ನಿಕೊಲಸ್ ಕೋಪರ್ನಿಕಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸಪುಟ
 
ಮಾಹಿತಿ
೧ ನೇ ಸಾಲು:
ಸೂರ್ಯನ ಸುತ್ತ ಗ್ರಹಗಳು ಚಲಿಸುತ್ತವೆಯೇ ಹೊರತು ಭೂಮಿಯ ಸುತ್ತ ಅಲ್ಲ. ಚಂದ್ರ ಭೂಮಿಯನ್ನು ಸುತ್ತುತ್ತದೆ, ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ, ಭೂಮಿ ಪರಿಭ್ರಮಿಸುವುದರಿಂದ ಸೂರ್ಯ ಭೂಮಿಯ ಸುತ್ತ ಪರಿಭ್ರಮಿಸಿದಂತೆ ಭಾಸವಾಗುತ್ತದೆ ಎಂದು ಜಗತ್ತಿಗೆ ಸಾರಿದ ವಿಜ್ಞಾನಿ ಕೋಪರ್ನಿಕಸ್. ಆತನ ದೀರ್ಘಕಾಲದ ಅಧ್ಯಯನದ ಫಲ ಆವಿಷ್ಕರಣೆಗಳಿಗೆ ಹೊಸ ದಾರಿಯನ್ನು ತೋರಿತು. ಕ್ರಿ.ಪೂ.೩ನೆಯ ಶತಮಾನದ ವೇಳೆಗೆ ಪೈಥಾಗೊರಾಸನು ಹಿರಾಕ್ಲೀಡನು ಭೂಮಿಯು ಸ್ಥಿರವಲ್ಲ ಸೂರ್ಯನ ಸುತ್ತ ಹಲವು ಗ್ರಹಗಳು ಸುತ್ತುತ್ತವೆ ಎಂದು ಹೇಳಿದ್ದರು.
ಕೋಪರ್ನಿಕಸ್ ೧೪೭೩ರ ಫೆಬ್ರವರಿ ೧೯ರಂದು ಪೋಲೆಂಡಿನ ತೋರನ್ ಎಂಬಲ್ಲಿ ವರ್ತಕನೊಬ್ಬನಿಗೆ ಮಗನಾಗಿ ಜನಿಸಿದರು. ಬಾಲ್ಯದಲ್ಲಿಯೆ ಅಸಾಧಾರಣ ಪ್ರತಿಭಾವಂತನೆನಿಸಿಕೊಂಡಿದ್ದರು. ಇವರು ಕ್ರಾಕೋ ವಿಶ್ವವಿದ್ಯಾನಿಲಯದಲ್ಲಿ ವೈದ್ಯರಾಗಿದ್ದರು. ಗಣಿತ ಹಾಗು ಖಗೋಳ ವಿಜ್ಞಾನದಲ್ಲಿ ಅಧ್ಯಯನ ನಡೆಸಿದರು.ಇವರು ೧೪೯೬ರಲ್ಲಿ ಬೊಲೋನ(ಇಟಲಿ)ದಲ್ಲಿ ಖಗೋಳ ವಿಜ್ಞಾನವನ್ನು ಅಭ್ಯಸಿಸಿದರು. ಇವರಿಗೆ ಧರ್ಮಶಾಸ್ತ್ರದಲ್ಲಿಯೂ ಪರಿಣಿತಿ ಇತ್ತು. ಪ್ರೋಯೆನ್ಬರ್ಗ್ ಎಂಬಲ್ಲಿ ಕ್ರೈಸ್ತ ಪಾದ್ರಿಯಾಗಿ ಆರಿಸಲ್ಪಟ್ಟರು. ೧೫೦೦ರಲ್ಲಿ ರೋಮಿಗೆ ಬಂದರು, ಅಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನವನ್ನು ಬೋಧಿಸತೊಡಗಿದರು. ಧರ್ಮಶಾಸ್ತ್ರದಲ್ಲಿ ಫೆರಾರ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ೧೫೦೪ರಲ್ಲಿ ತಾಯ್ನಾಡಿಗೆ ಹಿಂತಿರುಗಿ ಜನೋಪಯೋಗಿ ಕಾರ್ಯಗಳನ್ನು ಮಾಡುವುದರಲ್ಲಿ ನಿರತರಾದರು.
ಸೂರ್ಯ ವಿಶ್ವದ ಕೇಂದ್ರವಾಗಿದ್ದು ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂದು ಕೋಪರ್ನಿಕಸ್ ವಾದಿಸಿದ. ಆದರೆ ಅದು ಸಂಪ್ರದಾಯ ವಾದಿಗಳಿಗೆ ಇಷ್ಟವಾಗದೆ ಅವರ ಬೆಂಬಲ ದೊರೆಯಲಿಲ್ಲ. ಬದಲಾಗಿ ಅವರನ್ನು ಮೂರ್ಖರೆಂದು ಕರೆದರು. ಹೀಗಾಗಿ ನೇರವಾಗಿ ಹೇಳಲಾರದೆ ಗ್ರ