ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
ಪ್ರತಿವರ್ಷ ಸುಮಾರು ೧೩ ಕೋಟಿ [[ಕ್ಯಾರಟ್]] (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ [[ಬಿಲಿಯನ್]] ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.
 
ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ [[ಗ್ರೀಕ್ ಭಾಷೆ|ಗ್ರೀಕ್]] ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯ[[ಅನರ್ಘ್ಯ ರತ್ನ]]ವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರಗವನ್ನು ಹೆಚ್ಚುಹೆಚ್ಚು ಜನರೆಡೆಗ ತಲುಪಿಸುತ್ತಿವೆ.
 
ವಜ್ರದ ಗುಣಮಟ್ಟವನ್ನು ಅದರ ತೂಕ ([[ಕ್ಯಾರಟ್]]), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ