ಶ್ವೇತಾಶ್ವತರೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q2452903 (translate me)
ವಿಸ್ತರಣೆ
 
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
'''ಶ್ವೇತಾಶ್ವತರೋಪನಿಷತ್''' [[ಯಜುರ್ವೇದ]]ದ [[ತೈತ್ತೀರಿಯ ಶಾಖೆ]]ಗೆ ಸೇರಿದ ಉಪನಿಷತ್ತು.ಪ್ರಾಚೀನವೂ,ಸತ್ವಪೂರ್ಣವೂ ಆಗಿರುತ್ತದೆ.ಶ್ವೇತಾಶ್ವತರ ಮಹರ್ಷಿಗಳು ಇದನ್ನು ಪ್ರಕಟಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.ಇದರಲ್ಲಿ ಆರು ಅಧ್ಯಾಯಗಳೂ ೧೧೩ [[ಮಂತ್ರ]]ಗಳೂ ಇವೆ.
ಪದ್ಯಮಯವಾಗಿದೆ. ಸಹನಾವವತು ಎಂಬುದು ಇದರ ಶಾಂತಿಮಂತ್ರ, ವಿಚಾರಪುರಿತವಾದ 113 ಮಂತ್ರಗಳಿವೆ. ಜಗತ್ಕಾರಣವಾವುದು ? ನಾವು ಎಲ್ಲಿಂದ ಬಂದೆವು ? ಯಾರ ಕಟ್ಟಳೆಗೊಳಗಾಗಿ ಸುಖ ದುಃಖಗಳುಂಟಾಗುವುವು ? ಎಂಬ ಪ್ರಶ್ನೆಗಳ ಮಾಲೆಯಿಂದ ಇದು ಪ್ರಾರಂಭವಾಗಿದೆ. ಜೀವ, ಬ್ರಹ್ಮರ (ಜ್ಞ, ಅಜ್ಞ) ವಿಚಾರ ಪ್ರಸ್ತುತವಾಗಿದೆ. 2ನೆಯ ಅಧ್ಯಾಯದ ಯೋಗದ, ಯೋಗಾನುಭವದ ನಿರೂಪಣೆ ಇದೆ. ಇದು ಪಾತಂಜಲಯೋಗದ ಪೀಠಿಕೆಯಂತಿದೆ. 3-4ನೆಯ ಅಧ್ಯಾಯಗಳಲ್ಲಿ ಬ್ರಹ್ಮತತ್ತ್ವ, ಆತ್ಮತತ್ತ್ವಗಳ ಸ್ವರೂಪ ನಿರೂಪಣೆ ಇದೆ. ಬ್ರಹ್ಮವನ್ನು [[ಮಹೇಶ್ವರ]] ಎಂದು ಕರೆಯಲಾಗಿದೆ. 5ನೆಯ ಅಧ್ಯಾಯದಲ್ಲಿ ಕಪಿಲ ಋಷಿಯ [[ಸಾಂಖ್ಯತತ್ತ್ವ]]ದ ಉಲ್ಲೇಖವಿದೆ. ಆದರೆ [[ನಿರೀಶ್ವರ ಸಿದ್ಧಾಂತ]]ದ ಛಾಯೆ ಇಲ್ಲ. ಏಕೈಕ ಕಾರಣನೂ ಸರ್ವಾಧಿಪನೂ ಆದ ಅದ್ವಿತೀಯನನ್ನು ಅರಿಯುವುದರಿಂದ, [[ಮುಕ್ತಿ]] ಎಂದು ಹೇಳಲಾಗಿದೆ. 6ನೆಯ ಅಧ್ಯಾಯದಲ್ಲಿ [[ಕರ್ಮಸಿದ್ಧಾಂತ]]ದ ನಿರೂಪಣೆ ಇದ್ದು ಕರ್ಮಕ್ಷಯದಿಂದ ಮೋಕ್ಷಪ್ರಾಪ್ತಿ ಎಂದೂ ಮಹೇಶ್ವರ ಕರ್ಮಚಕ್ರದಿಂದ ಹೊರಗಿರುವ, ಕರ್ಮಾಧ್ಯಕ್ಷನೆಂದೂ ಶ್ವೇತಾಶ್ವತರ ಉಪದೇಶಿಸಿದ್ದಾನೆ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಎಲ್ಲಕ್ಕಿಂತಲೂ ಮೊದಲಾಗಿ ಗುರುಭಕ್ತಿ ಇರಬೇಕೆಂಬುದನ್ನು ಕೊನೆಯಲ್ಲಿ ಒತ್ತಿಹೇಳಲಾಗಿದೆ.
 
== ಆಧಾರ ==
೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
೮ ನೇ ಸಾಲು:
*[http://www.bharatadesam.com/spiritual/upanishads/svetasvatara_upanishad.php Read a simple translation of Shvetashvatara Upanishad]
*[[Sri Aurobindo]], ''The Upanishads'' [http://www.sriaurobindoashram.info/Contents.aspx?ParentCategoryName=_StaticContent/SriAurobindoAshram/-09%20E-Library/-01%20Works%20of%20Sri%20Aurobindo/-12_The%20Upanishad_Volume-12]. [[Sri Aurobindo Ashram]], [[Pondicherry]]. 1972
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಪನಿಷತ್ತುಗಳು}}
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]