ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೫ ನೇ ಸಾಲು:
ಅದೇ ರೀತಿ ಉಷ್ಣಯಂತ್ರಗಳಲ್ಲಿ ಊಡಿಸಿದ ಒಟ್ಟು ಶಕ್ತಿಯ ಒಂದು ಭಾಗ ಮಾತ್ರ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ . ಅಂದರೆ ಯಂತ್ರದ ಸಾಮರ್ಥ್ಯ ಯವಾಗಲೂ ಶೇಕಡ ನೂರಕ್ಕಿಂತ ಕಡಿಮೆ. ಸೈದ್ಧಾಂತಿಕವಾಗಿ ಶೇಕಡ ನೂರು ಸಾಮರ್ಥ್ಯದ ಉಷ್ಣಯಂತ್ರವನ್ನು ನಿರ್ಮಿಸುವುದು ಅಸಾಧ್ಯ. ನಾವು ವಾಸ್ತವದಲ್ಲಿ ಏನು ಸಾಧಿಸಬಹುದು ಎಂಬುದರ ಮೇಲೆ ನಿಸರ್ಗ ಒಡ್ಡುವ ಮಿತಿ . ಇದು ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆಯಲ್ಲಿನ ಈ ಆಂತರಿಕ ಮಿತಿಗೆ ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಎನ್ನುತ್ತಾರೆ . ಈ ಮಿತಿಗೆ ಕಾರಣ ಘರ್ಷಣೆ (Friction). ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳಲ್ಲಿ ಒಂದು ಇನ್ನೊಂದರ ಮೇಲೆ ಸರಿಯಲು ಯತ್ನಿಸಿದಾಗ ಆ ಚಲನೆಗೆ ಎದುರಾಗುವ ಪ್ರತಿರೋಧವೇ ಘರ್ಷಣೆ . ಹಾಗಾಗಿ ಘರ್ಷಣೆಯನ್ನು ನಿವಾರಿಸಲು ಹೊಡಿದ ಶಕ್ತಿಯ ಸ್ವಲ್ಪಬಾಗ ವ್ಯಯವಾಗುವುದು ಅನಿವಾರ್ಯ ಆದ್ದರಿಂದ ಪೂರೈಸಿದ ಶಕ್ತಿಗೆ ಸಮನಾದ ಉಪಯುಕ್ತ ಶಕ್ತಿ ಎಂದಿಗೂ ಲಭಿಸಲಾರದು .
 
ಭೌತವಿಜ್ಞಾನದ ಎರಡು ಶತಮಾನಗಳ ಗಂಭೀರ ಅಧ್ಯಯನದ ನಂತರದ ತೀರ್ಮಾನವೇ ಇದು ? ಗ್ರಹ , ನಕ್ಷತ್ರಗಳ ರಹಸ್ಯವನ್ನು ಬಹಿರಂಗಪಡಿಸಿದ ಬಡಾಯಿ ಸಾಲದೆಂಬಂತೆ ಕಾಮನಬಿಲ್ಲು ಸೂರ್ಯನ ಬೆಳಕು ಮೋಡದ ಮೂಲಕ ಹಾದುಬರುವಾಗ ಅದರ ದಿಶೆಯಲ್ಲಾಗುವ ಪಲ್ಲಟದ ಪರಿಣಾಮವಷ್ಟೆ ಎಂಬ ನೀರಸ ವ್ಯಾಖ್ಯಾನ ಬೇರೆ . ಧೂಮಕೇತುಗಳು ಆಕಾಶದಲ್ಲಿ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುವ ದ್ರವ್ಯದ ತುಂಡುಗಳು ಮಾತ್ರ ಎಂದು ಹೇಳಿದುದೇನೋ ಒಳ್ಳೆಯದೇ ಆಯಿತು . ಅದರಿಂದ ಅವು ಅಪಶಕುನದ ಸೂಚಕವೆಂಬ ಭಯ ದೂರವಾಯಿತು . ಆದರೆ , ಕಡೆಗೊಂದುದಿನ ಸೂರ್ಯ ಮಾಸಿಹೋಗುತ್ತದೆ, ನಕ್ಷತ್ರಗಳೆಲ್ಲಾ ಕಳೆಗುಂದುತ್ತವೆ. ಸರ್ವವೂ ಚೈತನ್ಯರಹಿತವಾಗುತ್ತವೆ ಎಂದು ಭವಿಶ್ಯ ನುಡಿಯುವುದಕ್ಕಿಂತ ಕ್ರೂ
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ