ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
*ಅಂಚೆಯ ಸೇವೆ ಸಲ್ಲಿಸುವ ಹಕ್ಕನ್ನು ಗುತ್ತಿಗೆಗೆ ಕೊಡುವ ಪದ್ಧತಿ ಇಂಗ್ಲೆಂಡಿನಲ್ಲಿ 17ನೆಯ ಶತಮಾನದಲ್ಲಿ ಜಾರಿಗೆ ಬಂದು ಸ್ವಲ್ಪ ಕಾಲ ಮಾತ್ರವೇ ಜಾರಿಯಲ್ಲಿತ್ತಾದರೂ ಫ್ರಾನ್ಸಿನಲ್ಲಿ ಇದು ಬಹುಕಾಲ ಮುಂದುವರಿಯಿತು. ಫ್ರೆಂಚ್ ಮಹಾಕ್ರಾಂತಿಯ ಸಮಯದಲ್ಲಿ ಇದು ತೊಡೆದು ಹೋಯಿತು . ಅಂಚೆ ವ್ಯವಸ್ಥೆಯ ಆಡಳಿತ ನಡೆಸಲು ಒಂದು ಸಮಿತಿಯ ರಚನೆಯಾಯಿತು. 1804ರಲ್ಲಿ ನೆಪೋಲಿಯನ್ನನು ಈ ಸಮಿತಿಯನ್ನು ರದ್ದು ಮಾಡಿ, ಮಹಾನಿರ್ದೇಶಕ (ಡೈರೆಕ್ಟರ್ ಜನರಲ್) ನನ್ನು ನಿಯಮಿಸಿದ. ಆಗ ರಚಿಸಿದ ಆಡಳಿತದ ಚೌಕಟ್ಟು ಈಗಲೂ ಸ್ಥೂಲವಾಗಿ ಮುಂದುವರಿ ಯುತ್ತಿದೆ. ಈಗ ಸಾಮಾನ್ಯವಾಗಿ ಅಂಚೆಗಾಗಿಯೇ ಪ್ರತ್ಯೇಕವಾದ ಮಂತ್ರಿಯಿರುವುದಿಲ್ಲ. ಹಣಕಾಸು, ಲೋಕೋಪಯೋಗಿ ಕಾರ್ಯ, ವಾಣಿಜ್ಯ, ಕೈಗಾರಿಕೆ - ಹೀಗೆ ಬೇರೆ ಯಾವುದಾದರೂ ಸಚಿವಾಲಯದ ಆಡಳಿತಕ್ಕೆ ಈ ಖಾತೆಯನ್ನೂ ಸೇರಿಸಲಾಗುತ್ತಿದೆ.
 
=='''ಅಂತಾರಾಷ್ಟ್ರೀಯಅಂತರಾಷ್ಟ್ರೀಯ ಅಂಚೆ ವ್ಯವಸ್ಥೆ'''==
*ಇದರ ಆವಶ್ಯಕತೆಯೂ ಪ್ರಾಮುಖ್ಯವೂ ಬಹಳ ಹಿಂದಿನಿಂದಲೂ ವೇದ್ಯವಾಗಿರುವ ವಿಚಾರ. ಆದರೆ ಈ ವ್ಯವಸ್ಥೆ ಹಿಂದಿನ ಕಾಲದಲ್ಲಿ ಸಾರೋದ್ಧಾರವಾಗಿ ಬೆಳೆದುಬರಲಿಲ್ಲಬೆಳೆದು ಬರಲಿಲ್ಲ. 16ನೆಯ ಶತಮಾನದಲ್ಲಿ ಲಂಡನ್ನಿಗೂ ಕೆಲೇ ಎಂಬ ಪಟ್ಟಣಕ್ಕೂ ಓಲೆಕಾರರ ಮೂಲಕವಾಗಿ ಪತ್ರಗಳು ಸಾಗಿಸಲ್ಪಡು ತ್ತಿದ್ದವು. ಆಗ ಪ್ರಮುಖವಾಗಿದ್ದ ಪ್ರಪಂಚದ ಮುಖ್ಯ ನಗರಗಳಿಂದ ಕೆಲೇ ಎಂಬಲ್ಲಿಗೆ ಪತ್ರಗಳು ಬರುತ್ತಿದ್ದವು. ಆದರೆ ಆಗಿನ ಕಾಲದ ಈ ಓಲೆಕಾರರು ತಮ್ಮ ಈ ಕರ್ತವ್ಯಕ್ಕೆ ಅಷ್ಟಾಗಿ ಗಮನ ನೀಡುತ್ತಿರಲಿಲ್ಲ. ಅವರಿಗೆ ಇದೇ ಮುಖ್ಯ ಕರ್ತವ್ಯವಾಗಿರಲಿಲ್ಲ.
*ಸರಕುಗಳನ್ನು ಹೊತ್ತು ಮಾರುವುದೇ ಅವರಿಗೆ ಪ್ರಧಾನ ಕಸುಬಾಗಿತ್ತು. 1670ರಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ ನಡುವೆ ಆದ ಅಂಚೆಯ ಒಪ್ಪಂದದಂತೆ ಲಂಡನ್-ಪ್ಯಾರಿಸ್ಗಳ ನಡುವೆ ವಾರಕ್ಕೆರಡು ಸಾರಿ ಅಂಚೆಯ ಸಾಗಾಟವೇರ್ಪಟ್ಟಿತು. ಎರಡು ದೇಶಗಳ ಅಂಚೆಯ ಕಚೇರಿಗಳೂ ಈ ಜವಾಬ್ದಾರಿ ವಹಿಸಿಕೊಂಡವು. ಅನಂತರ ಈ ಎರಡು ದೇಶಗಳ ನಡುವೆ ಯುದ್ಧಗಳು ಸಂಭವಿಸಿ ಒಪ್ಪಂದ ಮುರಿದುಬಿತ್ತು. ಪ್ರ.ಶ.1713ರಲ್ಲಿ ಈ ಒಪ್ಪಂದಕ್ಕೆ ಮತ್ತೆ ಜೀವ ಕೊಡಲಾಯಿತು.
*ಬೇರೆ ಬೇರೆ ದೇಶಗಳಿಗೆ ಕಳಿಸಲಾಗುತ್ತಿದ್ದ ಪತ್ರಗಳಿಗೆ ಅವುಗಳ ದೂರ ಹಾಗೂ ತೂಕಗಳಿಗೆ ಅನುಗುಣವಾಗಿ ಅಂಚೆ ದರಗಳನ್ನು ನಿಗದಿ ಮಾಡಲಾಯಿತು. ಈ ಬಗೆಯ ಒಪ್ಪಂದಗಳ ಸಂಖ್ಯೆ ಕ್ರಮೇಣ ಬೆಳೆಯಿತು. ಈ ಕಾರಣದಿಂದಾಗಿ 19ನೆಯ ಶತಮಾನದ ಮಧ್ಯಕಾಲದ ವೇಳೆಗೆ ವಿದೇಶೀಯ ಅಂಚೆ ವ್ಯವಸ್ಥೆ ಅತ್ಯಂತ ಜಟಿಲವಾಯಿತು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿರ್ದಿಷ್ಟವಾದ ಅಂಚೆ ದರವೇನೆಂಬುದನ್ನು ಹೇಳುವುದು ಬಹು ಕಠಿಣವಾಯಿತು. ಒಂದು ಕಚೇರಿಗೂ ಇನ್ನೊಂದು ಕಚೇರಿಗೂ ದರಗಳಲ್ಲಿ ತುಂಬ ವ್ಯತ್ಯಾಸಗಳಿದ್ದವು.
೩೭ ನೇ ಸಾಲು:
*ಅಂಚೆ ಒಕ್ಕೂಟದ ಸಂವಿಧಾನ ತುಂಬ ಸರಳವಾದದ್ದು. ರಾಷ್ಟ್ರ ರಾಷ್ಟ್ರಗಳ ನಡುವಣ ಸಮಸ್ಯೆಗಳು ಆಯಾ ರಾಷ್ಟ್ರಗಳಿಂದಲೇ ನೇರವಾಗಿ ಪರಿಹರಿಸಲ್ಪಟ್ಟುವು. ಇಡೀ ಒಕ್ಕೂಟಕ್ಕೆ ಸಂಬಂಧಿಸಿದ ವಿಚಾರಗಳಿಗಾಗಿ ಬರ್ನೆಯಲ್ಲಿರುವ ಈ ಸಂಸ್ಥೆಯ ಕೇಂದ್ರೀಯ ಕಚೇರಿ ಈ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ಸಮಾಚಾರಗಳನ್ನು ಪ್ರಕಟಿಸುತ್ತದೆ. ಸಾರಿಗೆ ಸಾಧನಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಕಚೇರಿಯ ವೆಚ್ಚವನ್ನು ಎಲ್ಲ ರಾಷ್ಟ್ರಗಳೂ ಹಂಚಿಕೊಳ್ಳುತ್ತವೆ.
*ಅಂಚೆಯ ಒಡಂಬಡಿಕೆಯೂ ಇತರ ಉಪವಿಧಿಗಳೂ ಪ್ರತಿ ಐದು ಅಥವಾ ಆರು ವರ್ಷಗಳಿಗೆ ಒಮ್ಮೆ ಸೇರುವ ಸರ್ವಸದಸ್ಯ ಸಮ್ಮೇಳನದಲ್ಲಿ ವಿರ್ಮಶಿಸಲ್ಪಡುತ್ತವೆ; ಸೂಕ್ಷ್ಮ ಕಂಡ ಬದಲಾವಣೆಗಳು ಮಾಡಲ್ಪಡುತ್ತವೆ. ಅಂತಾರಾಷ್ಟ್ರೀಯ ಒಡಂಬಡಿಕೆಯ ಫಲವಾಗಿ ಅಂಚೆ ದರಗಳಲ್ಲಿ ಹಾಗೂ ವಸ್ತುಗಳ ತೂಕದಲ್ಲಿ ಸಮಾನತೆಯೇರ್ಪಟ್ಟಿತು. ಅಂಚೆಯು ಸಾಮಾನ್ಯವಾಗಿ ಪತ್ರ, ಅಂಚೆಯ ಕಾರ್ಡು, ಹಾಗೂ ಅಚ್ಚಾದ ಪತ್ರಿಕೆಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿತು. ಇವಕ್ಕೆ ಬೇರೆ ಬೇರೆ ದರಗಳು ಗೊತ್ತುಮಾಡಲ್ಪಟ್ಟವು.
*ಒಂದು ದೇಶ ಇನ್ನೊಂದು ದೇಶದ ರೈಲು ಅಥವಾ ಜಹಜುಗಳನ್ನು ಅಂಚೆಯ ಸಾಗಾಣಿಕೆಗಾಗಿ ಉಪಯೋಗಿಸಿಕೊಂಡ ಪಕ್ಷದಲ್ಲಿ ಆ ದೇಶಕ್ಕೆ ಕೊಡಬೇಕಾದ ಹಣವೂ ನಿಗದಿಯಾಯಿತು. ಪತ್ರಗಳ ನೋಂದಣಿಯ (ರಿಜಿಸ್ಟ್ರೇಷನ್) ಬಗ್ಗೆಯೂ ಒಂದು ಸಾರ್ವತ್ರಿಕ ನಿಯಮವೇರ್ಪಟ್ಟಿತು. ಮುಂದೆ ಅಂತಾರಾಷ್ಟ್ರೀಯಅಂತರಾಷ್ಟ್ರೀಯ ಮನಿಯಾರ್ಡರ್ ಅಥವಾ ‘ಧನ ಆದೇಶ’ ವ್ಯವಸ್ಥೆಯೂ ಭಾಂಗಿ ಅಂಚೆಯೂ ಈ ಒಡಂಬಡಿಕೆಯಲ್ಲಿ ಸೇರಿಸಲ್ಪಟ್ಟವು. ಇವುಗಳೇ ಅಲ್ಲದೆ, ಇವಕ್ಕೆ ಸಂಬಂಧಿಸಿದ ಇನ್ನೂ ಅನೇಕ ವಿಚಾರಗಳಲ್ಲಿ ಆಗಿಂದಾಗ್ಗೆ ಸಣ್ಣಪುಟ್ಟ ಒಪ್ಪಂದಗಳು ಏರ್ಪಟ್ಟವು.
*ಅಂತಾರಾಷ್ಟ್ರೀಯಅಂತರಾಷ್ಟ್ರೀಯ ಅಂಚೆ ಒಕ್ಕೂಟದ ಸ್ಥಾಪನೆಯ ಫಲವಾಗಿ ವಿದೇಶೀಯ ಅಂಚೆ ದರಗಳು ಬಹುಮಟ್ಟಿಗೆ ಕಡಿಮೆಯಾದುವು. ಆದರೂ ದೂರ ದೇಶಗಳಿಗೆ ಸಾಗುವ ಅಂಚೆಯ ದರಗಳು ಸಾಮಾನ್ಯವಾಗಿ ಅಧಿಕವಾಗಿಯೇ ಇದ್ದುವು. ಇವುಗಳನ್ನು ವ್ಯವಸ್ಥಿತಮಟ್ಟಕ್ಕೆ ತರಬೇಕಾದರೆ ಅನೇಕ ವರ್ಷಗಳೇ ಬೇಕಾದುವು. ಬ್ರಿಟಿಷ್ ಸಾಮ್ರಾಜ್ಯ ತನ್ನ ಅಧೀನ ರಾಜ್ಯಗಳ ನಡುವಣ ಅಂಚೆಯ ದರಗಳನ್ನು ನಿಗದಿ ದರಗಳಿಗಿಂತ ಕಡಿಮೆಯ ಮಟ್ಟಕ್ಕೆ ತಂದಿತು. ರಾಜಕೀಯ ಉದ್ದೇಶಗಳಿಂದ ಜಾರಿಗೆ ಬಂದ ಇಂಥ ಕ್ರಮಗಳಿಗೆ ಅಂತಾರಾಷ್ಟ್ರೀಯ ಅಂಚೆ ಒಕ್ಕೂಟದ ಒಪ್ಪಿಗೆ ದೊರಕಿತು. *ಮುಂದೆ ಅಮೆರಿಕ ಸಂಯುಕ್ತಸಂಸ್ಥಾನವೂ ಈ ವ್ಯವಸ್ಥೆಗೆ ಸೇರಿಕೊಂಡಿತು. ಫ್ರಾನ್ಸು ತನ್ನ ಅಧೀನದ ರಾಜ್ಯಗಳನ್ನೊಳಗೊಂಡ ಪ್ರದೇಶದಲ್ಲಿ ಇದೇ ಬಗೆಯಲ್ಲಿ ಕಡಿಮೆಯ ಮಟ್ಟದ ದರಗಳನ್ನು ಸ್ಥಾಪಿಸಿತು. ಲ್ಯಾಟಿನ್ ಅಮೆರಿಕ ರಾಜ್ಯಗಳೂ ಅಮೆರಿಕ ಸಂಯುಕ್ತಸಂಸ್ಥಾನಗಳೂಸಂಯುಕ್ತ ಸಂಸ್ಥಾನಗಳೂ ಸೇರಿ ಒಂದು ಒಕ್ಕೂಟವನ್ನು ಸ್ಥಾಪಿಸಿಕೊಂಡವು. ಒಂದು ಸದಸ್ಯರಾಷ್ಟ್ರದಿಂದ ಇನ್ನೊಂದು ಸದಸ್ಯರಾಷ್ಟ್ರಕ್ಕೆ ಸಾಗುವ ಅಂಚೆಯ ದರಗಳು ಆ ರಾಷ್ಟ್ರದ ಆಂತರಿಕ ದರಗಳಿಗಿಂತ ಅಧಿಕವಾಗಿರಬಾರದೆಂದು ಒಡಂಬಡಿಕೆಯಾಯಿತು. ಒಂದು ಸದಸ್ಯರಾಷ್ಟ್ರದ ಅಂಚೆಯನ್ನು ಇನ್ನೊಂದು ಸದಸ್ಯರಾಷ್ಟ್ರ ಮುಫತ್ತಾಗಿ ಸಾಗಿಸಬೇಕೆಂದೂ ಒಪ್ಪಂದವಾಯಿತು. ಹೀಗೆ ಕ್ರಮೇಣ ಅಂತಾರಾಷ್ಟ್ರೀಯ ಅಂಚೆ ದರಗಳು ವ್ಯವಸ್ಥಿತಮಟ್ಟದಲ್ಲಿ ಸ್ಥಿರವಾಗುವುದು ಸಾಧ್ಯವಾಯಿತು.
 
=='''ಅಂಚೆ-ತಂತಿ, ಭಾರತದಲ್ಲಿ'''==
೮೪ ನೇ ಸಾಲು:
*ಈ ವ್ಯವಸ್ಥೆಯೂ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಕೃತಕ ಉಪಗ್ರಹಗಳ ಮೂಲಕವಾಗಿ ದೇಶಾಂತರಕ್ಕೆ ಸುದ್ದಿ ಕಳಿಸುವ ಸಾಧ್ಯತೆ ಈಗ ಹೆಚ್ಚಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಕೂಡ ಇತರ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. 1948ರಲ್ಲಿ ಭಾರತದಲ್ಲಿ ಇದ್ದದ್ದು 321 ದೂರವಾಣಿ ವಿನಿಮಯ ಕೇಂದ್ರಗಳು. ಮೇ 2004ರ ವೇಳೆಗೆ ಅವುಗಳ ಸಂಖ್ಯೆ 3,73,172 ಕ್ಕೆ ಏರಿದೆ. ಎಲ್ಲವೂ ವಿದ್ಯುನ್ಮಾನ ವಿನಿಮಯ ಕೇಂದ್ರಗಳು.
 
===ಇತ್ತೀಚಿನ ಬೆಳೆವಣಿಗೆ===
*ಸ್ವಾತಂತ್ರ್ಯಾನಂತರ ತಂತಿ ಮತ್ತು ದೂರವಾಣಿ-ದೂರಸಂಪರ್ಕ ಸೇವಾವಲಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸರಕಾರಿ ಸ್ವಾಮ್ಯದಲ್ಲಿದ್ದ ಈ ವಲಯದಲ್ಲಿ ಅಕ್ಟೋಬರ್ 15, 2001ರಿಂದ ಸರ್ಕಾರ ಖಾಸಗಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದೆ. ಸಾರ್ವಜನಿಕ ಉದ್ಯಮ ವಲಯದಲ್ಲಿ, ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರಗಳಿರುವ ಕಡೆ ಮಹಾನಗರ ಟೆಲಿಫೋನ್ ಲಿಮಿಟೆಡ್ (ಎಂ.ಟಿ.ಎನ್.ಎಲ್) ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ದೂರವಾಣಿ ಸೇವೆ (ಮೊಬೈಲ್) ಅತ್ಯಂತ ತ್ವರಿತವಾಗಿ ವಿಕಾಸವಾಗುತ್ತಿರುವ ಸೇವೆ. *ದೇಶವನ್ನು 19 ವಲಯಗಳಾಗಿ ವಿಂಗಡಿಸಿ ಪ್ರತಿಯೊಂದು ವಲಯದಲ್ಲೂ ನಾಲ್ಕು ಸೇವಾ ಪ್ರಾಯೋಜಕರು. ಅದರಲ್ಲಿ ಒಂದು ಸಾರ್ವಜನಿಕ ವಲಯಕ್ಕೆ ಸೇರಿದ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್. ಉಳಿದ ಮೂರು ಖಾಸಗಿ ಸೇವಾ ಪ್ರಯೋಜಕರು ‘ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ದ ಸಮಗ್ರ ಮೇಲ್ವಿಚಾರಣೆ. ಅದರ ನಿರ್ಣಯಕ್ಕೆ ಎಲ್ಲರೂ ಬದ್ಧವಾಗಿರತಕ್ಕದ್ದು. ಭಾರತದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಸಂಚಾರಿ ದೂರವಾಣಿ ಮೊಬೈಲ್ ಗ್ರಾಹಕರಿದ್ದಾರೆ. ಪ್ರತಿ ತಿಂಗಳೂ ಹತ್ತು ಲಕ್ಷ ಗ್ರಾಹಕರ ಸೇರ್ಪಡೆ ಆಗುತ್ತಿದೆ.
*ಅಂತರಜಾಲ (ಇಂಟರ್ನೆಟ್) ಈಗ ಖಾಸಗಿ ವಲಯಕ್ಕೆ ತೆರೆದಿದೆ. ಸೇವಾ ಪ್ರಾಯೋಜಕರಿಗೆ ಪ್ರೋತ್ಸಾಹಕರವಾದ ವಾತಾವರಣವಿದೆ. ಈಗ (2004)ರಲ್ಲಿ 42 ಲಕ್ಷ ಚಂದಾದಾರರಿದ್ದಾರೆ. ನೊಯಡ, ಚೆನ್ನೈ, ಕೋಲ್ಕತ್ತ ಕೇಂದ್ರಗಳಲ್ಲಿ ಇಂಟರ್ನೆಟ್ ವಿನಿಮಯ ಕೇಂದ್ರಗಳು ಆರಂಭ ವಾಗಿವೆ. ಟೆಲಿಮೆಡಿಸಿನ್, ಟೆಲಿ ದೂರಶಿಕ್ಷಣ, ಟೆಲಿಬ್ಯಾಂಕಿಂಗ್, ಕರೆ ಕೇಂದ್ರಗಳು (ಕಾಲ್ಸೆಂಟರ್ಸ್) ಮೊದಲಾದವುಗಳ ಸ್ಥಾಪನೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ. ಕರೆ ಕೇಂದ್ರಗಳು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಸಾಧನವಾಗಿದೆ.
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ