ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ -ಸರಿಪಡಿಸಿದೆ
೧ ನೇ ಸಾಲು:
{{Infobox ಭಾರತದ ಭೂಪಟ |
native_name=ಕಾರ್ಕಳ |
skyline=Karkala|File:Gomateshwara gomateshwara-fullStatue, Karkala.jpg|
skyline_caption=ಗೋಮ್ಮಟೇಶ್ವರ ಮೂತಿ೯, ಕಾರ್ಕಳ|
latd = 13.2|
೨೪ ನೇ ಸಾಲು:
website_caption = Karkala Municipal Office|
}}
Karkala gomateshwara-full.jpg
 
'''ಕಾರ್ಕಳ''' [[ಉಡುಪಿ]] ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸುಮಾರು ೩೬೦ ಕಿ. ಮೀ ದೂರದಲ್ಲಿದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾಲಕ್ರಮೇಣ ಇಲ್ಲಿರುವ ಕರಿ ಬಂಡೆಗಳಿಂದ "ಕರಿಕಲ್ಲು" ಎಂದು ಪ್ರಸಿದ್ಧವಾಗಿತ್ತು. ಮುಂದೆ 'ಕರಿಕಲ್ಲು' ತುಳುವಿನಲ್ಲಿ 'ಕಾರ್ಲ'ವೆಂದು ಮಾರ್ಪಟ್ಟು ಕನ್ನಡದಲ್ಲಿ 'ಕಾರ್ಕಳ' ಎಂದು ಹೆಸರಾಗಿದೆ. ೪೨ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳವು ಪ್ರವಾಸಿ ಸ್ಥಳವಾಗಿ ಛಾಪು ಮೂಡಿಸಿದೆ.
 
೫೦ ನೇ ಸಾಲು:
 
===ಆಚರಣೆಗಳು===
ಹುಲಿವೇಷವು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದ್ದು ದಸರಾ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಸಮಯದಲ್ಲಿ ಇಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಹುಪ್ರಮುಖ ಆಚರಣೆಯಾದಂತಹ ಭೂತ ಕೋಲ-ನೇಮಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಕಂಬಳ(ಎಮ್ಮೆಗಳನ್ನು ಓಡಿಸುವ ಸ್ಪರ್ಧೆ), ಕೋರಿಕಟ್ಟ(ಕೋರಿದಟ್ಟ)(ಕೋಳಿಗಳ ಕುಸ್ತಿ), ನಾಗಾರಾಧನೆ ಇವು ತುಳುವರು ಆಚರಿಸುವ ಆಚರಣೆಗಳಲ್ಲಿ ಪ್ರಮುಖವಾದವು.ಕೋರಿಕ
ಶ್ರೀಕೃಷ್ಣಜನ್ಮಾಷ್ಟಮಿ, ನವರಾತ್ರಿ, ದೀಪಾವಳಿ, ಯುಗಾದಿ, ಮಹಾಶಿವರಾತ್ರಿ ಮತ್ತು ನಾಗಪಂಚಮಿ ಹಬ್ಬಗಳನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ಇದಲ್ಲದೆ ಪಡುತಿರುಪತಿ ವೆಂಕಟರಮಣ ದೇವಳದ ಲಕ್ಷದೀಪೋತ್ಸವ, ರಥೋತ್ಸವ, ಅನಂತಪದ್ಮನಾಭ ದೇವರ ರಥೋತ್ಸವ, ಮಹಾಲಿಂಗೇಶ್ವರ ದೇವರ ಶಿವರಾತ್ರಿ ಮಹೋತ್ಸವ, ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವರ ರಥೋತ್ಸವ, ಹಿರ್ಗಾನ ಶ್ರೀಕುಂದೇಶ್ವರ ಜಾತ್ರೆ ನಡೆಯುತ್ತದೆ.
ಅತ್ತೂರು ಇಗರ್ಜಿಯಲ್ಲಿ ಜನವರಿ ತಿಂಗಳ ಕೊನೆಯ ವಾರದಲ್ಲಿ 'ಸಾಂತ್ ಮಾರಿ' ಎಂಬ ಉತ್ಸವವನ್ನು ಆಚರಿಸುತ್ತಾರೆ. ಈ ಉತ್ಸವವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರ ದೊಡ್ಡ ಉತ್ಸವವಾಗಿದೆ.
 
==ಸಾರಿಗೆ==
ಕಾರ್ಕಳ ಪಟ್ಟಣವು ರಾಜ್ಯದ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಅಂತೆಯೇ ಕಾರ್ಕಳವು ದಕ್ಷಿಣಕನ್ನಡ-ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ಹಲವು ರಾಜ್ಯ ಹೆದ್ದಾರಿಗಳಿಂದ ಸಂಪರ್ಕ ಕಲ್ಪಿತವಾಗಿದೆ. ಮಂಗಳೂರಿನಿಂದ ಸೋಲಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ ೧೩ ಕಾರ್ಕಳದ ಮೂಲಕ ಹಾದುಹೋಗಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರಣದಿಂದ ರೈಲು ಸಂಪರ್ಕವು ಕಾರ್ಕಳದಲ್ಲಿ ಇಲ್ಲ. ಆದರೆ ಭಾರತ ಸರ್ಕಾರದ ರೈಲ್ವೇ ಸಚಿವಾಲಯವು ಕಾರ್ಕಳದ ಮೂಲಕ ಹಾದುಹೋಗುಲಿರುವ ಎರಡು ರೈಲ್ವೇ ಹಾದಿಗಳನ್ನು ಗುರುತಿಸಿದೆ. ಹತ್ತಿರದ ರೈಲು ನಿಲ್ದಾಣವು ಉಡುಪಿಯಲ್ಲಿದ್ದು ಸುಮಾರು ೪೦ ಕಿಮೀ ದೂರದಲ್ಲಿದೆ.
 
==ಸುತ್ತಮುತ್ತಲಿನ ಪ್ರವಾಸಿ ತಾಣಗಳು==
ಕಾರ್ಕಳವು ಪಶ್ಚಿಮ ಘಟ್ಟದ ಬುಡದಲ್ಲಿದ್ದು ಘಟ್ಟದ ಮೇಲಿನ ಮತ್ತು ಕೆಳಗಿನ ಊರುಗಳಿಗೆ ಸಂಪರ್ಕ ಕಲ್ಪಿಸುವ ಕಾರಣದಿಂದ ನೋಡಬೇಕಾದ ಪ್ರವಾಸಿ ತಾಣಗಳು ಬಹಳಷ್ಟಿವೆ.
* [[ಉಡುಪಿ]]: ಉಡುಪಿ ಕ್ಷೇತ್ರವು ಶ್ರೀಕೃಷ್ಣನ ಪವಿತ್ರಕ್ಷೇತ್ರವಾಗಿದ್ದು ಮಧ್ವಾಚಾರ್ಯರ ತಪೋಭೂಮಿಯಾಗಿದೆ. ಶ್ರೀಕೃಷ್ಣಜನ್ಮಾಷ್ಟಮಿ, ಪರ್ಯಾಯ- ಇವುಗಳು ಸಾಕಷ್ಟು ಜನರನ್ನು ತನ್ನತ್ತ ಸೆಳೆಯುವ ಉಡುಪಿಯ ಧಾರ್ಮಿಕ ಕಾರ್ಯಕ್ರಮಗಳು. ಉಡುಪಿ ತನ್ನ ಸಮುದ್ರತೀರದಿಂದಲೂ ಗಮನ ಸೆಳೆಯುತ್ತದೆ.
* [[ಕಾಪು]]: ಕಾಪು ಉಡುಪಿಯಿಂದ ೧೫ಕಿಮೀ ದೂರದಲ್ಲಿರುವ ತೀರ. ತನ್ನ ಸಮುದ್ರತೀರದ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.
* [[ಮಂಗಳೂರು]]: ಮಂಗಳೂರು ಕಾರ್ಕಳದಿಂದ ೬೦ ಕಿಮೀ ದೂರದಲ್ಲಿದ್ದು ಜಿಲ್ಲಾಕೇಂದ್ರವಾಗಿದೆ. ಕರಾವಳಿ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿರುವ ಮಂಗಳೂರು ತನ್ನ ಸಮುದ್ರ ತೀರ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ, NITK, ಪಣಂಬೂರು, ಉಳ್ಳಾಲ ಸಮುದ್ರ ತೀರಗಳು ಕಣ್ಮನ ಸೆಳೆಯುತ್ತವೆ. ಕದ್ರಿ, ಕುದ್ರೋಳಿಯ ದೇವಾಲಯಗಳು ಮಂಗಳೂರನ್ನು ಧಾರ್ಮಿಕವಾಗಿಯೂ ಪ್ರಮುಖವಾಗಿಸಿವೆ.
 
{{ಉಡುಪಿಯ ತಾಲ್ಲೂಕುಗಳು}}
[[ವರ್ಗ:ಕಾರ್ಕಳ ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಉಡಿಪಿ ಜಿಲ್ಲೆ]]
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ