ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
==ಮೈಸೂರಿನ ಅಧಿದೇವತೆಯಾಗಿ==
ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, '''ಚಾಮುಂಡೇಶ್ವರಿ''' ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ [[ದೊಡ್ಡದೇವರಾಜ ಒಡೆಯರ್]] ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ೧೦೦೦ಮೆಟ್ಟಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ [[ನಂದಿವಿಗ್ರಹ]]ವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನ ಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ.
 
==ಪದವಿವರಣಾಪದ ವಿವರಣಾ ಕೋಶದಲ್ಲಿ ಚಾಮುಂಡಿ ಪದದ ನಿಷ್ಪತ್ತಿ==
[[ ಪದವಿವರಣಾಪದ ವಿವರಣಾ ಕೋಶ]]ದ ಪ್ರಕಾರ -"ಚಾಮುಂಡಿ"ಎಂಬ ಪದ 'ಚಾಮುಂಡ' ಶಬ್ದದ ಅಪಭ್ರಂಶ ರೂಪ. ಗ್ರಾಮವೃದ್ದ > ಶ್ಯಾಮವೃದ್ದ > ಚಾಮವೊಡ್ಡಿ > ಚಾಮಉಂಡಿ > ಚಾಮುಂಡಿ > ಚಾವುಡಿ > ಚೌಡಿ ಎಂದಾಗಿದೆ. ಒಟ್ಟಿನಲ್ಲಿ ಚಾಮುಂಡಿ ಒಬ್ಬ ಉಗ್ರದೇವತೆ. ಅಷ್ಟಕರಗಳನ್ನು ಹೊಂದಿದ್ದಾಳೆ. ಈಕೆಯ ಎಂಟು ಕೈಯಲ್ಲೂ ಆಯುಧಗಳಿರುತ್ತವೆ. ಕೊರಳ ಸುತ್ತ ರುಂಡಗಳ ಮಾಲೆ, ಕೆಂಪಾದ ನಾಲಿಗೆ ಚಾಚಿ ರಕ್ತಕ್ಕಾಗಿ ಹಂಬಲಿಸುತ್ತಾ, ತ್ರಿಶೂಲಧಾರಿಣಿಯಾಗಿ ತಾಮಸಗುಣದ ಪ್ರಧಾನ ದೇವತೆಯಾಗಿದ್ದಾಳೆ. ಜೊತೆಗೆ ಕಾಳಿಕಾ ಮಾತೆಯ ಪ್ರತಿರೂಪವಾಗಿದ್ದಾಳೆ.
 
==ಪುರಾಣ ಹಿನ್ನೆಲೆ==
೪೧ ನೇ ಸಾಲು:
 
==ಇತಿಹಾಸದಲ್ಲಿ ಚಾಮುಂಡಿ==
ಮೈಸೂರಿನ ಚರಿತ್ರೆಯ ಪ್ರಕಾರ ಈಕೆ ಐತಿಹಾಸಿಕ ವೀರವನಿತೆ. ಅಪಾರ ಧೈರ್ಯಶಾಲಿನಿ. ಮೈಸೂರು ಒಡೆಯರ ಕುಲದೇವತೆ, ರಕ್ಷಣಾದೇವತೆ, ಅಧಿದೇವತೆಯಾಗಿದ್ದಾಳೆ. ಈಕೆಯ ಕಾಲ ಸುಮಾರು-೧೬ನೇ ಶತಮಾನವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮಹಿಷಮಂಡಲಮಹಿಷ ಮಂಡಲ/ಮಹಾಬಲಬೆಟ್ಟಮಹಾಬಲ ಬೆಟ್ಟ/ಚಾಮುಂಡಿ ಬೆಟ್ಟವಾಗಲುಚಾಮುಂಡಿಬೆಟ್ಟವಾಗಲು ಹಲವು ಕಾಲಾಂತರಗಳಾಗಿವೆ.
 
==ಉಲ್ಲೇಖಗಳು==
{{reflist}}
 
==ಬಾಹ್ಯ ಸಂಪರ್ಕಗಳು==
* [http://www.lokakshemayagna.org/ Organization promoting Chamunda Mantras]
Line ೫೨ ⟶ ೫೩:
 
 
[[ವರ್ಗ:ಹಿಂದೂ ಗಳುಹಿಂದೂಗಳು]]
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ