"ಡೇವಿಡ್ ರಿಕಾರ್ಡೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಆಡಂ ಸ್ಮಿತ್ ನಿಂದ ಸ್ಥಾಪಿಸಲ್ಪಟ್ಟ ಸಂಪ್ರದಾಯ ಪಂಥದ ಧುರೀಣನೆನಿಸಿಕೊಂಡ ಡೇವಿಡ್ ರಿಕಾರ್ಡೋ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾನೆ. ಆಡಂ ಸ್ಮಿತ್ ನಿಂದ ಆರಂಭವಾದ ಕಾರ್ಯವನ್ನು ಸಾಧ್ಯಾವಿರುವಷ್ಟು ಮುಂದುವರಿಸಿದ ರಿಕಾರ್ಡೋ ಸಂಪ್ರದಾಯ ಪಂಥದ ಆಧಾರ ಸ್ತಂಭ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. "ಇಂಗ್ಲೀಷ್ ರಾಜಕೀಯಾರ್ಥ ಶಾಸ್ತ್ರವು ಆತನ ಕೈಗಳಲ್ಲಿ ಅಂತಿಮ ಮತ್ತು ಸಂಪೂರ್ಣ ರೂಪವನ್ನು ಪಡೆಯಿತು." ಎಂದು ರಿಕಾರ್ಡೋನ ಸಾಧನೆಗಳ ಬಗ್ಗೆ ಅರ್ಥಶಾಸ್ತ್ರಜ್ನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆತನ ಹೆಸರಿನ ಸುತ್ತ ಹೆಣೆದು ಕೊಂಡಿದ್ದ ವಾದ ವಿವಾದಗಳಾಗಲಿ, ಆತನ ಸಿದ್ಧಾಂತಗಳಿಗೆ ಸಾರ್ವಕಾಲಿಕತೆ. ಇಲ್ಲದಿರುವ ವಾಸ್ತವವಾಗಲಿ, ಆತನಿಗೆ ಮಹಾನ್ ಅರ್ಥಶಾಸ್ತ್ರಜ್ನ ಎಂಬ ಹೆಸರು ಬರುವುದ್ದನ್ನು ತಪ್ಪಿಸಲ್ಲಿಲ್ಲ. ಆತನ ಕಾಲದ ಚಿಂತಕರಲ್ಲಿ ರಿಕಾರ್ಡೂ ಅಗ್ರಗಣ್ಯನೆನಿಸಲು ಅವನ ಸ್ವಚ್ಛವಾದ ಯೋಚನಾ ಸರಣಿ, ತರ್ಕಬದ್ಧ ನಿಲುವು ಮತ್ತು ಅಪ್ರತಿಮ ಬುದ್ಧಿ ಶಕ್ತಿಗಳು ಕಾರಣವಾಗಿವೆ. ಕಾರ್ಲ್ ಮಾರ್ಕ್ಸ್ ನ ಚಿಂತನೆಗಳಿಗೆ ಆತನ ತತ್ವಗಳು ಪ್ರೇರಣೆಯಾಗಿದ್ದವು ಎನ್ನುವುದು ರಿಕಾರ್ಡೊನ ಚಿಂತನೆಯ ಶ್ರೇಷ್ಟತೆಯನ್ನು ತೋರಿಸುತ್ತದೆ.
 
[[ಚಿತ್ರ:David_ricardo.jpg|thumbnail|ಡೇವಿಡ್ ರಿಕಾರ್ಡೋ]]
==ಬದುಕು ಮತ್ತು ಬರಹಗಳು==
 
೨೭

edits

"https://kn.wikipedia.org/wiki/ವಿಶೇಷ:MobileDiff/535083" ಇಂದ ಪಡೆಯಲ್ಪಟ್ಟಿದೆ