ಬ್ರಹ್ಮಪುತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೪ ನೇ ಸಾಲು:
[[Image:Homeward bound.jpg|thumb|240px| ಗುವಾಹಾಟಿಯ ಸುಕ್ಲೇಶ್ವರ್ ಸ್ನಾನಘಟ್ಟದಲ್ಲಿ ಬ್ರಹ್ಮಪುತ್ರ ನದಿಯ ಒಂದು ನೋಟ.]]
 
''' ( ''ಸೂಚನೆ : ಬ್ರಹ್ಮಪುತ್ರ ಪುಲ್ಲಿಂಗ ಪದವಾಗಿದ್ದು ಅದನ್ನು ನದ ಎಂದು ಕರೆಯಬೇಕಾಗುವುದು. ಅದೇ ಶಾಸ್ತ್ರೀಯವಾಗಿ ವಾಡಿಕೆಸರಿಯಾದುದು ಕೂಡ. ಅಲ್ಲದೆ ಹೆಸರು ಕೂಡ ಬ್ರಹ್ಮಪುತ್ರ ವೇ ವಿನಹ ಬ್ರಹ್ಮಪುತ್ರಾ ಅಲ್ಲ. ಆದರೆ ಲೋಕರೂಢಿಯಂತೆ ಈ ಲೇಖನದಲ್ಲಿ ನದಿ ಎಂಬ ಪದವನ್ನೇ ಬಳಸಲಾಗಿದೆ.'')'''
ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ [[ಏಷ್ಯಾ]]ದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ [[ಟಿಬೆಟ್]] ನ [[ಮಾನಸಸರೋವರ]]ದ ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಹಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ [[ಭಾರತ]]ದ [[ಅರುಣಾಚಲ ಪ್ರದೇಶ]] ಮತ್ತು [[ಅಸ್ಸಾಮ್]] ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿಯುವುದು. ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಮುಂದೆ [[ಬಾಂಗ್ಲಾದೇಶ]]ವನ್ನು ಪ್ರವೇಶಿಸುವ ಈ ಮಹಾನದಿ ಅಲ್ಲಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯಭಾಗದಲ್ಲಿ ಈ ನದಿಯು [[ಗಂಗಾ ನದಿ]]ಯನ್ನು ( ಬಾಂಗ್ಲಾದೇಶದಲ್ಲಿ ಗಂಗಾ ನದಿಗೆ ಪದ್ಮಾ ಎಂಬ ಹೆಸರು) ಕೂಡಿಕೊಳ್ಳುವುದು. ಈ ಸಂಗಮವು ಆ ಪ್ರದೇಶದಲ್ಲಿ ಭಾರೀ ವಿಸ್ತಾರದ [[ಮುಖಜಭೂಮಿ]]ಯನ್ನು ಸೃಷ್ಟಿಸಿದೆ.
"https://kn.wikipedia.org/wiki/ಬ್ರಹ್ಮಪುತ್ರ" ಇಂದ ಪಡೆಯಲ್ಪಟ್ಟಿದೆ