ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦೭ ನೇ ಸಾಲು:
ಕಾಲಕ್ರಮೇಣ ವ್ಯವಹಾರ ಸಂಘಟನೆಯಲ್ಲಿನ ಪ್ರಗತಿ,ಒಡೆತನ,ಮತ್ತು ಆಡಳಿತ ನಿರ್ವಹಣೆಗಳಲ್ಲಿನ ಪ್ರತ್ಯೇಕತೆ,ಬೆಳೆಯುತ್ತಿರುವ ಸ್ಪರ್ಧೆ ಇತ್ಯಾದಿ ಅಂಶಗಳು ಅರ್ಹತೆ ಹೊಂದಿರುವ ವೃತ್ತಿನಿರತ ನಿರ್ವಾಹಕರುಗಳಿಗೆ ಬೇಡಿಕೆಯನ್ನು ಹೆಚ್ಚಿಸಿವೆ.ನಿರ್ವಾಹಕರುಗಳ ಕೆಲಸವು ಒಂದು ಅಸಾಧಾರಣವಾದ ಕಾರ್ಯವಾಗಿದೆ.ಈ ಬೆಳವಣಿಗೆಗಳು ಇಂದು ಎಲ್ಲಾ ಕಾರ್ಯಗಳನ್ನು ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸುವ ಹಂತಕ್ಕೆ ತಲುಪಿಸಿದೆ.
ವಿಶಿಷ್ಠವಾದ ಜ್ಞಾನ ಮತ್ತು ಆಳವಾದ ಶೈಕ್ಷಣಿಕ ತಯಾರಿಕೆಯನ್ನು ಅಪೇಕ್ಷಿಸುವ ಉದ್ಯೋಗವನ್ನು ಒಂದು ವೃತ್ತಿ ಎಂದು ವ್ಯಾಖ್ಯಾನಿಸಬಹುದು.ಈ ವೃತ್ತಿಗೆ ಸಂಬಂಧಿಸಿದ ವ್ಯಕ್ತಿಗಳ ಕಾರ್ಯಚಟುವಟಿಕೆಗಳನ್ನು ಅವರನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಮಂಡಳಿ ಅಥವಾ ಸಂಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ.
 
==ವೃತ್ತಿಯ ಗುಣಲಕ್ಶ್ಣಗಳು ಕೆಳಗಿನಂತಿವೆ==
 
1)ವಿಶಿಷ್ಠ ಜ್ಞಾನ:ವೃತ್ತಿಯು ಒಂದು ವಿಶಿಷ್ಠವಾದ ಮತ್ತು ಕ್ರಮಬದ್ದವಾದ ಜ್ಞಾನವನ್ನು ಹೊಂದಿರುತ್ತದೆ.ಇದು ವೃತ್ತಿನಿರತರನ್ನು ಅಭಿವೃದ್ದಿ ಪಡಿಸಲು ಸಹಾಯಕವಾಗುತ್ತದೆ.ಪ್ರತಿಯೊಬ್ಬ ವೃತ್ತಿನಿರತನು ತನ್ನ ಕ್ಷೇತ್ರದಲ್ಲಿ ಆ ವೃತ್ತಿಗೆ ಸಂಬಂಧಿಸದ ತತ್ವ ಮತ್ತು ತಂತ್ರಗಳನ್ನು ಶ್ರದ್ದಾಪೂರ್ವಕ ಪರಿಶ್ರಮದ ಮೂಲಕ ಪಡೆದು ಪರಿಣಿತಿಯನ್ನು ಹೊಂದುತ್ತಾನೆ.ಹಾಗೆಯೇ ವ್ಯವಸ್ಥಾಪಕನು ನಿರ್ವಹಣಾ ನಿಯಮಗಳನ್ನು ಸಮರ್ಪಣಾಭಾವ ಮತ್ತು ತನ್ನನ್ನು ತೊಡಗಿಕೊಳ್ಳುವ ಮೂಲಕ ಪರಿಣತಿಯನ್ನು ಪಡೆದುಕೊಳ್ಳುತ್ತಾನೆ.
2)ಔಪಚಾರಿಕ ಶಿಕ್ಷಣ ಮತ್ತು ತರಬೇತಿ:ಅನೇಕ ವಿದ್ಯಾಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ವೃತ್ತಿಗೆ ಸಂಬಂದಿಸಿದ ಶಿಕ್ಷಣ ಹಾಗೂ ತರಬೇತಿಯನ್ನು ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ.ಯೋಗ್ಯ ಅರ್ಹತೆ ಅಥವಾ ನಿಗದಿತ ಪದವಿ ಪದೆದುಕೊಳ್ಳದೆ ಯಾರೊಬ್ಬರು ವೃತ್ತಿಯನ್ನು ಮಾಡಲಾರರು. ಆದ್ದರಿಂದ ಅನೇಕ ವಿದ್ಯಾಸಂಸ್ಥೆಗಳ ಮೂಲಕ ನಿರ್ವಹಣೆಯ ಶಿಕ್ಷಣ ನೀಡಲಾಗುತ್ತದೆ.ಆದರೆ ವ್ಯವಸ್ಥಾಪಕರಿಗೆ ಯಾವುದೇ ಕನಿಷ್ಠ ವಿದ್ಯಾರ್ಹತೆಯನ್ನಾಗಲೀ ಅಥವಾ ಶೈಕ್ಷಣಿಕ ವಿಷಯಗಳನ್ನಾಗಲೀ ಕಾನೂನುರೀತ್ಯ ನಿಗದಿಪಡಿಸಿಲ್ಲ.ಉದಾಹರಣೆಗೆ ಎಂಬಿಎ,ಅಪೇಕ್ಷಣೀಯ ಅದರೆ ಅನಿವಾರ್ಯವಲ್ಲ.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ