ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಭಾರತೀಯ ಸೇನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q2605509 (translate me)
ಚು fixing dead links
೮೮ ನೇ ಸಾಲು:
ಪದಾತಿ ದಳಗಳನ್ನು ಹಿಂತೆಗೆದುಕೊಂಡನಂತರ, ವಾಯುವ್ಯದ ಗಡಿಯಲ್ಲಿ ಉಳಿದ ಭಾರತದ ಸೇನಾ ಘಟಕಗಳು ಕೇವಲ ಎರಡು ಅಶ್ವದಳಗಳಾಗಿದ್ದವು. ನವೆಂಬರ್ ೧೯೧೬ರಲ್ಲಿ, ಈ ಎರಡು ಭಾರತೀಯ ಅಶ್ವದಳ ವಿಭಾಗಗಳಿಗೆ ಮರುಸಂಖ್ಯೆ ನೀಡಿ ೧ನೆಯ ಮತ್ತು ೨ನೆಯ ಸಂಖ್ಯೆಯ ವಿಭಾಗಗಳನ್ನು ೪ನೆಯ ಮತ್ತು ೫ನೆಯ ಅಶ್ವದಳ ವಿಭಾಗಗಳೆಂದು ಕರೆದರು.<ref>{{cite web|last=Baker|first=Chris|accessdate=2009-09-09|title=The Mounted Divisions of 1914-1918|url=http://www.1914-1918.net/mtddivs.htm|work=The Long, Long Trail}}</ref> ಬ್ರಿಟಿಷ್ ಅಶ್ವದಳಗಳ ಜೊತೆಜೊತೆಯೇ ಸೇವೆ ಸಲ್ಲಿಸುತ್ತಿದ್ದ ಈ ವಿಭಾಗಗಳನ್ನು ಮುಂದಿನ ಸಾಲಿನ ಕೊಂಚ ಹಿಂಭಾಗದಲ್ಲೇ ಇರಿಸಿಕೊಂಡು ದೊರೆಯಬಹುದೆಂದು ಆಶಾಭಾವ ಹೊಂದಿದ್ದ ಮುನ್ನಡೆಗಾಗಿ ಕಾಯುತ್ತಿದ್ದರು. ಯುದ್ಧದ ವೇಳೆಯಲ್ಲಿ ಕೆಲವೊಮ್ಮೆ ಈ ದಳದವರು ಕಂದಕಗಳಲ್ಲಿ ಪದಾತಿಗಳಂತೆ ಸೇವೆ ಸಲ್ಲಿಸಿದರು, ಪ್ರತಿ ಅಶ್ವದಳವೂ ಸವಾರಿಯಿಂದ ಕೆಳಗಿಳಿದಾಗ ಸವಾರಿರಹಿತ ದಳವಾಗಿ ಮಾರ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ, ಈ ತುಕಡಿಗಳು ಮುಂದಿನ ಸಾಲಿಗೆ ಹೋದಾಗ ಅವು ಕೇವಲ ಸೇನಾಪ್ರದೇಶವನ್ನಷ್ಟೇ ಆಕ್ರಮಿಸಲು ಸಾಧ್ಯವಾಗುತ್ತಿತ್ತು.<ref>{{cite web|last=Baker|first=Chris|accessdate=2009-09-09|title=The 2nd Indian Cavalry Division in 1914-1918|url=http://www.1914-1918.net/2cavdiv_indian.htm|work=The Long, Long Trail}} {{Dead link|date=September 2010|bot=H3llBot}}</ref> ಮಾರ್ಚ್ ೧೯೧೮ರಲ್ಲಿ ಈ ದಳವನ್ನೇ ಹಿಂದಕ್ಕೆ ಕರೆದು ಈಜಿಪ್ಟ್ ಗೆ ಕಳುಹಿಸುವ ಮುನ್ನ, ಈ ದಳವು ಸೊಮ್ಮೆಗಳ ಕದನ, ಬಾಝೆಂಟಿನ್ ಸಮರ, ಫ್ಲೆರ್ಸ್-ಕೌರ್ಸೆಲೆಟ್ಟೆ ಕದನ, ಹಿಂಡೆನ್ ಬರ್ಗ್ ರೇಖೆಯತ್ತ ಮುನ್ನಡೆ ಹಾಗೂ ಕಡೆಯದಾಗಿ ಕ್ಯಾಂಬ್ರಾಯ್ ಕದನಗಳಲ್ಲಿ ಪಾಲ್ಗೊಂಡಿತು.<ref name="su5" />
 
ಫ್ರ್ಯಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಸೇವೆ ಸಲ್ಲಿಸಿದ ೧೩೦,೦೦೦ ಭಾರತೀಯ ಸೈನಿಕರ ಪೈಕಿ ಸುಮಾರು ೯,೦೦೦ ಜನರು ಸಾವನ್ನಪ್ಪಿದರು.<ref name="CWrepdirect">{{cite web|url=http://www.cwgc.org/admin/files/cwgc_india.pdf|title=Commonwealth War Graves Commission Report on India 2007–2008|accessdate=2009-09-07|publisher=[[Commonwealth War Graves Commission]]|archiveurl=http://web.archive.org/web/20100618081321/http://www.cwgc.org/admin/files/cwgc_india.pdf|archivedate=2010-06-18}}</ref>
 
=== ಭಾರತೀಯ ದಂಡಯಾತ್ರಾ ಪಡೆ B ===
೧೨೫ ನೇ ಸಾಲು:
===ಭಾರತೀಯ ದಂಡಯಾತ್ರಾ ಪಡೆ G===
{{Main|Gallipoli Campaign}}
ಏಪ್ರಿಲ್ ೧೯೧೫ರಲ್ಲಿ ಭಾರತೀಯ ದಂಡಯಾತ್ರಾ ಪಡೆ G ಯನ್ನು ಗಲ್ಲಿಪೊಲಿ ಚಳುವಳಿಯನ್ನು ಸಬಲಗೊಳಿಸಲು ಕಳುಹಿಸಲಾಯಿತು.<ref name="CWrepdirect" /> ಅದು ತನ್ನ ಜನಕವಿಭಾಗವಾದ ೧೦ನೆಯ ಭಾರತೀಯ ವಿಭಾಗದಿಂದ ದೂರದಲ್ಲಿ ಸೇವೆ ಸಲ್ಲಿಸಿದ ೨೯ನೆಯ ವಿಭಾಗವನ್ನು ಅದರ ಅಂಗವಾಗಿ ಹೊಂದಿತ್ತು.<ref name="su6" /> ಗೂರ್ಖಾಗಳ ಮೂರು ತುಕಡಿಗಳು ಮತ್ತು ಒಂದು ಸಿಖ್ಖರ ತುಕಡಿಯನ್ನು ಹೊಂದಿದ್ದು,<ref>ಪೆರಿ, ರೋಲ್ಯಾಂಡ್. "ಮೋನಾಶ್: ದ ಔಟ್ ಸೈಡರ್ ಹೂ ವನ್ ಎ ವಾರ್" ಪುಟ ೨೧೧</ref> ಈ ದಳವನ್ನು ಈಜಿಪ್ಟ್ ನಿಂದ ಕಳುಹಿಸಲಾಯಿತು ಮತ್ತು ಹಿಂದಿನ ಸಮರಗಳಲ್ಲಿ ನಶಿಸಿಹೋಗಿದ್ದ ಬ್ರಿಟಿಷ್ ೨೯ನೆಯ ವಿಭಾಗಕ್ಕೆ ಸೇರಿಸಲಾಯಿತು.<ref>ಹೇಥಾರ್ನ್ ವೇಯ್ಟ್, ಪುಟ.೫೫</ref> ಎರಡನೆಯ ಕ್ರಿಥಿಯ ಯುದ್ಧದ ಸಂದರ್ಭದಲ್ಲಿ ಕಾವಲುಪಡೆಯಾಗಿ ಇರಿಸಲ್ಪಟ್ಟಿದ್ದ ಈ ದಳವು ಮೂರನೆಯ ಕ್ರಿಥಿಯ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಎಡಭಾಗದಲ್ಲಿ ಮುನ್ನಡೆ ಸಾಧಿಸುತ್ತಿದ್ದ ಈ ದಳವನ್ನು ಬಹಳ ಬೇಗ ತಡೆಹಿಡಿಯಲಾಯಿತು; ಏಜಿಯನ್ ತೀರ ದಲ್ಲಿ ಮಾತ್ರ ೧/೬ನೆಯ ಗೂರ್ಖಾ ರೈಫಲ್ಸ್ ಪಡೆ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಗಲ್ಲಿ ಕಂದಕದ ನೆಲದ ಮೇಲೆ ಮುಂದಕ್ಕೆ ಸಾಗುತ್ತಿದ್ದ ೧೪ನೆಯ ಫೆರೋಝ್ ಪುರ್ ಸಿಖ್ಖರ ದಂಡು ಸರಿಸುಮಾರು ನಾಶವೇ ಆಗಿಹೋಯಿತು; ೫೧೪ ಸೈನಿಕರ ಪೈಕಿ ೩೮೦ ಜನ ಮರಣ ಹೊಂದಿದರು ಹಾಗೂ ಆ ದಳದ ೮೦% ಅಧಿಕಾರಿಗಳು ಹತರಾದರು. ಈ ದಳವು ನಂತರ ಗಲ್ಲಿ ಕಂದಕ ಸಮರದಲ್ಲಿ ಪಾಲ್ಗೊಂಡಿತು ಹಾಗೂ ಇಲ್ಲಿ ೨/೧೦ನೆಯ ಗೂರ್ಖಾ ರೈಫಲ್ಸ್ ಪಡೆಯು ಅರ್ಧ ಮೈಲಿಯಷ್ಟು ಮುನ್ನಡೆ ಸಾಧಿಸಲು ಸಾಧ್ಯವಾಯಿತು. ತದನಂತರ ಈ ಪಡೆಯು ಸಾರಿ ಬಾಯ್ರ್ ಸಮರದಲ್ಲಿ ಭಾಗವಹಿಸಿತು; ನೌಕಾಪಡೆಯ ಬಾಂಬ್ ಧಾಳಿಯ ರಕ್ಷೆಯಲ್ಲಿ, ೧/೬ನೆಯ ಗೂರ್ಖಾ ರೈಫಲ್ಸ್ ದಳವು ಆ ಬೆಟ್ಟವನ್ನು ಆಕ್ರಮಿಸಿ, ವಶಪಡಿಸಿಕೊಂಡಿತು; ತದನಂತರ ಆ ಬೆಟ್ಟದ ಮೇಲೆ ರಾಯಲ್ ನೌಕಾಪಡೆಯು ಷೆಲ್ ದಾಳಿ ನಡೆಸಿತು. ಅವರ ಸಾವುನೋವುಗಳು ಹೆಚ್ಚಿ, ದಳದ ನೇತೃತ್ವವನ್ನು ಸೇನಾಂಗದ ವೈದ್ಯಕೀಯ ಅಧಿಕಾರಿಗಳು ವಹಿಸಿಕೊಳ್ಳಬೇಕಾದ ಸಂದರ್ಭ ಬಂದೊದಗಿದಾಗ ದಳವು ಹೊರಟ ಜಾಗಕ್ಕೇ ಹಿಂದಿರುಗುವುದು ಅನಿವಾರ್ಯವಾಯಿತು.<ref>ಹೇಥಾರ್ನ್ ವೇಯ್ಟ್, ಪುಟ.೭೩</ref> ಸಾರಿ ಬಾಯ್ರ್ ನ ಆಕ್ರಮಣವು ವಿಫಲವಾದನಂತರ ಈ ದಳವನ್ನು ಈಜಿಪ್ಟ್ ಗೆ ವಾಪಸ್ ಕರೆದುಕೊಳ್ಳಲಾಯಿತು. ಈ ಸಮರದ ಅವಧಿಯಲ್ಲಿ ೨೯ನೆಯ ದಳದ ೧,೩೫೮ ಸೈನಿಕರು ಮಡಿದರು ಮತ್ತು ೩,೪೨೧ ಜನರು ಗಾಯಗೊಂಡರು.<ref>{{cite web|url=http://www.dva.gov.au/news_archive/Documents/090327_GallipoliCampaign.pdf|accessdate=2009-09-04|publisher=Australian Government, Department of Veterans affairs|title=The Gallipoli Campaign|archiveurl=http://web.archive.org/web/20090702131058/http://www.dva.gov.au/news_archive/Documents/090327_GallipoliCampaign.pdf|archivedate=2009-07-02}}</ref>
 
==ಇತರ ಕಾರ್ಯಾಚರಣೆಗಳು:==