ಉತ್ಪಾದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಪ್ರತಿಫಲನದ ನಿಯಮಗಳು(Laws of Returns)
೧. ಉತ್ಪಾದನೆ ಎಂದರೇನು?
ವಿಶಾಲವಾದ ಅರ್ಥದಲ್ಲಿ 'ಉತ್ಪಾದನೆ' ಎಂದರೆ ಮಾನವನ ಬಯಕೆಗಳನ್ನು ತ್ರಿಪ್ತಿಪಡಿಸುವುದರತೃಪ್ತಿಪಡಿಸುವುದರ ಸಲುವಾಗಿ ಕೈಕೊಳ್ಳುವ ಚಟುವಟಿಗೆಗಳೆಂದು ಅರ್ಥ. ಆದರೆ ಅರ್ಥಶಾಸ್ತ್ರದಲ್ಲಿ ಅದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ವಸ್ತುವಿಗೆ ತುಷ್ಟಿಗುಣ ಸೇರಿಸುವುದಕ್ಕೆ ಉತ್ಪಾದನೆ ಎಂದು ಕರೆಯುತ್ತಾರೆ. ಬಳಕೆಯ ಭಾಷೆಯಲ್ಲಿ ವಸ್ತುಗಳನ್ನು ತಯಾರಿಸುವುದಕ್ಕೆ 'ಉತ್ಪಾದನೆ' ಎಂದು ಕರೆಯುತ್ತಾರೆ. ಆದರೆ ಇದು ಸರಿಯಲ್ಲ. ಏಕೆಂದರೆ ಮಾನವನು ಯಾವ ವಸ್ತುಗಳನ್ನು ಸ್ರಷ್ಟಿಸಲಾರನು. ಎಲ್ಲ ವಸ್ತುಗಳನ್ನು ಪ್ರಕ್ರತಿಯೇಪ್ರಕೃತಿಯೇ ಒದಗಿಸುತ್ತದೆ. ಪ್ರಕ್ರತಿಯುಪ್ರಕೃತಿಯು ಒದಗಿಸಿದ ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸಿ ಅವು ಮಾನವನ ಬಯಕೆಗಳನ್ನು ತ್ರಪ್ತಿಪಡಿಸುವಂತೆತೃಪ್ತಿಪಡಿಸುವಂತೆ ಮಾಡುವ ಕ್ರಿಯೆಯೇ ಉತ್ಪಾದನೆಯಾಗಿದೆ. ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸುವುದೆಂದರೆ ಅವುಗಳ ತುಷ್ಟಿಗುಣವನ್ನು ಹೆಚ್ಚಿಸುವುದು. ಆದುದರಿಂದ ವಸ್ತುಗಳ ತುಷ್ಟಿಗುಣವನ್ನು ಹೆಚ್ಚಿಸಿ, ಅವುಗಳ ಪ್ರಯೋಜನವನ್ನು ಮತ್ತು ಮೌಲ್ಯವನ್ನು, ಇನ್ನೂ ಹೆಚ್ಚಾಗುವಂತೆ ಮಾಡುವುದೇ ಉತ್ಪಾದನೆಯಾಗಿದೆ. ವಸ್ತುಗಳಲ್ಲಿರುವ ತುಷ್ಟಿಗುಣವನ್ನು ಉಪಯೋಗಿಸುವುದು ಅನುಭೋಗವಾದರೆ, ವಸ್ತುಗಳಿಗೆ ತುಷ್ಟಿಗುಣ ಸೇರಿಸುವುದು ಉತ್ಪಾದನೆಯಾಗಿದೆ. ಆದರೆ ಕೇವಲ ತುಷ್ಟಿಗುಣ ಸ್ರಷ್ಟಿಯೇ ಉತ್ಪಾದನೆಯಾಗದು. ತುಷ್ಟಿಗುಣದ ಜೊತೆಗೆ ಮೌಲ್ಯವೂ ಹೆಚ್ಚಾಗಬೇಕು. ಆದುದರಿಂದ ಉತ್ಪಾದನೆಯೆಂದರೆ ವಸ್ತುಗಳ ಸ್ರಷ್ಟಿಯೆಂದು ತಿಳಿದುಕೊಳ್ಳಬಾರದು. ಏಕೆಂದರೆ ಮಾನವನು ವಸ್ತುಗಳನ್ನು ಸ್ರಷ್ಟಿಸಲಾರನು. ಎಲ್ಲ ವಸ್ತುಗಳೂ ನಿಸರ್ಗದತ್ತವಾಗಿದೆ. ನಿಸರ್ಗದಲ್ಲಿ ಸಿಗುವ ಪ್ರಯೋಜನವಿಲ್ಲದ ಇಲ್ಲವೇ ಕಡಿಮೆ ಪ್ರಯೋಜನವುಳ್ಳ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ ಅವುಗಳ ಉಪಯುಕ್ತತೆಯನ್ನು ಮೌಲ್ಯವನ್ನೂ ಹೆಚ್ಚಿಸುವುದೇ ಉತ್ಪಾದನೆಯಾಗಿದೆ. ಉದಾಹರಣೆಗೆ, ಅರಣ್ಯದಲ್ಲಿ ಅನೇಕ ಮರಗಳಿರುತ್ತವೆ. ಅವು ನಿಸರ್ಗದತ್ತವಾಗಿವೆ. ಅಲ್ಲಿ ಅವು ನಿರುಪಯುಕ್ತವಾಗಿವೆ. ಆದರೆ ಅವುಗಳನ್ನು ಕಡಿದು, ದಿಮ್ಮಿಗಳನ್ನು ಕಾರ್ಖಾನೆಗೆ ತಂದು, ಕುರ್ಚಿ ಮೇಜುಗಳನ್ನು ತಯಾರಿಸಿದರೆ ಅವುಗಳ ಉಪಯುಕ್ತತೆ ಮತ್ತು ಮೌಲ್ಯ ಎರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ ಗಣಿಯಲ್ಲಿರುವ ಕಲ್ಲಿದ್ದಲಿಯ ನಿಸರ್ಗದತ್ತವಾಗಿದೆ. ಅಲ್ಲಿ ಅದು ನಿರುಪಯುಕ್ತವಾಗಿದೆ. ಅಲ್ಲಿಂದ ಅದನ್ನು ಹೊರ ತೆಗೆದು ಕಾರ್ಖಾನೆಗಳಿಗೆ ಸಾಗಿಸಿದರೆ, ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತದೆ. ಈ ಪ್ರಕಾರ ಮಾನವನು ತನ್ನ ಬಯಕೆಗಳ ತ್ರಪ್ತಿಗಾಗಿ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ, ಅದರ ಮೌಲ್ಯವನ್ನು ಹಾಗೂ ಉಪಯುಕ್ತತೆಯನ್ನು ಹೆಚ್ಚಿಸುವುದಕ್ಕೆ ಅರ್ಥಶಾಸ್ತ್ರದಲ್ಲಿ 'ಉತ್ಪಾದನೆ' ಎಂದು ಕರೆಯುತ್ತಾರೆ.
೨. ಉತ್ಪಾದನೆಯ ರೂಪಗಳು(Forms of Production)
ವಸ್ತುಗಳ ಉತ್ಪಾದನೆಯನ್ನು ವಿವಿಧ ರೀತಿಯಿಂದ ಮಾಡಬಹುದು. ಅವು ಯಾವುದೆಂದರೆ
"https://kn.wikipedia.org/wiki/ಉತ್ಪಾದನೆ" ಇಂದ ಪಡೆಯಲ್ಪಟ್ಟಿದೆ