ಅಂತಲಿಕಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅಂತಲಿಕಿತ''' ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್...
( ಯಾವುದೇ ವ್ಯತ್ಯಾಸವಿಲ್ಲ )

೨೧:೪೧, ೧೮ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ

ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಸು.ಪ್ರ..ಶ.ಪು 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ ರಾಯಭಾರಿಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ ತಕ್ಷಶಿಲೆಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬರೆಹಗಳಿವೆ.