ಹಂ.ಪ.ನಾಗರಾಜಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
==ಪ್ರವೃತ್ತಿ==
ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿ]]ಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಹಾಗೆಯೇ [[ಯುನೆಸ್ಕೋ]]ದವರು ೧೯೭೯ನೇ ವರ್ಷವನ್ನು [[ಅಂತರಾಷ್ಟ್ರೀಯ ಮಕ್ಕಳ ವರ್ಷ]]ವೆಂದು ಘೋಷಿಸಿದಾಗ [[ಶಿಶುಸಾಹಿತ್ಯ]]ದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ [[ಕೃಷ್ಣರಾಜ ಪರಿಷನ್ಮಂದಿರ]]ದ ಆವರಣದಲ್ಲಿ [[ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ]] ತಲೆಯೆತ್ತಿತು.
ಹಂಪನಾ ಅವರು ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಗೇ [[ಬೆಂಗಳೂರು ವಿವಿವಿಶ್ವವಿದ್ಯಾಲಯ]], [[ಮೈಸೂರು ವಿವಿವಿಶ್ವವಿದ್ಯಾಲಯ]], [[ಮಂಗಳೂರು ವಿವಿವಿಶ್ವವಿದ್ಯಾಲಯ]], [[ಕರ್ನಾಟಕ ವಿವಿವಿಶ್ವವಿದ್ಯಾಲಯ]], [[ಕುವೆಂಪು ವಿವಿವಿಶ್ವವಿದ್ಯಾಲಯ]], [[ಮುಂಬಯಿ ವಿವಿವಿಶ್ವವಿದ್ಯಾಲಯ]], [[ಮದರಾಸು ವಿವಿವಿಶ್ವವಿದ್ಯಾಲಯ]] ಹಾಗೂ [[ಮಧುರೈ ವಿಶ್ವವಿದ್ಯಾಲಯ]]ಗಳ ಆಶ್ರಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ದೇಶವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. [[ಟೊರೆಂಟೊ]], [[ಬುಡಾಪೆಸ್ಟ್]], [[ಮಾಂಟ್ರಿಯಲ್]], [[ಲಂಡನ್]], [[ನವದೆಹಲಿ]] ಹಾಗೂ [[ಕೊಲ್ಕತ್ತ]]ಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲುಗೊಂಡಿದ್ದಾರೆ.<ref>{{cite web | last = | first = | title = Hampana | url = http://www.jainworld.com/society/speaksch/hampanag.htm | publisher = Jain world | accessdate = June 26, 2007}}</ref>
 
== ಕೃತಿಗಳು ==
"https://kn.wikipedia.org/wiki/ಹಂ.ಪ.ನಾಗರಾಜಯ್ಯ" ಇಂದ ಪಡೆಯಲ್ಪಟ್ಟಿದೆ