ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
== [[ಅಂಕುರ್]], ಚಲನಚಿತ್ರದ ನಿರ್ದೇಶನದಿಂದ ಅವರ, ಕಲಾ ಪ್ರೌಢಿಮೆಯ ಅಂಕುರಾರ್ಪಣೆಯಾಯಿತು ==
 
ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಅಂಕುರ್ ಚಿತ್ರದಿಂದ. ಅನಂತನಾಗ್, ಶಬ್ನ ಅಝ್ಮಿ, ಮತ್ತು ಸಾಧು ಮೆಹರ್ ನಟಿಸಿದ, ಈ ಹಿಂದಿ ಚಿತ್ರ, ಹೊಸಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು, ಭೂಮಾಲೀಕರ ಮತ್ತು ಅವರ ಜೀವನದಒಳನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಚಿತ್ರನಿರ್ಮಾಣಕಾರ್ಯದಲ್ಲಿ ಆತ್ಮ- ಸ್ಥೈರ್ಯವನ್ನು ತಂದುಕೊಟ್ಟ ಮೊದಲ ಚಿತ್ರ ಇದು. ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಕೆಲವು ಪ್ರಸಿದ್ಧ [[ಹಿಂದಿ]] ಚಿತ್ರಗಳು :, '''ಕಲಿಯುಗ್''' ,'''ಮಂಥನ್''' ಮಂಥನ್. [[೧೯೮೬]]ರಲ್ಲಿ ಭಾರತೀಯ ರೈಲ್ವೆಗೆ '''ಯಾತ್ರಾ''' ಎಂಬ ಧಾರಾವಾಹಿ ನಿರ್ದೇಶಿಸಿದರು.
 
೧೯೬೯ ರಲ್ಲಿ, ಭಾರತೀಯ ಹಿಂದಿಚಿತ್ರರಂಗದಲ್ಲಿ ಹೊಸ ಶೈಲಿ, ಹೊಸ ವಿನ್ಯಾಸಗಳು, ಹೊಸಆಶಯಗಳನ್ನು ಚಿತ್ರನಿರ್ಮಾಪಕರುಗಳು ಗುರುತಿಸಿ, ಅವುಗಳನ್ನು ಪರದೆಯಮೇಲೆ ತರಲು ಯತ್ನಿಸುತ್ತಿದ್ದರು. ಅನೇಕ ವಾರ್ತಾ-ಚಿತ್ರಗಳನ್ನೂ ತಯಾರಿಸಿದ ಅನುಭವಿ. [ಡಾಕ್ಯುಮೆಂಟರಿ] ೪ ದಶಕಗಳಕಾಲ ಹಿಂದೀ ಚಿತ್ರರಂಗದಲ್ಲಿ ಸೇವೆಮಾಡಿದ ಈ ದಿಗ್ದರ್ಶಕ, ಆರಿಸಿಕೊಂಡ ಕೆಲವು ಕಲಾವಿದರು, ಮುಂದೆ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಸ್ಮಿತಾಪಾಟೀಲ್, ನಾಸಿರುದ್ದೀನ್ ಶಾ, ಓಂಪುರಿ, ಕುಲ್ ಭೂಷನ್ ಖರಬಂದಾ. ಹೊಸ ಅಲೆಯ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಮಾದರಿಯಂತಿದ್ದ ಬೆನೆಗಲ್ ರವರು, ಒಬ್ಬ ಕಲಾತ್ಮಕ, ಜನಪ್ರಿಯ, ಮತ್ತು ನಿರ್ಮಾಪಕ ನಿರ್ದೇಶರೆಂದು ಹೆಸರುಮಾಡಿ, ಹಿಂದೀ- ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ ಕೆಲವೇ ಸಮಯದಲ್ಲಿ ತಮ್ಮ ಛಾಪನ್ನು ಚಿತ್ರರಂಗದಮೇಲೆ ಒತ್ತಿಬಿಟ್ಟರು ! ಮುಂದೆ 'ಚರಣದಾಸ್ ಚೋರ್,' ಎಂಬ ಎಂಬ ಮಕ್ಕಳ ಚಿತ್ರ ತಯಾರಿಸಿದರು. 'ನಿಶಾಂತ್', 'ಭೂಮಿಕ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್', ಮೆಗಾ ಟ್. ವಿ ಧಾರಾವಾಹಿ " ಯಾತ್ರಾ," ಮರೆಯಲಾರದ ಚಿತ್ರಗಳು. [[೧೯೮೮]]ರಲ್ಲಿ [[ಜವಾಹರಲಾಲ್ ನೆಹರು]] ಅವರ "ಡಿಸ್ಕವರಿ ಆಫ್ ಇಂಡಿಯಾ" ಪುಸ್ತಕವನ್ನು ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು. ಇದು, ಅತ್ಯಂತ ಯಶಸ್ವೀಪ್ರಯೋಗಗಳಲ್ಲೊಂದಾಗಿತ್ತು !
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ