"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಹೄಷಿದಾ ರವರ ಅಂತಿಮ ದಿನಗಳು, ಅವರಿಗೆ ನೆಮ್ಮದಿ ನೀಡಲಿಲ್ಲ ==
 
ಹೃಷಿಕೇಶ್ ಮುಖರ್ಜಿಯವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಸ್ಟ್ ೬ನೆ ತಾರೀಖು ಸೇರಿಸಲ್ಪಟ್ಟಿದ್ದು ಅಲ್ಲಿನ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದರು. ಮತ್ತೆ ಅವರು 'ಲೀಲಾವತಿ ಆಸ್ಪತ್ರೆಗೆ' ಭರ್ತಿಯಾದರು. ಈ ಬಾರಿ 'ನ್ಯುಮೋನಿಯ ಜ್ವರ' ಅವರನ್ನು ಆವರಿಸಿತ್ತು. 'ಡಯಾಲಿಸಿಸ್' ಗೋಸ್ಕರ ಸದಾ ಅವರು ಅಲ್ಲಿಗೆ ಹೋಗುತ್ತಲೇ ಇದ್ದರು. ಹೀಗೆ ನರಳುತ್ತಿದ್ದ ಹೃಷಿದಾ ಅವರು ೨೭ ನೆಯ ತಾರೀಖು ಕೊನೆಯುಸಿರೆಳೆದರು ! ಇಹ ಲೋಕದ ದುಃಖವನ್ನು ಸಾಕಷ್ಟು ಅನುಭವಿಸಿ ಸೋತಿದ್ದರು. ಮೃತರಿಗೆ ೮೪ ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯದಲ್ಲಿ ಅವರ ಬಳಿ ಯಾರೂ ಇರಲಿಲ್ಲ. ಅವರ ಕಿರಿಯ ಮಗ 'ಟೂಟು' ನ ಅಕಾಲಿಕ ಸಾವಿನಿಂದ ನೊಂದಿದ್ದರು. ಹೆಂಡತಿ ಮೊದಲೇ ಗತಿಸಿದ್ದರು. ಅವರಿಗೆ ಜೊತೆಯೆಂದರೆ ೪-೫ ಸಾಕು [[ನಾಯಿಗಳು]], ಹಳೆಯ ನಂಬಿಕಸ್ತ [[ಕಾರ್ ಡ್ರೈವರ್]], [[ವಾಚ್ ಮನ್ ]]! '[[ಚಾರ್ಲಿ ಚಾಪ್ಲೈನ್ ಡಿವಿಡಿ]]' ಗಳೇ ಅವರಿಗೆ ದಿನಪುರ್ತಿ ಒದಗಿಸುತ್ತಿದ್ದ ಮನರಂಜನೆಯ ಸಾಮಗ್ರಿಗಳು. ಒಂಟಿತನ ಅವರ ತಲೆಗೆ ಚಿಟ್ಟು ಹಿಡಿಸಿತ್ತು.
 
ವಿಪರ್ಯಾಸವೆಂದರೆ, ಇಂತಹ ಮಹಾನ್ ಕಲಾವಿದನಿಗೆ 'ಬಾಲಿವುಡ್' ನಲ್ಲಿ ಸರಿಯಾದ ಸನ್ಮಾನ ದೊರೆಯಲಿಲ್ಲ. ಮರಣದ ಸಮಯದಲ್ಲಿ ಅವರ ಮಗ [[ಪ್ರದೀಪ್ ]]ಅಮೆರಿಕೆಯಲ್ಲಿದ್ದರು. ಅವರು ಬರುವ ವರೆಗೆ ಅಂತ್ಯ ಕ್ರಿಯೆಗಳನ್ನು ಮಾಡಲಾಗಲಿಲ್ಲ. ೨ ಹೆಣ್ಣು ಮಕ್ಕಳು ಮುಂಬೈನಲ್ಲಿದ್ದಾರೆ. ಒಬ್ಬ ಮಗಳು ಕೊಲ್ಕತ್ತಾ ದಲ್ಲಿದ್ದಾಳೆ. ಚಿಕ್ಕ ಮಗ [[ಸಂದೀಪ್]] (ಟೂಟು) ಅಕಾಲಮರಣಕ್ಕೆ ತುತ್ತಾದನು. ಮೊಮ್ಮಗಳ ಹೆಸರು ಪ್ರೀತ. ಅವನು ಅಸ್ಥಮಾ ದಿಂದ ನರಳುತ್ತಿದ್ದ. ದೆಹಲಿಯಲ್ಲಿದ್ದಾಗ ಅಲ್ಲಿ ಮರಣ ಹೊಂದಿದನು. ಅವರ ತಮ್ಮ [[ಕಾಳಿಕಾಪ್ರಸಾದ ಮುಖರ್ಜೀ]]. (ನೆನೋ) ಅಣ್ಣ [[ದ್ವಾರಕಾ ಪ್ರಸಾದ್ ಮುಖರ್ಜಿ]] ತೀರಿಹೋದರು. ಒಬ್ಬ ಅಡುಗೆಯವರು [[ಕಾರ್ತಿಕ್]], ಸುಮಾರು ೪೫ ವರ್ಷಗಳಿಂದ ಅವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಅವರ ಹಾಸಿಗೆಯ ಬಳಿ ೪-೫ ಸಾಕು ನಾಯಿಗಳು ; ಇವೇ ಅವರ ಆಪ್ತ ಬಂಧುಗಳು ! ದಿನವೆಲ್ಲಾ ಚಾರ್ಲಿ ಚಾಪ್ಲಿನ್ ರ ಡಿವಿಡಿಗಳನ್ನು ನೋಡಿಕೊಂಡು ಅಥವ '[[ಕ್ರಾಸ್ ವರ್ಡ್ಸ್]]' ಮಾಡಿಕೊಂಡೋ ದಿನ ನೂಕುತ್ತಿದ್ದರಂತೆ. ಇಲ್ಲವಾದರೆ ದೂರ ದಿಗಂತದಲ್ಲಿ, ಕಡಲಿನಾಚೆಯ ಲೊಕದಲ್ಲಿ ಮೈ ಮರೆಯುತ್ತಿದ್ದರಂತೆ ! ಹೀಗೆಯೇ ಹಾಸಿಗೆಯಮೇಲೆ ಮಲಗಿಕೊಂಡೊ, ಅಥವ ಗಾಲಿಚಕ್ರದ ಮೇಲೆ ಕುಳಿತುಕೊಂಡೋ ತಮ್ಮ ಕೊನೆಗಾಲದ ಹಲವು 'ವಸಂತ' ಗಳನ್ನು ಕಳೆದ 'ಹೃಷಿದ' ಒಬ್ಬ ಅಪರುಪದ ವ್ಯಕ್ತಿ ! '[[ಬಾಬು ಮೊಷಾಯ್]]' ಇನ್ನಿಲ್ಲವಾದರು ! ರಾಜ್ ಕಪೂರ್ ಅವರನ್ನು ಯಾವಾಗಲೂ ಹೀಗೆಯೇ ಸಂಬೊಧಿಸುತ್ತಿದ್ದದ್ದು ! ಅದರ ಅರ್ಥ- ಸಂಭಾವಿತ, ಮೃದು ಮಧುರ ಭಾಷಿ, ಗೌರವಾನ್ವಿತ, ಒಳ್ಳೆ ಮನೆತನದವ ಇತ್ಯಾದಿ ; ಅದೇ ಪದವನ್ನು ಅವರು ತಮ್ಮ '[[ಆನಂದ್]]' ಚಿತ್ರದಲ್ಲಿ ಬಳಸಿಕೊಂಡರು !
 
==ಪ್ರಶಸ್ತಿಗಳು==
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/53438" ಇಂದ ಪಡೆಯಲ್ಪಟ್ಟಿದೆ