ಬಸವರಾಜ ಕಟ್ಟೀಮನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಕಟ್ಟೀಮನಿಯವರು [[೧೯೩೬]]ರಲ್ಲಿ [[ಬೆಳಗಾವಿ]]ಯಿಂದ ಪ್ರಕಟವಾಗುತ್ತಿದ್ದ [[ಸಂಯುಕ್ತ ಕರ್ನಾಟಕ]] ದಿನಪತ್ರಿಕೆಯಲ್ಲಿ ಕೆಲಸಗಾರರಾಗಿ ಸೇರಿಕೊಂಡರು. ಕೆಲ ಸಮಯದ ನಂತರ ಕಟ್ಟೀಮನಿಯವರು [[ಹುಬ್ಬಳ್ಳಿ]]ಯ
'''ತರುಣ ಕರ್ನಾಟಕ''' ಪತ್ರಿಕೆಯಲ್ಲಿ ಸೇರಿದರು. [[ದಿವಾಕರ ರಂಗನಾಥ]]ರೊಡನೆ ಅವರು ನಡೆಸಿದ ಸಂದರ್ಶನ ಈ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಕೋಲಾಹಲವೆ ನಡೆಯಿತು. ಹೀಗಾಗಿ ಈ ಪತ್ರಿಕೆಯನ್ನೂ ಬಿಟ್ಟು ಕಟ್ಟೀಮನಿಯವರು [[ಧಾರವಾಡ]]ದ [[ಭಾಲಚಂದ್ರ ಘಾಣೇಕರ]] ಅವರ '''ಸಮಾಜ''' ಪತ್ರಿಕೆಯ ಪೂರ್ತಿ ಹೊಣೆ ಹೊತ್ತರು. ಸಮಾಜದ ಮಾಲಿಕತ್ವ ಬದಲಾದಾಗ ಕಟ್ಟೀಮನಿಯವರು ಈ ಕೆಲಸವನ್ನೂ ಬಿಟ್ಟು, [[೧೯೩೭]]ರಲ್ಲಿ
[[ಹುಬ್ಬಳ್ಳಿ]]ಯಿಂದ ಪುರಾಣಿಕ ಎನ್ನುವವರು ನಡೆಯಿಸುತ್ತಿದ್ದ '''ಲೋಕಮತ'''ದಲ್ಲಿ ಕೆಲ ಕಾಲ ಕೆಲಸ ಮಾಡಿದರು. ಅಲ್ಲಿಂದ [[ಗದಗು|ಗದಗಿನ]] '''[[ಕರ್ನಾಟಕ ಬಂಧು]]''' ಪತ್ರಿಕೆಯನ್ನು ಸೇರಿಕೊಂಡರು. ಕಟ್ಟೀಮನಿಯವರು ೩ ವರ್ಷ ಅಲ್ಲಿ ದುಡಿದು, [[ಬೆಂಗಳೂರು|ಬೆಂಗಳೂರಿಗೆ]] ತೆರಳಿ '''ಸ್ವತಂತ್ರ ಕರ್ನಾಟಕ''' ಪತ್ರಿಕೆಯನ್ನು ಸೇರಿದರು. ಕೆಲ ಸಮಯದ ನಂತರ ಪುನ: [[ಧಾರವಾಡ]]ದ '''ಸಮಾಜ'''ಕ್ಕೆ ಮರಳಿದರು.
 
ಈ ನಡುವೆ ಸ್ವಾತಂತ್ರ್ಯ ಚಳುವಳಿಯ ಚಟುವಟಿಕೆಗಳಿಗಾಗಿ ೬ ತಿಂಗಳುಗಳನ್ನು '''ಹಿಂಡಲಗಿ ಸೆರೆಮನೆ'''ಯಲ್ಲಿ ಕಳೆದು ಬಂದ ಕಟ್ಟೀಮನಿಯವರು [[೧೯೪೩]]ರಲ್ಲಿ [[ಬೆಂಗಳೂರು|ಬೆಂಗಳೂರಿನ]] '''ಉಷಾ''' ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ [[೧೯೪೬]]ರಲ್ಲಿ [[ದಾವಣಗೆರೆ]]ಯಲ್ಲಿ '''ಸ್ವತಂತ್ರ''' ಪತ್ರಿಕೆಯ ಸಂಪಾದಕತ್ವ ವಹಿಸಿದರು. [[೧೯೪೮]] [[ಡಿಶಂಬರ್|ಡಿಶಂಬರದಲ್ಲಿ]] ಅಲ್ಲಿಂದ ಹೊರಬಿದ್ದು [[ಧಾರವಾಡ]]ಕ್ಕೆ ಮರಳಿ, ಮತ್ತೊಮ್ಮೆ '''ಜಠಾರ'''ರ '''ಸಮಾಜ''' ಪತ್ರಿಕೆಯನ್ನು ಪ್ರಾರಂಭಿಸಿದರು. [[೧೯೫೦]]ರಲ್ಲಿ ಈ ಪತ್ರಿಕೆಯನ್ನು ಮತ್ತೊಮ್ಮೆ ಬಿಟ್ಟು ಪೂರ್ಣಾವಧಿ ಕಾದಂಬರಿಕಾರರಾದರು.
"https://kn.wikipedia.org/wiki/ಬಸವರಾಜ_ಕಟ್ಟೀಮನಿ" ಇಂದ ಪಡೆಯಲ್ಪಟ್ಟಿದೆ