಗುಂದುತ್ತವೆ. ಸರ್ವವೂ ಚೈತನ್ಯರಹಿತವಾಗುತ್ತವೆ ಎಂದು ಭವಿಶ್ಯ ನುಡಿಯುವುದಕ್ಕಿಂತ ಕ್ರೂರವಾದ್ದು ಮತ್ತೇನಿದೆ? ಕವಿಗಳೂ, ತತ್ವಜ್ಞಾನಿಗಳೂ ಇದನ್ನೇ ಹೇಳಿದ್ದಾರೆ. ಆದರೆ , ಅವೆಲ್ಲ ಕಾವ್ಯ ; ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ , ಇದು ವಿಜ್ಞಾನ ಸತ್ಯಕ್ಕೆ ಅತ್ಯಂತ ಸಮೀಪವಾದ್ದು ಎಂದು ಅನೇಕರ ನಂಬಿಕೆ. ಈ ಬೃಹತ್ ವಿಶ್ವದಲ್ಲಿ ಅಪಾರ ಡ್ರವ್ಯವಿರುವುದರಿಂದ ಈ ರೀತಿಯ ಗೊಂದಲ ಬಹಳ ಕಾಲದಿಂದ ನಿಧಾನವಾಗಿ ನಡೆಯುತ್ತಿದ್ದರೂ ಅದರಿಂದ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಯಾವ ರೀತಿಯ ಪ್ರಭಾವವೂ ಉಂಟಾಗಿಲ್ಲ ಎಂಬುದು ಒಂದು ಸಮಾದಾನಕರವಾದ ಸಂಗತಿ. ನಮ್ಮ ವಿಶ್ವವೇನಾದರೂ ಚಿಕ್ಕದಾಗಿದ್ದು ಇದೇ ನಿಯಮಗಳು ಅನ್ವಯಿಸುವಂತಿದ್ದಿದ್ದರೆ, ಮಾನವನ ಅಸ್ತಿತ್ವ ಮೂಡುವುದಕ್ಕೆ ಸಮಯವೇ ಇರುತ್ತಿರಲ್ಲಿಲ್ಲ. ಅದಕ್ಕೆ ಮುಂಚೆಯೇ ಸ್ಥೂಲ ದ್ರವ್ಯವೆಲ್ಲಾ ಎಂದೋ ನಶಿಸಿಹೋಗುತ್ತಿತ್ತು ಅದರೆ, ಇಂದಿನ ಪರಿಸ್ಥಿತಿಯಲ್ಲಿ ವಿಶ್ವದ ತಾಪಮರಣ, ಅದು ಸಂಭವಿಸುವುದೇ ಆದರೂ ಸಧ್ಯಕ್ಕಂತೂ ಸಾಧ್ಯವಿಲ್ಲ.
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ