ಘಂಟಸಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಾಲ್ಮೀಕಿ - ಎಂ.ಡಿ
ಪತ್ರಿಕಾ ಮಾಹಿತಿ
೧ ನೇ ಸಾಲು:
[[ಜಗದೇಕವೀರನ ಕಥೆ]] - ಕನ್ನಡ ಚಲನಚಿತ್ರದ ಸುಮಧುರ ಗೀತೆ '''ಶಿವಶಂಕರಿ,ಶಿವಾನಂದಲಹರಿ'''ಯನ್ನು ಕೇಳಿ ಆನಂದಿಸದ ಕನ್ನಡಿಗನಿಲ್ಲ.ಈ ಗೀತೆಗೆ ಜೀವ ತುಂಬಿದ ಅಮರ ಗಾಯಕ ವೆಂಕಟರಾವ್ ಘಂಟಸಾಲ.'''ಘಂಟಸಾಲ''' ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರೊಲ್ಲಬ್ಬರುಗಾಯಕರಲ್ಲೊಬ್ಬರು.
 
ಇವರು ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
== ಹಿನ್ನೆಲೆ ==
ಘಂಟಸಾಲ ಜನಿಸಿದ್ದು [[ಡಿಸೆಂಬರ್ ೪]],[[೧೯೨೨]]ರಲ್ಲಿ ,[[ಆಂಧ್ರಪ್ರದೇಶ]]ದ ಕೃಷ್ಣಾಜಿಲ್ಲೆಯ ಚೌಟಿಪಾಲ್ ಎಂಬ ಗ್ರಾಮದಲ್ಲಿ.ತಂದೆ ಸೂರ್ಯನಾರಾಯಣರಾವ್ ಕೂಡಾ ಪ್ರಸಿದ್ಧ ಗಾಯಕರು. ತಮ್ಮ ೧೨ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ ಘಂಟಸಾಲ ಬೆಳೆದಿದ್ದು ಚಿಕ್ಕಪ್ಪ ರಾಮಯ್ಯನ ಆಶ್ರಯದಲ್ಲಿ.[[ಸಂಗೀತ]]ದ ಆಸಕ್ತಿ ಇವರನ್ನು ಕಲಿಕೆಗೆ ಅವಕಾಶವಿಲ್ಲದ ಚಿಕ್ಕಪ್ಪನ ಮನೆಯಿಂದ ವಿಜಯನಗರಿಗೆ ಓಡಿಹೋಗುವಂತೆ ಪ್ರೇರೇಪಿಸಿತು.ಅಲ್ಲಿ ಸಂಗೀತಶಾಲೆ ಸೇರಿ ,ಕಠಿಣ ಪರಿಶ್ರಮ ನಡೆಸಿ,’ಸಂಗೀತ ವಿದ್ವಾನ್’ ಪದವಿ ಗಳಿಸಿದರು.ಆ ವೇಳೆಗೆ ದೇಶಾದ್ಯಂತ ಹಬ್ಬಿದ್ದ "[[ಕ್ವಿಟ್ ಇಂಡಿಯಾ ಚಳಿವಳಿ]]"ಗೆ ಸೇರಿ ,೧೮ ತಿಂಗಳ ಸೆರೆಮನೆವಾಸ ಅನುಭವಿಸಿದರು.ಸೆರೆಮನೆಯಲ್ಲಿ ಪರಿಚಿತರಾದ '''ಸಮುದ್ರಾಲಾ'''ರಿಂದ ಚಿತ್ರರಂಗದತ್ತ ಒಲವು ಬೆಳೆಯಿತು.ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತಾದರೂ,[[ಹೆಚ್‌ಎಮ್‌ವಿ]]ಕಂಪೆನಿ ಅವರ ಧ್ವನಿ ಸರಿ ಇಲ್ಲವೆಂದು ತಿರಸ್ಕರಿಸಿತು.ನಂತರ ಘಂಟಸಾಲ ಅವರು ಪ್ರಭಾತ್ ಫಿಲಂಸ್‌ನ [[ತೆಲುಗು]] ಚಿತ್ರ ’ಸೀತಾರಾಮ ಜನನಂ’ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದರು.[[ಭಾಗ್ಯಚಕ್ರ]] ಚಿತ್ರದ "ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ" ಇವರು ಹಾಡಿದ ಮೊದಲ [[ಕನ್ನಡ]] ಚಿತ್ರಗೀತೆ.
 
==ಘಂಟಸಾಲ ಸಂಗೀತ ನಿರ್ದೇಶನದ ಚಲನಚಿತ್ರಗಳು==
ಇವರು ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
 
* [[ವೀರಕೇಸರಿ]] (೧೯೬೩)
Line ೧೬ ⟶ ೧೯:
* ಏನೊ ಎಂತೋ ಝಂ ಎಂದಿತು ಮನವು -[[ಅಮರಶಿಲ್ಪಿ ಜಕಣಾಚಾರಿ]] <BR>
* ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ -[[ಮಾಯಾಬಜಾರ್]] <BR>
* ಹನುಮನ ಪ್ರಾಣ... - [[ಶ್ರೀ ರಾಮಾಂಜನೇಯ ಯುದ್ಧ]]
 
ಕನ್ನಡದಲ್ಲಿ ಒಟ್ಟಾರೆ ೬೦ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡ,ತೆಲುಗು ಮುಂತಾದ -೮ ಭಾಷೆಗಳಲ್ಲಿ ಒಟ್ಟು ೧೦,೦೦೦ ಚಿತ್ರಗೀತೆಗಳನ್ನು ಹಾಡಿ,೮೭ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಭಕ್ತಿಗೀತೆಗಳಿಗೂ ಪ್ರಸಿದ್ಧರಾದ ಇವರ [[ಭಗವದ್ಗೀತೆ]] ಮತ್ತು [[ವೆಂಕಟೇಶ್ವರ ಸುಪ್ರಭಾತ]]ಗಳು ಇಂದಿಗೂ ಜನಪ್ರಿಯವಾಗಿವೆ.
 
== ಪ್ರಶಸ್ತಿ /ಪುರಸ್ಕಾರ ==
* [[ಭಾರತ]] ಸರ್ಕಾರದ ಪದ್ಮಶ್ರೀ ಪ್ರಶಸ್ತಿ - ೧೯೭೧.
* [[ತಿರುಪತಿ]] ದೇವಸ್ಥಾನದ ಮೊದಲ '''ಆಸ್ಥಾನ ವಿದ್ವಾಂಸ''' ಎಂಬ ಹೆಗ್ಗಳಿಕೆ.
 
ಘಂಟಸಾಲ ಅವರು [[ಫೆಬ್ರುವರಿ ೧೧]] ,[[೧೯೭೪]]ರಲ್ಲಿ ಮರಣ ಹೊಂದಿದರು.
<BR>
{{ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು}}
"https://kn.wikipedia.org/wiki/ಘಂಟಸಾಲ" ಇಂದ ಪಡೆಯಲ್ಪಟ್ಟಿದೆ