೮೩
edits
ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಬೇಸಿಗೆಯ ಸೆಖೆ ಅಸಹನೀಯವಾಗಿರುತ್ತದೆ . ನಿಷ್ಟುರ ಸೂರ್ಯ ಉಗ್ರ ಕಿರಣಗಳನ್ನು ಉಗುಳುತ್ತಿರುತ್ತಾನೆ .ನಾವು ಬೆವರು ಸುರಿಸುತ್ತಾ ನೆರಳಿನೆಡೆಗೆ ಓಡುತ್ತೇವೆ. ಆದರೆ , ಅಂತಹ ಪ್ರದೇಶಗಳಲ್ಲಿಯೂ ಜನ ವಾಸ ಮಾಡುತ್ತಾರೆ.
ಶಕ್ತಿಯನ್ನು ಒಂದು ರೂಪದಿಂದ ಮತ್ತೊದು ರೂಪಕ್ಕೆ ಯಶಸ್ವಿಯಾಗಿ ಪರಿವರ್ತಿಸುವ ಕ್ರಿಯೆಯ ಆಧಾರದ ಮೇಲೆ ನಮ್ಮ ಔದ್ಯೋಗಿಕ ಮತ್ತು ತಾಂತ್ರಿಕ ನಾಗರಿಕತೆ ಬೆಳೆದಿದೆ. ಇವುಗಳಲ್ಲಿ ಉಷ್ಣವನ್ನು ಯಾಂತ್ರಿಕ ಕ್ರಿಯೆಯಾಗಿ ಪರಿವರ್ತಿಸುವ ಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ . ಅನಾದಿ ಕಾಲದಿಂದಲೂ ಮಾನವ ಅನೇಕ ವಿಧವಾದೆ ಸೌಲಭ್ಯಗಳನ್ನು ಸೃಷ್ಟಿಸಿಕೊಂಡಿದ್ದಾನೆ. ರಾಟೆ,ಮೀಟುಗೋಲಿನಿಂದ ಹಿಡಿದು ನೇಗಿಲು , ಪವನಯಂತ್ರ , ಹೀಗೆ ವಿಧವಿಧವಾದ ಸಲಕರಣೆಗಳು ಎಲ್ಲ ನಾಗರಿಕತೆಗಳಲ್ಲಿಯೂ ಕಂಡುಬರುತ್ತವೆ . ಆದರೆ, ಇವುಗಳ ಸೈದ್ಧಾಂತಿಕ ಅಧ್ಯಯನ ಆರಂಭವಾದದ್ದು ೧೯ನೇ ಶತಮಾನದ ಔದ್ಯೋಗಿಕ ಕ್ರಾಂತಿ ಮತ್ತು ಉಗಿಯಂತ್ರಗಳ ಆವಿಷ್ಕಾರದ ನಂತರವೇ . ಇವೆಲ್ಲದರ ಹಿಂದಿನ ಸ್ಪೂರ್ತಿ ಉಷ್ಣಯಂತ್ರದ ಪರಿಕಲ್ಪನೆ - ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನೆ . ಉಗಿಬಂಡಿ ಅಥವಾ ರೈಲುಗಾಡಿ ಇದರ ಪ್ರಮುಖ ಉದಾಹರಣೆ . ತೊಡಗಿಸಿದ ಉಷ್ಣಶಕ್ತಿಯ ಎಷ್ಟು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗಿದೆ ಎಂಬುದೇ ಅದರ ಕಾರ್ಯಸಮರ್ಥತೆ . ಶೇಕಡ ೩೦ ಕಾರ್ಯಸಮರ್ಥತೆ ಎಂದರೆ ಹೂಡಿದ ಶಕ್ತಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಯಾಂತ್ರಿಕ ಶಕ್ತಿಯ ರೂಪದಲ್ಲಿ ಲಭ್ಯವಿದೆ ಎಂದು ಅರ್ಥ ಉಳಿದದ್ದು ವಿವಿಧ ರೀತಿಗಳಲ್ಲಿ ವ್ಯಯವಾಗುತ್ತದೆ .
'''ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ; ಯಾವ ಯಂತ್ರದಲ್ಲಿಯೂ ಶೇಕಡ ನೂರು ಸಾಮರ್ಥ್ಯವಿಲ್ಲ ;'''
ಕೆಲವರು ಶೇಕಡ ನೂರು ಸಾಮರ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದರ ಅರ್ಥ ಏನೆಂದು ಹೇಳುವುದು ಕಷ್ಟ. ಆದರೆ, ಉಷ್ಣಯಂತ್ರಗಳ ವಿಷಯದಲ್ಲಿ ನಿಖರವಾಗಿ ಹೇಳಬಹುದು . ಶೇಕಡ ನೂರು ಸಾಮರ್ಥ್ಯದ ಯಂತ್ರ ಎಂದರೆ ತೊಡಗಿಸಿದ ಶಕ್ತಿಯನ್ನು ಸಂಪೂರ್ಣವಾಗಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವುದು . ನಮಗೆಲ್ಲಾ ಅಂತಹ ಯಂತ್ರ ಬೇಕು ಯಾರುತ್ತಾನೆ ಶಕ್ತಿಯನ್ನು ವ್ಯಯಮಾಡಲು ಬಯಸುತ್ತಾರೆ ? ಆದರೆ ಇದೊಂದು ಮರೀಚಿಕ ಒಂದು ಕಾರು ಕೊಳ್ಳುವಾಗ ಅದರ ಉತ್ಪಾದನೆಗೆ ಎಷ್ಟು ಹಣ ಖರ್ಚಾಯಿತೋ ಅಷ್ಟೇ ಬೆಲೆ ಕೊಡುತ್ತೇನೆಂದರೆ ಆಗುತ್ತದೆಯೆ? ಮಾರಾಟಗಾರ ಅದಕ್ಕೆ ಒಪ್ಪಲಾರ ಕಾರಣ , ಕಾರನ್ನು ಫ್ಯಾಕ್ಟರಿಯಿಂದ ಮಳಿಗೆಗೆ ವರ್ಗಾಯಿಸುವುದು , ಅದಕ್ಕೆ ಕೊಡಬೇಕಾದ ಸುಂಕಗಳು , ಮಾರಾಟಗಾರನ ಕಮೀಶನ್ , ಹೀಗೆ ಇನ್ನೂ ಎಷ್ಟೋ ಖರ್ಚುಗಳಿರುತ್ತವೆ . ಹಾಗಾಗಿ ನಾವು ಕೊಡುವ ಹಣದ ಒಂದು ಭಾಗ ಮಾತ್ರ ಕಾರಿನ ಉತ್ಪಾದನೆಯ ಖರ್ಚು .
[[ಚಿತ್ರ:HighEntropy.svg|thumbnail|left]]
ವಿಶ್ವವನ್ನು ವ್ಯವಸ್ಥೆಯಿಂದ ಅವ್ಯವಸ್ಥೆಯೆಡೆಗೆ ತಳ್ಳುತ್ತದೆ. ಹಾಗಾಗಿ ವಿಶ್ವದ ಅಂತಿಮ ಗುರಿಯೇ ಅತ್ಯಂತ ಅವ್ಯವಸ್ಥೆ (Supreme chaos) ಎಂಬತೆ ತೋರುತ್ತದೆ.
'''ಮುಚ್ಚಿದ ವ್ಯವಸ್ಥೆಗಳು (Closed systems ) ಮತ್ತು ಅವುಗಳಲ್ಲಿನ ಅಂತರ ಸಂಪರ್ಕಗಳು ; ಇಡೀ ವಿಶ್ವವು ಒಂದು ವ್ಯೂಹ ಅಥವಾ ಮುಚ್ಚಿದ ವ್ಯವಸ್ಥೆ ಆದರೆ ಅದರಲ್ಲಿನ ಉಪವ್ಯವಸ್ಥೆಗಳ ನಡುವೆ ಸಂಪರ್ಕವಿದೆ.'''
[[ಚಿತ್ರ:Work of Closed System.svg|thumbnail|right]]
ವಿಶ್ವೆದಲ್ಲಿ ಅಸಂಖ್ಯಾತ ವಿದ್ಯಮಾನಗಳು ನಡೆಯುತ್ತಿರುತ್ತವೆ . ಅವೆಲ್ಲವುಗಳ ಜಾಡುಹಿಡಿಯಲು ಸಾಧ್ಯವಿಲ್ಲ . ಸದಾಕಾಲವೂ ಚಲನೆಯಲ್ಲಿ ಬದಲಾವಣೆಯಾಗುತ್ತಿರುತ್ತದೆ; ನಿರಂತರವಾಗಿ ಶಕ್ತಿ ಪರಿವರ್ತನೆಯಾಗುತ್ತಿರುತ್ತದೆ . ಇವೆಲ್ಲದರ ಮಧ್ಯೆ ಬದಲಾಗದಿರುವುದು ಯಾವುದಾದರೂ ಉಂಟೆ? ಉದಾಹರಣೆಗೆ ,ಒಂದು ಕಟ್ಟಡವನ್ನೇ ಪರಿಗಣಿಸಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ,ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಜನ ಓಡಾಡುತ್ತಿರುತ್ತಾರೆ. ಒಬ್ಬರೊಡನೊಬ್ಬರು ವಿವಿಧ ರೀತಿಯಲ್ಲಿ ಅಂತರಕ್ರಿಯಿಸುತ್ತಿರಬಹುದು ಮಾತುಗಳನ್ನು ಉಡುಗೊರಗಳನ್ನು ತಿಂಡಿಯನ್ನು , ಯೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರಬಹುದು. ಆದರೆ , ಇವೆಲ್ಲದರ ನಡುವೆ ಬದಲಾಗದಿರುವುದು ಯಾವುದು ? ಕಟ್ಟಡ ಮುಚ್ಚಿದ್ದರೆ ಅಲ್ಲಿನ ಜನಸಂಖ್ಯಾಯಲ್ಲಿ ಏನೂ ಬದಲಾವಣೆ ಇಲ್ಲ (ಈ ಅವಧಿಯಲ್ಲಿ ಜನನ - ಮರಣಗಳೇನೂ ಸಂಭವಿಸದಿದ್ದರೆ ) ಎಂದು ಹೇಳಬಹುದು . ಆ ದೃಷ್ಟಿಯಲ್ಲಿ ಅದೊಂದು ಮುಚ್ಚಿದ ವ್ಯವಸ್ಥೆ . ಮುಚ್ಚಿದ ವ್ಯವಸ್ಥೆ ಎಂದು ಯಾವುದನ್ನಾದರೂ ಪರಿಗಣಿಸಿದರೆ ಅದರ ಉದ್ದೇಶ್ಯ ಅಲ್ಲಿ ಎಲ್ಲ ವಿಧವಾದ ಬದಲಾವಣೆಗಳಾಗುತ್ತಿದ್ದಾಗ್ಯೂ , ಭೌತಿಕ ಸತ್ಯದ ಯಾವ ವಿಷಯ ಆ ಬದಲಾವಣೆಗಳ ಪರಣಾಮಕ್ಕೆ ಒಳಗಾಗಿಲ್ಲ ಎಂಬುದನ್ನು ಗುರುತಿಸುವುದಕ್ಕೋಸ್ಕರ .
ಅಂತರಸಂಪರ್ಕ ಎಂಬುದು ಒಂದು ಮಹತ್ವದ ಪರಿಕಲ್ಪನೆ ಈಚನ ಶತಮಾನದಲ್ಲಿ ಮೂಡಿ ಬಂದಿರುವ ಪ್ರಮುಖ ಪರಿಕಲ್ಪನೆಗಳಲ್ಲಿ ಇದೂ ಒಂದು ಇದಕ್ಕೆ ವೈದೃಶ್ಯವಾಗಿ ಮುಂಚಿನ ಕಾಲದ ಭೌತವಿಜ್ಜಾನದಲ್ಲಿ ಬೇರ್ಪಡೆಗೇ ಆದ್ಯತೆ ಇತ್ತು. ವಿಶ್ವದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಒಂದಕ್ಕೊಂದು ಸಂಪರ್ಕವಿಲ್ಲದ , ಬೇರೆ ಬೇರೆ ವಿಷಯಗಳೆಂದು ಪರಿಗಣಿಸಿ ವಿಶ್ಲೇಷಿಸಬೇಕಾಗಿತ್ತು , ಗೋಚರ ಸತ್ಯದ ಅನೇಕ ಬೇರುಗಳನ್ನು ಅರಿಯಲು ಈ ವಿದಾನ ಪರಿಣಾಮಕಾರಿಯಾಗಿತ್ತು .
ಆದರೆ ಅಂತಹ ತುಂಡುತುಂಡಾದ ವಿಶ್ವೇಷಣೆಗಳಿಂದ ಸತ್ಯದ ಅರಿವು ಸ್ವಲ್ಪಮಟ್ಟಿಗೆ ದೊರೆತರೂ ,ಅದು ಸಮಗ್ರ ಚತ್ರವನ್ನು ನೀಡಲಾರದು ಎಂದು ಈಗ ತಿಳಿದಿದೆ ನಾವು ವಿಶ್ವವನ್ನು ಅದರ ಎಲ್ಲ ಅಂತರಸಂಪರ್ಕಗಳೂ ಸೇರಿದಂತೆ ಒಟ್ಟಾರೆಯಾಗಿ ವಿಶ್ಲೇಷಿಸಬೇಕು ಭೌತಜಗತ್ತಿಗಿಂತಲೂ ಜೀವಜಗತ್ತಿನಲ್ಲಿ ಅಂತರಸಂಪರ್ಕಗಳು ಮಹತ್ವದ ಪಾತ್ರ ವಹಿಸುತ್ತವೆ . ಅದನ್ನು ಅರ್ಥಮಾಡಿಕೊಂಡರೆ ಜಗತ್ತನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸಬಹುದು.
'''
ಸಂಪೂರ್ಣವಾಗಿ ಗೊಂದಲಮಯವಾಗುವುದೇ ವಿಶ್ವದ ಹಣೆಬರಹ , ಗರಿಷ್ಟ ಎಂಟ್ರೊಪಿ ಸ್ಥಿತಿಗೆ ತಲಪುವುದೇ ಅದರ ಗುರಿ . ಇದಕ್ಕೆ Cosmic uniformizing principle ಎಂದು ಹೇಳಬಹುದು . ಇದು ಆದಿಯಿಂದಲೇ ಮೌನವಾಗಿ ಮುನ್ನಡೆಯುತ್ತಿದೆ - ದೈತ್ಯ ಗಡಿಯಾರವೊಂದು ಅಂತಿಮ ಗಳಿಗೆಯೆಡೆಗೆ ನಿಧಾನವಾಗಿ "ಟಿಕ್-ಟಿಕ್" ಎನ್ನುವಂತೆ .
|
edits