ನಿರ್ವಹಣೆ ಪರಿಚಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೨ ನೇ ಸಾಲು:
2)ಸಾಮಾಜಿಕ ಉದ್ದೇಶಗಳು:ಪ್ರತಿಯೊಂದು ಸಂಘಟನೆಯು ಸಮಾಜದ ಒಂದು ಭಾಗವಾಗಿರುವುದರಿಂದ, ಅವುಗಳು ಸಮಾಜಕ್ಕೆ ಹಲವು ರೀತಿಯಲ್ಲಿ ಹೊಣೆಯಾಗಿರುತ್ತವೆ. ಆ ಸಂಘಟನೆಗಳು ವ್ಯಾಪಾರ ಅಥವಾ ವ್ಯಾಪಾರೇತರ ಸಂಸ್ಥೆಯಾಗಿರಬಹುದು.
ಕೆಳಕಂಡವು ಸಾಮಾಜಿಕ ಹೊಣೆಯಾಗಿರುತ್ತವೆ.
a) ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಅನುಸರಿಸಬೇಕಾಗುವುದು.
b)ಉದ್ಯೋಗವಕಾಶಗಳನ್ನು ಸೃಷ್ಟಿಸುವುದು.
c)ಸಮಾಜಕ್ಕೆ ಅಗತ್ಯವಾದ ಶಾಲಾ-ಕಾಲೇಜುಗಳನ್ನು ಸ್ಥಾಪಿಸುವುದು ಹಾಗೂ ಸಿಬ್ಬಂದಿವರ್ಗದವರ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದು.
d)ಸಮಾಜದ ಘನ ಉದ್ದೇಶಗಳಿಗೆ ಹಣಕಾಸು ನೆರವು ನೀಡುವುದು.
e)ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಮಾಜಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು.
3)ವೈಯಕ್ತಿಕ ಉದ್ದೇಶಗಳು: ವೈಯಕ್ತಿಕ ಉದ್ದೇಶಗಳು ಸಂಘಟನೆಯ ಸಿಬ್ಬಂದಿವರ್ಗದವರಿಗೆ ಸಂಬಂದಿಸಿರುತ್ತವೆ. ಸಂಘಟನೆಯಲ್ಲಿರುವ ವ್ಯಕ್ತಿಗಳು ವಿವಿಧ ವ್ಯಕ್ತಿತ್ವ, ಹಿನ್ನೆಲೆ ಮತ್ತು ಅನುಭವವನ್ನು ಹೊಂದಿ ಸಂಘಟನೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತಾರೆ. ಸಿಬ್ಬಂದಿ ವರ್ಗದವರ ವಿವಿಧ ಅಗತ್ಯತೆಗಳನ್ನು ತೃಪ್ತಿಪಡಿಸುವುದರ ಮೂಲಕ, ಅವರ ಸಂಪೂರ್ಣ ಸಹಕಾರ ಪಡೆದು ಸಂಸ್ಥೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ. ಅವುಗಳಾವುವೆಂದರೆ
a)ಹಣಕಾಸಿನ ಅಗತ್ಯತೆಗಳು, ಸಂಬಳ ಉತ್ತೇಜನ ಹಾಗೂ ಇತರೆ ಪ್ರಯೋಜನಗಳು.
b)ಸಾಮಾಜಿಕ ಅಗತ್ಯತೆಗಳು, ಸಂಘಟನೆಯಲ್ಲಿ ಮಾನ್ಯತೆ.
c)ಉನ್ನತ ಹಂತದ ಅವಶ್ಯಕತೆಗಳು, ವೈಯಕ್ತಿಕ ಬೆಳವಣಿಗೆಗಳು ಮತ್ತು ಅಭಿವೃದ್ದಿ.
 
ನಿರ್ವಹಣೆಯ ಪ್ರಾಮುಖ್ಯತೆ
ನಿರ್ವಹಣೆಯು ಸಾರ್ವತ್ರಿಕ ಕಾರ್ಯಚಟುವಟಿಕೆಯಾಗಿ ಸಂಘಟನೆಯ ಅವಿಭಾಜ್ಯ ಅಂಗವಾಗಿದೆ.ನಿರ್ವಹಣೆಯು ಕೆಳಗಿನ ಕಾರಣಗಳಿಂದ ಎಲ್ಲಾ ರೀತಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
1)ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ: ನಿರ್ವಹಣೆಯು ಗುಂಪುಗಳ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗುತ್ತದೆ. ನಿರ್ವಹಣೆಯು ವೈಯಕ್ತಿಕ ಪರಿಶ್ರಮವನ್ನು ಒಗ್ಗೂಡಿಸುವುದರ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ.
2)ನಿರ್ವಹಣೆಯು ದಕ್ಷತೆಯನ್ನು ಹೆಚ್ಚಿಸುತ್ತದೆ: ಪ್ರತಿಯೊಬ್ಬ ವ್ಯವಸ್ಥಾಪಕನೂ ಸಂಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಕಡಿಮೆ ವೆಚ್ಚದಲ್ಲಿ, ಪ್ರಮಾಣದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿರುತ್ತಾನೆ. ಇದನ್ನು ಉತ್ತಮ ಯೋಜನೆಗಳನ್ನು ರೂಪಿಸುವ, ಸಂಘಟಿಸುವ, ಸಿಬ್ಬಂದಿ ನೇಮಕಾತಿ ಮಾಡುವ, ನಿರ್ದೇಶಿಸುವ ಹಾಗೂ ನಿಯಂತ್ರಿಸುವ ಮೂಲಕ ಸಾಧಿಸಬಹುದಾಗಿದೆ.
3)ನಿರ್ವಹಣೆಯು ಚಲನಶೀಲ ಸಂಘಟನೆಯನ್ನು ಸೃಷ್ಟಿಸುತ್ತದೆ: ಪ್ರತಿಯೊಂದು ಸಂಘಟನೆಯು ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಂಘಟನೆಯಲ್ಲಿರುವ ವ್ಯಕ್ತಿಗಳು ಬದಲಾವಣೆಯನ್ನು ವಿರೋಧಿಸುತ್ತಾರೆ. ಒಂದು ಪರಿಣಾಮಕಾರಿ ನಿರ್ವಹಣೆಯು ಸ್ಪರ್ಧಾತ್ಮಕ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಸಿಬ್ಬಂದಿವರ್ಗವನ್ನು ಬದಲಾವಣೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ.ಆ ಮೂಲಕ ಸಂಘಟನೆಯ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು. ಈ ಕಾರ್ಯಗಳು ಸಂಘಟನೆಯ ನಿರ್ವಹಣೆಗೆ ಚಲನಶೀಲತೆಯನ್ನು ಒದಗಿಸುತ್ತದೆ.
4)ನಿರ್ವಹಣೆಯು ವೈಯಕ್ತಿಕ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತವೆ:ನಿರ್ವಹಣೆಯು ಸಂಘಟನೆಯಲ್ಲಿರುವ ವ್ಯಕ್ತಿಗಳನ್ನು ಉತ್ತೇಜಿಸುವ ಮೂಲಕ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಬೇಕು. ನಿರ್ವಹಣೆಯು ಸಿಬ್ಬಂದಿವರ್ಗದಲ್ಲಿ ಸಹಕಾರ, ಬದ್ದತೆ, ತಂಡಸ್ಫೂರ್ತಿಯನ್ನು ಹೆಚ್ಚಿಸುತ್ತದೆ.
5)ನಿರ್ವಹಣೆಯು ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಿದೆ: ಸಂಘಟನೆಯ ಅಭಿವೃದ್ದಿಗೆ ಸಮಾಜದ ವಿವಿಧ ವರ್ಗಗಳು ಕಾರಣವಾಗಿರುವುದರಿಂದ ನಿರ್ವಹಣೆಯು ಅವರ ಹಿತಾಸಕ್ತಿಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ. ಒಂದು ಪರಿಣಾಮಕಾರಿ ನಿರ್ವಹಣೆಯು ಕಾರ್ಮಿಕರ ,ಹೂಡಿಕೆದಾರರ , ಗ್ರಾಹಕರ, ಸಾರ್ವಜನಿಕರ ಬಗ್ಗೆ ಇರುವ ಬದ್ದತೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಹಕರಿಸುತ್ತದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಪೊರೈಸುವ, ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಸಮಾಜದ ಯೋಗಕ್ಷೇಮವನ್ನು ರಕ್ಷಿಸುತ್ತಾ, ಬೆಳವಣಿಗೆ ಮತ್ತು ಅಭಿವೃದ್ದಿಯ ಮಾರ್ಗವನ್ನು ನಿರ್ವಹಣೆಯು ಅನುಸರಿಸುತ್ತದೆ.
'''ನಿರ್ವಹಣೆಯು ಕಲೆ, ವಿಜ್ಞಾನ ಹಾಗೂ ವೃತ್ತಿಯಾಗಿ'''
ನಿರ್ವಹಣೆಯು ನಾಗರೀಕತೆಯಷ್ಟೇ ಪುರಾತನವಾದದು. ಇದು ಕಾಲಕ್ರಮೇಣ ಚಲನಾತ್ಮಕ ವಿಷಯವಾಗಿ ಬೆಳೆದು ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.
ನಿರ್ವಹಣೆಯು ಕಲೆಯಾಗಿ:ನಿರ್ವಹಣೆಯು ಒಂದು ಕಲೆಯಾಗಿದ್ದು ಸಾಮಾನ್ಯ ಸೈದ್ಧಾಂತಿಕ ತತ್ವಗಳನ್ನು ವೈಯಕ್ತಿಕವಾಗಿ ಆಚರಿಸುವ ಮೂಲಕ ಸಾಧ್ಯವಾದ ಉತ್ತಮ ಫಲಿತಾಂಶ ಸಾಧಿಸುವುದಾಗಿದೆ. ಕಲೆಯು ಕೆಳಕಂಡ ಲಕ್ಷಣಗಳನ್ನು ಹೊಂದಿರುತ್ತದೆ.
1)ಪ್ರಾಯೋಗಿಕ ಜ್ಞಾನ: ಪ್ರತಿಯೊಂದು ಕಲೆಗೂ ಪ್ರಾಯೋಗಿಕ ಜ್ಞಾನ ಅವಶ್ಯಕ. ಅದು ಸಿದ್ಧಾಂತಗಳನ್ನು ಕಲಿಯುವುದರಿಂದ ಸಾಧ್ಯವಾಗುವುದಿಲ್ಲ. ಸೈದ್ಧಾಂತಿಕ ತತ್ವಗಳನ್ನು ಪ್ರಾಯೋಗಿಕವಾಗಿ ಆಚರಣೆಗೆ ತರುವುದು ಅತ್ಯವಶ್ಯಕ. ವ್ಯವಸ್ಥಾಪಕನು ಅನೇಕ ಸೈದ್ಧಾಂತಿಕ ತತ್ವಗಳನ್ನು ವಾಸ್ತವಿಕವಾಗಿ ಆಚರಿಸುವ ಜ್ಞಾನ ಕಾರ್ಯ ನಿರ್ವಹಿಸಬೇಕು.
"https://kn.wikipedia.org/wiki/ನಿರ್ವಹಣೆ_ಪರಿಚಯ" ಇಂದ ಪಡೆಯಲ್ಪಟ್ಟಿದೆ