ಸದಸ್ಯ:Sunilkumar001/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಡೇವಿಡ್ ರಿಕಾರ್ಡೋ ( 1772-1823) ಆಡಂ ಸ್ಮಿತ್ ನಿಂದ ಸ್ಥಾಪಿಸಲ್ಪಟ್ಟ ಸಂಪ್ರದಾಯ ಪಂಥ...
( ಯಾವುದೇ ವ್ಯತ್ಯಾಸವಿಲ್ಲ )

೧೫:೫೦, ೨೮ ಜನವರಿ ೨೦೧೫ ನಂತೆ ಪರಿಷ್ಕರಣೆ

ಡೇವಿಡ್ ರಿಕಾರ್ಡೋ ( 1772-1823)

ಆಡಂ ಸ್ಮಿತ್ ನಿಂದ ಸ್ಥಾಪಿಸಲ್ಪಟ್ಟ ಸಂಪ್ರದಾಯ ಪಂಥದ ಧುರೀಣನೆನಿಸಿಕೊಂಡ ಡೇವಿಡ್ ರಿಕಾರ್ಡೋ ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾನೆ. ಆಡಂ ಸ್ಮಿತ್ ನಿಂದ ಆರಂಭವಾದ ಕಾರ್ಯವನ್ನು ಸಾಧ್ಯಾವಿರುವಷ್ಟು ಮುಂದುವರಿಸಿದ ರಿಕಾರ್ಡೋ ಸಂಪ್ರದಾಯ ಪಂಥದ ಆಧಾರ ಸ್ತಂಭ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. "ಇಂಗ್ಲೀಷ್ ರಾಜಕೀಯಾರ್ಥ ಶಾಸ್ತ್ರವು ಆತನ ಕೈಗಳಲ್ಲಿ ಅಂತಿಮ ಮತ್ತು ಸಂಪೂರ್ಣ ರೂಪವನ್ನು ಪಡೆಯಿತು." ಎಂದು ರಿಕಾರ್ಡೋನ ಸಾಧನೆಗಳ ಬಗ್ಗೆ ಅರ್ಥಶಾಸ್ತ್ರಜ್ನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆತನ ಹೆಸರಿನ ಸುತ್ತ ಹೆಣೆದು ಕೊಂಡಿದ್ದ ವಾದ ವಿವಾದಗಳಾಗಲಿ, ಆತನ ಸಿದ್ಧಾಂತಗಳಿಗೆ ಸಾರ್ವಕಾಲಿಕತೆ. ಇಲ್ಲದಿರುವ ವಾಸ್ತವವಾಗಲಿ, ಆತನಿಗೆ ಮಹಾನ್ ಅರ್ಥಶಾಸ್ತ್ರಜ್ನ ಎಂಬ ಹೆಸರು ಬರುವುದ್ದನ್ನು ತಪ್ಪಿಸಲ್ಲಿಲ್ಲ. ಆತನ ಕಾಲದ ಚಿಂತಕರಲ್ಲಿ ರಿಕಾರ್ಡೂ ಅಗ್ರಗಣ್ಯನೆನಿಸಲು ಅವನ ಸ್ವಚ್ಛವಾದ ಯೋಚನಾ ಸರಣಿ, ತರ್ಕಬದ್ಧ ನಿಲುವು ಮತ್ತು ಅಪ್ರತಿಮ ಬುದ್ಧಿ ಶಕ್ತಿಗಳು ಕಾರಣವಾಗಿವೆ. ಕಾರ್ಲ್ ಮಾರ್ಕ್ಸ್ ನ ಚಿಂತನೆಗಳಿಗೆ ಆತನ ತತ್ವಗಳು ಪ್ರೇರಣೆಯಾಗಿದ್ದವು ಎನ್ನುವುದು ರಿಕಾರ್ಡೊನ ಚಿಂತನೆಯ ಶ್ರೇಷ್ಟತೆಯನ್ನು ತೋರಿಸುತ್ತದೆ.

ಬದುಕು ಮತ್ತು ಬರಹಗಳು

ಆಬ್ರಹಾಂ ರಿಕಾರ್ಡೊ ಎಂಬ ಹಾಲೆಂಡಿನ ಯೆಹೂದಿ ವಲೆಸೆಗರನ ಹದಿನೇಳು ಮಂದಿ ಮಕ್ಕಳಲ್ಲಿ ಮೂರನೆಯವನಾಗಿ ೧೭೭೨ರಲ್ಲಿ ಡೇವಿಡ್ ರಿಕಾರ್ಡೋ ಲಂಡನ್ನಿನಲ್ಲಿ ಜನಿಸಿದ. ಅಬ್ರಹಾಂ ರಿಕರ್ಡೋ ಶೇರು ಪತ್ರ ಮತ್ತು ಹುಂಡಿಗಳ ದಲ್ಲಾಳಿಯಾಗಿದ್ದು ಸಾಕಷ್ಟು ಹಣ ಸಂಪಾದಿಸಿದ್ದ. ವ್ಯವಹಾರಗಳಲ್ಲಿ ಮಹಾ ಚಾಣಾಕ್ಷನಾಗಿದ್ದ. ಆಬ್ರಹಾಂ ರಿಕರ್ಡೋ ತೀರಾ ಸಂಪ್ರದಾಯವಾದಿಯೂ, ಮಡಿವಂತನೂ ಆಗಿದ್ದ