ಅಂತಃಕಲಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
ಮತ್ತೊಂದು ರೀತಿಯ ಅಂತರ್ಯುದ್ಧಕ್ಕೆ ಅಧಿಕಾರದಲ್ಲಿರುವ ಸರ್ಕಾರವನ್ನುರುಳಿಸಲು ಪುರ್ವಸಿದ್ಧತೆಯೂ ವ್ಯವಸ್ಥೆಯೂ ಸಾಕಷ್ಟು ನಡೆದಿರುತ್ತದೆ. ಪುರ್ವಯೋಜಿತ ಆಧಾರದ ಮೇಲೆ ನಡೆಯುವ ಅಂತರ್ಯುದ್ಧವನ್ನು ರಾಜಕೀಯದ ಮಹಾಬೇನೆ ಎಂದು ಕರೆಯಬಹುದು. ಇವುಗಳನ್ನು ಕ್ಷಿಪ್ರಕ್ರಾಂತಿ ಎನ್ನುತ್ತಾರೆ. ವೈಜ್ಞಾನಿಕವಾಗಿ ಪರಿಶೀಲಿಸಿದಲ್ಲಿ ಪುರ್ವಯೋಜಿತ ಅಂತರ್ಯುದ್ಧಕ್ಕೆ ಎರಡು ಪ್ರಮುಖವಾದ ಅಂಶಗಳಿರುತ್ತವೆ. ಒಂದು ರಾಜಕೀಯ ಅಭದ್ರತೆ ಮತ್ತು ಅಡಚಣೆಗಳ ನಿವಾರಣೆಗೆ ರಚನಾತ್ಮಕ ಮಾರ್ಗಗಳಿಲ್ಲದಿರುವುದು. ರಾಜಕೀಯ ಒಳ ಜಗಳಗಳ ಮತ್ತು ನ್ಯೂನತೆಗಳ ನಿವಾರಣೆಗೆ ಹಿಂಸಾಕೃತ್ಯವನ್ನುಳಿದು ಬೇರೆ ಯಾವ ಮಾರ್ಗವೂ ಇಲ್ಲದಿರುವುದು ಎರಡನೆಯದು. ಯೋಜಿತ ಅಂತರ್ಯುದ್ಧಗಳಲ್ಲಿ ಬುಡಮೇಲು ಕೃತ್ಯಗಳು ಪ್ರಾರಂಭವಾಗುತ್ತವೆ. ತಾಂತ್ರಿಕವಾಗಿ ಹಾಗೂ ಕೈಗಾರಿಕೆಗಳಲ್ಲಿ ಮುಂದುವರಿದ ದೇಶಗಳಲ್ಲಿ ಬುಡಮೇಲು ಕೃತ್ಯದ ಕೇಂದ್ರವೊಂದು ಸ್ಥಾಪಿತವಾಗಿ ಗೆರಿಲ್ಲ್ಲಾ ಗುಪ್ತಪಡೆಗಳನ್ನು ರಾಷ್ಟ್ರದಲ್ಲಿ ವ್ಯಾಪಕವಾಗಿ ಸ್ಥಾಪಿಸಿ ಕಾರ್ಯೋನ್ಮುಖವಾಗಲು ಒಂದು ಅಥವಾ ಎರಡು ವರ್ಷಗಳ ಅವಧಿ ಸಾಕು. ಹೋರಾಟದ ಕೊನೆಯಲ್ಲಿ ಭೀಕರವಾದ ಬಂಡಾಯವಾಗಿ ಅದು ಹಿಂಸಾಕೃತ್ಯಗಳಲ್ಲಿ ಕೊನೆಗೊಳ್ಳುತ್ತದೆ. ಅಂತರ್ಯುದ್ಧಗಳಿಗೆ ಅತ್ಯವಶ್ಯಕ ಅಂಶಗಳೆಂದರೆ 1. ನಾಗರಿಕ ಮುಖಂಡತ್ವ 2. ಸೈನ್ಯದ ಕೇಂದ್ರ 3.ಗುಪ್ತ ವಾರ್ತಾಪ್ರಸಾರ ಸಾಧನ 4. ಸಾಗಾಣಿಕೆ 5. ಪ್ರಸಾರ ಸಾಧನ 6. ಮೀಸಲು ಪಡೆ 7. ತಾರ್ಕಿಕ ಸಿದ್ಧಾಂತ 8. ಯುದ್ಧೋಪಕರಣಗಳು ಮತ್ತು ಗೆರಿಲ್ಲಾ ಪಡೆಗಳು (ಗೆರಿಲ್ಲಾ ಪಡೆಗಳು ಸೈನ್ಯದ ರೀತಿಯಲ್ಲಿ ಸಜ್ಜಾಗಿರುವುದೂ ಉಂಟು).
 
ಆಧುನಿಕ ಕಾಲದಲ್ಲಿ ಅಂತರ್ಯುದ್ಧಗಳು ರಾಷ್ಟ್ರೀಯತೆಯ ಉಗ್ರರೂಪ ಹಾಗೂ ವಸಾಹತುಶಾಹಿಯ ಕಡು ವಿರೋಧ _ ಈ ಪರಿಸ್ಥಿತಿಗಳನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ.
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
 
==ಬಾಹ್ಯ ಸಂಪರ್ಕಗಳು==
* [http://www.raf.mod.uk/downloads/doctrine/01.pdf Royal Air Force Doctrine - The Nature of War and Armed Conflict]
* [http://news.bbc.co.uk/1/hi/world/middle_east/4902708.stm "What makes a civil war?"], ''[[BBC News]]'', 20 April 2006
[[ವರ್ಗ:ಯುದ್ಧ]]
[[ವರ್ಗ:ಅಂತಃಕಲಹಗಳು|*]]
"https://kn.wikipedia.org/wiki/ಅಂತಃಕಲಹ" ಇಂದ ಪಡೆಯಲ್ಪಟ್ಟಿದೆ