ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೫ ನೇ ಸಾಲು:
==ಜನಪದ ಗೀತೆಗಳಲ್ಲಿ==
<poem>
*೧#.ಅಕ್ಕನ ನೆನೆದರೆ ಗಕ್ಕನೆ ಪದ ಬರಲಿ
ಅಕ್ಕವ್ಳೆ ಗಂಗೆ ದಡದಲ್ಲಿ /ಸರಸೋತಿ
ಅಕ್ಕಿ ಹೈದವಳಾ ಕರೆತನ್ನಿ
*೨#.ಅಗ್ಜಿಯ ಬುಡದಲ್ಲಿ ಸೊಗಸು ಮಾಡುವ ಹೆಣ್ಣೇ
ಅವಸರದ್ಬಂದೆ ನಿನ ಬಳಿಗೆ /ಸರಸೊತಿ
ಕೆಲಸ ಬಿಟ್ಟಾಡ ಕಲಿಸಮ್ಮ
*೩#.ಅಟ್ಟ ಬೆಟ್ಟದಲ್ಲಿ ಪುಟ್ಜಾಜಿ ಬನದಲ್ಲಿ
ಸೆಟೆಯವಳೆ ನಿನ್ನ ಅರಸಿದೆ /ಸರಸೊತಿ
ಎತ್ತ ಹೋದೆಮ್ಮ ಪದ ಬರಲಿ
*೪#.ಅಕ್ಕಾ ಸರಸತಿ ಬಾಗಿಲಲಿ ಯಾಕೆ ನಿಂದೆ
ತೋರೇನು ಬಾರೆ ನಿನಗಿಂಬ /ನಮ್ಮಾನೆ
ಪಟ್ಟೆ ಮಂಚದ್ಲೆ ಒರಗಮ್ಮ
*೫#.ಆರೆಲೆ ಮಾವಿನ ಬೇರಾಗೆ ಇರುವೂಳೆ
ವಾಲಗದ ಸದ್ದಿಗೆ ಒದಗೋಳೆ /ಸರಸತಿಯೆ
ನಾಲಗೆ ತೊಡರ ಬಿಡಿಸಮ್ಮ
*೬#.ಎಂಟೆಲೆ ಮಾವಿನ ದಂಟಾಗೆ ಇರುವೂಳೆ
ಗಂಟೇ ಸದ್ದಿಗೆ ಒದಗೋಳೆ /ಸರಸತಿಯೆ
ಗಂಟಾಲ ತೊಡರ ಬಿಡಿಸಮ್ಮ
*೭#.ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು
ಎಗ್ಗಿಲ್ದೆ ಬಂದೆ ನಿನ ಬಳಿಗೆ /ಸರಸೊತಿ
ಚೆಂದುಳ್ಳಿ ಹಾಡ ಕಲಿಸಮ್ಮ
*೮#.ತಾಯಿಯ ನೆನೆದರೆ ಬೇಗನೆ ಪದ ಬರಲಿ
ತಾಯವ್ಳೆ ಗಂಗೆ ದಡದಲ್ಲಿ /ಸರಸತಿ
ಕಾಯ ಕುಂಡ್ಹೋಗಿ ಕರದಲ್ಲಿ
*೯#.ತಾಯಿ ಸರಸತಿ ಬಾಗಿಲಲಿ ಯಾಕೆ ನಿಂದೆ
ತೋರೇನು ಬಾರೆ ನಿನಗಿಂಬ /ನಮ್ಮಾನೆ
ಸಾಲು ಮಂಚಾದ್ಲೆ ಒರಗಮ್ಮ
*೧೦#.ಹಳ್ಳಕೊಳ್ಳದಲ್ಲಿ ಮಳ್ಜಾಜಿ ವನದಲ್ಲಿ
ಒಳ್ಳೆಯವಳು ನಿನ್ನ ಅರಸಿದೆ /ಸರಸೊತಿ
ಎಲ್ಲಿ ಹೋದೆಮ್ಮ ಪದ ಬರಲಿ
೯೮ ನೇ ಸಾಲು:
</poem>
==ಚಿತ್ರಕಲೆಯಲ್ಲಿ==
*ಚಿತ್ರಕಲೆಯಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯ ಸ್ವರೂಪದಲ್ಲಿ ಮಾತ್ರ ಅಭಿವ್ಯಕ್ತಿಸಲಾಗಿದೆ. ವಸ್ತ್ರಾಭರಣಗಳಲ್ಲಿ ವೈವಿಧ್ಯಯಿರುವುದಿಲ್ಲವೈವಿಧ್ಯತೆ ಇರುವುದಿಲ್ಲ. ಭಾರತೀಯ ಸ್ತ್ರೀಯರು ಪಾರಂಪರಿಕ ತೊಡುಗೆಯಾದ [[ಸೀರೆ]], [[ರವಿಕೆ]] ಸರಸ್ವತಿಯ ಚಿತ್ರಗಳಲ್ಲಿಯೂ ಕಂಡು ಬರುತ್ತದೆ. ಬಹುತೇಕ ಆಧುನಿಕ ಸರಸ್ವತಿಯ ಚಿತ್ರಗಳಿಗೆ [[ರವಿವರ್ಮ]]ನ ಸರಸ್ವತಿಯ ಚಿತ್ರವೇ ಮೂಲ ಆಕರವಾಗಿದೆ.
*[[ಮೈಸೂರು]] ಮತ್ತು [[ತಂಜಾವೂರು]] ಶೈಲಿಯ ಸರಸ್ವತಿಯ ಚಿತ್ರಗಳು ಮಂಟಪಗಳಲ್ಲಿರುವಂತೆ ಸಂಯೋಜಿತವಾಗಿದ್ದರೆ, ಆಧುನಿಕ ಚಿತ್ರಗಳೆಲ್ಲವೂ ಪ್ರಕೃತಿಯ ನಡುವಿನಲ್ಲಿರುವಂತೆ ಚಿತ್ರಿತವಾಗಿವೆ. ಕೆಲವು ನವ್ಯವೆನ್ನಬಹುದಾದ ರಚನೆಗಳಲ್ಲಿ ರೇಖೆಗಳೇ ಪ್ರಧಾನವಾಗಿರುತ್ತವೆ. ಚಿತ್ರಕಲೆಯಲ್ಲಿ ವಿದ್ಯಾದೇವತೆ ಯಾಗಿವಿದ್ಯಾದೇವತೆಯಾಗಿ ಮಾತ್ರ ಚಿತ್ರಿತಳಾಗಿದ್ದಾಳೆ. ಕೆಲವೇ ಕೆಲವು ರೇಖೆಗಳನ್ನು ಬಳಸಿ, ಸರಸ್ವತಿಯನ್ನು ವಿದ್ಯಾದೇವತೆಯನ್ನಾಗಿಯೂ, ನದಿದೇವತೆಯನ್ನಾಗಿಯೂ ಬಿಂಬಿಸುವಲ್ಲಿ [[ಎಂ. ಎಫ್.ಹುಸೇನ್|ಹುಸೇನ]]ರ ಚಿತ್ರ ಯಶಸ್ವಿಯಾಗಿದೆ.
*ಇನ್ನೊಬ್ಬ ಕಲಾವಿದ ರುದ್ರಕುಮಾರ್ ಝಾ ಅವರ ಚಿತ್ರದಲ್ಲೂ ಸರಸ್ವತಿ ನಗ್ನವಾಗಿಯೇ ಇದ್ದಾಳೆ. ಪ್ರಾಚೀನ ಶಿಲ್ಪ ಗಳಲ್ಲುಶಿಲ್ಪಗಳಲ್ಲು ನಗ್ನತೆಯಿದೆ; ಆದರೆ ಅಶ್ಲೀಲತೆಯಿಲ್ಲ! ಆದರೆ ಹುಸೇನರ ಚಿತ್ರವೊಂದಕ್ಕೆ ವಿರೋಧ ವ್ಯಕ್ತವಾಗಿದ್ದು ಮಾತ್ರ ದುರದೃಷ್ಟಕರ. ಹಾಗೆ ನೋಡಿದರೆ ಪುರಾಣಗಳಲ್ಲಿಯೇ ಸರಸ್ವತಿಯನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ!
 
==ಸರಸ್ವತಿಯ ಶಿಲ್ಪಗಳು==
*[[ಕರ್ನಾಟಕ]]ದಲ್ಲಿ ಪೂರ್ಣರೂಪದ ಬೌದ್ಧ ದೇವಾಲಯಗಳಾಗಲೀ ಸರಸ್ವತೀ ಶಿಲ್ಪಗಳಾಗಲೀ ದೊರೆತಿಲ್ಲ. ಬೌದ್ಧಾಲಯಗಳ ಅವಶೇಷಗಳು [[ಗುಲ್ಬರ್ಗಾ]] ಜಿಲ್ಲೆಯ ಸನ್ನತಿ ಮತ್ತು [[ಬೆಂಗಳೂರು]] ಗ್ರಾಮಾಂತರ ಜಿಲ್ಲೆಯ [[ರಾಜಘಟ್ಟ]] ಮುಂತಾದ ಕಡೆ ಕಂಡುಬಂದರೂಕಂಡು ಬಂದರೂ ಸರಸ್ವತೀ ಶಿಲ್ಪಗಳು ವರದಿಯಾಗಿಲ್ಲ. ಜೈನ [[ಬಸದಿ]] ಗಳಲ್ಲಿ ಸಿಗುವ ಸರಸ್ವತಿಶಿಲ್ಪಗಳ ಲಕ್ಷಣಗಳೇ ಶಿವ ಅಥವಾ ಕೇಶವ ದೇವಾಲಯಗಳಲ್ಲಿನ ಸರಸ್ವತಿಶಿಲ್ಪಗಳಲ್ಲೂ ಕಾಣುತ್ತವೆ.
*ತಾಂತ್ರಿಕಸರಸ್ವತಿಯ ಶಿಲ್ಪಗಳು ದೊರೆಯುವುದಿಲ್ಲ ವಾದರೂ, ದುರ್ಗಿಯೇ ಪುಸ್ತಕವನ್ನು ಹಿಡಿದು ಸರಸ್ವತಿಯಾಗಿ ನಿಂತಿರುವುದನ್ನು ಕಾಣಬಹುದು. ಶಿಲ್ಪಿಗಳು ಸರಸ್ವತಿಯನ್ನು ಬ್ರಹ್ಮನ ರಾಣಿಯೆಂದೇ ಚಿತ್ರಿಸಿದ್ದಾರೆ. ಆಕೆ ಬ್ರಹ್ಮನ ಮಗಳೆಂಬ ಕಲ್ಪನೆ ಶಿಲ್ಪಗಳಲ್ಲಿ ಎಲ್ಲಿಯೂ ಬಿಂಬಿತವಾಗಿಲ್ಲ. ‘ಪರಮಜಿನೇಂದ್ರವಾಣಿಯೇ ಸರಸ್ವತೀ’ ಆಗಿದ್ದರೂ, ಜೈನಧರ್ಮೀಯರೂ ಸಹ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿ ದ್ದಾರೆ; ಪೂಜಿಸಿದ್ದಾರೆ.
*ಸರಸ್ವತೀ ಶಿಲ್ಪಗಳಿಗೆ ನಿರ್ದಿಷ್ಟವಾದ ಶಿಲ್ಪಲಕ್ಷ್ಷಣಗಳಿದ್ದರೂ ಸಾಹಿತ್ಯಕ ಆಧಾರಗಳಿದ್ದಾಗ್ಯೂ, ಕರ್ನಾಟಕದ ಶಿಲ್ಪಾಚಾರ್ಯರು ಸ್ವತಂತ್ರ ವಹಿಸಿ ಹತ್ತು ಹಲವಾರು ಸ್ವರೂಪಗಳಲ್ಲಿ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಸರಸ್ವತಿಗೆ ಬೇರೆ ಬೇರೆ ಸ್ವರೂಪಗಳು, ಬ್ರಹ್ಮನ ಪತ್ನಿ ಮತ್ತು ಮಗಳು ಎಂಬ ಪರಿಕಲ್ಪನೆಗಳು ಇದ್ದಾಗ್ಯೂ, ಆಕೆ ವಿದ್ಯಾದೇವತೆಯೆಂಬ ಭಾವನೆ ಮಾತ್ರ ಸಾರ್ವತ್ರಿಕವಾದದ್ದು, ಸಾರ್ವಕಾಲಿಕವಾದದ್ದು.
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಸರಸ್ವತಿ" ಇಂದ ಪಡೆಯಲ್ಪಟ್ಟಿದೆ