ಬಿಸಿನೀರಿನ ಚಿಲುಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 45 interwiki links, now provided by Wikidata on d:q177380 (translate me)
೪ ನೇ ಸಾಲು:
==ಬುಗ್ಗೆಯ ಬಿಸಿನೀರು==
[[File:HotSpring 8344.jpg|thumb|ಲಾಸೆನ್ ರಾಷ್ಟ್ರೀಯ ಉದ್ಯಾನದಲ್ಲಿ ಬಿಸಿನೀರಿನ ಬುಗ್ಗೆ]]
ಸಾಮಾನ್ಯವಾಗಿ ಬಿಸಿನೀರಿನ ಬುಗ್ಗೆಯ ನೀರು ತನ್ನ ಶಾಖವನ್ನು ಭೂಗರ್ಭದಲ್ಲಿನ ಶಿಲೆಗಳಿಂದ ಪಡೆದುಕೊಳ್ಳುತ್ತದೆ. ಭೂಮಿಯ ಆಳಕ್ಕೆ ಹೋದಂತೆಲ್ಲ ಒಳಗಿನ ಶಿಲೆಗಳ ತಾಪಮಾನವು ಹೆಚ್ಚುತ್ತಾ ಹೋಗುತ್ತದೆ. ನೀರು ಇಲ್ಲಿ ಕೆಳಕ್ಕೆ ಇಳಿದಂತೆ ಅಲ್ಲಿನ ಶಿಲೆಗಳ ಸಂಪರ್ಕದಿಂದಾಗಿ ಅದರ ಶಾಖವು ಹೆಚ್ಚುತ್ತದೆ. ಪೃಥ್ವಿಯ [[ಜ್ವಾಲಾಮುಖಿ]]ರಹಿತ ಪ್ರದೇಶಗಳಲ್ಲಿ ಈ ವಿಧಾನದಿಂದಾಗಿ ಬುಗ್ಗೆಯ ನೀರು ಬಿಸಿಯಾಗುತ್ತದೆ. ಇನ್ನು ಜ್ವಾಲಾಮುಖಿಯುಳ್ಳ ಪ್ರದೇಶಗಳಲ್ಲಿ ನೀರು ಅಲ್ಲಿನ ಕರಗಿರುವ ಶಿಲೆಗಳ (ಮ್ಯಾಗ್ಮಾ) ಸಂಪರ್ಕದಿಂದಾಗಿ ಅತಿಯಾಗಿ ಬಿಸಿಯಾಗುವುದು. ಇಂತಹ ಸಂದರ್ಭಗಳಲ್ಲಿ ನೀರು ಕುದಿಯುವ ತಾಪಮಾನಕ್ಕಿಂತ ಹೆಚ್ಚು ಶಾಖವನ್ನು ಹೊಂದಿ ಬಹ್ವಂಶ [[ಆವಿ]]ಯಾಗಿ ಪರಿವರ್ತಿತವಾಗುವುದು. ಇಂತಹ ನೀರು ಅತೀವ ಒತ್ತಡವನ್ನು ಸಹ ಒಳಗೊಂಡಿದ್ದು ಭೂಪದರವನ್ನು ಭೇದಿಸಿ ಬಲು ಎತ್ತರದವರಗೆ [[ಕಾರಂಜಿ]]ಯಾಗಿ ಚಿಮ್ಮುತ್ತದೆ. ಇಂತಹ ಬುಗ್ಗೆಗಳಲ್ಲಿ [[ಗೀಸರ್]], ಫ್ಯುಮರೋಲ್, ಮಡ್ ಫಾರ್ಮ್ ಎಂಬ ಹಲವು ವಿಧಗಳಿವೆ. ಇಂತಹ ಬುಗ್ಗೆಗಳ ನೀರು ಅತಿ ಬಿಸಿಯಾಗಿದ್ದು ಇದರ ಸಂಪರ್ಕದಿಂದಾಗಿ ಹಲವರು ತೀವ್ರ ಸುಟ್ಟಗಾಯಗಳನ್ನು ಅನುಭವಿಸಿದ್ದಿದೆ.
 
ಸಣ್ಣ ಪ್ರಮಾಣದ ಒಸರುವಿಕೆಯಿಂದ ಹಿಡಿದು ದೊಡ್ಡ ಬಿಸಿನೀರಿನ ನದಿಗಳ ಪ್ರಮಾಣದವರೆಗೆ ಬಿಸಿನೀರಿನ ಬುಗ್ಗೆಯು ನೀರನ್ನು ಹೊರಚೆಲ್ಲುವುದು. ಪ್ರತಿ ಸೆಕೆಂಡಿಗೆ ಒಂದು ಲೀಟರ್‌ಗಿಂತ ಹೆಚ್ಚಿನ ಬಿಸಿನೀರನ್ನು ಹೊರಚಿಮ್ಮುವ ಬುಗ್ಗೆಗಳನ್ನು ಗಣನೀಯವೆಂದು ಪರಿಗಣಿಸಲಾಗುತ್ತದೆ.
"https://kn.wikipedia.org/wiki/ಬಿಸಿನೀರಿನ_ಚಿಲುಮೆ" ಇಂದ ಪಡೆಯಲ್ಪಟ್ಟಿದೆ