ರಘು ದೀಕ್ಷಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'ರಘು', ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜೈವರಸಾಯನಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಗಳಿಸಿ, 'ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆ'ಯಲ್ಲೂ ತೇರ್ಗಡೆಯಾದರು ಸ್ವಲ್ಪ ಸಮಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ದುಡಿದರು. ಮುಂದೆ ಅದೆಲ್ಲವನ್ನು ಬಿಟ್ಟು ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ತಮ್ಮ ಅನುಪಮ ಸಾಧನೆಯಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹು ಭರವಸೆಯ ಹೊಸ ಸಂಗೀತಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. ಜಾಗತಿಕ ಮಟ್ಟದ ಪ್ರಶಸ್ತಿಯನ್ನು 'ಸಾಂಗ್‌ಲೈನ್ಸ್‌'ನಿಂದ ಪಡೆದಿದ್ದಾರೆ.
==ಸಂಗೀತ ಕ್ಷೇತ್ರದ ಹೆಜ್ಜೆ ಗುರುತುಗಳು==
'ರಘು ದೀಕ್ಷಿತ್',<ref>[http://www.thehindu.com/features/friday-review/music/project-raghu-dixit/article4508662.ece The Hindu, Project Raghu Dixit, March 14, 2013]</ref> ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. ಅವರ ಸಂಗೀತದ ಗೀಳಿನ ವಿಷಯ ದಾಖಲಿಸಲು ಯೋಗ್ಯವಾಗಿದೆ. ಒಮ್ಮೆ ವಿದೇಶಿಯರೊಬ್ಬರು ಇಂಗ್ಲೀಷಿನಲ್ಲಿ ಯಾಕೆ ಬರೆಯುತ್ತೀಯಾ, ನಿನ್ನ ಮಾತೃಭಾಷೆಯಲ್ಲೇ ಬರೆ,' ಎಂದು ಹೇಳಿದ್ದರ ಪರಿಣಾಮದಿಂದಾಗಿ 'ರಘು' ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಹಾಗೆಯೇ ಮುಂದುವರೆದು ಹಿಂದಿಯನ್ನೂ ಸೇರಿಸಿಕೊಂಡರು. ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿನ ಸಭಿಕರಿಗೆ ಪ್ರಸ್ತುತಪಡಿಸಿದ ಖ್ಯಾತಿ ರಘು ದೀಕ್ಷಿತ್ ರಿಗೆ ಸೇರಬೇಕು. ಯಾವ ದೇಶದಲ್ಲೇ ಹೋಗಿ ಹಾಡಲಿ ಅವರು ಕನ್ನಡ ಹಾಡನ್ನು ಹಾಡಲು ಮರೆಯುವುದಿಲ್ಲ. ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ 'ರಘು ದೀಕ್ಷಿತ್'. 'ಸೈಕೋ' ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ” ಹಾಡು, ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡ ಹಾಡಿನ ಜೊತೆಗೆ ಕನ್ನಡಿಗರು ತೊಡುವ ಲುಂಗಿಯನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. 'ಟ್ವಿಟ್ಟರ್ ಜಾಲತಾಣ'ದಲ್ಲಿ ತುಂಬ ಚಟುವಟಿಕೆಯಿಂದಿರುತ್ತಾರೆ. ಬಹುಮಂದಿ ಖ್ಯಾತನಾಮರು ಟ್ವಿಟ್ಟರ್ ಅನ್ನು ತಮ್ಮ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ. ಆದರೆ ಎಲ್ಲರ ಜೊತೆ ವ್ಯವಹರಿಸುವುದು ತುಂಬ ಕಡಿಮೆ. ರಘು ದೀಕ್ಷಿತ್ ಇದಕ್ಕೆ ಅಪವಾದವೆನ್ನುವ ತರಹ ವರ್ತಿಸುತ್ತಾರೆ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ 'ಡಾ.ಯು.ಬಿ.ಪನನಜರ ಜೊತೆಯಲ್ಲಿ ಅವರ ಸಂದರ್ಶನ' ನಡೆಯಿತು. <ref>[http://vishvakannada.com/%E0%B2%AA%E0%B2%B0%E0%B2%BF%E0%B2%9A%E0%B2%AF/%E0%B2%B0%E0%B2%98%E0%B3%81/ ರಘು ದೀಕ್ಷಿತ್, ಜೊತೆಯಲ್ಲಿ ಡಾ.ಯು.ಬಿ.ಪವನಜ ಸಂದರ್ಶನ ಮಾಡಿದರು] </ref> ಶಾಸ್ತ್ರೀಯ ಭರತನಾಟ್ಯವನ್ನು ಸುಮಾರು ಹದಿನೆಂಟು ವರ್ಷ ಕಲಿತು 'ವಿದ್ವತ್ ಪರೀಕ್ಷೆ'ಯಲ್ಲಿ ತೇರ್ಗಡೆಯಾಗಿದ್ದಾರೆ. 'ನಂದಿನೀಶ್ವರ್' ಅವರ ನೃತ್ಯ ಗುರು. ಹೆಂಡತಿ 'ಕಂಟೆಂಪೊರರಿ ಡ್ಯಾನ್ಸರ್'. ಆಕೆ ಒಡಿಸ್ಸಿ, ಕಥಕ್, ಭರತನಾಟ್ಯ ಎಲ್ಲ ಕಲಿತು ಕೊರಿಯೋಗ್ರಫಿ ಮಾಡುವಮಟ್ಟದಲ್ಲಿ ಬೆಳೆದಿದ್ದಾರೆ. ನಪದದ ತಳಹದಿಯನ್ನಿಟ್ಟುಕೊಂಡು, ಸಮಕಾಲೀನ ಉಪಕರಣಗಳನ್ನು ಬಳಸಿ ಹಾಡುವುದು. ಸಮಕಾಲೀನ ಜನಪದ ಶೈಲಿ, ಅವರಿಗೆ ಒಗ್ಗಿದೆ. ಜೆ.ಸಿ. ಕಾಲೇಜಿನಲ್ಲಿ ಅವರು, ಶಿಶುನಾಳ ಶರೀಫರ ಹಾಡನ್ನು ಹಾಡಿದಾಗ ಅಲ್ಲಿನ ಹುಡುಗರೆಲ್ಲ ಅದನ್ನು ಕೇಳಿ ಸಂತೋಷಪಡುತ್ತಾರೆ.
===ರೋಚಕ ಪ್ರಸಂಗ===
ರಘು, ಒಮ್ಮೆ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಎರಡನೆ ವರ್ಷ ಬಿಎಸ್‌ಸಿ ಓದುತ್ತಿರುವಾಗ, ಭರತನಾಟ್ಯ ಕಾರ್ಯಕ್ರಮ ನೀಡಿ, ವೇಷ ಕಳಚುತ್ತಿರುವಾಗ, ಆಧುನಿಕ ಶೈಲಿಯ (ಅಂದರೆ ಉದ್ದ ಕೂದಲು ಬಿಟ್ಟುಕೊಂಡು ಕೈಯಲ್ಲ ಗಿಟಾರ್ ಹಿಡಿದುಕೊಂಡ) ಒಬ್ಬ ಹುಡುಗ ಬಂದು ಅವರಿಗೆ ಗೇಲಿ ಮಾಡಿದ. 'ನೀನು ಹೀಗೆ ಹುಡುಗಿಯರ ಹಾಗೆ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿದ್ರೆ, ನಿನ್ನ ಹಿಂದೆ ಹುಡುಗಿಯರು ಬೀಳೊಲ್ಲ. ನನ್ನ ಹಾಗೆ ಗಿಟಾರ್ ಹಿಡಿದುಕೊ, ಆಗ ಹುಡುಗಿಯರು ಹಿಂದೆ ಬೀಳುತ್ತಾರೆ' ಎಂದ. ಇದರಿಂದ ರಘು ದೀಕ್ಷಿತ್ ವಿಚಲಿತರಾಗಲಿಲ್ಲ. ಅವರಿಗೆ, ಶಾಸ್ತ್ರೀಯ ನಾಟ್ಯ ಬಗ್ಗೆ ಅಪಾರ ಅಭಿಮಾನ ಇದೆ. ಆ ಹುಡುಗನಿಗೆ ತಮ್ಮ ಪ್ರತಿಕ್ರಿಯೆಯನ್ನು ಹೀಗೆ ನೀಡಿದ್ದರು. "ನನಗೆ ಎರಡು ತಿಂಗಳು ಸಮಯ ಕೊಡು. ನಾನು ಗಿಟಾರ್ ಕಲಿತು ತೋರಿಸುತ್ತೇನೆ". "ನೀನು ಎರಡು ತಿಂಗಳಲ್ಲಿ ಎರಡು ಹೆಜ್ಜೆ ಭರತನಾಟ್ಯ ಕಲಿತು ತೋರಿಸು ನೋಡೋಣ" ಎಂದರು. ಈ ಪ್ರಸಂಗನ್ನು ಸೀರಿಯಸ್ ಆಗಿ ತೆಗೆದುಕೊಂಡು ಗಿಟಾರ್ ಕಲಿತರು. ಗಿಟಾರ್ ನುಡಿಸುತ್ತ, ಅವರು ಕಂಡುಕೊಂಡ ಸತ್ಯವೆಂದರೆ, ಅದರಲ್ಲಿರುವ ಸ್ವಾತಂತ್ರ್ಯ ಶಾಸ್ತ್ರೀಯದಲ್ಲಿ ಇಲ್ಲವೆನ್ನಿಸಿತು. ಇಲ್ಲಿ ಹೇಗೆ ಬೇಕಾದರೂ ಹಾಡಬಹುದು. ಏನು ಬೇಕಾದರೂ ಹಾಡಬಹುದು. ಇಷ್ಟ ಬಂದ ಸಾಹಿತ್ಯವನ್ನು ನಾವೇ ಬರೆದುಕೊಂಡು ನಮಗಿಷ್ಟ ಬಂದಂತೆ ಹಾಡಬಹುದು. ಹೀಗಾಗಿ ಸುಮಾರು ವರ್ಷಗಳ ಅವರೇ ಇಂಗ್ಲೀಷಿನಲ್ಲಿ ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಲಿದ್ದರು. ಗಿಟಾರ್ ನಲ್ಲಿ ಆ ಹಾಡುಗಳನ್ನು ನುಡಿಸುತ್ತಿದ್ದರು.
೧೭ ನೇ ಸಾಲು:
===ಪ್ರಶಸ್ತಿಗಳು===
# ಸಾಂಗ್ ಲೈನ್ ಅವಾರ್ಡ್,
 
==ಉಲ್ಲೇಖಗಳು==
<References />
"https://kn.wikipedia.org/wiki/ರಘು_ದೀಕ್ಷಿತ್" ಇಂದ ಪಡೆಯಲ್ಪಟ್ಟಿದೆ