ಕಾಡು ಪಾಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ.
==ತುಂಬಾ ಆಳಿಸಿ ಸ್ವಭಾವದವು==
[[File:Slender Loris.jpg]]
ಮೂಲತಃ ಶಾಂತ ಸ್ವಭಾವದ ಕಾಡು ಪಾಪ ಅಪೂರ್ವ ಲಕ್ಷಣಗಳನ್ನು ಹೊಂದಿದೆ. ದುಂಡು ತಲೆ, ಗಿಡ್ಡಮೂತಿ. ಉದ್ದನೆಯ ಮೂಗು, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಂದು ಬಣ್ಣದ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲು ಚಿಕ್ಕವು ಹಾಗೂ ಬಾಲವಿಲ್ಲ. ಇದರ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು, ಮನುಷ್ಯನ ಹೋಲಿಕೆಯನ್ನು ಕಾಡು ಪಾಪನಲ್ಲಿ ಕಾಣಬಹುದು. ಇವುಗಳಲ್ಲಿ ಕಂದು ಮತ್ತು ಕಿತ್ತಳೆ ಬಣ್ಣದ ಎರಡು ಜಾತಿಗಳಿವೆ. ಮರದ ಮೇಲೆಯೇ ತನ್ನ ಬಹುತೇಕ ಜೀವನವನ್ನು ಕಳೆಯುತ್ತದೆ. ಆದರೆ ಸ್ವಭಾವದಲ್ಲಿ ತುಂಬಾ ಆಳಸಿ. ಮಂಗನ ಚುರುಕುತನವಾಗಲಿ, ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ಸಾಮರ್ಥ್ಯ ಕಾಡುಪಾಪಕ್ಕೆ ಇಲ್ಲ. ಆದರೆ ತನ್ನ ಉದ್ದನೆಯ ತೋಳಿನಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಸಾಗಬಲ್ಲದು. ನಿಶಾಚರಿ ಜೀವಿಯಾಗಿದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ.
 
==ಕರ್ನಾಟಕದಲ್ಲೂ ಕಂಡುಬರುತ್ತದೆ==
ಕಾಡುಪಾಪದ ಸಂತತಿ ಶ್ರೀಲಂಕಾ, ಜಾವಾ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡುಬರುತ್ತವೆ. ಅಲ್ಲಿಯೇ ಇದರ ಮೂಲ ನೆಲೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಾಡುಪಾಪ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದೇ ವಿಶೇಷ. ನೀಲಗಿರಿ, ಆಲದ ಮರ, ಅರಳಿಮರ, ಉಣಸೇ ಹಣ್ಣಿನ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಳೆ ಕಾಡು ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ ಹಕ್ಕಿಗಳ ಮೊಟ್ಟೆಗಳು ಹೀಗೆ ಸುಲಭದಲ್ಲಿ ದೊರೆಯುವುದನ್ನೆಲ್ಲಾ ತಿನ್ನುತ್ತವೆ.
"https://kn.wikipedia.org/wiki/ಕಾಡು_ಪಾಪ" ಇಂದ ಪಡೆಯಲ್ಪಟ್ಟಿದೆ