ಹಂ.ಪ.ನಾಗರಾಜಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
== ಹಂ.ಪ.ನಾಗರಾಜಯ್ಯ ==
[[ಚಿತ್ರ:Hampana -.JPG|thumb|right |ಸಾಹಿತಿಗಳು-ಭಾಷಾ ಶಾಸ್ತ್ರಜ್ಞರು ಮತ್ತು ಸಂಶೋಧಕರು]]
ಕನ್ನಡ ಸಾರಸ್ವತ ಲೋಕದಲ್ಲಿ ''''ಹಂಪನಾ'''' ಎಂದೇ ಚಿರಪರಿಚಿತರಾಗಿರುವ ಹಂ ಪ ನಾಗರಾಜಯ್ಯನವರು ಇಂದಿನ [[ಚಿಕ್ಕಬಳ್ಳಾಪುರ]] ಜಿಲ್ಲೆಯ [[ಗೌರಿಬಿದನೂರು]] ತಾಲೂಕಿನ [[ಹಂಪಸಂದ್ರ]] ಎಂಬ ಗ್ರಾಮದಲ್ಲಿ ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮನವರ ಮಗನಾಗಿ ಅಕ್ಟೋಬರ್ ೭, ೧೯೩೬ರಲ್ಲಿ ಜನಿಸಿದರು. ತಂದೆಯವರು ಮನೆಯಲ್ಲಿ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು.
 
== ವಿದ್ಯಾಭ್ಯಾಸ,ವಿವಾಹ ==
'''ಹಂ.ಪ.ನಾಗರಾಜಯ್ಯ''' - [[ಕನ್ನಡ]]ದ ಖ್ಯಾತ ಸಾಹಿತಿಗಳಲ್ಲೊಬ್ಬರು ಮತ್ತು ಭಾಷಾ ಶಾಸ್ತ್ರಜ್ಞರು.ತಮ್ಮ ವಿದ್ಯಾರ್ಥಿವೃಂದಕ್ಕೆ ಹಾಗೂ ಸಾಹಿತ್ಯಿಕ ವಲಯದಲ್ಲಿ ''''ಹಂಪನಾ'''' ಎಂದೇ ಸುಪರಿಚಿತರು.
ಹಂ ಪ ನಾಗರಾಜಯ್ಯನವರು [[ಮಂಡ್ಯ]], ಗೌರಿಬಿದನೂರು, [[ಮಧುಗಿರಿ]], [[ತುಮಕೂರು]]ಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ, [[ಮೈಸೂರು ಮಹಾರಾಜ ಕಾಲೇಜು| ಮೈಸೂರು ಮಹಾರಾಜ ಕಾಲೇಜಿ]]ನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ [[ಕುವೆಂಪು]], [[ತೀನಂಶ್ರೀ]], [[ಡಿ.ಎಲ್‌.ನರಸಿಂಹಾಚಾರ್]], [[ಎಸ್‌.ವಿ.ಪರಮೇಶ್ವರಭಟ್ಟ]], [[ಕೆ.ವೆಂಕಟರಾಮಪ್ಪ]], [[ದೇಜಗೌ]] ಮುಂತಾದ ಸಾಹಿತ್ಯಿಕ ದಿಗ್ಗಜಗಳ ನೆರಳಿನಲ್ಲಿ ಸ್ಫೂರ್ತಿ ಪಡೆದರು. ಮೈಸೂರು ವಿವಿ ಯಿಂದ ಎಂಎ ಪದವಿಯನ್ನೂ, [[ವಡ್ಡಾರಾಧನೆಯ ಅಧ್ಯಯನ]]ಕ್ಕಾಗಿ [[ಬೆಂಗಳೂರು ವಿವಿ]]ಯಿಂದ ಡಾಕ್ಟರೆಟ್ ಅನ್ನೂ ಪಡೆದರು.
== ವೃತ್ತಿ ==
೧೯೫೯ರಿಂದ ೧೯೭೦ರವರೆಗೆ [[ಮೈಸೂರಿನ ಮಹಾರಾಣಿ ಕಾಲೇಜು]], [[ಶಿವಮೊಗ್ಗದ ಸಹ್ಯಾದ್ರಿ ಕಾಲೇಜು]] ಮಂಡ್ಯ, ದಾವಣಗೆರೆ, ಬೆಂಗಳೂರಿನ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಿದ ಇವರು ೧೯೭೦ರಿಂದ ೧೯೯೬ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧಿಸಿದರು. ಬೆಂಗಳೂರು ವಿವಿಯಲ್ಲಿರುವಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
 
ಇವರು [[ಕನ್ನಡ ಸಾಹಿತ್ಯ]] ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. [[ಜೈನ ಸಾಹಿತ್ಯ]] ಕ್ಷೇತ್ರದಲ್ಲಿ ವಿಶೇಷ ಒಲವು ಹೊಂದಿದ್ದಾರೆ. ಪ್ರಸಿದ್ಧ ಮಹಿಳಾ ಸಾಹಿತಿ [[ಕಮಲಾ ಹಂಪನಾ]] ಇವರ ಪತ್ನಿಯಾಗಿದ್ದಾರೆ.
 
ಪ್ರವೃತ್ತಿ
== ಬಾಲ್ಯ ==
ನಾಡಿನ ಪರಮೋಚ್ಛ ಸಾಹಿತ್ಯ ದೇಗುಲವಾದ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿ]]ಗೆ ೧೯೭೮ರಿಂದ ೧೯೮೬ರ ದೀರ್ಘ ಅವಧಿಗೆ ಇವರು ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ೧೯೬೬ರಿಂದ ೧೯೭೪ರ ಅವಧಿಯಲ್ಲಿ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಕನ್ನಡದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು ಮುನ್ನೂರು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಹಾಗೆಯೇ [[ಯುನೆಸ್ಕೋ]]ದವರು ೧೯೭೯ನೇ ವರ್ಷವನ್ನು [[ಅಂತರಾಷ್ಟ್ರೀಯ ಮಕ್ಕಳ ವರ್ಷ]]ವೆಂದು ಘೋಷಿಸಿದಾಗ [[ಶಿಶುಸಾಹಿತ್ಯ]]ದ ಸುಮಾರು ಇನ್ನೂರು ಪುಸ್ತಕಗಳನ್ನು ಪ್ರಕಟಿಸಿದರು. ಇದೇ ಅವಧಿಯಲ್ಲಿ [[ಕೃಷ್ಣರಾಜ ಪರಿಷನ್ಮಂದಿರ]]ದ ಆವರಣದಲ್ಲಿ [[ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಭವನ]] ತಲೆಯೆತ್ತಿತು.
ಗ್ರಾಮಲೆಕ್ಕಿಗರಾಗಿದ್ದ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ಇವರ ಮಗನಾಗಿ ಅಕ್ಟೋಬರ್ ೭,೧೯೩೬ರಂದು ಕೋಲಾರದ ಗೌರಿಬಿದನೂರು ತಾಲ್ಲೂಕಿನ 'ಹಂಪಸಂದ್ರ'ದಲ್ಲಿ ಜನನ.ಮನೆಯಲ್ಲಿ ಆಗಾಗ ಪ್ರವಚನಗಳನ್ನು ಏರ್ಪಡಿಸುತ್ತಿದ್ದ ವಿದ್ವತ್ಪೂರ್ಣ ತಂದೆಯ ಪ್ರಭಾವ ಅಪಾರ.
ಹಂಪನಾ ಅವರು ತಮ್ಮ ಅಧ್ಯಾಪನ ವೃತ್ತಿಯ ಜೊತೆಜೊತೆಗೇ [[ಬೆಂಗಳೂರು ವಿವಿ]], [[ಮೈಸೂರು ವಿವಿ]], [[ಮಂಗಳೂರು ವಿವಿ]], [[ಕರ್ನಾಟಕ ವಿವಿ]], [[ಕುವೆಂಪು ವಿವಿ]], [[ಮುಂಬಯಿ ವಿವಿ]], [[ಮದರಾಸು ವಿವಿ]] ಹಾಗೂ [[ಮಧುರೈ ವಿಶ್ವವಿದ್ಯಾಲಯ]]ಗಳ ಆಶ್ರಯದಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ದೇಶವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. [[ಟೊರೆಂಟೊ]], [[ಬುಡಾಪೆಸ್ಟ್]], [[ಮಾಂಟ್ರಿಯಲ್]], [[ಲಂಡನ್]], [[ನವದೆಹಲಿ]] ಹಾಗೂ [[ಕೊಲ್ಕತ್ತ]]ಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲುಗೊಂಡಿದ್ದಾರೆ.
 
== ಕೃತಿಗಳು ==
== ವಿದ್ಯಾಭ್ಯಾಸ,ವಿವಾಹ ==
ಸರಸ್ವತಿಯ ಔರಸಪುತ್ರರೋ ಎಂಬಂತೆ ಹಂಪನಾ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಇವರ ಲೇಖನಿಯಿಂದ ೧೧೪ ಪುಸ್ತಕಗಳು ಪ್ರಕಟವಾಗಿದೆ. ಅವನ್ನು ವಿಷಯವಾರು ರೀತ್ಯಾ ವರ್ಗೀಕರಿಸಬಹುದಾದರೆ [[ಹಳಗನ್ನಡ ಸಾಹಿತ್ಯ]], [[ಭಾಷಾವಿಜ್ಞಾನ]], [[ಸಂಶೋಧನೆ]], [[ಗ್ರಂಥಸಂಪಾದನೆ]], [[ಜಾನಪದ]], [[ಅನುವಾದ]], [[ಜೀವನಚರಿತ್ರೆ]], [[ಶಿಶುಸಾಹಿತ್ಯ]], [[ಸಾಹಿತ್ಯ ಚರಿತ್ರೆ]], [[ವಿಮರ್ಶೆ]], [[ಕಾದಂಬರಿ]], [[ಪ್ರಬಂಧ ಸಂಕಲನ]], [[ಪ್ರಚಾರೋಪನ್ಯಾಸ ಮಾಲೆ]] ಎಂದು ಪಟ್ಟಿ ಮಾಡಬಹುದು. ಇವಿಷ್ಟು ಕನ್ನಡ ಪುಸ್ತಕಗಳಲ್ಲದೆ ಇವರು ಇಂಗ್ಲಿಷಿನಲ್ಲಿಯೂ ಇಪ್ಪತ್ತು ಮೌಲಿಕ ಪುಸ್ತಕಗಳನ್ನು ಹೊರತಂದಿದ್ದಾರೆ.
ಮಂಡ್ಯ,ಗೌರಿಬಿದನೂರು,ಮಧುಗಿರಿ,ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿ,ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಮತ್ತು ಎಂ.ಎ.ವ್ಯಾಸಂಗಕ್ಕೆ ಸೇರಿದರು.ಇಲ್ಲಿ ಓದುವಾಗ ಸಹಪಾಠಿಯಾಗಿದ್ದ ಸಿ.ಆರ್.ಕಮಲಮ್ಮನವರೊಂದಿಗಿನ ಪರಿಚಯ,ಪ್ರೇಮಕ್ಕೆ ತಿರುಗಿ,ಮದುವೆಯಲ್ಲಿ ಪರ್ಯವಸಾನವಾಯಿತು.ಸ್ವತಃ '''ಕಮಲಾ ಹಂಪನಾ''' ಕೂಡಾ ಪ್ರಸಿದ್ಧ ಸಾಹಿತಿ.ಈ ದಂಪತಿಗಳಿಗೆ ಆರತಿ,ರಾಜ್ಯಶ್ರೀ ಮತ್ತು ಹರ್ಷವರ್ಧನ ಎಂಬ ಮೂರು ಮಕ್ಕಳು.
 
== ಪ್ರಭಾವ,ಪ್ರೇರಣೆ ==
ಕುವೆಂಪು,ತೀನಂಶ್ರೀ,ಡಿ.ಎಲ್‌.ನರಸಿಂಹಾಚಾರ್,ಎಸ್‌.ವಿ.ಪರಮೇಶ್ವರಭಟ್ಟ,ಕೆ.ವೆಂಕಟರಾಮಪ್ಪ,ದೇಜಗೌ ಮುಂತಾದ ಸಾಹಿತ್ಯಿಕ ದಿಗ್ಗಜಗಳು ಅನೇಕ ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ.ಕುವೆಂಪುರವರ ಕ್ರಿಯಾಶೀಲ ಬರವಣಿಗೆ,ತೀನಂಶ್ರೀಯವರ ಭಾಷಾವಿಜ್ಞಾನದ ಪ್ರೌಢಿಮೆ '''ದ್ರಾವಿಡ ಭಾಷಾ ವಿಜ್ಞಾನ''' ಎಂಬ ಕೃತಿರಚನೆಗೆ ಪ್ರೇರೇಪಣೆಯಾಯಿತು.ಈ ಕೃತಿಯನ್ನು ತಮ್ಮ ಗುರುಗಳಾದ ತೀನಂಶ್ರೀಯವರಿಗೆ ಅರ್ಪಿಸಿದ್ದಾರೆ.ಈ ಕೃತಿ ಕರ್ನಾಟಕದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.
 
==ಸಂಭಾವನಾ ಗ್ರಂಥಗಳು==
== ಉದ್ಯೋಗ ==
 ಪಚ್ಚೆತೆನೆ – ೧೯೮೩ರಲ್ಲಿ ಸಂ: ಟಿ ಕೆ ಮಹಮೂದ್ ಮತ್ತು ಶಾ ಮಂ ಕೃಷ್ಣರಾಯ
೧೯೫೯ರಿಂದ ೧೯೬೪ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು,ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮತ್ತು ಮಂಡ್ಯ,ದಾವಣಗೆರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು.ಬೆಂಗಳೂರಿಗೆ ವರ್ಗವಾದ ನಂತರ ೧೯೬೯ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದವರು,ಅಲ್ಲೇ ಕಲಾವಿಭಾಗದ ಮುಖ್ಯಸ್ಥರಾಗಿ,ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ೧೯೯೬ರಲ್ಲಿ ನಿವೃತ್ತರಾದರು.
 ಸಂಕೃತಿ – ೧೯೮೮ರಲ್ಲಿ ಸಂ: ಡಾ ಎಚ್ ಜೆ ಲಕ್ಕಪ್ಪಗೌಡ ಮತ್ತು ಪ್ರೊ. ಸುಕನ್ಯಾ ಮಾರುತಿ
 ಸಂಕರ್ಷಣ – ೧೯೮೮ರಲ್ಲಿ ಸಂ: ಜೆ ಜ್ಞಾನಾನಂದ ಮತ್ತು ಡಾ. ಸಂಜೀವ ಕೆ ಶೆಟ್ಟಿ
 ಬರಹಬಾಗಿನ – ೧೯೯೬ ಸಂ: ಎಚ್ ವಿ ನಾಗೇಶ್
 ಹಂಗ್ರಂಥಾವಳಿ – ೧೯೯೭ ಸಂ: ಸ್ಮಿತಾರೆಡ್ಡಿ ಮತ್ತು ತಮಿಳ್ ಸೆಲ್ವಿ
 ಹಂಪನಾ ವಾಙ್ಮಯ – ೨೦೦೭ ಸಂ: ಡಾ. ಎಂ ಭೈರೇಗೌಡ ಮತ್ತು ಬಿ ಆರ್ ಸತ್ಯನಾರಾಯಣ
 
==ಪ್ರಶಸ್ತಿ ಪುರಸ್ಕಾರಗಳು==
೧೯೬೮-೭೪ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ,೧೯೭೮ರಿಂದ ೮ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
೭೮ರ ತುಂಬುಹರೆಯದ ಹಂಪನಾ ಸಾರ್ಥಕಜೀವಿ. [[ಕರ್ನಾಟಕ ಸರ್ಕಾರ]ವು ಅವರಿಗೆ [[ನಾಡೋಜ ಪ್ರಶಸ್ತಿ]] ನೀಡಿ ಗೌರವಿಸಿದೆ. ಅಲ್ಲದೆ ಅವರನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ೧೯೯೩-೯೪ರ [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ, ೧೯೯೫ರ [[ಜಾನಪದ ಯಕ್ಷಗಾನ ಅಕಾಡೆಮಿ]] ಪ್ರಶಸ್ತಿ, [[ಶಿಶುಸಾಹಿತ್ಯ]]ಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ ೧೯೯೦ರಲ್ಲಿ, ೧೯೯೬ರಲ್ಲಿ [[ಚಾವುಂಡರಾಯ ಪ್ರಶಸ್ತಿ]], ೧೯೯೭ರಲ್ಲಿ [[ಕಾವ್ಯಾನಂದ ಪ್ರಶಸ್ತಿ]], ೧೯೯೮ರಲ್ಲಿ [[ರಾಜ್ಯೋತ್ಸವ ಪ್ರಶಸ್ತಿ]], ೨೦೦೧ರಲ್ಲಿ [[ಶಾಸನ ಸಾಹಿತ್ಯ ಪ್ರಶಸ್ತಿ]], [[ಅತ್ತಿಮಬ್ಬೆ ಪ್ರತಿಷ್ಠಾನ]]ದ [[ಚಿ ನ ಮಂಗಳ ಪ್ರಶಸ್ತಿ]], ೨೦೦೫ರಲ್ಲಿ [[ಶಂಬಾ ಜೋಷಿ ಪ್ರಶಸ್ತಿ]]ಗಳು ಇವರ ಮುಡಿಗೇರಿವೆ.
ಅಲ್ಲದೆ [[ನಿಡುಮಾಮಿಡಿ ಮಠ]], ಶೃಂಗೇರಿ ಮಠ]], [[ಚಿತ್ರದುರ್ಗ ಬೃಹನ್ಮಠ, ಸಾವಳಗಿ ಮಠ]], [[ಶ್ರವಣಬೆಳಗೊಳ ಮಠ]], [[ಮೂರುಸಾವಿರ ಮಠ]], [[ಇಳಕಲ್ ಮಹಾಂತೇಶ ಮಠ]]ಗಳೂ ಇವರನ್ನು ಗೌರವಿಸಿವೆ.
ಇಂದೋರಿನ [[ಕುಂದಕುಂದ ಜ್ಞಾನಪೀಠ ಪುರಸ್ಕಾರ]], ಅಹಮದಾಬಾದಿನ [[ಬಾಬುಲಾಲ್ ಅಮೃತಲಾಲ್ ಶಾ ಸುವರ್ಣಪದಕ]], ಮಧ್ಯಪ್ರದೇಶದ ಸೋನಾಗಿರಿಯ [[ಆಚಾರ್ಯ ಸುಮತಿ ಸಾಗರ]] ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ.
೧೯೯೭ರಲ್ಲಿ ಇಂಡಿಯಲ್ಲಿ [[ಸಾಹಿತ್ಯ ಸಿಂಧು]] ಬಿರುದನ್ನೂ ೨೦೦೧ರಲ್ಲಿ ಶೀಮೊಗ್ಗೆಯಲ್ಲಿ [[ಜ್ಞಾನಭಾಸ್ಕರ]] ಬಿರುದನ್ನೂ ಪಡೆದಿದ್ದಾರೆ.
 
==ಸಾರ್ಥಕ ಜೀವಿ==
== ಕೃತಿಗಳು ==
ಅವರ ಪತ್ನಿ [[ಕಮಲಾ ಹಂಪನಾ]] ಅವರೂ ಸಾಹಿತ್ಯವೇತ್ತರು, ಉತ್ತಮ ವಾಗ್ಮಿಗಳು ಹಾಗೂ ನಾಡೋಜ ಪ್ರಶಸ್ತಿಗೆ ಭಾಜನರಾದವರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.
ಅವರ ಕೃತಿಗಳಲ್ಲಿ ಬಹುಪಾಲು ಕನ್ನಡದಲ್ಲಿ ರಚಿತವಾಗಿದ್ದು,೧೧ ಕೃತಿಗಳು ಇಂಗ್ಲಿಷಿನಲ್ಲಿವೆ.ಇವುಗಳ ವಸ್ತು ಇತಿಹಾಸ,ಸಂಸ್ಕೃತಿ,ಕಲೆ,ವಾಸ್ತುಶಿಲ್ಪ ಹಾಗೂ ಜೈನಧರ್ಮಕ್ಕೆ ಸಂಬಂಧಿಸಿದಂತೆ ಇವೆ.ಇಂಗ್ಲಿಷಿನ 'ಬಾಹುಬಲಿ ಮತ್ತು ಬಾದಾಮಿ ಚಾಲುಕ್ಯರು'ಎಂಬ ಕೃತಿ ಶ್ರವಣಬೆಳಗೊಳದ ಜೈನಮಠದ ಪ್ರಕಟಣೆಯಾಗಿದ್ದು,ಲಂಡನ್ ವಿಶ್ವವಿದ್ಯಾನಿಲಯದಿಂದ ಬಿಡುಗಡೆಯಾಗಿದೆ.ಪ್ರಸ್ತುತ ಲಂಡನ್ ವಿಶ್ವವಿದ್ಯಾನಿಲಯ ಜೈನಧರ್ಮದ ಬಗ್ಗೆ ಅಧ್ಯಯನ ಮಾಡಲು ತೆರೆದಿರುವ ವಿಭಾಗದಲ್ಲಿ 'ಹಂಪನಾ' ಕೂಡಾ ಸದಸ್ಯರಾಗಿದ್ದಾರೆ.
ಹಂಪನಾ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತವಾಗಿ ದುಡಿದಿದ್ದಾರೆ. ಕನ್ನಡದ ಮಹಾನ್ ಶಿಕ್ಷಕ ಪರಂಪರೆಯನ್ನು ಪೋಷಿಸಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸಿದ ಹಿರಿಮೆ ಇವರದು. ಯಾವುದೇ ಲಾಬಿಗಳನ್ನು ಒಣಸಿದ್ಧಾಂತಗಳನ್ನು ಎಂದೂ ತಮ್ಮ ವಿದ್ಯಾರ್ಥಿಗಳ ಮೇಲೆ ಹೇರಿದವರಲ್ಲ.
ನಾಗೇಂದ್ರಪ್ಪ ದಾಗಿನಕಟ್ಟೆ ಹಾಗೂ ಬಾಳೇಶ ಲಕ್ಸೆಟ್ಟಿ ಅವರು ಪ್ರತ್ಯೇಕವಾಗಿ ಹಂಪನಾ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ.
ಹಂಪನಾ ಕೃತಿಗಳ ಅಧ್ಯಯನವನ್ನು ಸಂಶೋಧನಾ ವಿಷಯವನ್ನಾಗಿ ತೆಗೆದುಕೊಂಡು [[ಕಲಬುರ್ಗಿ ವಿವಿ]]ಯಲ್ಲಿ ಡಾ [[ಚೆನ್ನಣ್ಣ ವಾಲೀಕಾರ]] ಅವರ ಮಾರ್ಗದರ್ಶನದಲ್ಲಿ ಡಾ. ನಾಗಪ್ಪ ಚಲವಾದಿಯವರು ಡಾಕ್ಟರೆಟ್ ಪಡೆದಿದ್ದಾರೆ.
ಹಂಪನಾ ಅವರು ವಿಶೇಷವಾಗಿ ಅವರು ಶ್ರಮಣ ಪರಂಪರೆಯನ್ನು ಕನ್ನಡಿಗರ ಮುಂದೆ ತೆರೆದಿಟ್ಟರು. ಅದಕ್ಕಾಗಿ ಅವರು [[ಪಾಲಿ]] [[ಪ್ರಾಕೃತ]]ಗಳ ಮೂಲಕ ನಮ್ಮ ದೇಶದ ಪ್ರಾಚೀನ ಲೋಕದರ್ಶನವನ್ನು ಮಾಡಿಸಿದ್ದಾರೆ. ಕನ್ನಡ ನಾಡಿನಲ್ಲೇ ಅತ್ಯಂತ ಒಳಹುನ್ನಾರದ ಭಾಗವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ಅಳಿಸಿಹಾಕಿದ್ದ ಒಂದು ಧಾರ್ಮಿಕ ಪರಂಪರೆಯ ಕುರಿತಾದ ಮಾಹಿತಿಯನ್ನು ಸದ್ದಿಲ್ಲದೆ ತುಂಬಿ ಕೊಡುತ್ತಾ ಬಂದಿದ್ದಾರೆ. ಭಾವಹಿಂಸೆಯೂ ಪಾಪ ಎಂಬ ಪರಂಪರೆಯ ಹಂಪನಾ ಎಂದೂ ಯಾರನ್ನೂ ಕಟುವಾಗಿ ಮಾತನಾಡಿ ನೋಯಿಸಿದವರಲ್ಲ. ಒಟ್ಟಿನಲ್ಲಿ ನಾಡೋಜ ಹಂಪನಾ ಅವರು ಸೃಜನಶೀಲತೆ, ವಿದ್ವತ್ತು, ಸಂಶೋಧನೆ ಮತ್ತು ಭಾಷಾವಿಜ್ಞಾನದ ಅಪಾರ ತಿಳಿವಳಿಕೆಯೊಂದಿಗೆ ಆಡಳಿತಾತ್ಮಕ ಪರಿಣತಿಯೂ ಉಳ್ಳ ಅಪರೂಪದ ವಿದ್ವಾಂಸ.
 
[[ವರ್ಗ:ಸಾಹಿತಿಗಳು]]
"https://kn.wikipedia.org/wiki/ಹಂ.ಪ.ನಾಗರಾಜಯ್ಯ" ಇಂದ ಪಡೆಯಲ್ಪಟ್ಟಿದೆ