ಉತ್ಪಾದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
೧. ರೂಪ ತುಷ್ಟಿಗುಣ: ಒಂದು ವಸ್ತುವಿನ ನೈಸರ್ಗಿಕ ರೂಪ ಇಲ್ಲವೇ ಆಕಾರವನ್ನು ಬದಲಾಯಿಸಿದಾಗ, ಅದಕ್ಕೆ ಹೆಚ್ಚಿನ ತುಷ್ಟಿಗುಣ ಬರುತ್ತದೆ. ಉದಹರಣೆಗೆ- ದಿಮ್ಮಿಗಳನ್ನು ಕೊರೆದು, ಕುರ್ಚಿ ಮೇಜುಗಳನ್ನು ತಯಾರಿಸಿದಾಗ, ಇಲ್ಲವೆ ಹತ್ತಿಯಿಂದ ಹತ್ತಿಯ ಬಟ್ಟೆಯನ್ನು ತಯಾರಿಸಿದಾಗ ರೂಪತುಷ್ಟಿಗುಣ ನಿರ್ಮಾಣವಾಗುತ್ತದೆ.
೨. ಸ್ಥಳ ತುಷ್ಟಿಗುಣ: ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದಾಗ, ಸ್ಥಳ ತುಷ್ಟಿಗುಣ ನಿರ್ಮಾಣವಾಗುತ್ತದೆ. ಉದಾಹರಣೆಗೆ- ಗಣಿಯಲ್ಲಿರುವ ಕಲ್ಲಿದ್ದಲು ಅಲ್ಲೇ ಇದ್ದರೆ ಏನು ಉಪಯೋಗವಿಲ್ಲ. ಆದರೆ ಅದನ್ನು ಹೊರತೆಗೆದು ಕಾರ್ಖಾನೆಗೆ ಸಾಗಿಸಿದಾಗ ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ ಸಾಗರದಲ್ಲಿರುವ ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಸಾಗಿಸಿದಾಗ, ಅವುಗಳಿಗೆ ಸ್ಥಳ ತುಷ್ಟಿಗುಣ ಸೇರಿಸಲಾಗುತ್ತದೆ. ಆದುದರಿಂದ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ.
೩. ಕಾಲ ತುಷ್ಟಿಗುಣ: ವಸ್ತುಗಳು ಹೇರಳವಾಗಿ ಸಿಗುವಾಗ ಅವುಗಳ ಪ್ರಯೋಜನ ಮತ್ತು ಮೌಲ್ಯ ಕಡಿಮೆ. ಆಗ ಅವುಗಳನ್ನು ಸಂಗ್ರಹಿಸಿಟ್ಟು, ಅವುಗಳ ಕೊರತೆ ಕಂಡು ಬಂದಾಗ, ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಟಕ್ಕೆ ಇಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತವೆ.ಅದೇ ಪ್ರಕಾರ, ಸುಗ್ಗಿಯ ಕಾಲದಲ್ಲಿ ದವಸ -ಧಾನ್ಯಗಳು ವಿಫುಲವಾಗಿ ಸಿಗುತ್ತವೆ; ಆಗ ಅವುಗಳ ಬೆಲೆಯೂ ಕಡಿಮೆ. ವ್ಯಾಪರಸ್ಥರು ಅವುಗಳನ್ನು ರೈತರಿಂದ ಕೊಂಡು, ತಮ್ಮ ಉಗ್ರಾಣದಲ್ಲಿ ಸಂಗ್ರಹಿಸಿಡುತ್ತಾರೆ. ಸುಗ್ಗಿ ಮುಗಿದ ನಂತರ, ಮುಂದೆ ಅವುಗಳ ಕೊರತೆ ಉಂಟಾಗುತ್ತದೆ. ಆಗ ವ್ಯಾಪಾರಸ್ಥರು ತಮ್ಮ ಉಗ್ರಾಣಗಳಿಂದಅವುಗಳನ್ನು ಹೊರ ತೆಗೆದು ಪೇಟೆಯಲ್ಲಿ ಮಾರಾಟಕ್ಕಿಟ್ಟಾಗ ಅವುಗಳ ಉಪಯುಕ್ತತೆ ಮತ್ತು ಮೌಲ್ಯಗಳು ಹೆಚ್ಚಾಗುತ್ತವೆ. ಅದರಂತೆ, ಮಳೆಗಾಲಕ್ಕಿಂತ ಮೊದಲೇ ಅಂದರೆ ಚಳಿಗಾಲದಲ್ಲಿ ಮತ್ತು ಬೇಸಿಗೆಯ ಕಾಲದಲ್ಲಿ ಕೊಡೆಗಳನ್ನು ತಯಾರಿಸಲಾಗುತ್ತದೆ. ಅವುಗಳ ಉಪಯುಕ್ತತೆ ಕಡಿಮೆ. ಮಳೆಗಾಲ ಪ್ರಾರಂಭವಾದ ಕೂಡಲೇ ಅವುಗಳನ್ನು ಮಾರಾಟಕ್ಕಿಡಲಾಗುತ್ತದೆ. ಆಗ ಅವುಗಳ ಉಪಯುಕ್ತತೆ ಮತ್ತು ಮಲ್ಯ ಎರಡೂ ಹೆಚ್ಚಾಗುತ್ತವೆ.
೪. ಸೇವೆಯ ತುಷ್ಟಿಗುಣ:
"https://kn.wikipedia.org/wiki/ಉತ್ಪಾದನೆ" ಇಂದ ಪಡೆಯಲ್ಪಟ್ಟಿದೆ