ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
=='''ಸಾಹಿತ್ಯ'''==
 
ಸಂಶೋಧನೆ ಎಂಬುದು ಅನ್ವೇಷಣಾ ರೂಪದ ಬೌದ್ಧಿಕ ಕ್ರಿಯೆ. ಇದೊಂದು ಪರಿಶ್ರಮದ ಕ್ಷೇತ್ರ. ನಮ್ಮ ಜೀವನ ವಿಧಾನ, ಆಲೋಚನಾ ಪದ್ದತಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಸಂಭವಿಸಲು ನಮ್ಮ ಸಾಂಸ್ಕøತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಆಂಗ್ಲರ ಪ್ರವೇಶಗಳು ಚರಿತ್ರಾರ್ಹ ಘಟನೆಗಳಾಗಿವೆ. ಕೃಷಿ ಸಂಸ್ಕøತಿಯ ಆರ್ಯರು, ಯಂತ್ರ ಸಂಸ್ಕøತಿಯ ಆಂಗ್ಲರು ನಮ್ಮ ಭೌತಿಕ ಮತ್ತು ಬೌದ್ಧಿಕ ಬದುಕಿನಲ್ಲಿ ಹೊಸ ಹೊಸ ಬದಲಾವಣೆಗಳನ್ನು ರೂಢಿಸಿದರು. ನಮ್ಮ ಹಳೆಯ ಜ್ಞಾನ ಶಾಖೆಗಳು ಹೊಸ ರೂಪ ಪಡೆದವು, ಪಶ್ಚಿಮದ ಹೊಸ ಜ್ಞಾನಶಾಖೆಯಾಗಿ ‘ಸಂಶೋಧನೆ’ ನಮ್ಮಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು. ಬಾಗಲಕೋಟ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಸಂಶೋಧನಾ ಕೆಲಸವು ಕಳೆದ ಶತಮಾನದ ಮಧ್ಯಭಾಗದಲ್ಲಿ ಆರಂಭವಾದವು. ಜಿಲ್ಲೆಯ ಸಂಶೋಧನಾ ಕ್ಷೇತ್ರ ವೈವಿದ್ಯಮಯವಾಗಿದೆ. ಜಾನಪದ, ಶಾಸನ, ವಚನ, ಹರಿದಾಸ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ವ್ಯಾಕರಣ, ಛಂದಸ್ಸು, ಸೃಜನ, ಸೃಜನೇತರ ಸಾಹಿತ್ಯ, ಜೀವನ ಚರಿತ್ರೆ, ರಂಗಭೂಮಿ, ಚಿತ್ರಕಲೆ, ಗ್ರಾಮನಾಮ ವಿಜ್ಞಾನ ಮೊದಲಾದ ಪ್ರಕಾರಗಳಲ್ಲಿ ಸಂಶೋಧನಾ ಕಾರ್ಯ ಜರುಗಿವೆ. ಬಾಗಲಕೋಟ ಜಿಲ್ಲೆಯು ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದೆ. ಈ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ನಡೆದ ಕೆಲಸ ತುಂಬಾ ಗಮನಾರ್ಹವಾದುದು. ಜನಪದ ಮತ್ತು ಶಾಸನ ಸಾಹಿತ್ಯದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಸಂಶೋಧನೆಯಲ್ಲಿ ಈ ಜಿಲ್ಲೆಯ ನಡೆ ದಾಖಲಾರ್ಹವಾದುದು. ಬಾಗಲಕೋಟ ಜಿಲ್ಲೆಯು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಹರಿದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೇಲೆ ಮೊದಲ ಪಿ.ಎಚ್.ಡಿ. ಪ್ರಬಂಧಗಳು ಈ ಜಿಲ್ಲೆಯಿಂದ ಹೊರಬಂದಿರುವುದು ಒಂದು ದಾಖಲೆಯೇ ಸರಿ. ಬಹುಮುಖಿಯಾಗಿ ವಿದ್ವತ್ ವಲಯವನ್ನು ಕಟ್ಟಿದ ನಮ್ಮ ಸಂಶೋಧಕರ ಶ್ರಮ ಮತ್ತು ಕಾಯಕ ಶ್ರದ್ಧೆಯನ್ನು ಈ ಪ್ರಬಂಧದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು. ಡಾ. ಎ. ಟಿ. ಪಾಟೀಲ ಅವರು ‘ಶ್ರೀ ಪ್ರಸನ್ನವೆಂಕಟದಾಸರು ಮತ್ತು ಅವರ ಕೃತಿಗಳು’ ಕುರಿತು ಸಂಶೋಧನೆ ಕೈಕೊಂಡರು. ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್. ಎಸ್. ಪಂಚಮುಖಿ ಅವರ ಮಾರ್ಗದರ್ಶನದಲ್ಲಿ 11-03-1947 ರಲ್ಲಿ ಸಂಶೋಧನಾ ಕಾರ್ಯ ಆರಂಭಿಸಿದರು. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು. ಪ್ರಸ್ತುತ ಪ್ರಬಂಧದಲ್ಲಿ ವೈಷ್ಣವ ಭಕ್ತಿಯ ಬೆಳವಣಿಗೆ, ಉತ್ತರ ಭಾರತದಲ್ಲಿ ಭಕ್ತಿ ಪಂಥ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಕ್ತಿ ಪಂಥದ ಜೊತೆಗೆ ಪ್ರಸನ್ನ ವೆಂಕಟದಾಸರ ಕಾಲ ನಿರ್ಣಯ, ಜೀವನ ಚರಿತ್ರೆ, ಕೃತಿ ವಿಮರ್ಶೆ, ಆ ಕಾಲದ ರಾಜಕಿಯ, ಸಾಮಾಜಿಕ ಜೀವನದೊಂದಿಗೆ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಭಾವನಾ ಪ್ರಧಾನವಾದ ಅಥವಾ ಪೂರ್ವಗ್ರಹ ಪ್ರತಿಕ್ಷಿಪ್ತವಾದ ಗ್ರಂಥಗಳು ಬರುವ ಹೊತ್ತಿನಲ್ಲಿ ಆ ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಇತಿಹಾಸವನ್ನು ಕಟ್ಟಿಕೊಟ್ಟ ಈ ಪ್ರಬಂಧವು ತುಂಬಾ ಖ್ಯಾತಿಯನ್ನು ತಂದುಕೊಟ್ಟಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ 1955 ರಲ್ಲಿ ಪಿಎಚ್.ಡಿ. ಪದವಿಗಾಗಿ ಮಾನ್ಯ ಮಾಡಿದ [[ಗದ್ದಗಿಮಠ, ಬಿ.ಎಸ್| ಡಾ. ಬಿ.ಎಸ್.ಗದ್ದಗಿಮಠ ]] ಅವರ ಕನ್ನಡ ಜನಪದ ಗೀತೆಗಳು ಪ್ರಬಂಧವು ಕನ್ನಡ ಜಾನಪದ ಲೋಕದ ಮೊಟ್ಟ ಮೊದಲ ಸಂಶೋಧನಾ ಪ್ರಬಂಧವಾಗಿದೆ. ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ, ಜನಸಾಮಾನ್ಯರ ಸಂಪ್ರದಾಯ, ಸಂಸ್ಕøತಿಗಳಲ್ಲಿ ಒಂದಾಗಿ, ಹಳ್ಳಿ ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತಿದ್ದ ಜಾನಪದ ಗೀತ ರತ್ನಗಳನ್ನು ಸ್ವತಃ ಸಂಗ್ರಹಿಸಿ, ಸಂಪಾದಿಸಿ, ಸಂಶೋಧನೆ ಕೈಕೊಂಡ ಡಾ. ಬಿ. ಎಸ್. ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದ ಈ ಜಿಲ್ಲೆಯ ಮೇರು ನಿಧಿ. ಜನಪದ ಗೀತ ಸಾಹಿತ್ಯದ ಪ್ರಕಾರಗಳಾದ ಸ್ತುತಿ ಪದಗಳು, ಸುಗ್ಗಿ ಹಾಡುಗಳು, ಹಂತಿ ಹಾಡುಗಳು, ಮಕ್ಕಳ ಹಾಡುಗಳ ವಿಶ್ಲೇಷಣೆಯೊಂದಿಗೆ ಹಳ್ಳಿಗರ ಹಬ್ಬಗಳ ಸಾಂಸ್ಕøತಿಕ, ಧಾರ್ಮಿಕ ಆಚರಣೆಗಳ ಒಟ್ಟು ನೋಟವನ್ನು ಹಳ್ಳಿಗರ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅನುಬಂಧದಲ್ಲಿ ಡಾ. ಗದ್ದಗಿಮಠರು ಸಂಗ್ರಹಿಸಿದ ಹಂತಿಯ ಹಾಡುಗಳಲ್ಲಿ ಹನ್ನೇರಡು ಶರಣರ ಜೀವನ ಚಿತ್ರಣವಿದೆ. ಕರ್ನಾಟಕ ವಿಶ್ವ ವಿದ್ಯಾಲಯ 1963 ರಲ್ಲಿ ಈ ಪ್ರಬಂಧವನ್ನು ಪ್ರಕಟಿಸಿದೆ. ಮೇಲೆ ದಾಖಲಿಸಿದ ಈ ಎರಡೂ ಪ್ರಬಂಧಗಳು ಕನ್ನಡ ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೊದಲ ಸಂಶೋಧನಾ ಪ್ರಬಂಧಗಳಾಗಿವೆ. ಬಾಗಲಕೋಟ ಜಿಲ್ಲೆಯ ಸಂಶೋಧನಾ ಕ್ಷೇತ್ರ ತುಂಬಾ ವೈವಿದ್ಯತೆಯಿಂದ ಕೂಡಿದೆ. ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಹಲವು ನೆಲೆಗಳ ಅಧ್ಯಯನ ಇಲ್ಲಿ ನಡೆದಿದೆ. ಪ್ರಾಚೀನ ಕವಿ ಕೃತಿಗಳ ಕುರಿತು, ವಚನಕಾರರು ಕುರಿತು, ಶಾಸನ, ಜಾನಪದ, ರಂಗಭೂಮಿ, ವ್ಯಾಕರಣ, ಛಂದಸ್ಸು, ಆಧುನಿಕ ಸಾಹಿತ್ಯ ಕುರಿತು ಹಲವು ನೆಲೆಗಳಲ್ಲಿ ಈ ಜಿಲ್ಲೆಯ ಸಂಶೋಧನೆಗಳು ನಡೆದಿವೆ. ವಿದ್ವಾಂಸರಾದ ಡಾ. ಎಸ್. ಎಸ್. ಕೋತಿನ ಅವರ ಆಂಡಯ್ಯ ಕವಿ ಮತ್ತು ಕೃತಿಗಳ ಅಧ್ಯಯನ, ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರ ‘ಶಂಕರ ದಾಸಿಮಯ್ಯ ಪುರಾಣ ಒಂದು ಅಧ್ಯಯನ’, ಡಾ. ಶಶಿಕಲಾ ಮರಿಬಾಶೆಟ್ಟಿ ಅವರ ‘ದ್ಯಾಂಪುರ ಚೆನ್ನಕವಿಗಳು’, ಡಾ. ಎಸ್. ಎಸ್. ಬಸುಪಟ್ಟದ ಅವರ ‘ನಿಜಗುಣ ಶಿವಯೋಗಿ ಹಾಗೂ ಅವರ ಕೃತಿಗಳು’, ಡಾ. ಕೆ.ಎಸ್.ಮಠ ಅವರ ‘ಚನ್ನ ಬಸವಣ್ಣನವರ ವಚನಗಳು ಒಂದು ಅಧ್ಯಯನ’ ಡಾ. ಪಿ.ಎಂ. ಹುಗ್ಗಿ ಅವರ ‘ಷಡಕ್ಷರ ದೇವ ಒಂದು ಅಧ್ಯಯನ’ ಕೃತಿಗಳು ಕನ್ನಡದ ಪ್ರಾಚೀನ ಕವಿ ಕೃತಿಗಳ ಕುರಿತು ಕೈಕೊಂಡ ಸಂಶೋಧನಾ ಪ್ರಬಂಧನಗಳಾಗಿವೆ. ಡಾ. ಶ್ರೀರಾಮ ಇಟ್ಟಣ್ಣವರ ಅವರ ‘ಶ್ರೀಕೃಷ್ಣ ಪಾರಿಜಾತ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧದಲ್ಲಿ ಪಾರಿಜಾತದ ಪರಂಪರೆ ಇತಿಹಾಸ ಮತ್ತು ಕಲಾತಂಡಗಳ ಒಟ್ಟು ಚರಿತ್ರೆಯನ್ನು ತುಂಬಾ ಅಧ್ಯಯನಪೂರ್ಣವಾಗಿ ರೂಪಿಸಲಾಗಿದೆ. ಡಾ. ವಿರೇಶ ಬಡಿಗೇರ ಅವರ ‘ಉತ್ತರ ಕರ್ನಾಟಕದ ಐದು ಗೀತಮೇಳಗಳು ಒಂದು ಅಧ್ಯಯನ’ವು ಪ್ರದರ್ಶನ ಸಿದ್ದಾಂತದ ಹಿನ್ನೆಲೆಯಲ್ಲಿ ಕೈಕೊಂಡ ಆಳವಾದ ಅಖಂಡ ಅಧ್ಯಯನವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಮಗ್ಗಲುಗಳಲ್ಲಿ ಈ ಜಿಲ್ಲೆಯಿಂದ ಸಂಶೋಧನೆ ಜರುಗಿದೆ. ಡಾ. ಮಹಾದೇವ ಕಣವಿ ಅವರ ‘ಕನ್ನಡದ ಪ್ರಾತಿನಿಧಿಕ ಪ್ರಾದೇಶಿಕ ಕಾದಂಬರಿಗಳು’ ಡಾ. ರೇಖಾ ಜೋಗುಳ ಅವರ ‘ಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿಗಳು ಒಂದು ಅಧ್ಯಯನ’ ಡಾ. ಗಣೇಶ ಅಮೀನಗಡದ ‘ಕನ್ನಡ ದಲಿತ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿದಾನ’ ಡಾ. ಜೆ.ಪಿ.ದೊಡಮನಿ ಅವರ ‘ಶರಣರ ಕುರಿತ ಕನ್ನಡ ಕಾದಂಬರಿಗಳು’ ಡಾ. ಮೃತ್ಯುಂಜಯ ಹೊರಕೇರಿ ಅವರ ‘ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳ ಬದುಕು ಬರಹ’, ಡಾ. ವಿಜಯಾ ದಡೇದ ಅವರ ‘ಕನ್ನಡ ಕಾವ್ಯ ಪರಂಪರೆಯಲ್ಲಿ ಮಹಿಳಾ ಸಾಹಿತ್ಯ’, ಡಾ. ಸುಭಾಸ ಪೋರೆ ಅವರ ‘ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಒಂದು ಅಧ್ಯಯನ’ ಡಾ. ಎಂಜಿ.ವಾರಿ ಅವರ ‘ಸೋದೆ ಅರಸು ಮನೆತನ ಒಂದು ಅಧ್ಯಯನ’ ಸಂಶೋಧನ ಪ್ರಬಂಧಗಳು ಗಮನಾರ್ಹವಾಗಿವೆ.
 
ದಶಕದ ಸಂಶೋಧನೆ (2001-2010) 2001 ರಲ್ಲಿ ಪ್ರಕಟವಾದ ಡಾ. ಅಶೋಕ ನರೋಡೆ ಅವರ ‘ಏಕಲವ್ಯನ ಪಾತ್ರ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧದಲ್ಲಿ ಏಕಲವ್ಯನ ಕಥಾ ಪರಂಪರೆಯನ್ನು ಸಂಸ್ಕøತ, ಹಳಗನ್ನಡ, ಜೈನ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿಯ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಗುಳೇದಗುಡ್ಡದ ಡಾ. ಆರ್. ಎಸ್. ಅಕ್ಕಮಹಾದೇವಿ ಅವರು 2001 ರಲ್ಲಿ ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ‘ಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯ’ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ ಪ್ರಬಂಧ ಪ್ರಕಟವಾಗಿದೆ.ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರುವ ಡಾ. ಬಿ.ಎಂ.ಪಾಟೀಲ ಅವರ ‘ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಬದುಕು ಮತ್ತು ಸಾಹಿತ್ಯ ಮಹಾಪ್ರಬಂಧವು ‘ವಚನ ಗುಮ್ಮಟ’ ಹೆಸರಿನಲ್ಲಿ ಪ್ರಕಟವಾಗಿದೆ. ಡಾ. ಹಳಕಟ್ಟಿಯವರ ಕಾರ್ಯಸಾಧನೆಯನ್ನು ದಾಖಲಿಡುವ ಅಪರೂಪದ ಮಹಾಪ್ರಬಂಧ ಇದಾಗಿದೆ.
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ