ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
→‎ಕಾರ್ಕಳದ ಇತಿಹಾಸ: ಬಾಹುಬಲಿಗೆ ಮಹಾಮಜ್ಜನ++++
೪೨ ನೇ ಸಾಲು:
ಕಾರ್ಕಳದ ರಾಜಮನೆತನ ಹೊಯ್ಸಳರ ಕಾಲದಲ್ಲಿ ಪ್ರಾಧಾನ್ಯ ಪಡೆದುಕೊಂಡಿತು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ವೈಭವವನ್ನು ಇನ್ನೂ ವಿಸ್ತರಿಸಿಕೊಂಡಿತು. ರಾಜ್ಯವು ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಈಗಿನ ಕಾರ್ಕಳ ತಾಲೂಕನ್ನೊಳಗೊಂಡು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ರಾಜಮನೆತನವು ಬಹಳ ಶ್ರೀಮಂತವಾಗಿದ್ದು ಸಾಕಷ್ಟು ದೊಡ್ಡದಾದ ಸೈನ್ಯವನ್ನು ಹೊಂದಿತ್ತು.
ಭೈರರಸರ ಕಾಲದಲ್ಲಿ ಕಾರ್ಕಳವು ಜೈನಕ್ಷೇತ್ರವಾಗಿ ಮಾರ್ಪಟ್ಟಿತು. ಅರಸರು ಸಾಕಷ್ಟು ಬಸದಿಗಳನ್ನೂ ಕೆರೆಗಳನ್ನೂ ಕಟ್ಟಿಸಿದರು. ಅರಸರು ಕಟ್ಟಿಸಿದ ಬಸದಿಗಳು ಸುಮಾರು ೧೮ರಷ್ಟಿವೆ.
==ಬಾಹುಬಲಿಗೆ ಮಹಾಮಜ್ಜನ==
:ಐದು ಅಡಿ ಎತ್ತರದ ವಿಶಾಲ ಕರಿಕಲ್ಲು ಬಂಡೆಯ ಮೇಲೆ 180 ಮೆಟ್ಟಿಲುಗಳ ತುತ್ತ ತುದಿಯಲ್ಲಿ 42 ಅಡಿ ಆಳೆತ್ತರದಲಿ ನಿಂತಿರುವ ಬಾಹುಬಲಿಯ ಮಹಾಮಸ್ತಾಭಿಷೇಕಕ್ಕೆ ಕಾರ್ಕಳ ಸಜ್ಜಾಗಿ ನಿಂತಿದೆ.
:ತಪಸ್ಸು ಮಾಡುತ್ತಿರುವಂತೆ ಗೋಚರಿಸುವ ಈ ಮೂರ್ತಿಯದ್ದು ‘ಕಾಯೋತ್ಸರ್ಗ’ ಅಥವಾ ‘ಪ್ರತಿಮಾ ಯೋಗ ಭಂಗಿ’ ಎನ್ನಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಇದೇ 21-1-2015ರಿಂದ 31-1-2015ರವರೆಗೆ ಕಾರ್ಕಳ ಸಾಕ್ಷಿಯಾಗಲಿದೆ. ಈ ಮೊದಲು 2002ರಲ್ಲಿ ಮಹಾ ಮಜ್ಜನ ನಡೆದಿತ್ತು. 12 ವರ್ಷದ ಲೆಕ್ಕದಲ್ಲಿ ನೋಡಿದರೆ ಕಳೆದ ವರ್ಷವೇ ಮಸ್ತಕಾಭಿಷೇಕ ನಡೆಯಬೇಕಿತ್ತು. ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲಾಯಿತು.
==ಹನ್ನೆರಡು ವರ್ಷದ ನಿಯಮ==
:ಬಾಹುಬಲಿ 12 ವರ್ಷಗಳ ಕಾಲ ತಪಸ್ಸು ಮಾಡಿದ ಕಾರಣ ಅಷ್ಟೇ ವರ್ಷಕ್ಕೆ ಮಸ್ತಕಾಭಿಷೇಕ ಮಾಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಒಂದು ಹೊಸ ಮನೆಯನ್ನು ಕಟ್ಟಿ ಪೂಜಾ ಕೈಂಕರ್ಯಗಳನ್ನು ಪೂರೈಸಿ ಗೃಹ ಪ್ರವೇಶ ಮಾಡಿದ ನಂತರ ಮತ್ತೆ 12 ವರ್ಷದ ನಂತರ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಅದೇ ರೀತಿ ಇಲ್ಲಿಯೂ 12 ವರ್ಷಗಳಿಗೊಮ್ಮೆ ಮಹಾ ಮಜ್ಜನ, ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ ಎನ್ನಲಾಗುತ್ತದೆ.
 
:ಬೃಹತ್‌ ಗಾತ್ರದ ಮೂರ್ತಿಗೆ ಪ್ರತಿ ನಿತ್ಯವೂ ಅಭಿಷೇಕ ಮಾಡುವುದು ಅಸಾಧ್ಯ ಮತ್ತು ಅತಿ ವೆಚ್ಚದಾಯಕವಾದ್ದರಿಂದ 12 ವರ್ಷಗಳಿಗೊಮ್ಮೆ ಅಭಿಷೇಕ ಮಾಡಲಾಗುತ್ತದೆ. ಆ ನೆಪದಲ್ಲಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ.
ಈ ಬಾರಿ ಸರ್ಕಾರ ₨15 ಕೋಟಿ ಬಿಡುಗಡೆ ಮಾಡಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ. ಮಹಾಮಸ್ತಕಾಭಿಷೇಕ ಮಾಡಲು ಬೃಹತ್‌ ಅಟ್ಟಣಿಗೆಯನ್ನು ನಿರ್ಮಾಣ ಮಾಡಲಾಗಿದೆ.
 
:ಸುಮಾರು 500 ಜನರು ಇದರಲ್ಲಿ ನಿಲ್ಲಬಹುದು. ನೀರು, ಎಳನೀರು, ಹಾಲು, ಕಬ್ಬಿನ ಹಾಲು, ಅಕ್ಕಿಹಿಟ್ಟು, ಅರಿಶಿಣ, ಅಷ್ಟಗಂಧ ಮತ್ತು ವನಸ್ಪತಿಗಳಿಂದ ತಯಾರಿಸಿದ ಕಷಾಯದಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲ ದಿನ 108 ಕಲಶಗಳನ್ನು ಇಟ್ಟರೆ ಕೊನೆಯ ದಿನ 1008 ಕಲಶಗಳನ್ನಿಡಲಾಗುತ್ತದೆ. 31ರಂದು ಪೂಜಾ ಕೈಂಕರ್ಯದ ವಿಸರ್ಜನೆ ಮತ್ತು ಮಹಾಪ್ರಸಾದ ವಿತರಣೆ ನಡೆಯುತ್ತದೆ.(ಪ್ರಜಾವಾಣಿ-ಎಂ.ನವೀನ್‌ ಕುಮಾರ್‌-Tue, 13/01/2015-ಆಧಾರ)
 
==ಸಂಸ್ಕೃತಿ==
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ