ಹಂ.ಪ.ನಾಗರಾಜಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
== ಹಂ.ಪ.ನಾಗರಾಜಯ್ಯ ==
[[ಚಿತ್ರ:Hampana -.JPG|thumb|right |ಸಾಹಿತಿಗಳು-ಭಾಷಾ ಶಾಸ್ತ್ರಜ್ಞರು ಮತ್ತು ಸಂಶೋಧಕರು]]
ಕನ್ನಡ ಸಾರಸ್ವತ ಲೋಕದಲ್ಲಿ ''''ಹಂಪನಾ'''' ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ [[ಚಿಕ್ಕಬಳ್ಳಾಪುರ]] ಜಿಲ್ಲೆಯ [[ಗೌರಿಬಿದನೂರು]] ತಾಲೂಕಿನ [[ಹಂಪಸಂದ್ರ]] ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.
Line ೮ ⟶ ೭:
೧೯೫೯ರಿಂದ ೧೯೭೦ರವರೆಗೆ [[ಮೈಸೂರಿನ ಮಹಾರಾಣಿ ಕಾಲೇಜು]], [[ಶಿವಮೊಗ್ಗದ ಸಹ್ಯಾದ್ರಿ ಕಾಲೇಜು]] ಮಂಡ್ಯ, ದಾವಣಗೆರೆ, ಬೆಂಗಳೂರಿನ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಿದ ಇವರು ೧೯೭೦ರಿಂದ ೧೯೯೬ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧಿಸಿದರು. ಬೆಂಗಳೂರು ವಿವಿಯಲ್ಲಿರುವಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
 
==ಪ್ರವೃತ್ತಿ==
 
ಪ್ರವೃತ್ತಿ
ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿ]]ಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಹಾಗೆಯೇ [[ಯುನೆಸ್ಕೋ]]ದವರು ೧೯೭೯ನೇ ವರ್ಷವನ್ನು [[ಅಂತರಾಷ್ಟ್ರೀಯ ಮಕ್ಕಳ ವರ್ಷ]]ವೆಂದು ಘೋಷಿಸಿದಾಗ [[ಶಿಶುಸಾಹಿತ್ಯ]]ದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ [[ಕೃಷ್ಣರಾಜ ಪರಿಷನ್ಮಂದಿರ]]ದ ಆವರಣದಲ್ಲಿ [[ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ]] ತಲೆಯೆತ್ತಿತು.
ಹಂಪನಾ ಅವರು ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಗೇ [[ಬೆಂಗಳೂರು ವಿವಿ]], [[ಮೈಸೂರು ವಿವಿ]], [[ಮಂಗಳೂರು ವಿವಿ]], [[ಕರ್ನಾಟಕ ವಿವಿ]], [[ಕುವೆಂಪು ವಿವಿ]], [[ಮುಂಬಯಿ ವಿವಿ]], [[ಮದರಾಸು ವಿವಿ]] ಹಾಗೂ [[ಮಧುರೈ ವಿಶ್ವವಿದ್ಯಾಲಯ]]ಗಳ ಆಶ್ರಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ದೇಶವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. [[ಟೊರೆಂಟೊ]], [[ಬುಡಾಪೆಸ್ಟ್]], [[ಮಾಂಟ್ರಿಯಲ್]], [[ಲಂಡನ್]], [[ನವದೆಹಲಿ]] ಹಾಗೂ [[ಕೊಲ್ಕತ್ತ]]ಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲುಗೊಂಡಿದ್ದಾರೆ.
Line ೧೫ ⟶ ೧೩:
== ಕೃತಿಗಳು ==
ಸರಸ್ವತಿಯ ಔರಸಪುತ್ರರೋ ಎಂಬಂತೆ ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇವರ ಲೇಖನಿಯಿಂದ ೧೧೪ ಪುಸ್ತಕಗಳು ಪ್ರಕಟವಾಗಿದೆ. ಅವನ್ನು ವಿಷಯವಾರು ರೀತ್ಯಾ ವರ್ಗೀಕರಿಸಬಹುದಾದರೆ [[ಹಳಗನ್ನಡ ಸಾಹಿತ್ಯ]], [[ಭಾಷಾವಿಜ್ಞಾನ]], [[ಸಂಶೋಧನೆ]], [[ಗ್ರಂಥಸಂಪಾದನೆ]], [[ಜಾನಪದ]], [[ಅನುವಾದ]], [[ಜೀವನಚರಿತ್ರೆ]], [[ಶಿಶುಸಾಹಿತ್ಯ]], [[ಸಾಹಿತ್ಯ ಚರಿತ್ರೆ]], [[ವಿಮರ್ಶೆ]], [[ಕಾದಂಬರಿ]], [[ಪ್ರಬಂಧ ಸಂಕಲನ]], [[ಪ್ರಚಾರೋಪನ್ಯಾಸ ಮಾಲೆ]] ಎಂದು ಪಟ್ಟಿ ಮಾಡಬಹುದು. ಇವಿಷ್ಟು ಕನ್ನಡ ಪುಸ್ತಕಗಳಲ್ಲದೆ ಇವರು ಇಂಗ್ಲಿಷಿನಲ್ಲಿಯೂ ಇಪ್ಪತ್ತು ಮೌಲಿಕ ಪುಸ್ತಕಗಳನ್ನು ಹೊರತಂದಿದ್ದಾರೆ.
 
 
==ಸಂಭಾವನಾ ಗ್ರಂಥಗಳು==
"https://kn.wikipedia.org/wiki/ಹಂ.ಪ.ನಾಗರಾಜಯ್ಯ" ಇಂದ ಪಡೆಯಲ್ಪಟ್ಟಿದೆ