ಸ್ಕೌಟ್ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩೭ ನೇ ಸಾಲು:
 
 
 
 
 
== ಸ್ಕೌಟ್`/ಗೈಡ್` ತರಬೇತಿಯ ಕೆಲವು ಕ್ರಮ : ==
*ಸಾಮಾನ್ಯವಾಗಿ ಸ್ಕೌಟ್`/ಗೈಡ್ ಪಠ್ಯ ವಿಷಯಗಳನ್ನು ಆಟ ಮತ್ತು ಹಾಡು, ಘರ್ಜನೆ, ಘೋಷಣೆ ಇವುಗಳನ್ನು ಜೊತೆಗೂಡಿಸಿಕೊಂಡು ಕಲಿಸಲಾಗುವುದು. ಸ್ಕೌಟ್`/ಗೈಡ್ ಗಳು ಒಂದು ಲಾಠಿ (ದೊಣ್ಣೆ) ಹಗ್ಗ, ಸ್ಕೌಟ್` ಚಾಕು ಇವಗಳನ್ನು ಇಟ್ಟುಕೊಂಡಿರಲು ಸೂಚಿಸಲಾಗುತ್ತದೆ. ಆರು-ಏಳು ಜನರಿರುವ ಸಣ್ಣ ಸಣ್ಣ ಪೆಟ್ರೋಲ್ (ಉಪದಳ- ಗುಂಪು) ಒಟ್ಟಾಗಿದ್ದು ಪರಸ್ಪರ ಸಹಕರಿಸಿ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ.
*ಒಟ್ಟಾಗಿ ಕೂಗುವ ಘೋಷಣೆ ಅಥವಾ ಘರ್ಜನೆಗಳು ಚಿಕ್ಕದಾಗಿದ್ದು ಖುಶಿ ಕೊಡುವಂತಿರುತ್ತವೆ. ಆದರೆ ಅವು ಯಾವುದೇ ಅರ್ಥಕೊಡುವಂತಿರಬೇಕಾಗಿಲ್ಲ.
*ಉದಾಹರಣೆಗೆ : ಉಢಮಲಪೇಠ – ಢಮಾಲಪೇಠ – ಮಾಲಪೇಠ-ಲಪೇಠ- ಪೇಠ- ಠ!!
*ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.
*ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ. ಹಾಡು ಪಿರಮಿಡ್ ರೀತಿಯಲ್ಲಿ ಸೌದೆ ಜೋಡಿಸಿ ಬೆಂಕಿಹಚ್ಚಿ ಅದರ ಸುತ್ತಲೂ ಸ್ವಲ್ಪ ದೂರದಲ್ಲಿ ಕುಳಿತುಕೊಳುವ್ಳರು. ಹಾಡು , ನೃತ್ಯ, ಜಾನಪದ ನೃತ್ಯ-ಕುಣಿತ , ಏಕ ಪಾತ್ರಾಭಿನಯ, ಅಣಕು ಪ್ರದರ್ಶನಗಳು- ಉದಾಹರಣೆಗೆ ಒಬ್ಬನಿಗೆ ಅಪಘಾತ ವಾಗಿದೆ ಎಂದು ಭಾವಿಸಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಲ್ಲಿಗೆ ಸಾಗಿಸುವ , ಶಿಕ್ಷಣ-ಪ್ರದ ಅಣಕು ಪ್ರದರ್ಶನಗಳು. ಏಕ ಪಾತ್ರಾಭಿನಯಗಳು; ಚಿಕ್ಕ ಐದಾರು ನಿಮಿಷಗಳ ನಾಟಕಗಳು ನೆಡೆಯುವುವು. ಆದಿನ ಅಲ್ಲಿ ಉಳಿದು ಬೆಳಿಗ್ಗೆ ಆ ಪ್ರದೇಶವನ್ನು ಶುಚಿಮಾಡಿ ಅನಗತ್ಯ ವಸ್ತುಗಳನ್ನು ಗುಂಡಿತೋಡಿ ಹುಗಿದು , ಅಥವಾ ಸುಟ್ಟು ಶೇಷ ಉಳಿಯದಂತೆ ಮಾಡಿ ಕ್ಯಾಂಪ್` ಕೊನೆಗೊಳಿಸಲಾಗುವುದು. ಬೆಳಿಗ್ಗೆ ಮುಂಚೆ ಎದ್ದು ವ್ಯಾಯಾಮಹಾಸಿಗೆ ಬಟ್ಟೆಗಳನ್ನು ಜೋಡಿಸಿಟ್ಟಿರುವ ಬಗೆಯ ಪರೀಕ್ಷೆ ; ಧ್ವಜ ಕಟ್ಟುವುದು-ಧ್ವಜವಂದನೆ ಮೊದಲಾದವು ಇರುತ್ತವೆ.
'''ಹೈಕ್` : ಲಘು-ಪ್ರವಾಸ:'''
*ಇದಲ್ಲದೆ ಬೆಳಿಗ್ಗೆ ಹೊರಟು ಸಂಜೆ ವಾಪಾಸು ಬರುವ ಲಘು ಪ್ರವಾಸದ ಕಾರ್ಯಕ್ರಮವೂ ಇರುವುದು. ಆಗಲೂ ಪೂರ್ವಯೋಜನೆ ಹಾಕಿಕೊಂಡು ವೇಗ ನಡಿಗೆ ಕ್ರಮ, ಆಯಾಸವಾಗದಂತೆ ಓಡುವ ಕ್ರಮ, ಅದರಲ್ಲಿ ಎರಡು ತಂಡ ಮಾಡಿಕೊಂಡು, ಒಂದು ತಂಡದವರು ಮತೊಂ್ತದು ತಂಡವನ್ನು ಹುಡುಕುವ ಯೋಜನೆ , ಅದಕ್ಕೆ ಸಂಕೇತಗಳನ್ನು ಬಳಸಿ ಅದನ್ನು ತಿಳಿದು ಹಿಂಬಾಲಿಸುವ, ದಾರಿ ತಿಳಿಯುವ ಅಥವಾ ಹುಡುಕುವ ಕ್ರಮ ಇರುತ್ತದೆ ಅಲ್ಲದೆ ಅನೇಕ ಪಠ್ಯವಿಷಯಗಳನ್ನು ಕಲಿಯುವ ಯೋಜನೆಗಳೂ ಇರುತ್ತವೆ. ಸ್ಕೌಟ್`/ಗೈಡ್ ಲಘು ಪ್ರವಾಸಗಳು ಕೇವಲ ಮನೋರಂಜನೆಗಲ್ಲದೆ ಕಲಿಕೆಯ ಅಂಗವಾಗಿ ನಡೆಯುತ್ತವೆ.
*ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಚಳುವಳಿ ಪ್ರಾಮುಖ್ಯತೆ ನೀಡುತ್ತದೆ. (2)
 
 
"https://kn.wikipedia.org/wiki/ಸ್ಕೌಟ್_ಚಳುವಳಿ" ಇಂದ ಪಡೆಯಲ್ಪಟ್ಟಿದೆ