ಉಜ್ಬೇಕಿಸ್ಥಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 177 interwiki links, now provided by Wikidata on d:q265 (translate me)
ವಿಸ್ಟರಣೆ
೬೮ ನೇ ಸಾಲು:
|footnote1 = As [[Emirate of Bukhara|Bukharian Emirate]], [[Khanate of Kokand|Kokand Khanate]], [[Khwarezm]].
}}
'''ಉಜ್ಬೇಕಿಸ್ಥಾನ್''' ಅಧಿಕೃತವಾಗಿ '''ಉಜ್ಬೇಕಿಸ್ಥಾನ್ ಗಣರಾಜ್ಯ''' ([[ಉಜ್ಬೇಕ್ ಭಾಷೆ]]ಯಲ್ಲಿ: ''O‘zbekiston Respublikasi''; [[ಸಿರಿಲಿಕ್ ಲಿಪಿ]]: Ўзбекистон Республикаси; [[ರಷ್ಯನ್ ಭಾಷೆ]]ಯಲ್ಲಿ: Республика Узбекистан), [[ಮಧ್ಯ ಏಷ್ಯಾ]]ದ ಒಂದು ದೇಶ. ಮುಂಚೆ [[ಸೋವಿಯೆಟ್ ಒಕ್ಕೂಟ]]ದ ಭಾಗವಾಗಿದ್ದ ಉಜ್ಬೇಕಿಸ್ಥಾನ್, ಪಶ್ಚಿಮಕ್ಕೆ ಹಾಗು ಉತ್ತರಕ್ಕೆ [[ಕಾಜಕಸ್ಥಾನ್]], ಪೂರ್ವಕ್ಕೆ [[ಕಿರ್ಗಿಜ್‍ಸ್ಥಾನ್]] ಮತ್ತು [[ತಾಜಿಕಿಸ್ಥಾನ್]], ಹಾಗು ದಕ್ಷಿಣಕ್ಕೆ [[ಆಫ್ಘಾನಿಸ್ಥಾನ್]] ಮತ್ತು [[ತುರ್ಕಮೇನಿಸ್ಥಾನ್]] ದೇಶಗಳನ್ನು ಹೊಂದಿದೆ. ಈ ರಾಜ್ಯ 38º ಉ.-45º ಉ. ಹಾಗೂ 36º ಪು-72º ಪು. ನಡುವೆ, ಸೋವಿಯತ್ ಮಧ್ಯ ಏಷ್ಯದ ಆಗ್ನೇಯ ಭಾಗದಲ್ಲಿ. ಹಬ್ಬಿದೆ. ಉಜ್ಬೆಕ್ಕ್ ಜನರಿರುವ ಭಾಗಗಳನ್ನೆಲ್ಲ ಒಳಗೊಂಡಿರುವ ಈ ರಾಜ್ಯದ ಎಲ್ಲೆ ಅಂಕುಡೊಂಕು. 1924ರಲ್ಲಿ ಸ್ಥಾಪಿತವಾದ ಈ ಒಕ್ಕೂಟ ಗಣರಾಜ್ಯದ ವಿಸ್ತೀರ್ಣ 4,47,400 ಚ.ಕಿಮೀ ಜನಸಂಖ್ಯೆ 25,484,000 (2002) ರಾಜಧಾನಿ [[ತಾಷ್ಕೆಂಟ್]].
==ಭೂವಿವರಣೆ==
[[File:Uzbekistan map.jpg|thumb|left|270px|ಉಜ್ಬೇಕಿಸ್ಥಾನದ ನಕ್ಷೆ.]]
ಈ ಪ್ರದೇಶದ ಪೂರ್ವಭಾಗದಲ್ಲಿ ಟಯೆನ್ಷಾನ್ ಪರ್ವತದ ಕವಲುಗಳು ಒಳನುಗ್ಗಿವೆ. ಈ ರಾಜ್ಯದ ಬಹುಭಾಗ ಬೆಟ್ಟಗುಡ್ಡಗಳಿಂದ ಕೂಡಿದ ಮೈದಾನ; ನೆಲದ ಬಹುಭಾಗ ಮರುಭೂಮಿಮಯ. ನಡುನಡುವೆ ಇರುವ [[ಓಯಸಿಸ್|ಓಯಸಿಸ್ಸುಗಳ]] ಪೈಕಿ ಫರ್ಗನ್ ಕಣಿವೆಯದು ಅತಿ ದೊಡ್ಡದು. ಇದರ ಸುತ್ತ ಎತ್ತರ ಪರ್ವತಗಳಿವೆ. ಅನೇಕ ಸಣ್ಣ ನದಿ ತೊರೆಗಳು ಇಲ್ಲಿನ ಪರ್ವತ ಪ್ರದೇಶಗಳನ್ನು ಸುತ್ತುವರಿದು ಹರಿಯುತ್ತವೆ. ಉತ್ತರದಲ್ಲಿರುವ ಆರಲ್ ಸಮುದ್ರದ ಪಶ್ಚಿಮ ತೀರದ ಉದ್ದಕ್ಕೂ ಹಬ್ಬಿರುವ ಊಸ್ಟ್‌ಯರ್ಟ್ ಪ್ರಸ್ಥಭೂಮಿ ಸಮುದ್ರಮಟ್ಟಕ್ಕಿಂತ 180-273 ಮೀ ಎತ್ತರವಾಗಿದೆ. ಸಮುದ್ರದ ಕಡೆಗೆ ಇದು ಹೆಚ್ಚು ಇಳಿಜಾರಾಗಿದೆ. ಖನಿಜ ಸಂಬಂಧಿ ಲವಣಗಳಿರುವ ಆರಲ್ ಸಮುದ್ರ ಎಲ್ಲೂ 18ಮೀ.ಗಿಂತ ಹೆಚ್ಚು ಆಳವಿಲ್ಲ.
 
ಆರಲ್ ಸಮುದ್ರಕ್ಕೂ ಪರ್ವತ ತಪ್ಪಲುಗಳಿಗೂ ಮಧ್ಯ 480 ಕಿಮೀ ವಿಸ್ತಾರದ ಪ್ರದೇಶ ಕಿಜಿ಼ಲ್ಕುಂ. ಮರಳು ತುಂಬಿದ ಈ ಪ್ರದೇಶದಲ್ಲಿ ಸಣ್ಣ ಸಣ್ಣ ಹುಲ್ಲುಜಾತಿಯ ಸಸ್ಯಗಳಿವೆ. ಅಲ್ಲಲ್ಲಿ ಎತ್ತರದ ಮರಳುದಿಣ್ಣೆಗಳಿವೆ. ಈ ಪ್ರದೇಶದ ಎತ್ತರ ಸಾಮಾನ್ಯವಾಗಿ 181 ಮೀ. ಗಳಿಗಿಂತ ಕಡಿಮೆ, ಆಮೂದಾರ್ಯ ಈ ಪ್ರದೇಶದ ಪ್ರಮುಖ ನದಿ. ಇದು ಕಸಕಡ್ಡಿ ಶೇಖರಿಸುತ್ತಿದ್ದು ವರ್ಷವರ್ಷವೂ ತನ್ನ ಪಾತ್ರವನ್ನು ಬದಲಾಯಿಸುತ್ತಿರುತ್ತದೆ. ಈ ನದಿಯಲ್ಲಿನ ಪ್ರವಾಹ ಋತುಮಾನಾನುಸಾರವಾದದ್ದು.
 
ಕಿಜಿ಼ಲ್ಕುಂ ದಕ್ಷಿಣಕ್ಕೆ ಫಲವತ್ತಾದ ಮೆಕ್ಕಲುಮಣ್ಣಿನಿಂದ ಕೂಡಿದ ಒಂದು ಮೈದಾನ ಪ್ರದೇಶವಿದೆ. ಟಾಷ್ಕೆಂಟಿನ ಆಗ್ನೇಯ ಭಾಗಕ್ಕಿರುವ ಚಟ್ಕಲ್ ಶ್ರೇಣಿಯಲ್ಲಿ ಹುಟ್ಟಿ ಈ ನಗರದ ಸುತ್ತಣ ಓಯಸಿಸ್ಸುಗಳಿಗೆ ನೀರುಣಿಸುವ ಚಿರ್ಚಿಕ್, ಆಂಗ್ರೆನ್ಗಳು ಸೀರ್ ಧಾರ್ಯಾ ನದಿಯ ಉಪನದಿಗಳು. ಫರ್ಗನ್ ಕಣಿವೆಯನ್ನು ಸುತ್ತುವರಿದಿರುವ ಇತರ ಪರ್ವತಶ್ರೇಣಿಗಳಲ್ಲೂ ಅನೇಕ ಸಣ್ಣಪುಟ್ಟ ನದಿಗಳು ಹರಿದು ಬಂದು ಮುಖ್ಯ ನದಿಯಾದ ಅಮೂದಾರ್ಯವನ್ನು ಸೇರುತ್ತವೆ.
==ಹವಾಮಾನ==
ಉಜ್ಬೆಕಿಸ್ತಾನದ ಮೇಲ್ಮೈ ಒಂದೇ ಸಮನಾಗಿಲ್ಲವಾದ್ದರಿಂದ ಈ ರಾಜ್ಯದ ವಾಯುಗುಣದಲ್ಲಿ ಪ್ರಾದೇಶಿಕ ಭಿನ್ನತೆ ಬಹಳ. ಚಳಿಗಾಲದಲ್ಲಿ ಉಷ್ಣತೆಯ ವ್ಯತ್ಯಾಸದ ಗತಿ ತೀವ್ರ. ಫೆಬ್ರವರಿಯಲ್ಲಿ ಒಂದು ದಿನ ಹಿಮಪಾತವಾದರೆ ಇನ್ನೊಂದು ದಿನವಿಡೀ ಮಳೆ, ಮತ್ತೊಂದು ದಿನ ಹಿತಕರ ಹವಾಗುಣ, ಶಾಖ ಹೆಚ್ಚು, ಇರಾನ್ ಮತ್ತು ಆಫ್ಘಾನಿಸ್ತಾನದ ಕಡೆಯಿಂದ ಬೀಸುವ ಅವರ್ತಮಾರುತಗಳು ಇದಕ್ಕೆ ಕಾರಣ. ಉತ್ತರ ಧ್ರುವಪ್ರದೇಶದಿಂದ ಕುಳಿರ್ಗಾಳಿ ಬೀಸಿದಾಗ ಚಳಿಗಾಲದಲ್ಲಿ ತಾಷ್ಟೆಂಟಿನ ಉಷ್ಣಾಶ 10º ಸೆ.ಗೆ ಇಳಿಯುತ್ತದೆ. ಆದರೆ ಆಫ್ಘಾನಿಸ್ತಾನದಿಂದ ಉಷ್ಣಮಾರುತ ಬೀಸಿದಾಗ 20º ಸೆ. ಇರುತ್ತದೆ. ಚಳಿಗಾಲ ಮೋಡರಹಿತ ಹಿಮ ಬೀಳುವುದು ಚಳಿಗಾಲದಲ್ಲಿ ಐದು ದಿನ ಮಾತ್ರ..
 
ವಸಂತಋತುವಿನಲ್ಲಿ ಆಕಾಶ ಸ್ವಚ್ಛ. ದಿನಗಳು ಹೆಚ್ಚು ಪ್ರಕಾಶಮಾನ. ವಾಯುಶುಷ್ಕ, ಶಾಖ ಹೆಚ್ಚು. ಏಪ್ರಿಲ್ ತಿಂಗಳಿನಲ್ಲಿ ವಾಯುವಿನ ತೇವಾಂಶ ಶೇ.30 ಜುಲೈ ತಿಂಗಳಿನ ಸಾಧಾರಣ ಬೇಸಗೆಯಲ್ಲಿ ಇಡೀ ಸೋವಿಯತ್ ಒಕ್ಕೂಟದಲ್ಲಿ ಉಜ್ಬೆಕಿಸ್ತಾನದಲ್ಲೇ ಹೆಚ್ಚು ಶಾಖ. ಆಗ ಇದರ ಉಷ್ಣತೆಯ ವ್ಯಾಪ್ತಿ 310º - 450º ಸೆಂ. ತಾಷ್ಕೆಂಟಿನ ಉಷ್ಣತೆ 405º ಸೆ. ಮರುಭೂಮಿಯಲ್ಲಿ ಜುಲೈ ಉಷ್ಣತೆ 26º-40º ಸೆ. ದೂಳಿನಿಂದ ಕೂಡಿದ ಸುಂಟರಗಾಳಿ ಏಳುವುದುಂಟು. ಆದರೆ ಈ ಗಾಳಿ ಶುಷ್ಕವಾದ್ದರಿಂದ ಮಳೆ ಇಲ್ಲ. ವರ್ಷಕ್ಕೆ 5ಸೆಂಮೀ.ಕ್ಕೂ ಕಡಿಮೆ ಮಳೆ. ಶರದ್ಋತುವಿನಲ್ಲಿ ಉಷ್ಣತೆ ಕಡಿಮೆಯಾಗಿ ಮಳೆ ಬೀಳಲುಪಕ್ರಮಿಸುತ್ತದೆ. ಅವರ್ತಮಾರುತಗಳು ಮಳೆ ತರುತ್ತವೆ. ಈ ಪರ್ವತ ಪ್ರದೇಶಗಳಲ್ಲಿ ಮಳೆ ಹೆಚ್ಚು (50-60ಸೆಂಮೀ).
==ಸಸ್ಯಸಂಪತ್ತು==
ಇಲ್ಲಿ ತಂಡ್ರ ಸಸ್ಯದಿಂದ ಮರುಭೂಮಿ ಸಸ್ಯದವರೆಗೆ ವಿವಿಧ ಜಾತಿಯ ವನಸ್ಪತಿಯುಂಟು. ಉಸ್ಟ್‌ಯರ್ಟ್ ಮತ್ತು ಕಿಜಿಲ್ಕುಂನಲ್ಲಿ ತೆಳ್ಳನೆಯ ಮರುಭೂಮಿ ಸಸ್ಯವಿದೆ. ಕಿಜಲ್ಕುಂಗೂ ಆಮೂದಾರ್ಯಾಕ್ಕೂ ನಡುನೆಲದಲ್ಲೂ ಇತರ ತಗ್ಗು ಪ್ರದೇಶಗಳಲ್ಲೂ ಹುಲ್ಲುಗಾವಲು ಧಾರಾಳವಾಗಿದೆ. ದಕ್ಷಿಣದ ಹುಲ್ಲು ಪೊದೆಗಳ ನಡುವೆ ಬಗೆ ಬಗೆ ಹೂ ಬಿಡುವ ಗಿಡಮೂಲಿಕೆಗಳಿವೆ. ಪೂರ್ವ ಉತ್ತರಗಳಲ್ಲಿರುವ ಪರ್ವತ ಸಾನುಪ್ರದೇಶದಲ್ಲಿ ಪಾಪ್ಲರ್, ಆಲಿವ್, ವಿಲ್ಲೂ ಮರಗಿಡಗಳು ಕಾಣಬರುತ್ತವೆ. ನೆಲದ ಎತ್ತರ ಹೆಚ್ಚಿದಂತೆ ಮರ ಕಡಿಮೆ, ಹುಲ್ಲು ಹೆಚ್ಚು; ತುತ್ತತುದಿಯಲ್ಲಿ ತಂಡ್ರ. ಹಲ್ಲಿ, ಜಿರ್ಬೋವ (ದಂಶಕ ಜಾತಿ), ಕಿರುಬ ಮತ್ತ ಗುಳ್ಳೆ ನರಿಗಳೂ ವಿರಳವಾಗಿ ಸಿಕ್ಕುವ ಕಾಡುಕತ್ತೆ, ಚಿಗರಿ ಮತ್ತು ಹುಲಿಗಳೂ ಪರ್ವತ ಪ್ರದೇಶಗಳಲ್ಲಿ ಕಾಡುಮೇಕೆ, ಕುರಿ ಮತ್ತು ಚಿರತೆಗಳೂ ಇಲ್ಲಿನ ಪ್ರಾಣಿಗಳು. ಪೆಟ್ರೋಲಿಯಂ, ಸ್ವಾಭಾವಿಕ ಅನಿಲ, ತವರ, ಕಲ್ಲಿದ್ದಲು, ಲಿಗ್ನೈಟ್, ತಾಮ್ರ, ಲವಣ, ಗಂಧಕ ಟಂಗ್ಸ್‌ಟನ್, ಮಾಲಿಬ್ಡಿನಂ-ಇವು ಮುಖ್ಯ ಖನಿಜಗಳು.
==ವ್ಯವಸಾಯ,ಕೈಗಾರಿಕೆ==
ವ್ಯವಸಾಯ, ಕೈಗಾರಿಕೆ, ಜನವಸತಿ: ಕೃಷಿಗೆ ನೀರಾವರಿ ಸೌಲಭ್ಯ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಅದನ್ನೊದಗಿಸಲಾಗಿದೆ. ಹೆಚ್ಚು ಮಳೆಯಾಗುವ ಎತ್ತರ ಪ್ರದೇಶದಲ್ಲಿ ಒಣ ಬೇಸಾಯ. ಕಾಳು, ಮೆಕ್ಕೆಜೋಳ, ಆಲೂಗೆಡ್ಡೆ ಇವು ಇಲ್ಲಿನ ಉತ್ಪನ್ನ. ವ್ಯವಸಾಯದ ಜೊತೆಗೆ ಪಶುಪಾಲ ನೆಯೂ ಮುಖ್ಯ ಕಸಬು. ದನಕರು, ಕುರಿ, ಕುದುರೆ ಸಾಕುಪ್ರಾಣಿಗಳು. ನದೀಬಯಲುಗಳ ನೀರಾವರಿ ಪ್ರದೇಶದಲ್ಲಿ ಗೋಧಿ, ಬತ್ತ, ಬಾರ್ಲಿ, ಹೊಗೆಸೊಪ್ಪು, ಹಣ್ಣು, ದ್ರಾಕ್ಷಿ, ಹತ್ತಿ, ತರಕಾರಿ, ಬೀಟ್ರೂಟ್ ಮುಖ್ಯ ಬೆಳೆ. ಸೋವಿಯತ್ ಒಕ್ಕೂಟದಲ್ಲಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಇದೇ. 1930ರಿಂದೀಚೆಗೆ ಇಲ್ಲಿ ನೀರಾವರಿ ಹೆಚ್ಚು ವಿಸ್ತರಿಸಿದೆ.
 
ತಾಷ್ಕೆಂಟ್-ಸೈಬೀರಿಯ ರೈಲುಮಾರ್ಗದ ನಿರ್ಮಾಣದಿಂದ ಕೈಗಾರಿಕೆಯ ಬೆಳೆವಣಿಗೆ ಯಾಗಿದೆ. ಸೈಬೀರಿಯದಿಂದ ಗೋದಿ, ಮರ, ಅರಣ್ಯವಸ್ತ್ತುಗಳು ಮತ್ತು ಇತರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಈಗ ಹೆಚ್ಚು ಅನುಕೂಲಗಳನ್ನು ಕಲ್ಪಿಸಲಾಗಿದೆ. ಆಹಾರ ಕೈಗಾರಿಕೆ ಮತ್ತ ಜವಳಿ ಕೈಗಾರಿಕೆಗಳಿಗೆ ಪ್ರಥಮ ಸ್ಥಾನ ದೊರಕಿದೆ. ಕಬ್ಬಿಣ, ಉಕ್ಕು, ತೈಲ ಮತ್ತು ತಾಮ್ರ ಶುದ್ಧೀಕರಣ, ರಾಸಾಯನಿಕ ಗೊಬ್ಬರ ಹಾಗೂ ವ್ಯವಸಾಯೋಪಕರಣ ತಯಾರಿಕೆಗಳೂ ಮುಖ್ಯವಾಗುತ್ತಿವೆ. ಕೈಗಾರಿಕೆಗೆ ಅಗತ್ಯವಾದ ಶಕ್ತಿಯಲ್ಲಿ ಶೇ. ಭಾಗ ವಿದ್ಯುತ್ತು. ಇತ್ತೀಚೆಗೆ ಕೆಲವು ಕೈಗಾರಿಕೆಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳ ಉಪಯೋಗವೂ ಆಗುತ್ತಿದೆ.
==ಜನಸಂಖ್ಯೆ==
ಸೋವಿಯತ್ ಮಧ್ಯ ಏಷ್ಯನ್ ಗಣರಾಜ್ಯಗಳ 1/3ರಷ್ಟಿರುವ ಉಜ್ಬೆಕಿಸ್ತಾನದಲ್ಲಿ ಅವುಗಳ ಒಟ್ಟು ಜನಸಂಖ್ಯೆಯ 2/3ರಷ್ಟು ಮಂದಿ ಇದ್ದಾರೆ. ಉಳಿದವಕ್ಕಿಂತ ಇದು ಆರ್ಥಿಕವಾಗಿ ಹೆಚ್ಚು ಮುಂದುವರಿದಿರುವುದೇ ಇದಕ್ಕೆ ಮುಖ್ಯ ಕಾರಣ.
 
ಜನಸಂಖ್ಯೆ 81.05 ಲಕ್ಷದಲ್ಲಿ (2002) ಉಜ್ಬೆಕ್ ಜನರೇ ಹೆಚ್ಚು (ಶೇ.62.2) ಉಳಿದವರಲ್ಲಿ ರಷ್ಯನರು (ಶೇ.13.5) ಟಾರ್ಟರರು (ಶೇ.5.5), ಕಾಜಾ಼ಕರು (ಶೇ.4.1) ಕಾಲಿಕರು (ಶೇ.3.8) ಮತ್ತು ಕಾರಕಲ್ಪಾಕರು (ಶೇ.2.1). ಒಟ್ಟು ಜನಸಂಖ್ಯೆಯಲ್ಲಿ ನೂರಕ್ಕೆ 40ರಷ್ಟು ಮಂದಿ ನಗರ ಮತ್ತು ಕೈಗಾರಿಗಾ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಉಳಿದವರು ಕೃಷಿ, ಪಶುಪಾಲನೆ ಮುಂತಾದ ಕಸಬುಗಳಲ್ಲಿ ತೊಡಗಿ ಹಳ್ಳಿಗಳಲ್ಲಿ ಜೀವಿಸುತ್ತಾರೆ. 1914ಕ್ಕೆ ಮೊದಲು ಶೇ.97ರಷ್ಟು ಜನ ಅನಕ್ಷರಸ್ಥರಾಗಿದ್ದರು. 1965ರ ವೇಳೆಗೆ ಅನಕ್ಷರಸ್ಥರ ಪ್ರಮಾಣ ಶೇ.22ಕ್ಕೆ ಇಳಿಯಿತು. ಶಾಲಾ ಕಾಲೇಜುಗಳಲ್ಲಿ ರಷ್ಯನ್ ಮತ್ತು ಉಜ್ಬೆಕ್ ಭಾಷೆಗಳು ಪ್ರಮುಖವಾದವುಗಳು. ತಾಷ್ಕೆಂಟ್, ಸಮರ್ ಕಂಡ್ ಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ.
 
ತಾಷ್ಕೆಂಟ್ ರಾಜಧಾನಿ, ಅತಿ ದೊಡ್ಡ ನಗರ, ಕೈಗಾರಿಗೆ ಮತ್ತು ವಾಣಿಜ್ಯ ಕೇಂದ್ರ. ಚಿರ್ಚಿಕ್ ನದಿಯ ದಡದಲ್ಲಿರುವ ಈ ನಗರ ಸಮುದ್ರಮಟ್ಟದಿಂದ 333ಮೀ. ಎತ್ತರದಲ್ಲಿದೆ. ಇದೊಂದು ಪ್ರಮುಖ ರೈಲು ನಿಲ್ದಾಣ. ಜನಸಂಖ್ಯೆ 21,24,000 (2002). ಸಮರ್ ಕಂಡ್ ಉಜ್ಬೆಕಿಸ್ತಾನದ ಹಳೆಯ ರಾಜಧಾನಿ. ಈ ಐತಿಹಾಸಿಕ ನಗರವೀಗ ಹೊಸ ರೂಪು ತಳೆದಿದೆ. ಹತ್ತಿ, ಉಣ್ಣೆ ಮತ್ತು ಯಂತ್ರೋಪಕರಣ ಕೈಗಾರಿಕೆಗಳ ಜೊತೆಜೊತೆಗೆ ಮುಸ್ಲಿಮರ ಪುರಾತನ ಮಸೀದಿಗಳೂ ಪ್ರ.ಶ.ಪು. 5ನೆಯ ಶತಮಾನಕ್ಕೆ ಸೇರಿದ ವೀಕ್ಷಣಾಲಯವೂ ಇವೆ.
 
ಬುಖಾರ ಪುರಾತನ ನಾಗರಿಕತೆಯ ಕೇಂದ್ರ. ಹಳೆಯ ನಗರದ ಸುತ್ತಲೂ ಇಟ್ಟಿಗೆಗಳಿಂದ ಕಟ್ಟಿದ ಕೋಟೆಯೂ ಹತ್ತಿ, ಉಣ್ಣೆ ಮತ್ತ ರೇಷ್ಮೆ ಗಿರಿಣಿಗಳೂ ಇವೆ. ಸ್ವಾಭಾವಿಕ ಅನಿಲಗಳ ದೊಡ್ಡ ನಿಕ್ಷೇಪವಿರುವುದು ಈ ನಗರದ ಸಮೀಪದಲ್ಲೇ.
==ಇತಿಹಾಸ==
[[File:Торжествуют.jpg|thumb|left|[[Registan]], Sher-Dor Madrasah]]
[[File:KarazinNN VstRusVoyskGRM.jpg|thumb|left|Russian troops taking [[Samarkand]] in 1868.]]
[[File:BattleofIssus333BC-mosaic-detail1.jpg|thumb|[[Alexander the Great]] at the [[Battle of Issus]].]]
13ನೆಯ ಶತಮಾನದಲ್ಲಿ ಸ್ಥಾಪಿತವಾಗಿ, ರಷ್ಯದ ಬಹು ಭಾಗವನ್ನೂ ಒಳಗೊಂಡು, ಗೋಲ್ಡನ್ಹೋರ್ಡ್ ಅಥವಾ ಸ್ವರ್ಣದಳವೆಂದು ಪ್ರಸಿದ್ದವಾಗಿದ್ದ ಪಶ್ಚಿಮ ಮಂಗೋಲ್ ಚಕ್ರಾಧಿಪತ್ಯದ ಮುಖ್ಯನಾಗಿದ್ದ ಖಾನ್ ಉಜ್ಬೆಕ್ ನಿಂದ (1312-42) ಉಜ್ಬೆಕರಿಗೆ ಈ ಹೆಸರು ಬಂದಿದೆ. ಉಜ್ಬೆಕರ ಪೂರ್ವ ಚರಿತ್ರೆಗೆ (ನೋಡಿ -ಗೋಲ್ಡನ್ಹೋರ್ಡ್: ತುರ್ಕಿಸ್ತಾನ).
 
1917ರಲ್ಲಿ ರಷ್ಯನ್ ಕ್ರಾಂತಿ ಸಂಭವಿಸಿದಾಗ ಉಜ್ಬೆಕ್ ಜನ ರಷ್ಯನ್ ತುರ್ಕಿಸ್ತಾನದ ಸೀರ್ ದಾರ್ಯಾ, ಸಮರ್ಕಂಡ್, ಫರ್ಗನ, ಬುಖಾರ, ಚೀನಗಳಲ್ಲಿ ಹಂಚಿಹೋಗಿದ್ದರು. ಅವರದೂ ಒಂದು ರಾಷ್ಟ್ರವೆಂಬ ಕಲ್ಪನೆಯಿರಲಿಲ್ಲ; ತಾಷ್ಕೆಂಟಿನಲ್ಲಿ ತುರ್ಕಿಸ್ತಾನದ ತಾತ್ಕಾಲಿಕ ಸರ್ಕಾರ ಸಮಿತಿಯೂ ಕಮ್ಯೂನಿಸ್ಟ್‌ ಹತೋಟಿಗೊಳಪಟ್ಟ ಕಾರ್ಮಿಕ ಸೈನಿಕ ರೈತ ಪ್ರತಿನಿಧಿ ಸಭೆಯೂ ಸ್ಥಾಪಿತವಾದುವು. 1917ರ ಡಿಸೆಂಬರಿನಲ್ಲಿ ಮುಸ್ಲಿಮರು ಕಾಕಾಂಟ್ನಲ್ಲಿ ರಾಷ್ಟ್ರೀಯ ಸಮ್ಮೇಳನವೊಂದನ್ನು ನಡೆಸಿ ಸ್ಥಾಪಿಸಿದ ಮುಸ್ಲಿಂ ಸರ್ಕಾರ 1918ರ ಫೆಬ್ರವರಿಯಲ್ಲಿ ತಾಷ್ಕೆಂಟಿ ನಿಂದ ಬಂದ ಸೈನ್ಯದಿಂದ ಉರುಳಿಬಿತ್ತು. ಆಗ ಆ ಸುತ್ತಿನಲ್ಲಿ ಪ್ರಬಲನಾಗಿದ್ದ ರಷ್ಯನ್ ಪ್ರತಿಕ್ರಾಂತಿ ವೀರ ಅಡ್ಮಿರಲ್ ಕಾಲ್ಚಾಕನ ಸೈನಿಕ ಕಾರ್ಯಾಚರಣೆಯಿಂದಾಗಿ ತುರ್ಕಿಸ್ತಾನದ ಮೇಲೆ ರಷ್ಯನ್ ಹತೋಟಿಯಿರಲಿಲ್ಲ. 1919ರ ವಸಂತಕಾಲದಲ್ಲಿ ರಷ್ಯದ ಕೆಂಪುಸೇನೆ ಕಾಲ್ಚಾಕನನ್ನು ಸೋಲಿಸಿದ ಫಲವಾಗಿ ಆ ವರ್ಷದ ಕೊನೆಯ ವೇಳೆಗೆ ಇಡೀ ತುರ್ಕಿಸ್ತಾನ ಸೋವಿಯತ್ ಒಕ್ಕೂಟದ ವ್ಯಾಪ್ತಿಗೆ ಒಳಪಟ್ಟಿತು. ಆದರೆ ತುರ್ಕಿಸ್ತಾನದ ಜನಕ್ಕೂ ರಷ್ಯಕ್ಕೂ ನಡುವಣ ಸಂಬಂಧ ಸೌಹಾರ್ದಯುತ ವಾಗಿರಲಿಲ್ಲ. ಇದರಿಂದ [[ಲೆನಿನ್]] ಕಳವಳಗೊಂಡ. ತಾಷ್ಕೆಂಟಿನಲ್ಲಿ ಅಧಿಕಾರ ವಹಿಸಿಕೊಳ್ಳಲು ತುರ್ಕಿಸ್ತಾನ ನಿಯೋಗವೊಂದನ್ನು ಕಳಿಸಿದ. ಇದು ನಾನಾ ಸುಧಾರಣೆಗಳನ್ನು ಜಾರಿಗೆ ತಂದು ಮುಸ್ಲಿಮರ ಮನವೊಲಿಸಿಕೊಳ್ಳಲು ಯತ್ನಿಸಿತು. ಮೊದಮೊದಲು ಈ ಹೊಸ ಆಡಳಿತದ ವಿರುದ್ದವಾಗಿ ಬಂಡಾಯವೆದ್ದಿತ್ತಾದರೂ ಕ್ರಮೇಣ ಎಲ್ಲವೂ ಶಾಂತವಾಯಿತು. ಬುಖಾರ, ಖೀವಾ ರಾಜ್ಯಗಳು ಕ್ರಮೇಣ ಸಮಾಜವಾದಿ ಗಣರಾಜ್ಯಗಳಾದುವು (1924).
[[File:Oliy Majlis (Parliament of Uzbekistan).jpg|thumb|right|The [[Legislative Chamber of Uzbekistan|Legislative Chamber of the Supreme Assembly]] (Lower House).]]
1924ರಲ್ಲಿ ತುರ್ಕಿಸ್ತಾನ, ಖೀವಾ, ಬುಖಾರ ಗಣರಾಜ್ಯಗಳು ರದ್ದಾಗಿ ಅವುಗಳ ಸ್ಥಾನದಲ್ಲಿ ಸ್ಥಾಪಿತವಾದ ಗಣರಾಜ್ಯಗಳು ಐದು: ಉಜ್ಬೆಕಿಸ್ತಾನ್, ತಾಜಿಕಿಸ್ತಾನ್, ಕಿರ್ಗಿಷ, ಟರ್ಕ್ಮೆನಿಸ್ತಾನ್ ಮತ್ತ ಕಾಜಾಕ್ಸ್ತಾನ್. 1936ರಲ್ಲಿ ಉಜ್ಬೆಕಿಸ್ತಾನಕ್ಕೆ ಕಾರಕಲ್ಪಾಕ್ ಪ್ರದೇಶವನ್ನೂ 1956ರಲ್ಲಿ ಕಾಝಾಕಿಸ್ತಾನದ ಕೆಲವು ಪ್ರದೇಶಗಳನ್ನೂ ಸೇರಿಸಿದ್ದರಿಂದ ಇದರ ವಿಸ್ತೀರ್ಣ ಹೆಚ್ಚಿತು. 1937-38ರಲ್ಲಿ ಇಲ್ಲಿ ನಡೆದಿತ್ತೆಂದು ಹೇಳಲಾದ ಒಳಸಂಚೊಂದು ಬಯಲಾಗಿ ಈ ರಾಜ್ಯದ ಮುಖ್ಯಮಂತ್ರಿಯೂ ಉಜ್ಬೆಕ್ ಕಮ್ಯೂನಿಸ್ಟ್‌ ಪಕ್ಷದ ಪ್ರಥಮ ಕಾರ್ಯದರ್ಶಿಯೂ ಸೇರಿ ಅನೇಕರು ಮರಣದಂಡನೆಗೆ ಗುರಿಯಾದರು.
==ಸಂಸ್ಕೃತಿ ಮತ್ತು ಸಾಹಿತ್ಯ==
[[File:Taschkent-42.JPG|thumb|left|Traditional Uzbek [[pottery]].]]
[[File:Suzani (Boukhara, Ouzbékistan) (5657423581).jpg|thumb|||ಉಜ್ಬೇಕಿಸ್ತಾನದ ಎಂಬ್ರಾಯಿಡರಿ ಕೆಲಸ]]
 
[[File:Theatre Alisher Navoi.JPG|thumb|left|[[Navoi Theater|Navoi Opera Theater]] in [[Tashkent]]]]
ಉಜ್ಬೆಕಿಸ್ತಾನದ ಸಂಸ್ಕೃತಿ ಪುರಾತನವಾದದ್ದು. ಸಮರಖಂಡ್, ಬುಖಾರಗಳಲ್ಲಿ ಅನೇಕ ಇಸ್ಲಾಮೀ ಶಿಲ್ಪಗಳಿವೆ. ಈಚೆಗೆ ಪಾಶ್ಚಾತ್ಯ ಶೈಲಿಗೆ ಹಳೆಯ ಸಂಪ್ರದಾಯದ ಶೈಲಿ ಬೆರೆಸುವ ಪ್ರಯತ್ನ ಸಾಗಿದೆ. ಅನೇಕ ಭವ್ಯ ಭವನಗಳ ನಿರ್ಮಾಣವಾಗುತ್ತಿದೆ.
 
ಸೋವಿಯತ್ ಆಡಳಿತ ಬರುವ ಮುನ್ನ ಉಜ್ಬೆಕ್ ಸಾಹಿತ್ಯವೇ ಇರಲಿಲ್ಲ. ಆಗ ಅರಬ್ಬೀ ಹಾಗೂ [[ಪರ್ಷಿಯನ್]] ಭಾಷೆಗಳೇ ಪ್ರಧಾನವಾಗಿದ್ದುವು. ಇವುಗಳ ಜೊತೆಗೆ ಪ್ರಚಾರದಲ್ಲಿದ್ದ ಚಾಗಟೈಯಿಂದ (ಮಧ್ಯಕಾಲೀನ ಮಧ್ಯ ಏಷ್ಯನ್ ಸಾಹಿತ್ಯಕ ಭಾಷೆ) 19ನೆಯ ಶತಮಾನದಲ್ಲಿ ಲಿಖಿತ ಉಜ್ಬೆಕ್ ಭಾಷೆ ಹುಟ್ಟಿತು. ಆಲಿಷೇರ್ ನವಾಯ್ (1441-1501) ಉಜ್ಬೆಕ್ ಮಹಾಸಾಹಿತಿ. 1990ರಲ್ಲಿ ಉಜ್ಬೆಕಿಸ್ತಾನ ತನ್ನದೆ ಆದ ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದು 1991ರಲ್ಲಿ ತನ್ನ ಸ್ವಾತಂತ್ರ್ಯವನ್ನು ಸಾರಿತು. 1991 ಡಿಸೆಂಬರ್ 29 ರಂದು ಅಧ್ಯಕ್ಷ ಚುನಾವಣೆಯನ್ನೂ ನಡೆಸಿತು.
==ಬಾಹ್ಯ ಸಂಪರ್ಕಗಳು==
* [http://uzreport.uz/?lan=e '''National Information Agency of Uzbekistan''']
* [http://www.tcity.uz/en/ Tashkent directory]
* [http://parliament.gov.uz/ Lower House of Uzbekistan parliament]
* [https://www.cia.gov/library/publications/world-leaders-1/world-leaders-u/uzbekistan.html Chief of State and Cabinet Members]
; General information
*{{CIA World Factbook link|uz|Uzbekistan}}
*[http://www.business-anti-corruption.com/country-profiles/europe-central-asia/uzbekistan/business-corruption-in-uzbekistan.aspx Uzbekistan Corruption Profile] from the [[Business-Anti-Corruption Portal|Business Anti-Corruption Portal]]
* [http://www.state.gov/p/sca/ci/uz/ Uzbekistan] from the U.S. [[Library of Congress]] includes Background Notes, Country Study and major reports
* [http://www.library.illinois.edu/spx/webct/nationalbib/natbibuzbek.htm Uzbek Publishing and National Bibliography] from the University of Illinois Slavic and East European Library
* [http://ucblibraries.colorado.edu/govpubs/for/uzbekistan.htm Uzbekistan] at UCB Libraries GovPubs
* [http://world-gazetteer.com/wg.php?x=&men=gcis&lng=en&des=wg&srt=npan&col=abcdefghinoq&msz=1500&geo=-225 List of cities and populations]
*{{dmoz|Regional/Asia/Uzbekistan}}
* [http://www.bbc.co.uk/news/world-asia-16218112 Uzbekistan profile] from the [[BBC News]]
*{{wikiatlas|Uzbekistan}}
* [http://www.ifs.du.edu/ifs/frm_CountryProfile.aspx?Country=UZ Key Development Forecasts for Uzbekistan] from [[International Futures]]
; Media
* [http://www.mtrk.uz/#uz/uzbekistan/ National Television and Radio Company of Uzbekistan]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ|ಉಜ್ಬೆಕಿಸ್ತಾನ್ಜ್ಜ}}
[[ವರ್ಗ:ಮಧ್ಯ ಏಷ್ಯಾ]]
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಉಜ್ಬೇಕಿಸ್ಥಾನ್" ಇಂದ ಪಡೆಯಲ್ಪಟ್ಟಿದೆ