ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೬೧ ನೇ ಸಾಲು:
===ಸರ್ಕಾರದ ಆಡಳಿತದಲ್ಲಿ ಪತ್ರಿಕೆ===
 
ಬಹು ಹಿಂದೆ ಆರಂಭಗೊಂಡಿದ್ದ [[ಸಂಯುಕ್ತ ಕರ್ನಾಟಕ ನೌಕರರ ಸಂಘ]] ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ [[ಉಪವಾಸ ಮುಷ್ಕರ ]] ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, [[ಕೋಡಿಹೊಸಳ್ಳಿ ರಾಮಣ್ಣ]] ನೇತೃತ್ವದಲ್ಲಿ [[ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ]]ವೂ ಹಕ್ಕೊತ್ತಾಯದ ಹೋರಾಟ ನಡೆಸಿತು. [[ಆರ್.ಗುಂಡೂರಾವ್]] ಮುಖ್ಯಮಂತ್ರಿಯಾಗಿದ್ದರು. [[ವೀರಪ್ಪ ಮೊಯ್ಲಿ]] ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ‘ಸಂಕ’ದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದ-ಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ‘ದತ್ತಿ ಆಯುಕ್ತ’ರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶವನ್ನು ಸೆಪ್ಟೆಂಬರ್ 1980ರಲ್ಲಿ ಹೊರಡಿಸಿತು. ಚಾರಿಟಿ ಕಮೀಷನರ್ ಆಗಿದ್ದ ವಾಮದೇವ ಅವರು ಲೋಕ ಶಿಕ್ಷಣ ಟ್ರಸ್ಟ್ ನ ರಿಸೀವರ್ ಆಗಿ ಆಡಳಿತ ವಹಿಸಿಕೊಳ್ಳುವುದರ ಜತೆಗೆ ‘ಸಂಕ’ದ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿಯೂ ಘೋಷಿಸಿಕೊಂಡರು. ನ್ಯಾಯಾಲಯವು ಮತ್ತೊಂದು ಆದೇಶದ ಮೂಲಕ ಬಿ.ವಿ.ಜಿಗಜಿನ್ನಿಯವರನ್ನು ರಿಸೀವರ್ ಆಗಿ ನೇಮಕ ಮಾಡಿದಂತೆ, ಅವರೂ ಸಹಾ ಸಂಪಾದಕರೆಂದು ಘೋಷಿಸಿಕೊಂಡರು. ಏತನ್ಮಧ್ಯೆ ‘ಸಂಕ’ದ ಬೆಂಗಳೂರು ಆವೃತ್ತಿ 20-12-1980ರಂದು ಪುನಾರಂಭಗೊಂಡಿತು. ಹನ್ನೊಂದು ತಿಂಗಳ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿತು. ಬೆಂಗಳೂರು ಆವೃತ್ತಿಗೆ ಕೊಡಗಿನ [[ಶಕ್ತಿ]] ದಿನಪತ್ರಿಕೆಯ ಸಂಪಾದಕರು ಹಾಗೂ ಮುಖ್ಯಮಂತ್ರಿ [[ಆರ್.ಗುಂಡೂರಾವ್]] ಅವರ ಆಪ್ತರೂ ಆಗಿದ್ದ [[ಬಿ.ಎಸ್.ಗೋಪಾಲಕೃಷ್ಣ]] ಅವರ ನೇಮಕವಾಯಿತು. [[ಎಸ್.ವಿ.ಜಯಶೀಲರಾವ್]] ಸಹ ಸಂಪಾದಕರಾಗಿ, [[ಹೆಚ್.ಆರ್.ನಾಗೇಶರಾವ್]] ಸುದ್ದಿ ಸಂಪಾದಕರಾಗಿ ಮುಂದುವರಿದರು. ಜುಲೈ 1980ರಲ್ಲಿ ಹುಬ್ಬಳ್ಳಿ-ಬೆಂಗಳೂರು ಎರಡೂ ಆವೃತ್ತಿಗಳ ಸಂಪಾದಕರಾಗಿ ಗೋಪಾಲಕೃಷ್ಣ ಅಧಿಕಾರ ವಹಿಸಿಕೊಂಡರು.
 
ಸೆಪ್ಟಂಬರ್ 1, 1981ರಂದು ವಿಶೇಷ ಆಜ್ಞೆಯೊಂದಿಗೆ ಆಡಳಿತಾಧಿಕಾರಿಯೊಬ್ಬರ ಮೂಲಕ ಲೋಕ ಶಿಕ್ಷಣ ಟ್ರಸ್ಟ್ ನ ಆಡಳಿತವನ್ನು ರಾಜ್ಯ ಸರ್ಕಾರವು ವಹಿಸಿಕೊಂಡಿತು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳಾದವು. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಮೊಕ್ಕದ್ದಮೆಗಳು ಮುಂದುವರಿದವು. ಗುಂಡೂರಾವ್ ಅಧಿಕಾರ ಕಳೆದುಕೊಂಡರು. ಗೋಪಾಲಕೃಷ್ಣ ನಿರ್ಗಮಿಸಿದರು. [[ಟೈಮ್ಸ್ ಆಫ್ ಡೆಕ್ಕನ್]] ಸಮೂಹದ ಕನ್ನಡ ಪತ್ರಿಕೆ [[ಮುಂಜಾನೆ]]ಯ ಸಂಪಾದಕರಾಗಲು ಜಯಶೀಲರಾವ್ ‘ಸಂಕ’ ತೊರೆದರು. ಹುಬ್ಬಳ್ಳಿ ಆವೃತ್ತಿಯಲ್ಲಿ ಮತ್ತೀಹಳ್ಳಿ ನಾಗರಾಜರಾವ್ ಅವರ ನಿವೃತ್ತಿಯ ನಂತರ [[ಸುರೇಂದ್ರ ದಾನಿ]] ಸಹಾಯಕ ಸಂಪಾದಕರಾಗಿದ್ದರು. ಸೆಪ್ಟಂಬರ್ 1, 1983ರಂದು ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕರಾಗಿ [[ಹೆಚ್.ಆರ್.ನಾಗೇಶರಾವ್]] ಅವರ ನೇಮಕವಾಯಿತು. ಸುರೇಂದ್ರ ದಾನಿ ಅವರನ್ನು ಎರಡೂ ಆವೃತ್ತಿಗಳ ಸಂಪಾದಕರನ್ನಾಗಿ ನೇಮಕ ಮಾಡಲಾಯಿತು. ಅವರ ನಿವೃತ್ತಿಯ ನಂತರ [[ಆರ್.ಎ.ಉಪಾಧ್ಯ]] ಎರಡೂ ಆವೃತ್ತಿಗಳ ಸಂಪಾದಕತ್ವ ವಹಿಸಿಕೊಂಡರು. 1984ರಲ್ಲಿ [[ಹೆಚ್.ಆರ್.ನಾಗೇಶರಾವ್]] ಅವರಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ದೊರೆಯಿತು. 31-10-1985ರಲ್ಲಿ ನಾಗೇಶರಾವ್ ನಿವೃತ್ತಿಯ ನಂತರ ಧ್ರುವರಾಜ ಮುತಾಲಿಕ ದೇಸಾಯಿ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ