ಕೈಲ್‌ಪೊಳ್ದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಕೈಲ್‌ಪೊಳ್ದ್''' ಎನ್ನುವದು [[ಕೊಡವರು]] ಮತ್ತು [[ಕೊಡಗು| ಕೊಡಗಿನ]] ಕೆಲವು ಜನಾಂಗದವರು ಆಚರಿಸುವ ಆಯುಧಪೂಜೆ. ಇದಕ್ಕೆ ಮೊದಲು '''ಕೈದುಪೊಳ್ದ್''' ಎನ್ನುತ್ತಿದ್ದದಿದೆ
. ಕೈದು ಎಂದರೆ [[ಆಯುಧ]] ಎಂದರ್ಥ. ಪೊಳ್ದ್ ಎಂದರೆ [[ಹಳೆಗನ್ನಡ]]ದ ಪೊಳ್ತು, [[ಹೊಸಗನ್ನಡ]]ದ ಹೊತ್ತು ಎಂದರ್ಥ. ಇದಕ್ಕೆ [[ಸಮಯ]], [[ಮುಹೂರ್ತ]] ಎಂಬ ಅರ್ಥಗಳೂ ಇವೆ<Ref> "ಕೊಡವರು", ಪುಟ ೧೧೦ - ಡಾ ಪಿ ಎಸ್ ರಾಮಾನುಜಮ್ IPS, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೫ </Ref>. ಈ ಕಾರಣದಿಂದ ಈ [[ಹಬ್ಬ]]ಕ್ಕೆ '''ಕೈಲ್ ಮುಹೂರ್ತ''' ಎನ್ನುವ ಹೆಸರೂ ಇದೆ. ಪ್ರತಿ [[ವರ್ಷ]]ವೂ [[ಸೆಪ್ಟೆಂಬರ್]] ತಿಂಗಳ ೩ನೇ ದಿನಾಂಕಕ್ಕೆ ಸರಿಯಾಗುವ [[ಸೌರಮಾನ]]ದ ಸಿಂಹ ತಿಂಗಳ ೧೮ರಂದು ಆಚರಿಸುತ್ತಾರೆ. ಆದರೆ ಕೊಡಗಿನ ನಾಲ್ಕುನಾಡು, ಮುತ್ತುನಾಡ್ (ನಾಪೋಕ್ಲು,ಗಾಳಿಬೀಡು) ಮುಂತಾದ ಕಡೆಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಆಚರಿಸುತ್ತಾರೆ.
"https://kn.wikipedia.org/wiki/ಕೈಲ್‌ಪೊಳ್ದ್" ಇಂದ ಪಡೆಯಲ್ಪಟ್ಟಿದೆ