ಅಳತೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಅಳತೆಗಳು:
ನಿತ್ಯ ಜೀವನದಲ್ಲಿ ತೂಕ ಮತ್ತು ಅಳತೆಗಳು ಪ್ರಮುಖ ಪಾತ್ರವಹಿಸುತ್ತವೆ. ಹೂ ಮಾರುವಾಕೆ ಒಂದು ಮೊಳ ಅಥವಾ ಮಾರಿಗೆ ಇಷ್ಟು ರೂಪಾಯಿ ಎಂದು ಹೇಳುತ್ತಾಳೆ. ಮೊಳ, ಮಾರು, ಹಿಡಿ, ಬೊಗಸೆ, ಹೊರೆ ಇತ್ಯಾದಿಗಳು ಅಳತೆಯ ಬೇರೆ ಬೇರೆ ಪ್ರಮಾಣಗಳು.
 
ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಮನುಷ್ಯ ಎಂದು ತೊಡಗಿದನೋ ಅಂದಿನಿಂದಲೇ ತೂಗುವುದು ಮತ್ತು ಅಳೆಯುವುದು ಪ್ರಾರಂಭವಾಯಿತು.
 
ಬೇರೆ ಬೇರೆ ನಾಗರೀಕತೆಗಳಲ್ಲಿ ವಿವಿಧ ರೀತಿಯ ತೂಕ ಮತ್ತು ಅಳತೆ ಪದ್ಧತಿಗಳಿದ್ದವು. ಈಜಿಪ್ಟ್ ಮತ್ತು ಮೆಸಪಟೋಮಿಯಾಗಳಲ್ಲಿ ಉದ್ದವನ್ನು ಮೊಳದ ಆಧಾರದ ಮೇಲೆ ಅಳೆಯುತ್ತಿದ್ದರು. ನ್ಯಾಯ ಬದ್ಧವಾದ ಉದ್ದವನ್ನು ರೂಪಿಸಿ ಲೋಹದ ಸಲಾಕೆಯನ್ನು ಮಾಡುತ್ತಿದ್ದರು. ಅದನ್ನು ದೇವಾಲಯ ಅಥವಾ ಅರಮನೆಯಲ್ಲಿಟ್ಟು ಅದರ ಸಮಾನ ಉದ್ದದ ಸಲಾಕೆಗಳನ್ನು ಜನರ ಉಪಯೋಗಕ್ಕೆ ತಯಾರಿಸುತ್ತಿದ್ದರು. ೧೨೮ ಗಗುಲಗಂಜಿಗಳು ಒಂದು ತೊಲ ಅಥವಾ ೧೧.೬೬೪ ಗ್ರಾಂ. ಎಂದು ಲೆಕ್ಕ.
 
ಕ್ರಮೇಣ ವ್ಯಾಪಾರ ಸಂಬಂಧ ವಿವಿಧ ದೇಶಗಳಲ್ಲಿ ಹಬ್ಬಿದ್ದಾಗ ಏಕರೂಪದ ತೂಕ ಮತ್ತು ಅಳತೆಯ ಅಗತ್ಯ ಉಂಟಾಯಿತು. ೧೩ನೇ ಶತಮಾನದ ವೇಳೆಗೆ ಇಂಗ್ಲೆಂಡಿನಲ್ಲಿ ನ್ಯಾಯಬದ್ಧ ಪ್ರಮಾಣಗಳು ಬಳಕೆಗೆ ಬಂದವು. ಕ್ರಮೇಣ ಅದೇ ಅಳತೆಗಳು ವಿಶ್ವದೆಲ್ಲೆಡೆ ಹಬ್ಬಿದವು.
 
೧೭೯೫ರಲ್ಲಿ ಫ್ರಾನ್ಸ್ ನಲ್ಲಿ ಅಳತೆ ಮತ್ತು ತೂಕದ ದಶಮಾಂಶ ಪದ್ಧತೆ ಜಾರಿಗೆ ಬಂದಿತು. ಭೂಮಿಯ ಪರಿಧಿಯ ಉದ್ದದಲ್ಲಿ ೪೦ ಲಕ್ಷದಲ್ಲೊಂದು ಪಾಲು ಉದ್ದವನ್ನು ೧ ಮೀಟರ್ ಎಂದು ಕರೆಯಲಾಯಿತು. ತೂಕದ ಅಳತೆ ಕಿಲೋ. ಗ್ರಾಂ. ಆಯಿತು.
 
೧೮೭೦ರಲ್ಲಿ ತೂಕ ಮತ್ತು ಅಳತೆಯ ಅಂತರಾಷ್ಟ್ರೀಯ ಸಮ್ಮೇಳನವೊಂದು ನಡೆದು ಮೀಟರ್ ಮತ್ತು ಕಿಲೋ. ಗ್ರಾಂ. ಪ್ರಮಾಣಗಳನ್ನು ಕರಾರುವಕ್ಕಾಗಿ ನಿರೂಪಿಸಿ ಆ ಪದ್ಧತಿ ಅನುಸರಿಸುವ ಎಲ್ಲಾ ದೇಸ್ಜಹಗಳಿಗೂ ಮಾದರಿಗಳನ್ನು ಹಂಚುವ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಅದರ ಫಲವಾಗಿ ಜನಿಸಿದ ಸಂಸ್ಥೆಯು "ಇಂಟರ್ ನ್ಯಾಷನಲ್ ಬ್ಯೂರೋ ಆಫ್ ವೇಟ್ಸ್ ಅಂಡ್ ಮೇಷರ್ಸ್"
"https://kn.wikipedia.org/wiki/ಅಳತೆಗಳು" ಇಂದ ಪಡೆಯಲ್ಪಟ್ಟಿದೆ