ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೩ ನೇ ಸಾಲು:
ಕೆಲವರು ಶೇಕಡ ನೂರು ಸಾಮರ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದರ ಅರ್ಥ ಏನೆಂದು ಹೇಳುವುದು ಕಷ್ಟ. ಆದರೆ, ಉಷ್ಣಯಂತ್ರಗಳ ವಿಷಯದಲ್ಲಿ ನಿಖರವಾಗಿ ಹೇಳಬಹುದು . ಶೇಕಡ ನೂರು ಸಾಮರ್ಥ್ಯದ ಯಂತ್ರ ಎಂದರೆ ತೊಡಗಿಸಿದ ಶಕ್ತಿಯನ್ನು ಸಂಪೂರ್ಣವಾಗಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವುದು . ನಮಗೆಲ್ಲಾ ಅಂತಹ ಯಂತ್ರ ಬೇಕು ಯಾರುತ್ತಾನೆ ಶಕ್ತಿಯನ್ನು ವ್ಯಯಮಾಡಲು ಬಯಸುತ್ತಾರೆ ? ಆದರೆ ಇದೊಂದು ಮರೀಚಿಕ ಒಂದು ಕಾರು ಕೊಳ್ಳುವಾಗ ಅದರ ಉತ್ಪಾದನೆಗೆ ಎಷ್ಟು ಹಣ ಖರ್ಚಾಯಿತೋ ಅಷ್ಟೇ ಬೆಲೆ ಕೊಡುತ್ತೇನೆಂದರೆ ಆಗುತ್ತದೆಯೆ? ಮಾರಾಟಗಾರ ಅದಕ್ಕೆ ಒಪ್ಪಲಾರ ಕಾರಣ , ಕಾರನ್ನು ಫ್ಯಾಕ್ಟರಿಯಿಂದ ಮಳಿಗೆಗೆ ವರ್ಗಾಯಿಸುವುದು , ಅದಕ್ಕೆ ಕೊಡಬೇಕಾದ ಸುಂಕಗಳು , ಮಾರಾಟಗಾರನ ಕಮೀಶನ್ , ಹೀಗೆ ಇನ್ನೂ ಎಷ್ಟೋ ಖರ್ಚುಗಳಿರುತ್ತವೆ . ಹಾಗಾಗಿ ನಾವು ಕೊಡುವ ಹಣದ ಒಂದು ಭಾಗ ಮಾತ್ರ ಕಾರಿನ ಉತ್ಪಾದನೆಯ ಖರ್ಚು .
ಅದೇ ರೀತಿ ಉಷ್ಣಯಂತ್ರಗಳಲ್ಲಿ ಊಡಿಸಿದ ಒಟ್ಟು ಶಕ್ತಿಯ ಒಂದು ಭಾಗ ಮಾತ್ರ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ . ಅಂದರೆ ಯಂತ್ರದ ಸಾಮರ್ಥ್ಯ ಯವಾಗಲೂ ಶೇಕಡ ನೂರಕ್ಕಿಂತ ಕಡಿಮೆ. ಸೈದ್ಧಾಂತಿಕವಾಗಿ ಶೇಕಡ ನೂರು ಸಾಮರ್ಥ್ಯದ ಉಷ್ಣಯಂತ್ರವನ್ನು ನಿರ್ಮಿಸುವುದು ಅಸಾಧ್ಯ. ನಾವು ವಾಸ್ತವದಲ್ಲಿ ಏನು ಸಾಧಿಸಬಹುದು ಎಂಬುದರ ಮೇಲೆ ನಿಸರ್ಗ ಒಡ್ಡುವ ಮಿತಿ . ಇದು ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆಯಲ್ಲಿನ ಈ ಆಂತರಿಕ ಮಿತಿಗೆ ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಎನ್ನುತ್ತಾರೆ . ಈ ಮಿತಿಗೆ ಕಾರಣ ಘರ್ಷಣೆ (Friction). ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳಲ್ಲಿ ಒಂದು ಇನ್ನೊಂದರ ಮೇಲೆ ಸರಿಯಲು ಯತ್ನಿಸಿದಾಗ ಆ ಚಲನೆಗೆ ಎದುರಾಗುವ ಪ್ರತಿರೋಧವೇ ಘರ್ಷಣೆ . ಹಾಗಾಗಿ ಘರ್ಷಣೆಯನ್ನು ನಿವಾರಿಸಲು ಹೊಡಿದ ಶಕ್ತಿಯ ಸ್ವಲ್ಪಬಾಗ ವ್ಯಯವಾಗುವುದು ಅನಿವಾರ್ಯ ಆದ್ದರಿಂದ ಪೂರೈಸಿದ ಶಕ್ತಿಗೆ ಸಮನಾದ ಉಪಯುಕ್ತ ಶಕ್ತಿ ಎಂದಿಗೂ ಲಭಿಸಲಾರದು .ಥರ್ಮೋಡೈನಮಿಕ್ಸ್-ನ ಈ ಎರಡನೇ ನಿಯಮ ನಿಸರ್ಗದ ಮೂಲಭೂತ ನಿಯಮಗಳಲ್ಲಿ ಒಂದು ಅದರ ಸಾರಾಂಶವೇನೆಂದರೆ ನಿಸರ್ಗದ ಆಗುಹೋಗುಗಳು ಬಳಸಬಹುದಾದ ಶಕ್ತಿಯನ್ನು ಬಳಸಲಾಗದ ಶಕ್ತಿಯಾಗಿ ಪರಿವರ್ತಿಸುತ್ತದೆ ಎಂಬುದು . ಯಾವುದೇ ವ್ಯವಸ್ಥೆಯಲ್ಲಿ ಕಂಡುಬರುವ ಅವ್ಯವಸ್ಥೆಯೇ (Disorder) ಅದರಲ್ಲಿನ ಬಳಸಲಾಗದ ಶಕ್ತಿಯ ಪ್ರಮಾಣದ ಸೂಚಕ .
 
Randomness ಮತ್ತು entropy.ಅಣು ಸಮುಚ್ಚಯದಲ್ಲಿನ ಅವ್ಯವಸ್ಥೆಯ ಮಟ್ಟ ಭಾರಿ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ.
ಪ್ರಪಂಚದಲ್ಲಿ ತೋರಿಬರುವ ವ್ಯವಸ್ಥೆ ಅನೇಕ ಬಾರಿ ನಮಗೆ ಆಶ್ವರ್ಯ ಉಂಟುಮಾಡುತ್ತದೆ. ಅಲ್ಲಿನ ಸಾಮರಸ್ಯ , ಸೌಂದರ್ಯದಿಂದ ಪ್ರಭಾವಿತರಾಗುತ್ತೇವೆ . ಆದಾಗ್ಯೂ, ಈ ಎಲ್ಲ ತೋರಿಕೆಯ ಸಭ್ಯತೆಯ ಹಿಂದೆ ಅಸಂಸ್ಕೃತ ಭಾವೋದ್ವೇಗ ತಾಂಡವಾಡುತ್ತಿರುತ್ತದೆ . ಅದೇ ರೀತಿ ಲೌಕಿಕ ಜಗತ್ತಿನ ವಿದ್ಯಮಾನಗಳನ್ನು ನಿಯಂತ್ರಿಸುವ ಎಲ್ಲ ನಿಯಮಾವಳಿಗಳ ಹಿನ್ನೆಲೆಯಲ್ಲಿ ಅವ್ಯವಸ್ಥೆಯ ಎಡಗೆ ಜಾರುವ ಒಲವು ಪ್ರಭುತ್ವ ಸಾಧಿಸುತ್ತಿರುತ್ತದೆ. ಅದನ್ನು ನಿಗ್ರಹಿಸಲಾಗದು . ವಿಶ್ವದಲ್ಲಿ ಸಂಭವಿಸುವ ಪ್ರತಿಯೊಂದು ಸ್ವಯಂಪ್ರೇರಿತ ಘಟನೆಯೂ
 
 
ವಿಶ್ವವನ್ನು ವ್ಯವಸ್ಥೆಯಿಂದ ಅವ್ಯವಸ್ಥೆಯೆಡೆಗೆ ತಳ್ಳುತ್ತದೆ. ಹಾಗಾಗಿ ವಿಶ್ವದ ಅಂತಿಮ ಗುರಿಯೇ ಅತ್ಯಂತ ಅವ್ಯವಸ್ಥೆ (Supreme chaos) ಎಂಬತೆ ತೋರುತ್ತದೆ.
Line ೯೩ ⟶ ೯೭:
 
 
ಭೌತವಿಜ್ಞಾನದ ಎರಡು ಶತಮಾನಗಳ ಗಂಭೀರ ಅಧ್ಯಯನದ ನಂತರದ ತೀರ್ಮಾನವೇ ಇದು ? ಗ್ರಹ , ನಕ್ಷತ್ರಗಳ ರಹಸ್ಯವನ್ನು ಬಹಿರಂಗಪಡಿಸಿದ ಬಡಾಯಿ ಸಾಲದೆಂಬಂತೆ ಕಾಮನಬಿಲ್ಲು ಸೂರ್ಯನ ಬೆಳಕು ಮೋಡದ ಮೂಲಕ ಹಾದುಬರುವಾಗ ಅದರ ದಿಶೆಯಲ್ಲಾಗುವ ಪಲ್ಲಟದ ಪರಿಣಾಮವಷ್ಟೆ ಎಂಬ ನೀರಸ ವ್ಯಾಖ್ಯಾನ ಬೇರೆ . ಧೂಮಕೇತುಗಳು ಆಕಾಶದಲ್ಲಿ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುವ ದ್ರವ್ಯದ ತುಂಡುಗಳು ಮಾತ್ರ ಎಂದು ಹೇಳಿದುದೇನೋ ಒಳ್ಳೆಯದೇ ಆಯಿತು . ಅದರಿಂದ ಅವು ಅಪಶಕುನದ ಸೂಚಕವೆಂಬ ಭಯ ದೂರವಾಯಿತು . ಆದರೆ , ಕಡೆಗೊಂದುದಿನ ಸೂರ್ಯ ಮಾಸಿಹೋಗುತ್ತದೆ, ನಕ್ಷತ್ರಗಳೆಲ್ಲಾ ಕಳೆಗುಂದುತ್ತವೆ. ಸರ್ವವೂ ಚೈತನ್ಯರಹಿತವಾಗುತ್ತವೆ ಎಂದು ಭವಿಶ್ಯ ನುಡಿಯುವುದಕ್ಕಿಂತ ಕ್ರೂಕ್ರೂರವಾದ್ದು ಮತ್ತೇನಿದೆ? ಕವಿಗಳೂ, ತತ್ವಜ್ಞಾನಿಗಳೂ ಇದನ್ನೇ ಹೇಳಿದ್ದಾರೆ. ಆದರೆ , ಅವೆಲ್ಲ ಕಾವ್ಯ ; ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ , ಇದು ವಿಜ್ಞಾನ ಸತ್ಯಕ್ಕೆ ಅತ್ಯಂತ ಸಮೀಪವಾದ್ದು ಎಂದು ಅನೇಕರ ನಂಬಿಕೆ. ಈ ಬೃಹತ್ ವಿಶ್ವದಲ್ಲಿ ಅಪಾರ ಡ್ರವ್ಯವಿರುವುದರಿಂದ ಈ ರೀತಿಯ ಗೊಂದಲ ಬಹಳ ಕಾಲದಿಂದ ನಿಧಾನವಾಗಿ ನಡೆಯುತ್ತಿದ್ದರೂ ಅದರಿಂದ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಯಾವ ರೀತಿಯ ಪ್ರಭಾವವೂ ಉಂಟಾಗಿಲ್ಲ ಎಂಬುದು ಒಂದು ಸಮಾದಾನಕರವಾದ ಸಂಗತಿ. ನಮ್ಮ ವಿಶ್ವವೇನಾದರೂ ಚಿಕ್ಕದಾಗಿದ್ದು ಇದೇ ನಿಯಮಗಳು ಅನ್ವಯಿಸುವಂತಿದ್ದಿದ್ದರೆ, ಮಾನವನ ಅಸ್ತಿತ್ವ ಮೂಡುವುದಕ್ಕೆ ಸಮಯವೇ ಇರುತ್ತಿರಲ್ಲಿಲ್ಲ. ಅದಕ್ಕೆ ಮುಂಚೆಯೇ ಸ್ಥೂಲ ದ್ರವ್ಯವೆಲ್ಲಾ ಎಂದೋ ನಶಿಸಿಹೋಗುತ್ತಿತ್ತು ಅದರೆ, ಇಂದಿನ ಪರಿಸ್ಥಿತಿಯಲ್ಲಿ ವಿಶ್ವದ ತಾಪಮರಣ, ಅದು ಸಂಭವಿಸುವುದೇ ಆದರೂ ಸಧ್ಯಕ್ಕಂತೂ ಸಾಧ್ಯವಿಲ್ಲ.
 
ಆದಾಗ್ಯೂ, ಎಷ್ಟೋ ದೂರದ ಭವಿಷ್ಯದಲ್ಲಿ, ನಮ್ಮ ಮುಂದಿನ ಸಾವಿರಾರು ತಲೆಮಾರುಗಳು ಆಗಿಹೋದಾಂತರವೂ ಇಂತಹದೊಂದು ಖಗೋಳ ಮರ್ತ್ಯತೆ ಸಂಭವಿಸಬಹುದೆಂಬ ಸಾಧ್ಯತೆಯ ಬಗ್ಗೆ ಯೋಚಿಸುವುದೇ ಅಹಿತಕರವಾಗಿದೆ ದಯಾಮಯನಾದ ಭಗವಂತ ತನ್ನ ಸೃಷ್ಟಿಯನ್ನು ಈರೀತಿ ಮುಕ್ತಾಯಗೊಳಿಸಲಾರ ಅದನ್ನು ತಪ್ಪಿಸಲು ಮಾರ್ಗಗಳು ಇದ್ದೇ ಇರಬೇಕು. ತತ್ವಜ್ಞಾನಿಗಲೂ, ವಿಜ್ಞಾನಿಗಳೂ ಇದರ ಬಗ್ಗೆ ವಿಪುಲವಾಗಿ ಚಿಂತಿಸಿದ್ದಾರೆ. ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಇಷ್ಟು ಕ್ರೂರವಾಗಿರಲಾರದು ಎಂಬುದು ಕೆಲವರ ವಾದ ಹಾಗಾಗಿ, ತಾಪಮರಣವೆಂಬ ಪರಿಕಲ್ಪನೆ ಬೌತವಿಜ್ಞಾನದ ತದೇರ್ಕವದ್ಧ ಪರಿಣಾಮವೇನಲ್ಲ ಎಂಬ ಹೊಸ ವ್ಯಾಖ್ಯಾನದ ಅಲೆಗಳು ಎದ್ದು ಜನಸಾಮಾನ್ಯರಲ್ಲಿ ಭರವಸೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವ.
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ