ಮಾನಸಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು /ಒಂದು ಚಿತ್ರ /
ಚುNo edit summary
೩ ನೇ ಸಾಲು:
 
ಮಾನಸಸರೋವರವು ಸಮುದ್ರಮಟ್ಟದಿಂದ ೪೫೫೬ ಮೀ. ಎತ್ತರದಲ್ಲಿದೆ. ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. [[ಸಿಂಧೂನದಿ]], [[ಸಟ್ಲೆಜ್ ನದಿ]], [[ಕರ್ನಾಲಿ ನದಿ]] ಮತ್ತು [[ಯಾರ್ಲುಂಗ್ ತ್ಸಾಂಗ್ಪೋ ನದಿ]]ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ.
 
==ಸಾಂಸ್ಕೃತಿಕ ಮಹತ್ವ==
ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. [[ಭಾರತ]], [[ಟಿಬೆಟ್]] ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ [[ತೀರ್ಥಯಾತ್ರೆ]] ಕೈಗೊಳ್ಳುವರು. ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ. ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.
 
[[ಹಿಂದೂ ಧರ್ಮ]]ದ ಪ್ರಕಾರ ಈ ಸರಸ್ಸು ಮೊದಲಿಗೆ [[ಬ್ರಹ್ಮ]]ನ ಮನಸ್ಸಿನಲ್ಲಿ ಸೃಷ್ಟಿಸಲ್ಪಟ್ಟಿತು. ಆದ್ದರಿಂದಲೇ ಮಾನಸಸರೋವರವೆಂಬ ಹೆಸರು ಈ ಸರಸ್ಸಿಗೆ ಬಂದಿದೆ. ಪ್ರತಿ ದಿನ [[ಬ್ರಾಹ್ಮೀ ಮುಹೂರ್ತ]]ದಲ್ಲಿ [[ದೇವತೆಗಳು]] ಸ್ನಾನಕ್ಕಾಗಿ ಈ ಸರೋವರಕ್ಕೆ ಆಗಮಿಸುವರೆಂಬುದು ಇನ್ನೊಂದು ನಂಬಿಕೆ. [[ಬೌದ್ಧಧರ್ಮೀಯ]]ರಿಗೂ ಈ ಸ್ಥಾನ ಪವಿತ್ರ ಕ್ಷೇತ್ರ. ರಾಣಿ ಮಾಯಾ [[ಬುದ್ಧ]]ನನ್ನು ಅನವತಪ್ತ ಅಥವಾ ಅನತೊತ್ತ ಎಂದು ಬೌದ್ಧರಿಂದ ಕರೆಯಲ್ಪಡುವ ಈ ಸ್ಥಳದಲ್ಲಿ ತನ್ನ ಗರ್ಭದಲ್ಲಿ ಧರಿಸಿದಳೆಂದು ಒಂದು ನಂಬಿಕೆ. ಈ ಸರೋವರದ ದಡದಲ್ಲಿ ಅನೇಕ [[ಬೌದ್ಧವಿಹಾರ]]ಗಳಿವೆ.
 
==ಬಾಹ್ಯ ಸಂಪರ್ಕಗಳು==
* [http://kailashmansarovar.aetravel.com Kailash Mansarovar]
* http://www.kmyatra.org/lake-mansarovar.htm
* [http://wikitravel.org/en/Mount_Kailash wikitravel Kailash Mansarovar travel guide]
 
[[ವರ್ಗ:ಜಲಸಮೂಹಗಳು]]
"https://kn.wikipedia.org/wiki/ಮಾನಸಸರೋವರ" ಇಂದ ಪಡೆಯಲ್ಪಟ್ಟಿದೆ